ಯಶ್ ಮುಂದಿನ ಚಿತ್ರದಲ್ಲಿ ರೇಸಿಂಗ್? ಲೆಜೆಂಡರಿ ರೇಸರ್ ಜತೆಗಿನ ಫೋಟೋ ನೋಡಿ ಫ್ಯಾನ್ಸ್ ಖುಷ್

ಯಶ್ ಅವರು ಅಮೆರಿಕದ ಲಾಸ್ ಎಂಜಲೀಸ್​ನಲ್ಲಿ ಸಮಯ ಕಳೆಯುತ್ತಿದ್ದಾರೆ. ಹಾಲಿವುಡ್ ನಿರ್ದೇಶಕ ಜೆಜೆ ಪೆರ್ರಿ ಜತೆ ಅವರು ಇತ್ತೀಚೆಗೆ ಕಾಣಿಸಿಕೊಂಡಿದ್ದರು. ಅವರ ಜತೆ ಗನ್ ಶೂಟಿಂಗ್ ತರಬೇತಿ ಪಡೆಯುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.

ಯಶ್ ಮುಂದಿನ ಚಿತ್ರದಲ್ಲಿ ರೇಸಿಂಗ್? ಲೆಜೆಂಡರಿ ರೇಸರ್ ಜತೆಗಿನ ಫೋಟೋ ನೋಡಿ ಫ್ಯಾನ್ಸ್ ಖುಷ್
Edited By:

Updated on: Oct 07, 2022 | 6:05 PM

ರಾಕಿಂಗ್ ಸ್ಟಾರ್ ಯಶ್ (Yash) ಅವರ ಖ್ಯಾತಿ ವಿಶ್ವಾದ್ಯಂತ ಹಬ್ಬಿದೆ. ಅವರ ನಟನೆಯ ‘ಕೆಜಿಎಫ್ 2’ ರಿಲೀಸ್ ಆಗಿ ಆರು ತಿಂಗಳು ಪೂರ್ಣಗೊಳ್ಳುತ್ತಾ ಬಂದಿದೆ. ಖ್ಯಾತಿಯನ್ನು ದುಪ್ಪಟ್ಟು ಮಾಡಿದ ಈ ಸಿನಿಮಾದ ಬಳಿಕ ಅವರ ಮುಂದಿನ ಚಿತ್ರ ಯಾವುದು ಎಂಬುದು ಇನ್ನೂ ಘೋಷಣೆ ಆಗಿಲ್ಲ. ಹೀಗಿರುವಾಗಲೇ ಯಶ್ ಅವರು ಅಮೆರಿಕದಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ಅಮೆರಿಕಕ್ಕೆ ತೆರಳಿದ್ದು ಏಕೆ ಎಂದು ಅನೇಕರು ಪ್ರಶ್ನೆ ಮಾಡಿದ್ದರು. ಹೀಗಿರುವಾಗಲೇ ಎಫ್​1 ರೇಸಿಂಗ್ ಲೆಜೆಂಡ್ ಲೇವಿಸ್ ಹ್ಯಾಮಿಲ್ಟನ್ (Lewis Hamilton) ಜತೆ ಯಶ್ ಕಾಣಿಸಿಕೊಂಡಿದ್ದಾರೆ. ಇವರು ಒಟ್ಟಾಗಿ ನಿಂತಿರುವ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದನ್ನು ನೋಡಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ. ಯಶ್ ಮುಂದಿನ ಚಿತ್ರದಲ್ಲಿ ರೇಸಿಂಗ್ ಕೂಡ ಇರಬಹುದು ಎಂದು ಊಹಿಸುತ್ತಿದ್ದಾರೆ.

ಯಶ್ ಅವರು ಅಮೆರಿಕದ ಲಾಸ್ ಎಂಜಲೀಸ್​ನಲ್ಲಿ ಸಮಯ ಕಳೆಯುತ್ತಿದ್ದಾರೆ. ಹಾಲಿವುಡ್ ನಿರ್ದೇಶಕ ಜೆಜೆ ಪೆರ್ರಿ ಜತೆ ಅವರು ಇತ್ತೀಚೆಗೆ ಕಾಣಿಸಿಕೊಂಡಿದ್ದರು. ಅವರ ಜತೆ ಗನ್ ಶೂಟಿಂಗ್ ತರಬೇತಿ ಪಡೆಯುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಈ ಬೆನ್ನಲ್ಲೇ ಯಶ್ ಅವರು ಎಫ್​1 ರೇಸರ್ ಜತೆ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ
ಬಾಲ್ಯ ಸ್ನೇಹಿತನ ಮದುವೆಗೆ ಪತ್ನಿ ಸಮೇತ ಬಂದು ಹರಸಿದ ಯಶ್​; ಸಲಾಂ ರಾಕಿ ಭಾಯ್​ ಎಂದ ಫ್ಯಾನ್ಸ್​
ಗೋವಾ ಸಿಎಂ ಪ್ರಮೋದ್​ ಸಾವಂತ್​ ಭೇಟಿ ಮಾಡಿದ ಯಶ್​-ರಾಧಿಕಾ ಪಂಡಿತ್​; ಮುಂದಿನ ಸಿನಿಮಾ ಬಗ್ಗೆ​ ಕುತೂಹಲ
‘ಕೆಜಿಎಫ್​ 2’ ಹಿಟ್​ ಆಗಿದ್ದಕ್ಕೆ ಕಬ್ಬಿನ ಹಾಲು ಟ್ರೀಟ್​ ಕೇಳಿದ ‘ಗೂಗ್ಲಿ’ ನಟಿ ಕೃತಿ ಕರಬಂಧ: ಯಶ್​ ಏನಂದ್ರು?
‘ಕೆಜಿಎಫ್​ 2’ಗೆ ಕೆಟ್ಟ ವಿಮರ್ಶೆ ಮಾಡಿ, ಯಶ್​ ಬಗ್ಗೆ ವ್ಯಂಗ್ಯದ ಮಾತಾಡಿದ ‘ದೇಶದ್ರೋಹಿ’ ನಟ:​ ಸಿಡಿದೆದ್ದ ಫ್ಯಾನ್ಸ್​

ಗುರುವಾರ (ಅಕ್ಟೋಬರ್ 6) ಯಶ್ ಅವರು ಲಾಸ್ ಎಂಜಲೀಸ್​ಗೆ ತೆರಳಿದ್ದರು. ಈ ವೇಳೆ ಲೆವಿಸ್ ಹ್ಯಾಮಿಲ್ಟನ್ ಜತೆ ಅವರು ಪೋಸ್​ ನೀಡಿದ್ದಾರೆ. ಈ ಫೋಟೋ ಯಶ್ ಅಭಿಮಾನಿಗಳ ವಲಯದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ಇದಕ್ಕೆ ಫ್ಯಾನ್ಸ್ ಬಗೆಬಗೆಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.

ಸಂಪೂರ್ಣ ತಯಾರಿಯೊಂದಿಗೆ ಮುಂದಿನ ಪ್ರಾಜೆಕ್ಟ್ ಘೋಷಣೆ ಮಾಡುವ ಬಗ್ಗೆ ಯಶ್ ಈ ಮೊದಲೇ ಹೇಳಿದ್ದರು. ಅವರು ಮುಂದಿನ ಸಿನಿಮಾಗಾಗಿ ಹಾಲಿವುಡ್ ಮಂದಿಯಿಂದ ತರಬೇತಿ ಪಡೆಯುತ್ತಿದ್ದಾರೆ ಎನ್ನಲಾಗಿದೆ. ಇದರಿಂದ ಅನುಮಾನಗಳು ಮತ್ತಷ್ಟು ಹೆಚ್ಚಿದೆ. ಯಶ್ ಹಾಲಿವುಡ್ ಸಿನಿಮಾ ಮಾಡಬಹುದು ಎಂದು ಕೂಡ ಕೆಲವರು ಊಹಿಸುತ್ತಿದ್ದಾರೆ. ಇದು ನಿಜವಾದಲ್ಲಿ ರಾಕಿಂಗ್ ಸ್ಟಾರ್ ಹೊಸ ಸಾಧನೆ ಮಾಡಿದಂತೆ ಆಗಲಿದೆ.

ಇದನ್ನೂ ಓದಿ: ನಟ ಯಶ್​ ಯಶೋಮಾರ್ಗದ ಕನಸು ನನಸು: ಕೋಡಿ ತುಂಬಿ ಹರಿದ ತಲ್ಲೂರು ಕೆರೆ, ರೈತರ ಮೊಗದಲ್ಲಿ ಮಂದಹಾಸ

ಯಶ್ ಅವರ 19ನೇ ಚಿತ್ರದ ಬಗ್ಗೆ ಈಗಾಗಲೇ ಹಲವು ವದಂತಿಗಳು ಹುಟ್ಟಿಕೊಂಡಿವೆ. ಆದರೆ, ಯಾವ ವಿಚಾರದ ಬಗ್ಗೆಯೂ ಅಧಿಕೃತವಾಗಿ ಘೋಷಣೆ ಆಗಿಲ್ಲ. ದಸರಾ ಸಂದರ್ಭದಲ್ಲಿ ಯಶ್ ಹೊಸ ಸಿನಿಮಾ ಘೋಷಣೆ ಆಗಲಿದೆ ಎಂದೇ ಹೇಳಲಾಗಿತ್ತು. ಆದರೆ ಆ ರೀತಿಯ ಯಾವ ಅನೌನ್ಸ್​ಮೆಂಟ್ ಕೂಡ ಆಗಿಲ್ಲ.