‘ನನಗೆ ರೊಮ್ಯಾಂಟಿಕ್ ದೃಶ್ಯ ಮಾಡೋದೇ ಚಾಲೆಂಜ್’; ರಾಕಿಂಗ್ ಸ್ಟಾರ್ ಯಶ್

ರಾಕಿಂಗ್ ಸ್ಟಾರ್ ಯಶ್ ನಟನೆಯ ‘ಟಾಕ್ಸಿಕ್’ ಚಿತ್ರದ ‘ತಬಾಹಿ..’ ಹಾಡು ಇಂಟರ್ನೆಟ್‌ನಲ್ಲಿ ಹೊಸ ಅಲೆ ಸೃಷ್ಟಿಸಿದೆ. ಕಿಯಾರಾ ಅಡ್ವಾಣಿ ಜೊತೆಗಿನ ಯಶ್ ಅವರ ಪ್ರಣಯ ದೃಶ್ಯಗಳು ಎಲ್ಲೆಡೆ ಭಾರಿ ಚರ್ಚೆ ಹುಟ್ಟುಹಾಕುತ್ತಿವೆ. ಈ ಬೆನ್ನಲ್ಲೇ, ಹಿಂದೆ ತಮಗೆ ರೊಮ್ಯಾಂಟಿಕ್ ದೃಶ್ಯಗಳನ್ನು ಮಾಡುವುದು ದೊಡ್ಡ ಸವಾಲಾಗಿತ್ತು ಮತ್ತು ಪೋಷಕರೊಂದಿಗೆ ನೋಡಲಾಗದ ದೃಶ್ಯಗಳಲ್ಲಿ ನಟಿಸುವುದಿಲ್ಲ ಎಂದು ಯಶ್ ಹೇಳಿದ್ದ ಹಳೆಯ ಸಂದರ್ಶನ ಈಗ ಮತ್ತೆ ಮುನ್ನೆಲೆಗೆ ಬಂದಿದೆ.

‘ನನಗೆ ರೊಮ್ಯಾಂಟಿಕ್ ದೃಶ್ಯ ಮಾಡೋದೇ ಚಾಲೆಂಜ್’; ರಾಕಿಂಗ್ ಸ್ಟಾರ್ ಯಶ್
ಕಿಯಾರಾ-ಯಶ್

Updated on: Jul 09, 2026 | 7:33 AM

ಮುಖ್ಯಾಂಶಗಳು

  • ಯಶ್ ಮತ್ತು ಕಿಯಾರಾ ಅಡ್ವಾಣಿ ಕಾಂಬಿನೇಷನ್‌ನ ‘ತಬಾಹಿ..’ ಹಾಡು ರಿಲೀಸ್
  • ಇವರಿಬ್ಬರ ನಡುವಿನ ಕೆಮಿಸ್ಟ್ರಿ ಹಾಗೂ ರೊಮ್ಯಾಂಟಿಕ್ ದೃಶ್ಯಗಳು ವೈರಲ್
  • ನಟನೆಯಲ್ಲಿ ತಮಗೆ ರೊಮ್ಯಾಂಟಿಕ್ ಸೀನ್‌ಗಳು ಚಾಲೆಂಜ್ ಎಂದಿದ್ದ ಯಶ್

ರಾಕಿಂಗ್ ಸ್ಟಾರ್ ಯಶ್ ಅವರು ‘ಟಾಕ್ಸಿಕ್’ ಚಿತ್ರದ ‘ತಬಾಹಿ..’ ಹಾಡಿನ (Tabaahi Song) ಮೂಲಕ ಇಂಟರ್​​ನೆಟ್ ಲೋಕದಲ್ಲಿ ಹೊಸ ಅಲೆ ಸೃಷ್ಟಿ ಮಾಡಿದ್ದಾರೆ. ಈ ಚಿತ್ರದ ಹಾಡು ಹೆಚ್ಚು ರೊಮ್ಯಾಂಟಿಕ್ ಆಗಿದ್ದು, ಎಲ್ಲ ಕಡೆಗಳಲ್ಲಿ ಚರ್ಚೆ ಹುಟ್ಟುಹಾಕುತ್ತಿದೆ. ಯಶ್ ಹಾಗೂ ಕಿಯಾರಾ ಅಡ್ವಾಣಿ ಅವರ ಬೋಲ್ಡ್ ದೃಶ್ಯಗಳು ಗಮನ ಸೆಳೆದಿವೆ. ಈ ಮೊದಲು ಮಾತನಾಡಿದ್ದ ಯಶ್ ಅವರು, ‘ನನಗೆ ರೊಮ್ಯಾಂಟಿಕ್ ದೃಶ್ಯಗಳನ್ನು ಮಾಡೋದು ದೊಡ್ಡ ಚಾಲೆಂಜ್’ ಎಂದು ಹೇಳಿದ್ದರು.

ಯಶ್ ಅವರು ತಮ್ಮ ವೃತ್ತಿ ಜೀವನದಲ್ಲಿ ಅನೇಕ ಸಿನಿಮಾಗಳನ್ನು ಮಾಡಿದ್ದಾರೆ. ಆದರೆ, ‘ಟಾಕ್ಸಿಕ್’ ಚಿತ್ರದಷ್ಟು ಬೋಲ್ಡ್ ಆಗಿ ಅವರು ಎಂದಿಗೂ ಸಿನಿಮಾ ಮಾಡಿರಲಿಲ್ಲ. ಅವರು ಎಲ್ಲ ಮಿತಿಯನ್ನು ದಾಟಿದ್ದಾರೆ. ಇದು ಅನೇಕರಿಗೆ ಅಚ್ಚರಿ ಎನಿಸಿದೆ. ಈಗ ಅವರ ಹಳೆಯ ಸಂದರ್ಶನದಲ್ಲಿ ನೀಡಿದ್ದ ಹೇಳಿಕೆ ಚರ್ಚೆ ಆಗಿದೆ.

ರೊಮ್ಯಾಂಟಿಕ್ ದೃಶ್ಯವೇ ಸವಾಲು

ನಟ ರಮೇಶ್ ಅರವಿಂದ್ ನಡೆಸಿಕೊಡುತ್ತಿದ್ದ ಜನಪ್ರಿಯ ಟಾಕ್ ಶೋ ‘ವೀಕೆಂಡ್ ವಿತ್ ರಮೇಶ್’ ಕಾರ್ಯಕ್ರಮದಲ್ಲಿ ಯಶ್ ಈ ಹಿಂದೆ ಭಾಗಿ ಆಗಿದ್ದು. ಆ ವೇಳೆ ಮಾತನಾಡಿದ್ದ ಅವರು, ನಟನೆಯಲ್ಲಿ ರೊಮ್ಯಾಂಟಿಕ್ ದೃಶ್ಯಗಳನ್ನು ಮಾಡುವುದು ಎಲ್ಲಕ್ಕಿಂತ ದೊಡ್ಡ ಸವಾಲು ಎಂದು ಅವರು ಹೇಳಿದ್ದರು.

ರಾಧಿಕಾ ನಗುತ್ತಿದ್ದರು

‘ಜನರು ನನ್ನ ಬಳಿ ಬಂದು ನೀವು ರೊಮ್ಯಾಂಟಿಕ್ ದೃಶ್ಯಗಳನ್ನು ತುಂಬಾ ಚೆನ್ನಾಗಿ ಮಾಡ್ತೀರಾ ಎಂದು ಹೇಳಿದಾಗ ನನಗೆ ಅಚ್ಚರಿಯಾಗುತ್ತದೆ. ಏಕೆಂದರೆ ಅಂತಹ ದೃಶ್ಯಗಳನ್ನು ಮಾಡುವಾಗ ನಾನು ತೀವ್ರವಾಗಿ ನರ್ವಸ್ ಆಗುತ್ತಿದ್ದೆ. ನಾನು ರೊಮ್ಯಾಂಟಿಕ್ ಸೀನ್ ಮಾಡುತ್ತಿದ್ದಾಗ ರಾಧಿಕಾ ಸೇರಿದಂತೆ ಉಳಿದವರೆಲ್ಲಾ ನನ್ನನ್ನು ನೋಡಿ ನಗುತ್ತಿದ್ದರು’ ಎಂದು ಯಶ್ ಹೇಳಿದ್ದರು.

ನಿಯಮ ಮುರಿದ ಯಶ್

‘ನಾನು ಇಂದಿಗೂ ಒಂದು ನಿಯಮವನ್ನು ಪಾಲಿಸುತ್ತೇನೆ. ಯಾವುದೇ ಒಂದು ನಿರ್ದಿಷ್ಟ ದೃಶ್ಯ ನನ್ನ ಪೋಷಕರೊಂದಿಗೆ ಕುಳಿತು ನೋಡಲು ನನಗೆ ಮುಜುಗರ ಎನಿಸಿದರೆ, ಅಂತಹ ದೃಶ್ಯದಲ್ಲಿ ನಾನು ನಟಿಸುವುದಿಲ್ಲ. ಏಕೆಂದರೆ ಅಂತಹ ದೃಶ್ಯಗಳು ಚಿತ್ರಮಂದಿರದಲ್ಲಿ ಸಾಮಾನ್ಯ ಪ್ರೇಕ್ಷಕರಿಗೂ ಮುಜುಗರ ಉಂಟುಮಾಡುತ್ತವೆ’ ಎಂದು ಯಶ್ ಹೇಳಿದ್ದರು. ಇಂದು ಆ ನಿಯಮವನ್ನು ಅವರು ಮುರಿದಿದ್ದಾರೆ.

ಇದನ್ನೂ ಓದಿ: ‘ಟಾಕ್ಸಿಕ್’ ಚಿತ್ರದ ‘ತಬಾಹಿ’ ಹಾಡಿನ ರೊಮ್ಯಾನ್ಸ್ ಝಲಕ್; ಯಶ್-ಕಿಯಾರಾ ಬೋಲ್ಡ್ ದೃಶ್ಯದ ಗ್ಯಾಲರಿ

ಅಂದು ರೊಮ್ಯಾಂಟಿಕ್ ದೃಶ್ಯಗಳಿಗೆ ಮುಜುಗರ ಪಡುತ್ತಿದ್ದ ರಾಕಿಂಗ್ ಸ್ಟಾರ್, ಇಂದು ‘ಟಾಕ್ಸಿಕ್’ ಚಿತ್ರದ ಹಾಡಿನಲ್ಲಿ ಕಿಯಾರಾ ಅಡ್ವಾಣಿ ಜೊತೆ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿರುವುದು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us