Roberrt: 2 ಗಂಟೆ 46 ನಿಮಿಷ ಇರುವ ರಾಬರ್ಟ್​ ಚಿತ್ರಕ್ಕೆ ಇನ್ನೊಂದು ಸಮಸ್ಯೆ! ಥಿಯೇಟರ್​ ಮಾಲಿಕರಿಗೆ ತಲೆನೋವು

Night Curfew: ಬೇರೆ ಚಿತ್ರಗಳಿಗೆ ಹೋಲಿಸಿದರೆ ರಾಬರ್ಟ್​ ಸಿನಿಮಾದ ಅವಧಿ ಕೊಂಚ ಉದ್ದವಾಗಿದೆ. 2 ಗಂಟೆ 46 ನಿಮಿಷ ಅವಧಿಯ ಈ ದೀರ್ಘವಾದ ಸಿನಿಮಾದಿಂದ ಅನೇಕ ಚಿತ್ರಮಂದಿರಗಳಲ್ಲಿ ಪ್ರದರ್ಶನದ ಸಮಸ್ಯೆ ಎದುರಾಗುತ್ತಿದೆ.

Roberrt: 2 ಗಂಟೆ 46 ನಿಮಿಷ ಇರುವ ರಾಬರ್ಟ್​ ಚಿತ್ರಕ್ಕೆ ಇನ್ನೊಂದು ಸಮಸ್ಯೆ! ಥಿಯೇಟರ್​ ಮಾಲಿಕರಿಗೆ ತಲೆನೋವು
ದರ್ಶನ್​
Edited By:

Updated on: Apr 10, 2021 | 10:26 AM

‘ಚಾಲೆಂಜಿಂಗ್​ ಸ್ಟಾರ್​’ ದರ್ಶನ್​ ನಟನೆಯ ರಾಬರ್ಟ್​ ಸಿನಿಮಾ ಈಗಾಗಲೇ ಜಯಭೇರಿ ಬಾರಿಸಿದೆ. ಬರೋಬ್ಬರಿ 100 ಕೋಟಿ ರೂ.ಗಿಂತಲೂ ಹೆಚ್ಚು ಕಲೆಕ್ಷನ್​ ಮಾಡಿ ಮುನ್ನುಗ್ಗುತ್ತಿದೆ. ಪೈರಸಿ ಹಾವಳಿ, ಶೇ.50ರಷ್ಟು ಆಸನ ಮಿತಿ, ಕೊರೊನಾ ವೈರಸ್​ ಎರಡನೇ ಭೀತಿ ನಡುವೆಯೂ ಈ ಸಿನಿಮಾ ಧೂಳೆಬ್ಬಿಸಿದೆ. ಆದರೆ ಈಗ ಈ ಚಿತ್ರಕ್ಕೆ ಹೊಸ ಸಮಸ್ಯೆ ಎದುರಾಗಿದೆ. ಅದು ಕೂಡ ಕೊರೊನಾ ಕಾರಣದಿಂದ. ಎಲ್ಲಕ್ಕಿಂತ ಮುಖ್ಯವಾಗಿ ಈ ಸಿನಿಮಾದ ಅವಧಿಯೇ ಚಿತ್ರಮಂದಿರದ ಮಾಲಿಕರಿಗೆ ತಲೆನೋವಾಗಿದೆ.

ಹೌದು, ಬೇರೆ ಚಿತ್ರಗಳಿಗೆ ಹೋಲಿಸಿದರೆ ರಾಬರ್ಟ್​ ಸಿನಿಮಾದ ಅವಧಿ ಕೊಂಚ ಉದ್ದವಾಗಿದೆ. 2 ಗಂಟೆ 46 ನಿಮಿಷ ಅವಧಿಯ ಈ ದೀರ್ಘವಾದ ಸಿನಿಮಾದಿಂದ ಅನೇಕ ಚಿತ್ರಮಂದಿರಗಳಲ್ಲಿ ಪ್ರದರ್ಶನದ ಸಮಸ್ಯೆ ಎದುರಾಗುತ್ತಿದೆ. ಅದಕ್ಕೆ ಕಾರಣ ಆಗಿರುವುದು ಸರ್ಕಾರ ಜಾರಿ ಮಾಡಿರುವ ನೈಟ್​ ಕರ್ಫ್ಯೂ! ಹೌದು, ರಾತ್ರಿ 10 ಗಂಟೆಯ ನಂತರ ಸಾರ್ವಜನಿಕವಾಗಿ ಯಾರೂ ಓಡಾಡುವಂತಿಲ್ಲ. ಹಾಗಾಗಿ ಸಿನಿಮಾ ಪ್ರದರ್ಶನವನ್ನು ರಾತ್ರಿ 9.30ರ ಒಳಗಾಗಿ ಮುಗಿಸುವ ಅನಿವಾರ್ಯತೆ ಇದೆ. ರಾಬರ್ಟ್​ ಸಿನಿಮಾ ಅವಧಿ ದೀರ್ಘವಾಗಿ ಇರುವುದರಿಂದ ಅಷ್ಟು ಬೇಗ ಮುಗಿಸುವುದು ಕಷ್ಟ ಆಗುತ್ತಿದೆ.

ನೈಟ್​ ಕರ್ಫ್ಯೂ ಜಾರಿ ಆಗುವುದಕ್ಕಿಂತಲೂ ಮುನ್ನ ಥಿಯೇಟರ್​ಗಳಲ್ಲಿ ರಾಬರ್ಟ್​ ಸಿನಿಮಾ ಒಂದು ದಿನಕ್ಕೆ 4 ಬಾರಿ ಪ್ರದರ್ಶನ ಕಾಣುತ್ತಿತ್ತು. ರಾತ್ರಿ ಶೋ ಮುಗಿಯುವ ವೇಳೆಗೆ 10 ಗಂಟೆಗಿಂತಲೂ ಹೆಚ್ಚು ಸಮಯ ಆಗುತ್ತಿತ್ತು. ಆದರೆ ಈಗ ಮೂರು ಶೋಗೆ ಇಳಿಸುವ ಅನಿವಾರ್ಯತೆ ಎದುರಾಗಿದೆ. ಅಲ್ಲದೆ, ಸಿನಿಮಾ ಪ್ರದರ್ಶನದ ವೇಳಾಪಟ್ಟಿಯನ್ನೂ ಬದಲಿಸಬೇಕಾಗುತ್ತಿದೆ.

ಶಿವರಾತ್ರಿ ಹಬ್ಬದ ಪ್ರಯುಕ್ತ ಮಾ.11ರಂದು ರಾಬರ್ಟ್ ಸಿನಿಮಾ ತೆರೆಕಂಡಿತ್ತು. ತರುಣ್​ ಸುಧೀರ್​ ನಿರ್ದೇಶನದ ಈ ಚಿತ್ರದಲ್ಲಿ ದರ್ಶನ್​ಗೆ ಜೋಡಿಯಾಗಿ ಆಶಾ ಭಟ್​ ಅಭಿನಯಿಸಿದ್ದಾರೆ. ಅವರಿಗೆ ಇದು ಕನ್ನಡದಲ್ಲಿ ಮೊದಲ ಸಿನಿಮಾ. ಚೊಚ್ಚಲ ಪ್ರಯತ್ನದಲ್ಲೇ ಭರ್ಜರಿ ಗೆಲುವು ಪಡೆದುಕೊಂಡಿದ್ದಾರೆ. ಭಾರಿ ಯಶಸ್ಸಿನಿಂದಾಗಿ ನಿರ್ಮಾಪಕ ಉಮಾಪತಿ ಶ್ರೀನಿವಾಸ್​ ಗೌಡ ಅವರ ಮೊಗದಲ್ಲಿ ನಗು ಮೂಡಿದೆ.

ಇದನ್ನೂ ಓದಿ: 100 ಕೋಟಿ ರೂ. ಬಾಚಿಕೊಂಡ ರಾಬರ್ಟ್​! ಸ್ಯಾಂಡಲ್​ವುಡ್​ನಲ್ಲಿ ದರ್ಶನ್​ ಹೊಸ ದಾಖಲೆ

Roberrt: ರಾಬರ್ಟ್​ ಎತ್ತಂಗಡಿ ಮಾಡಿಸಲು ಬಂದ ಪವನ್​ ಕಲ್ಯಾಣ್​ ಸಿನಿಮಾಗೆ ದರ್ಶನ್​ ಫ್ಯಾನ್ಸ್​ ಕೊಟ್ರು ಸಖತ್​ ಡಿಚ್ಚಿ!

 

(Night Curfew causes new problem for Roberrt Movie Show timings)

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us