ಗಂಡು ಮೆಟ್ಟಿದ ನಾಡು ಹುಬ್ಬಳ್ಳಿಯಲ್ಲಿ ಇಂದು ‘ರಾಬರ್ಟ್’ನದ್ದೇ ಹವಾ! ಹೌದು, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಹಾಗೂ ಸದ್ಯ ಸ್ಯಾಂಡಲ್ವುಡ್ನ ಮೋಸ್ಟ್ ಎಕ್ಸ್ಪೆಕ್ಟೆಡ್ ಸಿನಿಮಾ ಆದ ರಾಬರ್ಟ್ನ ಪ್ರೀ ರಿಲೀಸ್ ಕಾರ್ಯಕ್ರಮಕ್ಕೆ ನಗರದಲ್ಲಿ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ನೆಚ್ಚಿನ ನಟನ ಚಿತ್ರದ ಒಂಚೂರಾದ್ರು ಝಲಕ್ ನೋಡಲು ಹಾತೋರೆಯುತ್ತಿರುವ ಸಾವಿರಾರು ಮಂದಿ D ಬಾಸ್ ಅಭಿಮಾನಿಗಳು ಇಂದು ಕಾರ್ಯಕ್ರಮ ನಡೆಯುತ್ತಿರುವ ಹುಬ್ಬಳ್ಳಿಯ ರೈಲ್ವೆ ಮೈದಾನಕ್ಕೆ ಆಗಮಿಸಿದ್ದಾರೆ.
ಮಾಸ್ಟರ್ ಆನಂದ್ ನಿರೂಪಣೆಯಲ್ಲಿ ಮೂಡಿ ಬರುತ್ತಿರುವ ಕಾರ್ಯಕ್ರಮಕ್ಕೆ ಸಚಿವರಾದ ಜಗದೀಶ್ ಶೇಟ್ಟರ್ ಹಾಗೂ ಬಿ.ಸಿ.ಪಾಟೀಲ್ ಸೇರಿದಂತೆ ಹಲವು ರಾಜಕೀಯ ಮುಖಂಡರು ಸಹ ಆಗಮಿಸಿದರು. ಇದಲ್ಲದೆ, ದಚ್ಚು ಅಭಿಮಾನಿಗಳಿಗಾಗಿ ಸ್ಪೆಷಲ್ ಲೇಸರ್ ಶೋ ಹಾಗೂ ವೆರೈಟಿ ವೆರೈಟಿ ಡ್ಯಾನ್ಸ್ ಪ್ರೋಗ್ರಾಂಗಳನ್ನು ಆಯೋಜನೆ ಮಾಡಲಾಗಿದೆ.
ಇದನ್ನೂ ಓದಿ: Bigg Boss Kannada 8 Launch LIVE Updates: 10ನೇ ಸ್ಪರ್ಧಿಯಾಗಿ ಮಂಜು ಪಾವಗಡ ಬಿಗ್ ಬಾಸ್ ಮನೆಗೆ ಎಂಟ್ರಿ
Published On - 9:05 pm, Sun, 28 February 21