ಬಹುನಿರೀಕ್ಷಿತ ‘ಕೊರಗಜ್ಜ’ ಸಿನಿಮಾಗೆ ಸಂಗೀತ ನಿರ್ದೇಶನ ಮಾಡಲಿರುವ ಗೋಪಿ ಸುಂದರ್
‘ಕೊರಗಜ್ಜ’ ಚಿತ್ರಕ್ಕೆ ಹಿನ್ನೆಲೆ ಸಂಗೀತದ ಜೊತೆಗೆ ಎಲ್ಲ ಹಾಡುಗಳನ್ನು ಗೋಪಿ ಸುಂದರ್ ಅವರು ಹೊಸದಾಗಿ ಕಂಪೋಸ್ ಮಾಡುತ್ತಿದ್ದಾರೆ. ಬಹುಕೋಟಿ ಬಜೆಟ್ನಲ್ಲಿ ತ್ರಿವಿಕ್ರಮ ಸಪಲ್ಯ ಅವರು ಈ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ. ಸುಧೀರ್ ಅತ್ತಾವರ ಅವರು ನಿರ್ದೇಶನ ಮಾಡುತ್ತಿದ್ದಾರೆ.
ಅನೇಕ ಕಾರಣಗಳಿಂದಾಗಿ ‘ಕೊರಗಜ್ಜ’ ಸಿನಿಮಾ (Koragajja Movie) ಕೌತುಕ ಮೂಡಿಸಿದೆ. ಈ ಸಿನಿಮಾ ಸೆಟ್ಟೇರಿದಾಗಿನಿಂದಲೂ ಸಾಕಷ್ಟು ಅಡೆತಡೆಗಳು ಉಂಟಾಗಿವೆ. ಅವುಗಳನ್ನೆಲ್ಲ ನಿವಾರಿಸಿಕೊಂಡು ಚಿತ್ರತಂಡ ಮುನ್ನುಗ್ಗುತ್ತಿದೆ. ಮೊದಲು ಈ ಸಿನಿಮಾದ ಹೆಸರು ಬದಲಾಯಿತು. ಬಳಿಕ ಸಾಕಷ್ಟು ಬದಲಾವಣೆಗಳು ಆದವು. ಹಲವಾರು ಬಾರಿ ಮರು ಚಿತ್ರೀಕರಣ ಮಾಡಿದ್ದೂ ಉಂಟು! ಈಗ ಸಿನಿಮಾದ ಸಂಗೀತ ಕೂಡ ಬದಲಾಗಿದೆ. ಹೌದು, ‘ಕೊರಗಜ್ಜ’ (Koragajja) ಚಿತ್ರತಂಡಕ್ಕೆ ಸಂಗೀತ ನಿರ್ದೇಶಕರಾಗಿ ಗೋಪಿ ಸುಂದರ್ (Gopi Sundar) ಸೇರ್ಪಡೆ ಆಗಿದ್ದಾರೆ. ಈ ಹೊಸ ಮಾಹಿತಿಯನ್ನು ಚಿತ್ರತಂಡದವರು ಹಂಚಿಕೊಂಡಿದ್ದಾರೆ.
ಸುಧೀರ್ ಅತ್ತಾವರ ಅವರು ‘ಕೊರಗಜ್ಜ’ ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದಾರೆ. ಸಂಗೀತದ ವಿಚಾರದಲ್ಲಿ ಈ ಸಿನಿಮಾ ತಂಡ ಪ್ರಮುಖ ನಿರ್ಧಾರ ತೆಗೆದುಕೊಂಡಿದೆ. ಚಿತ್ರಕ್ಕಾಗಿ ಈವರೆಗೆ ಸಿದ್ಧಗೊಂಡಿದ್ದ ಸಂಗೀತವನ್ನೇ ಸಂಪೂರ್ಣವಾಗಿ ಬದಲಾಯಿಸುವ ತೀರ್ಮಾನ ತೆಗೆದುಕೊಳ್ಳಲಾಗಿದೆ. ದಕ್ಷಿಣ ಭಾರತದ ಖ್ಯಾತ ಮ್ಯೂಸಿಕ್ ಡೈರೆಕ್ಟರ್ ಗೋಪಿ ಸುಂದರ್ ಅವರ ಈಗ ‘ಕೊರಗಜ್ಜ’ ಸಿನಿಮಾಗೆ ಸಂಗೀತ ನೀಡಲಿದ್ದಾರೆ.
‘ಕೊರಗಜ್ಜ’ ಚಿತ್ರಕ್ಕೆ ಹಿನ್ನೆಲೆ ಸಂಗೀತದ ಜೊತೆಗೆ ಎಲ್ಲ ಹಾಡುಗಳನ್ನು ಗೋಪಿ ಸುಂದರ್ ಅವರು ಹೊಸದಾಗಿ ಕಂಪೋಸ್ ಮಾಡುತ್ತಿದ್ದಾರೆ. ಬಹುಕೋಟಿ ಬಜೆಟ್ನಲ್ಲಿ ತ್ರಿವಿಕ್ರಮ ಸಪಲ್ಯ ಅವರು ಈ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ. ‘ತ್ರಿವಿಕ್ರಮ ಸಿನಿಮಾಸ್ ’ ಹಾಗೂ ‘ಸಕ್ಸಸ್ ಫಿಲ್ಮ್ಸ್’ ಬ್ಯಾನರ್ ಮೂಲಕ ‘ಕೊರಗಜ್ಜ’ ಚಿತ್ರ ತಯಾರಾಗುತ್ತಿದೆ. ಇದು ಪ್ಯಾನ್ ಇಂಡಿಯಾ ಸಿನಿಮಾ ಆಗಲಿದ್ದು, ‘ಆರ್ಆರ್ಆರ್’, ‘ಪುಷ್ಪ’ ಮುಂತಾದ ಯಶಸ್ವಿ ಸಿನಿಮಾಗಳ ತಂತ್ರಜ್ಞರು ಈ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ನಿರತರಾಗಿದ್ದಾರೆ.
ಇದನ್ನೂ ಓದಿ: ‘ಕೊರಗಜ್ಜ’ ಸಿನಿಮಾ ಶೂಟಿಂಗ್ಗೆ ಗೂಂಡಾಗಳ ಅಡ್ಡಿ; ಚಿತ್ರೀಕರಣ ಸ್ಥಗಿತಗೊಳಿಸಿದ ತಂಡ
ಈ ಚಿತ್ರದಲ್ಲಿ ಬಾಲಿವುಡ್ನ ಹಿರಿಯ ನಟ ಕಬೀರ್ ಬೇಡಿ ಅಭಿನಯಿಸುತ್ತಿರುವುದು ವಿಶೇಷ. ಸಂದೀಪ್ ಸೋಪರ್ಕರ್, ಗಣೇಶ್ ಆಚಾರ್ಯ, ಭವ್ಯ, ಶ್ರುತಿ ಮುಂತಾದ ಕಲಾವಿದರು ಈ ಚಿತ್ರದಲ್ಲಿದ್ದಾರೆ. ಹೊಸ ನಟಿ ಋತಿಕ ಅವರು ಕೊರಗಜ್ಜನ ತಾಯಿ ಕೊರೊಪೊಳು ಪಾತ್ರದ ಮೂಲಕ ಸ್ಯಾಂಡಲ್ವುಡ್ಗೆ ಪರಿಚಯಗೊಳ್ಳುತ್ತಿದ್ದಾರೆ. ಅಂದಾಜು 800 ವರ್ಷಗಳ ಹಿಂದಿನ ಕಥೆ ‘ಕೊರಗಜ್ಜ’ ಸಿನಿಮಾದಲ್ಲಿ ಇರಲಿದೆ.
ಇದನ್ನೂ ಓದಿ: ಮಂಗಳೂರು: ಕೊರಗಜ್ಜ ಕವಿತೆಗಳಲ್ಲಿನ ಆಕ್ಷೇಪಾರ್ಹ ಪದಗಳ ವಿರುದ್ಧ ಕ್ರಮಕ್ಕೆ ಆಗ್ರಹ
ಮಾರ್ಚ್ ತಿಂಗಳ ಕೊನೆ ವಾರದಲ್ಲಿ ಈ ಸಿನಿಮಾವನ್ನು ಬಿಡುಗಡೆ ಮಾಡಬೇಕು ಎಂಬ ಗುರಿ ಇಟ್ಟುಕೊಂಡು ಚಿತ್ರತಂಡ ಕಾರ್ಯನಿರತವಾಗಿದೆ. ಜೀತ್ ಜೊಸ್ಸಿ ಹಾಗೂ ವಿದ್ಯಾಧರ್ ಶೆಟ್ಟಿ ಅವರು ಈ ಸಿನಿಮಾಗೆ ಸಂಕಲನ ಮಾಡುತ್ತಿದ್ದಾರೆ. ಮನೋಜ್ ಪಿಳ್ಳೈ ಮತ್ತು ಪವನ್ ವಿ. ಛಾಯಾಗ್ರಹಣ ಈ ಚಿತ್ರಕ್ಕಿದೆ. ಸುಧೀರ್ ಅತ್ತಾವರ್ ಅವರು ಕಲಾ ನಿರ್ದೇಶನ ಹಾಗೂ ಬಿಬಿನ್ ದೇವ್ ಅವರು ಸೌಂಡ್ ಡಿಸೈನಿಂಗ್ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ