Yash Birthday: ಮೊದಲ ಧಾರಾವಾಹಿಯಲ್ಲಿ ಯಶ್ ಹೇಗೆ ಕಾಣ್ತಿದ್ರು ನೋಡಿ; ಇಲ್ಲಿದೆ ವಿಡಿಯೋ..

|

Updated on: Jan 08, 2024 | 7:01 AM

ಯಶ್ ಅವರು ಮೊದಲು ನಟಿಸಿದ ಧಾರಾವಾಹಿ ‘ನಂದ ಗೋಕುಲ’. ಈ ಧಾರಾವಾಹಿಯಲ್ಲಿ ರಾಧಿಕಾ ಪಂಡಿತ್ ಕೂಡ ನಟಿಸಿದ್ದರು. ‘ಮಳೆ ಬಿಲ್ಲು’ ಹಾಗೂ ‘ಪ್ರೀತಿ ಇಲ್ಲದ ಮೇಲೆ’ ಧಾರಾವಾಹಿಗಳಲ್ಲೂ ಯಶ್ ನಟಿಸಿದ್ದರು.

Yash Birthday: ಮೊದಲ ಧಾರಾವಾಹಿಯಲ್ಲಿ ಯಶ್ ಹೇಗೆ ಕಾಣ್ತಿದ್ರು ನೋಡಿ; ಇಲ್ಲಿದೆ ವಿಡಿಯೋ..
ಯಶ್
Follow us on

ರಾಕಿಂಗ್ ಸ್ಟಾರ್ ಯಶ್ (Yash) ಅವರಿಗೆ ಇಂದು (ಜನವರಿ 8) ಜನ್ಮದಿನದ ಸಂಭ್ರಮ. ಅವರಿಗೆ ಎಲ್ಲ ಕಡೆಗಳಿಂದ ವಿಶ್​ಗಳು ಹರಿದು ಬರುತ್ತಿವೆ. ಯಶ್​ಗೆ ಈಗ ಕೇವಲ ಕರ್ನಾಟಕ ಮಾತ್ರವಲ್ಲ ವಿಶ್ವಾದ್ಯಂತ ಅಭಿಮಾನಿಗಳಿದ್ದಾರೆ. ಎಲ್ಲರೂ ಯಶ್​ಗೆ ಬರ್ತ್​ಡೇ ಶುಭಾಶಯ ತಿಳಿಸುತ್ತಿದ್ದಾರೆ. ಅವರಿಗೆ ಮತ್ತಷ್ಟು ಗೆಲುವು ಸಿಗಲಿ ಎಂದು ಫ್ಯಾನ್ಸ್ ಹಾರೈಸುತ್ತಿದ್ದಾರೆ. ಯಶ್ ಅವರು ಏಕಾಏಕಿ ದೊಡ್ಡ ಸ್ಟಾರ್ ಆದವರಲ್ಲ. ಬಣ್ಣದ ಲೋಕಕ್ಕೆ ಕಾಲಿಡುವಾಗ ಅವರಿಗೆ ಯಾವುದೇ ಹಿನ್ನೆಲೆ ಇರಲಿಲ್ಲ. ಧಾರಾವಾಹಿ ಮೂಲಕ ವೃತ್ತಿಜೀವನ ಆರಂಭಿಸಿದ ಯಶ್ ನಂತರ ಚಿತ್ರರಂಗಕ್ಕೆ ಕಾಲಿಟ್ಟರು. ಈಗ ತಮ್ಮ ಸಾಮ್ರಾಜ್ಯವನ್ನು ಪ್ಯಾನ್ ಇಂಡಿಯಾ ಮಟ್ಟಕ್ಕೆ ವಿಸ್ತರಿಸಿಕೊಂಡಿದ್ದಾರೆ.

ಯಶ್ ಅವರು ಮೊದಲು ನಟಿಸಿದ ಧಾರಾವಾಹಿ ‘ನಂದ ಗೋಕುಲ’. ಈ ಧಾರಾವಾಹಿಯಲ್ಲಿ ರಾಧಿಕಾ ಪಂಡಿತ್ ಕೂಡ ನಟಿಸಿದ್ದರು. ‘ಮಳೆ ಬಿಲ್ಲು’ ಹಾಗೂ ‘ಪ್ರೀತಿ ಇಲ್ಲದ ಮೇಲೆ’ ಧಾರಾವಾಹಿಗಳಲ್ಲೂ ಯಶ್ ನಟಿಸಿದ್ದರು. ಈ ಸಂದರ್ಭದಲ್ಲಿ ಯಶ್ ಹೇಗೆ ಕಾಣಿಸುತ್ತಿದ್ದರು ಎಂಬ ವಿಡಿಯೋ ಇಲ್ಲಿದೆ.

ಯಶ್ ಅವರು ಸಾಕಷ್ಟು ಹಿಟ್ ಚಿತ್ರಗಳನ್ನು ನೀಡಿದ್ದಾರೆ. ‘ಮೊಗ್ಗಿನ ಮನಸ್ಸು’ ಸಿನಿಮಾದಿಂದ ಅವರಿಗೆ ದೊಡ್ಡ ಗೆಲುವು ಸಿಕ್ಕಿತು. ಅಲ್ಲಿಂದ ಅವರು ಚಿತ್ರರಂಗದಲ್ಲಿ ಗುರುತಿಸಿಕೊಂಡರು. ಈಗ ಯಶ್ ದೊಡ್ಡ ಸ್ಟಾರ್ ಆಗಿ ಬೆಳೆದಿದ್ದಾರೆ. ‘ಕೆಜಿಎಫ್ 2’ ಚಿತ್ರದ ಮೂಲಕ ಯಶ್ ಖ್ಯಾತಿ ವಿಶ್ವ ಮಟ್ಟದಲ್ಲಿ ಹಬ್ಬಿತು. ಈಗ ಅವರು ‘ಟಾಕ್ಸಿಕ್’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ.

‘ಟಾಕ್ಸಿಕ್’ ಸಿನಿಮಾ ತಂಡದಿಂದ ಏನಾದರೂ ಹೊಸ ಅಪ್​​ಡೇಟ್ ಸಿಗಲಿದೆಯೇ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ. ಈ ಚಿತ್ರಕ್ಕೆ ಮಲಯಾಳಂ ನಿರ್ದೇಶಕಿ ಗೀತು ಮೋಹನ್​ದಾಸ್ ಅವರು ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಸೃಷ್ಟಿ ಆಗಿದೆ. ಈ ಸಿನಿಮಾ ಕೂಡ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಆಗುತ್ತಿದೆ. 2025ರ ಏಪ್ರಿಲ್ ತಿಂಗಳಲ್ಲಿ ಸಿನಿಮಾ ರಿಲೀಸ್ ಆಗಲಿದೆ.

ಇದನ್ನೂ ಓದಿ: ಯಶ್ ಹುಟ್ಟುಹಬ್ಬದ ಕಾಮನ್ ಡಿಪಿ ಬಿಡುಗಡೆ ಮಾಡಿದ ಶಿವರಾಜ್ ಕುಮಾರ್

ಯಶ್ ಅವರ ಕಾಮನ್​ ಡಿಪಿಯನ್ನು ಇತ್ತೀಚೆಗೆ ಶಿವರಾಜ್​ಕುಮಾರ್ ಅವರು ರಿಲೀಸ್ ಮಾಡಿದ್ದರು. ಈ ಬಾರಿ ಅಭಿಮಾನಿಗಳ ಜೊತೆ ಬರ್ತ್​ಡೇ ಆಚರಣೆ ಸಾಧ್ಯವಿಲ್ಲ ಎಂದು ಯಶ್ ಈಗಾಗಲೇ ತಿಳಿಸಿದ್ದಾರೆ. ಇದು ಅಭಿಮಾನಿಗಳಿಗೆ ಕೊಂಚ ಬೇಸರ ಮೂಡಿಸಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ