AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Anant Nag: ‘ಪತ್ನಿ, ಮಗಳ ಒತ್ತಾಯಕ್ಕೆ ಈ ಪ್ರಶಸ್ತಿ ಸ್ವೀಕರಿಸಲು ಒಪ್ಪಿದೆ’: ಡಾಕ್ಟರೇಟ್​ ಪಡೆದು ಮಾತಾಡಿದ ಅನಂತ್​​ ನಾಗ್​

Anant Nag | Honorary Doctorate: ‘ನಾನು ಅಭಿನಯಿಸಿದ ಮೊದಲ ಸಿನಿಮಾ‌ ‘ಸಂಕಲ್ಪ’. ಕನ್ನಡ ಚಿತ್ರರಂಗವನ್ನು ಬೆಳೆಸಿದ ಕೀರ್ತಿ ಡಾ. ರಾಜ್ ಕುಮಾರ್ ಅವರಿಗೆ ಸಲ್ಲಬೇಕು’ ಎಂದು ಅನಂತ್​ ನಾಗ್​ ಹೇಳಿದ್ದಾರೆ.

Anant Nag: ‘ಪತ್ನಿ, ಮಗಳ ಒತ್ತಾಯಕ್ಕೆ ಈ ಪ್ರಶಸ್ತಿ ಸ್ವೀಕರಿಸಲು ಒಪ್ಪಿದೆ’: ಡಾಕ್ಟರೇಟ್​ ಪಡೆದು ಮಾತಾಡಿದ ಅನಂತ್​​ ನಾಗ್​
ಅನಂತ್ ನಾಗ್
TV9 Web
| Updated By: ಮದನ್​ ಕುಮಾರ್​|

Updated on:Oct 07, 2022 | 1:30 PM

Share

ಭಾರತೀಯ ಚಿತ್ರರಂಗದ​ ಹಿರಿಯ ನಟ ಅನಂತ್​ ನಾಗ್ (Anant Nag) ಅವರಿಗೆ ಬೆಂಗಳೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ (Honorary Doctorate) ನೀಡಲಾಗಿದೆ. ಭಾರತೀಯ ವಿದ್ಯಾಭವನದಲ್ಲಿ‌ ಇಂದು (ಅ.7) ಡಾಕ್ಟರೇಟ್ ಪ್ರದಾನ ಕಾರ್ಯಕ್ರಮ ನಡೆದಿದೆ. ಸಿನಿಮಾ ರಂಗದಲ್ಲಿನ ಸಾಧನೆ ಗುರುತಿಸಿ ಅವರಿಗೆ ಈ ಗೌರವ ನೀಡಲಾಗಿದೆ. ಈ ವೇಳೆ ಮಾತನಾಡಿದ ಅನಂತ್​ ನಾಗ್​ ಅವರು ತಮ್ಮ ಸಿನಿಮಾ ಮತ್ತು ರಾಜಕೀಯದ ಜರ್ನಿಯನ್ನು ಮೆಲುಕು ಹಾಕಿದ್ದಾರೆ. ‘ನಾನು ಬಹಳ ವರ್ಷಗಳ ಹಿಂದೆ ರಾಜಕೀಯ ಭಾಷಣ ಕೇಳಲು ಹೋಗಿದ್ದೆ. ಅಲ್ಲಿ ಭಾಷಣ ಮಾಡಲು ಬಂದಿದ್ದು ಅಟಲ್ ಬಿಹಾರಿ ವಾಜಪೇಯಿ. ಅವರು ದೇವಿಯೋ, ಸಜ್ಜನೋ ಎಂದು ಮಾತು ಆರಂಭಿಸಿದ್ರು. ಅವರ ಮಾತು ಕೇಳಿ ನನಗೆ ರೋಮಾಂಚನ ಆಗಿತ್ತು. ಇವತ್ತು ನನಗೆ ಬಹಳ ಸಂತೋಷವಾಗಿದೆ. ಇಷ್ಟು ಜನರ ಸಮ್ಮುಖದಲ್ಲಿ ಪ್ರಶಸ್ತಿ ಸ್ವೀಕರಿಸಿದ್ದು ಪುಣ್ಯ’ ಎಂದು ಅನಂತ್​ ನಾಗ್​ ಹೇಳಿದ್ದಾರೆ.

‘ನನಗೆ ಯಾವತ್ತೂ ಪ್ರಶಸ್ತಿಗಳತ್ತ ಹೆಚ್ಚು ಒಲವು ಇರಲಿಲ್ಲ. ಪತ್ನಿ ಮತ್ತು ಮಗಳ ಒತ್ತಾಯಕ್ಕೆ ನಾನು ಈ ಪ್ರಶಸ್ತಿ ಸ್ವೀಕರಿಸಲು ಒಪ್ಪಿದೆ. ಹೊನ್ನಾವರದಲ್ಲಿದ್ದಾಗ 8ನೇ ತರಗತಿವರೆಗೂ ನಾನು ಕನ್ನಡದಲ್ಲೇ ಒದಿದೆ. ಮುಂಬೈಗೆ ಹೋಗಿ ಆಂಗ್ಲ ಮಾಧ್ಯಮಕ್ಕೆ ಸೇರಿದ ಕಾರಣ ನಾನು ಓದಿನಲ್ಲಿ ಹಿಂದೆ ಬಿದ್ದೆ. ನಾನು ಮೊದಲು ನೋಡಿದ ಚಿತ್ರ ‘ರತ್ನಗಿರಿ ರಹಸ್ಯ’. ಮುಂಬೈನಲ್ಲಿ ಓದುವಾಗ ಅಲ್ಲಿ ದೇವಾನಂದ್, ರಾಜ್ ಕಪೂರ್ ಮುಂತಾದವರ ಬಗ್ಗೆ ಮಾತಾಡುತ್ತಿದ್ದರು. ಅದು ನನಗೆ ಹೊಸದಾಗಿತ್ತು. ನಾನು ಅಭಿನಯಿಸಿದ ಮೊದಲ ಸಿನಿಮಾ‌ ‘ಸಂಕಲ್ಪ’. ಕನ್ನಡ ಚಿತ್ರರಂಗವನ್ನು ಬೆಳೆಸಿದ ಕೀರ್ತಿ ಡಾ. ರಾಜ್​ಕುಮಾರ್ ಅವರಿಗೆ ಸಲ್ಲಬೇಕು’ ಎಂದು ಅನಂತ್​ ನಾಗ್​ ಹೇಳಿದ್ದಾರೆ.

ಇದನ್ನೂ ಓದಿ
Image
Ramesh Aravind: ರಮೇಶ್​ ಅರವಿಂದ್​ ಬರೆದ ಹೊಸ ಪುಸ್ತಕದ ಬಗ್ಗೆ ಮೆಚ್ಚುಗೆಯ ಮಾತಾಡಿದ ಅನಂತ್​ ನಾಗ್​
Image
ಜನ್ಮದಿನದಂದು ಉಡುಪಿಯ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದ ಅನಂತ್​ ನಾಗ್​
Image
ಮತ್ತೆ ಒಂದಾದ ರಕ್ಷಿತ್​ ಶೆಟ್ಟಿ-ಅನಂತ್​ ನಾಗ್​; ಈ ಬಾರಿ ನಡೆಯಲಿದೆ ‘ಆಬ್ರಕಡಾಬ್ರ’
Image
Anant Nag: ಅನಂತ್​ ನಾಗ್​ ಬಗ್ಗೆ ನಿಮಗೆಷ್ಟು ಗೊತ್ತು? ಲೆಜೆಂಡರಿ ನಟನ ಬಗ್ಗೆ ರಿಷಬ್​ ಶೆಟ್ಟಿ ಟೀಮ್​ ಮಾಡಿದ ಡಾಕ್ಯುಮೆಂಟರಿ ಇಲ್ಲಿದೆ

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 1:27 pm, Fri, 7 October 22

ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ