Roberrt Telugu Teaser ತೆಲುಗಿನಲ್ಲಿ ಅಬ್ಬರಿಸೋಕೆ ರಾಬರ್ಟ್​ ರೆಡಿ: ನಾಳೆ ಸಂಜೆ 04:05 ಕ್ಕೆ ರಿಲೀಸ್

Roberrt Telugu Teaser: ಕಳೆದ ವರ್ಷ ಕನ್ನಡದಲ್ಲಿ ರಾಬರ್ಟ್​ ಟೀಸರ್​ ರಿಲೀಸ್​ ಆಗಿತ್ತು. ದರ್ಶನ್​ ಅವರು ಸಾಕಷ್ಟು ಆ್ಯಕ್ಷನ್​ ದ್ರಶ್ಯಗಳೊಂದಿಗೆ ಮಿಂಚಿದ್ದರು. ಈಗ ಟಾಲಿವುಡ್​ನಲ್ಲೂ ರಾಬರ್ಟ್​ ಸಿನಿಮಾದ ಟೀಸರ್​ ಹವಾ ಸೃಷ್ಟಿಸೋಕೆ ರೆಡಿ ಆಗಿದೆ.

Roberrt Telugu Teaser ತೆಲುಗಿನಲ್ಲಿ ಅಬ್ಬರಿಸೋಕೆ ರಾಬರ್ಟ್​ ರೆಡಿ: ನಾಳೆ ಸಂಜೆ 04:05 ಕ್ಕೆ ರಿಲೀಸ್
ದರ್ಶನ್
Follow us
ರಾಜೇಶ್ ದುಗ್ಗುಮನೆ
|

Updated on:Feb 02, 2021 | 4:10 PM

ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಅಭಿನಯದ ರಾಬರ್ಟ್​ ಸಿನಿಮಾ ಕನ್ನಡದಲ್ಲಿ ಈಗಾಗಲೇ ಸಾಕಷ್ಟು ನಿರೀಕ್ಷೆ ಹುಟ್ಟಿಸಿದೆ. ಈಗ ತೆಲುಗಿನಲ್ಲೂ ರಾಬರ್ಟ್​ ರಿಲೀಸ್​ಗೆ ರೆಡಿ ಇದ್ದು ನಾಳೆ ಸಂಜೆ ನಾಲ್ಕು ಗಂಟೆಗೆ ಟೀಸರ್​ ರಿಲೀಸ್​ ಆಗಲಿದೆ.

ಕನ್ನಡದ ಜತೆಜತೆಗೆ ತೆಲುಗಿನಲ್ಲೂ ರಾಬರ್ಟ್​ ಬಿಡುಡೆ​ಗೆ ಸಿದ್ಧವಾಗಿತ್ತು. ಆದರೆ, ಟಾಲಿವುಡ್​ನಲ್ಲಿ ಸಿನಿಮಾ ರಿಲೀಸ್​ ಮಾಡೋಕೆ ಕೆಲವರು ಅಡ್ಡಿ ಮಾಡಿದ್ದರು. ಈ ವಿಚಾರವಾಗಿ ದಾಸ ದರ್ಶನ್​ ಸಿಟ್ಟಾಗಿದ್ದರು ಕೂಡ. ನಂತರ ಈ ಸಮಸ್ಯೆ ಬಗೆ ಹರಿದಿತ್ತು. ಈ ಹಿನ್ನೆಲೆಯಲ್ಲಿ, ಮಾರ್ಚ್​ 11ರಂದೇ ತೆಲುಗಿನಲ್ಲೂ ರಾಬರ್ಟ್​ ಸಿನಿಮಾ ರಿಲೀಸ್​ ಆಗುತ್ತಿದೆ. ಇದಕ್ಕೂ ಮೊದಲು ಟಾಲಿವುಡ್​ ಮಂದಿಗೆ ರಾಬರ್ಟ್​ ಸಿನಿಮಾದ ಟೀಸರ್​ ದರ್ಶನ ಮಾಡಿಸುತ್ತಿದೆ ಚಿತ್ರತಂಡ.

ಕಳೆದ ವರ್ಷ ಕನ್ನಡದಲ್ಲಿ ರಾಬರ್ಟ್​ ಟೀಸರ್​ ರಿಲೀಸ್​ ಆಗಿತ್ತು. ದರ್ಶನ್​ ಅವರು ಸಾಕಷ್ಟು ಆ್ಯಕ್ಷನ್​ ದ್ರಶ್ಯಗಳೊಂದಿಗೆ ಮಿಂಚಿದ್ದರು. ಈಗ ಟಾಲಿವುಡ್​ನಲ್ಲೂ ರಾಬರ್ಟ್​ ಸಿನಿಮಾದ ಟೀಸರ್​ ಹವಾ ಸೃಷ್ಟಿಸೋಕೆ ರೆಡಿ ಆಗಿದೆ.

ಈ ಬಗ್ಗೆ ಟ್ವೀಟ್​ ಮಾಡಿರುವ ಸಿನಿಮಾ ನಿರ್ದೇಶಕ ತರುಣ್​ ಸುಧೀರ್​, ರಾಬರ್ಟ್​ ತೆಲುಗು ಸಿನಿಮಾ ಟೀಸರ್​ ಫೆಬ್ರವರಿ 3ರಂದು 04:05 ರಿಲೀಸ್ ಆಗುತ್ತಿದೆ. ನಿಮ್ಮ ಬೆಂಬಲ ಹೀಗೆ ಇರಲಿ ಎಂದು ಬರೆದುಕೊಂಡಿದ್ದಾರೆ.

ರಾಬರ್ಟ್​ ಸಿನಿಮಾದಲ್ಲಿ ದರ್ಶನ್​, ಆಶಾ ಭಟ್​ ಮುಖ್ಯಭೂಮಿಕೆ ನಿರ್ವಹಿಸಿದ್ದಾರೆ. ತೆಲುಗಿನ ಸ್ಟಾರ್​ ವಿಲನ್​ ಜಗಪತಿ ಬಾಬು ಕೂಡ ಕಾಣಿಸಿಕೊಂಡಿದ್ದಾರೆ. ಹೀಗಾಗಿ, ಟಾಲಿವುಡ್​ನಲ್ಲಿ ಸಿನಿಮಾಗೆ ಮತ್ತಷ್ಟು ಮೈಲೇಜ್​ ಸಿಗುವ ಸಾಧ್ಯತೆ ಇದೆ.

ತೆಲುಗಿನಲ್ಲಿ ಸಾಕಷ್ಟು ಆ್ಯಕ್ಷನ್​ ಸಿನಿಮಾಗಳು ರಿಲೀಸ್​ ಆಗುತ್ತವೆ. ಹೀಗಾಗಿ, ಅಲ್ಲಿನ ಮಂದಿಗೆ ಈ ರೀತಿಯ ಚಿತ್ರಗಳು ಬಹಳಾನೇ ಇಷ್ಟವಾಗುತ್ತದೆ. ಹೀಗಾಗಿ, ರಾಬರ್ಟ್​ ಸಿನಿಮಾ ಕೂಡ ಟಾಲಿವುಡ್​ ಸಿನಿ ಪ್ರೇಕ್ಷಕರಿಗೆ ಇಷ್ಟವಾಗುವ ನಿರೀಕ್ಷೆ ಇದೆ.

ಅಂತೂ ಸಿಕ್ತು ಗ್ರೀನ್​ ಸಿಗ್ನಲ್​: ಸ್ಯಾಂಡಲ್‌ವುಡ್‌, ಟಾಲಿವುಡ್‌ನಲ್ಲಿ ಒಂದೇ ದಿನ ‘ರಾಬರ್ಟ್‌’ ಸಿನಿಮಾ ರಿಲೀಸ್‌!

Published On - 1:37 pm, Tue, 2 February 21

ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?