ಯಶ್ ಜನ್ಮದಿನ: ಭರ್ಜರಿಯಾಗಿ ಮೂಡಿ ಬಂದಿದೆ ರಾಕಿಂಗ್ ಸ್ಟಾರ್ ಕಾಮನ್​ ಡಿಪಿ

| Updated By: ರಾಜೇಶ್ ದುಗ್ಗುಮನೆ

Updated on: Jan 06, 2025 | 7:51 AM

Yash Birthday: ಯಶ್ ಅವರ ಜನ್ಮದಿನ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಅಭಿಮಾನಿಗಳ ಸಂಭ್ರಮ ಜೋರಾಗಿದೆ. ಹೊಸ ಕಾಮನ್ ಡಿಪಿ ಅನಾವರಣಗೊಂಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಅನ್ನದಾನ, ರಕ್ತದಾನದಂತಹ ಒಳ್ಳೆಯ ಕಾರ್ಯಗಳನ್ನು ಮಾಡುವ ಯೋಜನೆಗಳನ್ನು ಹೊಂದಿದ್ದಾರೆ. 'ಟಾಕ್ಸಿಕ್' ಚಿತ್ರದ ಅಪ್ಡೇಟ್​​ಗಾಗಿ ಅಭಿಮಾನಿಗಳು ಕಾದು ಕುಳಿತಿದ್ದಾರೆ. ಯಶ್ ಜನ್ಮದಿನಕ್ಕೆ ಈ ಬಗ್ಗೆ ಮಾಹಿತಿ ಸಿಗೋ ಸಾಧ್ಯತೆ ಇದೆ.

ಯಶ್ ಜನ್ಮದಿನ: ಭರ್ಜರಿಯಾಗಿ ಮೂಡಿ ಬಂದಿದೆ ರಾಕಿಂಗ್ ಸ್ಟಾರ್ ಕಾಮನ್​ ಡಿಪಿ
ಯಶ್
Follow us on

ಸ್ಟಾರ್ ಹೀರೋಗಳ ಜನ್ಮದಿನ ಸಮೀಪಿಸಿದಂತೆ ಅಭಿಮಾನಿಗಳ ಸಂಭ್ರಮವು ಜೋರಾಗುತ್ತದೆ. ಸೋಶಿಯಲ್ ಮೀಡಿಯಾದಲ್ಲಿ ವಿವಿಧ ರೀತಿಯ ಫೋಟೋಗಳನ್ನು ಪೋಸ್ಟ್ ಮಾಡುವ ಕೆಲಸ ಆಗುತ್ತದೆ. ಅದರಲ್ಲೂ ವಿಶೇಷವಾಗಿ ಗಮನ ಸೆಳೆಯುವುದು ಕಾಮನ್ ಡಿಪಿ. ಒಬ್ಬರು ಕಾಮನ್​ ಡಿಪಿನ ರಿವೀಲ್ ಮಾಡಿದರೆ, ಅದನ್ನು ಎಲ್ಲಾ ಅಭಿಮಾನಿಗಳು ತಮ್ಮ ಪ್ರಾಫೈಲ್​ಗಳಲ್ಲಿ ಹಾಕಿಕೊಳ್ಳುತ್ತಾರೆ. ಈಗ ಯಶ್ ಅವರ ಕಾಮನ್ ಡಿಪಿ ಅನಾವರಣ ಆಗಿದೆ. ಅವರ ಜನ್ಮದಿನಕ್ಕೆ ಕೆಲವೇ ದಿನ ಬಾಕಿ ಇರುವಾಗ ಡಿಪಿ ರಿವೀಲ್ ಆಗಿದೆ. ಇದಕ್ಕೆ ಮೆಚ್ಚುಗೆ ಸಿಕ್ಕಿದೆ.

ದೊಡ್ಡದಾದ ಕೋಟೆ ಇದೆ. ಕೋಟೆಯ ಎದುರು ಇರುವ ಕುರ್ಚಿ ಮೇಲೆ ಯಶ್ ಅವರು ಕುಳಿತಿದ್ದಾರೆ. ಅಂದರೆ ಯಶ್ ಅವರು ಆ ಕೋಟೆಗೆ ರಾಜ ಎಂಬರ್ಥವನ್ನು ಇದು ನೀಡುತ್ತದೆ. ಎದುರಲ್ಲಿ ಯಶ್ ಅವರ ಬೆನ್ನು ತೋರಿಸಿ ನಿಂತ ಫೋಟೋ ಇದ್ದು, ಪಕ್ಕದಲ್ಲಿ ಜನರ ಕೈಗಳು ಕಾಣಿಸುತ್ತವೆ. ಪಕ್ಕದಲ್ಲಿ ಬೆಂಕಿ ಕೂಡ ಇದೆ. ಕೋಟೆಯ ಮೇಲೆ ಯಶ್ ಬಾಸ್ ಎಂಬ ಬಾವುಟವು ರಾರಾಜಿಸುತ್ತಿದೆ. ಮೇಲ್ಭಾಗದಲ್ಲಿ ಯಶ್​ಗೆ ಜನ್ಮದಿನದ ಶುಭಾಶಯ ಕೋರಲಾಗಿದೆ.

ಯಶ್ ಜನ್ಮದಿನಕ್ಕೆ ಕೆಲವೇ ದಿನಗಳು ಬಾಕಿ ಇವೆ. ಜನವರಿ 8 ಯಶ್ ಅವರ ಜನ್ಮದಿನ. ಅಂದು ಹೆಚ್ಚಿನ ಆಚರಣೆ ಇಲ್ಲದೆ ಇರುವ ಹೊರತಾಗಿಯೂ ಸೋಶಿಯಲ್ ಮೀಡಿಯಾದಲ್ಲಿ ಸಂಭ್ರಮಾಚರಣೆ ಇರುತ್ತದೆ. ಯಶ್ ಅವರು ‘ಟಾಕ್ಸಿಕ್’ ಸಿನಿಮಾ ಶೂಟ್​ನ ನಿಮಿತ್ತ ವಿದೇಶದಲ್ಲಿ ಇರುವುದಾಗಿ ಹೇಳಿದ್ದಾರೆ. ಅಲ್ಲದೆ, ಅಭಿಮಾನಿಗಳು ಹಾರ ತುರಾಯಿಗಳನ್ನು ತಂದು ಹುಟ್ಟುಹಬ್ಬ ಆಚರಣೆ ಮಾಡದಂತೆ ಕೋರಿಕೊಂಡಿದ್ದಾರೆ. ಕಳೆದ ವರ್ಷ ಯಶ್ ಕಟೌಟ್ ನಿಲ್ಲಿಸುವಾಗ ಅದು ವಿದ್ಯುತ್​ ಲೈನ್​ಗೆ ತಾಗಿ ಕೆಲ ಅಭಿಮಾನಿಗಳು ಮೃತಪಟ್ಟಿದ್ದರು.


ಇದನ್ನೂ ಓದಿ: ಶಂಕರ್​ನಾಗ್ ಸ್ಟೈಲ್​ನಲ್ಲಿ ಮಾತನಾಡಿದ್ದ ಯಶ್; ಎಷ್ಟು ಪರ್ಫೆಕ್ಟ್ ಮಿಮಿಕ್ರಿ ನೋಡಿ

ಈ ವರ್ಷ ಅಭಿಮಾನಿಗಳು ಯಶ್ ಹೆಸರಲ್ಲಿ ಪೂಜೆಗಳನ್ನು ಮಾಡಿಸಲು ರೆಡಿ ಆಗಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ಯಶ್ ಹೆಸರಲ್ಲಿ ಸಾಕಷ್ಟು ಒಳ್ಳೆಯ ಕೆಲಸಗಳು ನಡೆಯಲಿವೆ. ಈ ಬಗ್ಗೆಯೂ ಅಭಿಮಾನಿಗಳು ಸಾಕಷ್ಟು ಪ್ಲ್ಯಾನಿಂಗ್ ಮಾಡಿದ್ದಾರೆ. ಅನ್ನದಾನ, ರಕ್ತದಾನದಂತ ಒಳ್ಳೆಯ ಕೆಲಸಗಳು ಯಶ್ ಅವರ ಅಭಿಮಾನಿಗಳ ಕಡೆಯಿಂದ ಆಗಲಿದೆಯಂತೆ. ಅವರ ನಟನೆಯ ‘ಟಾಕ್ಸಿಕ್’ ಸಿನಿಮಾ ಕಡೆಯಿಂದ ಅಪ್​ಡೇಟ್ ಸಿಗಲಿ ಎಂದು ಫ್ಯಾನ್ಸ್ ಕಾಯುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:50 am, Mon, 6 January 25