‘ಡಿ ಬಾಸ್’ ದರ್ಶನ್ಗೆ ಸಿನಿಮಾ ಮಾತ್ರವಲ್ಲದೆ ಇತರೆ ಕ್ಷೇತ್ರಗಳಲ್ಲೂ ಆಸಕ್ತಿ ಹೆಚ್ಚು. ಕೃಷಿ, ಹೈನುಗಾರಿಕೆ, ಫೋಟೋಗ್ರಫಿ, ಕಾರುಗಳ ಕ್ರೇಜ್ ಜೊತೆಗೆ ವನ್ಯಜೀವಿ ಸಂರಕ್ಷಣೆ ಬಗ್ಗೆಯೂ ಅವರಿಗೆ ಅಪಾರ ಆಸಕ್ತಿ ಇದೆ. ಈ ಬಗ್ಗೆ ಅನೇಕ ಬಾರಿ ಅವರು ಮಾತನಾಡಿದ್ದುಂಟು. ಈಗ ಮತ್ತೊಮ್ಮೆ ಕಾಡುಪ್ರಾಣಿಗಳ ರಕ್ಷಣೆ ಕುರಿತು ದರ್ಶನ್ ಅವರು ತಮ್ಮ ಸೋಶಿಯಲ್ ಮೀಡಿಯಾ ಮೂಲಕ ಮುಖ್ಯವಾದ ಸಂದೇಶ ರವಾನಿಸಿದ್ದಾರೆ.
‘ಎಲ್ಲರೂ ವನ್ಯಜೀವಿಗಳನ್ನು ಉಳಿಸೋಣ. ಈ ಜಗತ್ತನ್ನು ಉಳಿಸಲು ವನ್ಯಜೀವಿಗಳನ್ನು ಉಳಿಸಿ. ನಿಮಗೆ ಕಾಳಜಿಯನ್ನು ತೋರಿಸುತ್ತದೆ, ಅಪರಿಚಿತರಾಗಬೇಡಿ! ಪ್ರಾಣಿಗಳನ್ನು ಉಳಿಸಿ ಏಕೆಂದರೆ ಅವು ಈ ಪ್ರಪಂಚದ ಒಂದು ಭಾಗವಾಗಿದೆ! ವನ್ಯಜೀವಿಗಳಿಗಾಗಿ ನಿಲ್ಲುವ ಸಮಯ. ನಿಮ್ಮ ದಾಸ ದರ್ಶನ್’ ಎಂದು ಅವರು ಟ್ವೀಟ್ ಮಾಡಿದ್ದಾರೆ. ಜೊತೆಗೆ ಹುಲಿ, ಚಿರತೆ, ಆನೆಯ ಆಕರ್ಷಕ ಫೋಟೋಗಳನ್ನು ಕೂಡ ಅವರು ಶೇರ್ ಮಾಡಿಕೊಂಡಿದ್ದಾರೆ.
ದರ್ಶನ್ ಅವರು ಈ ವಿಚಾರದ ಬಗ್ಗೆ ಈಗ ಪ್ರಸ್ತಾಪ ಮಾಡಲು ಕಾರಣ ಇದೆ. ಮಾ.3ರಂದು ‘ವಿಶ್ವ ವನ್ಯಜೀವಿ ದಿನ’. ಆ ಪ್ರಯುಕ್ತ ವಿಶ್ವಾದ್ಯಂತ ವನ್ಯಜೀವಿಗಳ ಸಂರಕ್ಷಣೆ ಕುರಿತಂತೆ ಜಾಗೃತಿ ಮೂಡಿಸುವ ಕೆಲಸ ಆಗುತ್ತಿದೆ. ಅದರಲ್ಲಿ ದರ್ಶನ್ ಕೂಡ ಕೈ ಜೋಡಿಸಿದ್ದು, ವನ್ಯಜೀವಿಗಳ ರಕ್ಷಣೆಯ ಮಹತ್ವವನ್ನು ಎಲ್ಲರಿಗೂ ತಿಳಿಸಿಹೇಳುವ ಪ್ರಯತ್ನವನ್ನು ಅವರು ಮಾಡಿದ್ದಾರೆ. ತಮ್ಮ ಈ ಪರಿಸರ ಕಾಳಜಿಯ ಸಲುವಾಗಿಯೇ ಅವರು ಈಗಾಗಲೇ ಕರ್ನಾಟಕ ಸರ್ಕಾರದ ಅರಣ್ಯ ಇಲಾಖೆಯ ರಾಯಭಾರಿಯಾಗಿಯೂ ಕೆಲಸ ಮಾಡುತ್ತಿದ್ದಾರೆ.
ಎಲ್ಲರೂ ವನ್ಯಜೀವಿಗಳನ್ನು ಉಳಿಸೋಣ.
ಈ ಜಗತ್ತನ್ನು ಉಳಿಸಲು ವನ್ಯಜೀವಿಗಳನ್ನು ಉಳಿಸಿ, ನಿಮಗೆ ಕಾಳಜಿಯನ್ನು ತೋರಿಸುತ್ತದೆ, ಅಪರಿಚಿತರಾಗಬೇಡಿ!
ಪ್ರಾಣಿಗಳನ್ನು ಉಳಿಸಿ ಏಕೆಂದರೆ ಅವು ಈ ಪ್ರಪಂಚದ ಒಂದು ಭಾಗವಾಗಿದೆ!
ವನ್ಯಜೀವಿಗಳಿಗಾಗಿ ನಿಲ್ಲುವ ಸಮಯ.
ನಿಮ್ಮ ದಾಸ ದರ್ಶನ್@aranya_kfd #WorldWildlifeDay2021 pic.twitter.com/TK0cqRvIuR— Darshan Thoogudeepa (@dasadarshan) March 3, 2021
ಸಿನಿಮಾ ವಿಚಾರಕ್ಕೆ ಬರುವುದಾದರೆ, ಶಿವರಾತ್ರಿ ಹಬ್ಬದ ಪ್ರಯುಕ್ತ ಮಾ.11ರಂದು ‘ರಾಬರ್ಟ್’ ಚಿತ್ರ ಅದ್ದೂರಿಯಾಗಿ ತೆರೆ ಕಾಣಲು ಸಜ್ಜಾಗಿದೆ. ಕನ್ನಡದ ಜೊತೆಗೆ ತೆಲುಗಿನಲ್ಲಿಯೂ ಈ ಚಿತ್ರ ಬಿಡುಗಡೆ ಆಗಲಿದೆ. ದರ್ಶನ್ಗೆ ಜೋಡಿಯಾಗಿ ಹೊಸ ನಟಿ ಆಶಾ ಭಟ್ ಅಭಿನಯಿಸಿದ್ದಾರೆ. ತರುಣ್ ಸುಧೀರ್ ನಿರ್ದೇಶನ ಮಾಡಿದ್ದಾರೆ. ಈ ಕಾಂಬಿನೇಷನ್ ಬಗ್ಗೆ ಅಭಿಮಾನಿಗಳಿಗೆ ಭಾರಿ ನಿರೀಕ್ಷೆ ಇದೆ. ರವಿಶಂಕರ್, ಜಗಪತಿ ಬಾಬು, ರವಿಕಿಶನ್, ದೇವರಾಜ್ ಮುಂತಾದ ಘಟಾನುಘಟಿ ಕಲಾವಿದರು ಈ ಸಿನಿಮಾದಲ್ಲಿ ನಟಿಸಿದ್ದಾರೆ.
ಇದನ್ನೂ ಓದಿ: D Boss Darshan: ಜಮೀರ್ ಅಹ್ಮದ್ ಖಾನ್ ಭವ್ಯ ಬಂಗಲೆಗೆ ಭೇಟಿ ನೀಡಿದ ಡಿ ಬಾಸ್ ದರ್ಶನ್