‘ರುದ್ರಾಭಿಷೇಕಂ’ ಚಿತ್ರತಂಡದಿಂದ ಭರ್ಜರಿ ಆಫರ್, ಗೆದ್ದವರಿಗೆ ನಗದು ಬಹುಮಾನ

ವಿಜಯ್ ರಾಘವೇಂದ್ರ ಹಲವು ಭಿನ್ನ ಲುಕ್​​ಗಳಲ್ಲಿ ಕಾಣಿಸಿಕೊಂಡಿರುವ ಗ್ರಾಮ್ಯ ಕತೆಯುಳ್ಳ ಆಕ್ಷನ್-ಥ್ರಿಲ್ಲರ್ ಸಿನಿಮಾ ‘ರುದ್ರಾಭಿಷೇಕಂ’ ಇದೇ ತಿಂಗಳು 25ಕ್ಕೆ ರಿಲೀಸ್ ಆಗಲಿದೆ. ಸಿನಿಮಾ ಅನ್ನು ಪ್ಯಾನ್ ಇಂಡಿಯಾ ಕ್ರಿಯೇಶನ್ಸ್ ಮೂಲಕ ನಿರ್ಮಾಣ ಮಾಡಲಾಗಿದ್ದು, ಸಿನಿಮಾ ತಂಡ ಇದೀಗ ಸಾಮಾಜಿಕ ಜಾಲತಾಣದ ಇನ್​​ಫ್ಯುಯೆನ್ಸರ್​​ಗಳಿಗೆ ಆಫರ್ ಒಂದನ್ನು ನೀಡಿದೆ. ‘ರುದ್ರಾಭಿಷೇಕಂ’ ಸಿನಿಮಾದ ಹಾಡುಗಳಿಗೆ ರೀಲ್ಸ್ ಮಾಡಿ ನಗದು ಬಹುಮಾನವನ್ನು ಗೆಲ್ಲಬಹುದಾಗಿದೆ.

‘ರುದ್ರಾಭಿಷೇಕಂ’ ಚಿತ್ರತಂಡದಿಂದ ಭರ್ಜರಿ ಆಫರ್, ಗೆದ್ದವರಿಗೆ ನಗದು ಬಹುಮಾನ
Vijay Priyanka
Image Credit source: Pan India Creations Instagram

Updated on: Sep 04, 2026 | 1:08 PM

ಮುಖ್ಯಾಂಶಗಳು

  • ರುದ್ರಾಭಿಷೇಕಂ ವಿಜಯ್ ರಾಘವೇಂದ್ರ ನಟಿಸಿರುವ ಸಿನಿಮಾ
  • ಸೆಪ್ಟೆಂಬರ್ 25ಕ್ಕೆ ರಿಲೀಸ್ ಆಗಲಿದೆ ‘ರುದ್ರಾಭಿಷೇಕಂ’
  • ರುದ್ರಾಭಿಷೇಕಂ ಸಿನಿಮಾ ಆಫರ್ ಒಂದನ್ನು ಯುವಕರಿಗೆ ನೀಡಿದೆ

ವಿಜಯ್ ರಾಘವೇಂದ್ರ, ಪ್ರಿಯಾಂಕಾ ತಿಮ್ಮೇಶ್ ಒಟ್ಟಿಗೆ ನಟಿಸಿರುವ ‘ರುದ್ರಾಭಿಷೇಕಂ’ ಸಿನಿಮಾ ಬಿಡುಗಡೆಗೆ ರೆಡಿಯಾಗಿದೆ. ಇದೇ ತಿಂಗಳು 25ಕ್ಕೆ ಸಿನಿಮಾ ರಾಜ್ಯದಾದ್ಯಂತ ರಿಲೀಸ್ ಆಗಲಿದೆ. ಸಿನಿಮಾನಲ್ಲಿ ವಿಜಯ್ ರಾಘವೇಂದ್ರ ದ್ವಿಪಾತ್ರದಲ್ಲಿ ನಟಿಸಿರುವ ಜೊತೆಗೆ ಹಲವು ಭಿನ್ನ ಲುಕ್​​ಗಳಲ್ಲಿ ಸಹ ಕಾಣಿಸಿಕೊಂಡಿದ್ದಾರೆ. ವೀರಗಾಸೆ ಕಲಾವಿದ, ರುದ್ರನ ಅವತಾರ, ಹಳ್ಳಿಯ ಅಮಾಯಕ ಯುವಕ, ಗಿರಿಜಾ ಮೀಸೆಯುಳ್ಳ ಖಡಕ್ ವ್ಯಕ್ತಿ ಹೀಗೆ ಹಲವು ರೀತಿಗಳಲ್ಲಿ ವಿಜಯ್ ರಾಘವೇಂದ್ರ ಅವರು ‘ರುದ್ರಾಭಿಷೇಕಂ’ ಸಿನಿಮಾನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಒಂದು ಗ್ರಾಮೀಣ ಕತೆಯುಳ್ಳ ಆಕ್ಷನ್, ಥ್ರಿಲ್ಲರ್ ಸಿನಿಮಾ ಆಗಿದೆ. ಇದೀಗ ಸಿನಿಮಾ ತಂಡವು, ಸೋಷಿಯಲ್ ಮೀಡಿಯಾ ಇನ್​​ಫ್ಲ್ಯುಯೆನ್ಸರ್​​ಗಳಿಗೆ ಆಫರ್ ಒಂದನ್ನು ನೀಡಿದೆ.

‘ರುದ್ರಾಭಿಷೇಕಂ’ ಚಿತ್ರತಂಡವು ಹೊಸ ಘೋಷಣೆಯೊಂದನ್ನು ಮಾಡಿದ್ದು, ರೀಲ್ಸ್ ಮಾಡುವ ಯುವಕ-ಯುವತಿಯರಿಗೆ ಆಫರ್ ಒಂದನ್ನು ನೀಡಿದೆ. ‘ರುದ್ರಾಭಿಷೇಕಂ’ ಸಿನಿಮಾದ ಹಾಡುಗಳಿಗೆ ರೀಲ್ಸ್ ಮಾಡಿ ಹಂಚಿಕೊಂಡವರಿಗೆ ಬಹುಮಾನಗಳನ್ನು ಘೋಷಣೆ ಮಾಡಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಣೆ ಹೊರಡಿಸಿರುವ ಸಿನಿಮಾದ ನಿರ್ಮಾಣ ಸಂಸ್ಥೆಯಾದ ಪ್ಯಾನ್ ಇಂಡಿಯಾ ಕ್ರಿಯೇಷನ್ಸ್, ‘ರುದ್ರಾಭಿಷೇಕಂ’ ಸಿನಿಮಾದ ಹಾಡುಗಳಿಗೆ ರೀಲ್ಸ್ ಮಾಡಿ ಹಂಚಿಕೊಂಡು, ಯಾರಿಗೆ ಹೆಚ್ಚು ವೀವ್ಸ್ ಬರುತ್ತದೆಯೋ ಅವರಿಗೆ ನಗದು ಬಹುಮಾನ ನೀಡಲಾಗುವುದು ಎಂದು ಘೋಷಿಸಿದೆ.

ಸಿನಿಮಾದ ಹಾಡುಗಳಿಗೆ ರೀಲ್ಸ್ ಮಾಡಿ ಇನ್​​ಸ್ಟಾಗ್ರಾಂ ಮತ್ತು ಫೇಸ್​​ಬುಕ್​​ನಲ್ಲಿ ಹಂಚಿಕೊಳ್ಳಬೇಕು. ‘ರುದ್ರಾಭಿಷೇಕಂ’ ಸಿನಿಮಾ ಸೆಪ್ಟೆಂಬರ್ 25ಕ್ಕೆ ರಿಲೀಸ್ ಆಗಲಿದ್ದು, ಸಿನಿಮಾ ರಿಲೀಸ್ ಆಗಿ ಮೂರು ದಿನಗಳ ಬಳಿಕ ಯಾರ ರೀಲ್ಸ್​​ಗೆ ಹೆಚ್ಚು ವೀವ್ಸ್ ಬಂದಿರುವುದೋ ಆ ಸಾಮಾಜಿಕ ಜಾಲತಾಣ ಖಾತೆಯವರಿಗೆ ಬಹುಮಾನ ನೀಡಲಾಗುವುದು. ಮೊದಲ ಬಹುಮಾನ 10 ಸಾವಿರ, ಎರಡನೇ ಬಹುಮಾನ 7500 ರೂಪಾಯಿ, ಮೂರನೇ ಬಹುಮಾನ 5000 ರೂಪಾಯಿ, ಸಮಾಧಾನಕರ ಬಹುಮಾನ 1000 ರೂಪಾಯಿಗಳು. ಸಿನಿಮಾ ಬಿಡುಗಡೆ ಆದ ಬಳಿಕ ರೀಲ್ಸ್ ಜೊತೆಗೆ ವೀವ್ಸ್ ಮಾಹಿತಿಯನ್ನು 8553674555, 9845642338 ಸಂಖ್ಯೆಗಳಿಗೆ ಕಳಿಸಬೇಕಿರುತ್ತದೆ. ಹೆಚ್ಚು ವೀವ್ಸ್ ಪಡೆದವರಿಗೆ ಬಹುಮಾನ ನೀಡುವ ಜೊತೆಗೆ ಅವರಿಗೆ ಪ್ಯಾನ್ ಇಂಡಿಯಾ ಕ್ರಿಯೇಷನ್ಸ್ ನಿರ್ಮಾಣದ ಮುಂದಿನ ಸಿನಿಮಾನಲ್ಲಿ ನಟಿಸುವ ಅವಕಾಶವೂ ನೀಡಲಾಗುತ್ತದೆಯಂತೆ.

ಇದನ್ನೂ ಓದಿ:‘ರುದ್ರಾಭಿಷೇಕಂ’ ಸಿನಿಮಾ ಬಗ್ಗೆ ವಿಜಯ್ ರಾಘವೇಂದ್ರ ಭಾವುಕ ಮಾತು

‘ರುದ್ರಾಭಿಷೇಕಂ’ ಸಿನಿಮಾನಲ್ಲಿ ವಿಜಯ್ ರಾಘವೇಂದ್ರ ಜೊತೆಗೆ ಪ್ರಿಯಾಂಕಾ ತಿಮ್ಮೇಶ್ ನಾಯಕಿಯಾಗಿ ನಟಿಸಿದ್ದಾರೆ. ಬಾಲ ರಾಜವಾಡಿ, ಮನು, ಸನತ್, ಬುಲೆಟ್ ವಿನು, ಮಮತಾ ತುರುವೇಕೆರೆ, ನವನಿತಾ ಶೆಟ್ಟಿ, ಮಂಜುಳಾ ಇನ್ನಿತರರು ನಟಿಸಿದ್ದಾರೆ.
ಸಿನಿಮಾ ಅನ್ನು ವಸಂತ್​ ಕುಮಾರ್ ನಿರ್ದೇಶನ ಮಾಡಿದ್ದು, ಪ್ಯಾನ್ ಇಂಡಿಯಾ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಲಾಯರ್ ಜಯರಾಂ, ಮಂಜುನಾಥ ಕೆ.ಎನ್, ಕೆ ವೆಂಕಟೇಶ್, ಚಿದಾನಂದ ಮೂರ್ತಿ, ಸುರೇಶ್ ಬಾಬು, ಅಶ್ವಥ್ ನಾರಾಯಣ, ಶಿವಕುಮಾರ್, ರವಿಕುಮಾರ್‌, ಚಂದ್ರಶೇಖರ ಹಡಪದ ಅವರುಗಳು ಒಟ್ಟಿಗೆ ಈ ಸಿನಿಮಾಕ್ಕೆ ಬಂಡವಾಳ ಹೂಡಿದ್ದಾರೆ. ಬಿಜೆ ಕಿಶೋರ್ ಗೌಡ ಕಾರ್ಯಕಾರಿ ನಿರ್ಮಾಪಕರಾಗಿ ಜವಾಬ್ದಾರಿ ನಿರ್ವಹಿಸಿದ್ದಾರೆ. ಸಿನಿಮಾ ಸೆಪ್ಟೆಂಬರ್ 25ಕ್ಕೆ ರಾಜ್ಯದಾದ್ಯಂತ ರಿಲೀಸ್ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us