ರುಕ್ಮಿಣಿ ವಸಂತ್​ ಹೆಸರಲ್ಲಿ ಮೋಸ; ಎಚ್ಚರಿಸಿದ ‘ಕಾಂತಾರ’ದ ಕನಕವತಿ

'ಕಾಂತಾರ' ಖ್ಯಾತಿಯ ರುಕ್ಮಿಣಿ ವಸಂತ್ ಹೆಸರಲ್ಲಿ ಸೈಬರ್ ವಂಚನೆ ನಡೆಯುತ್ತಿದೆ. ಅಪರಿಚಿತ ವ್ಯಕ್ತಿಯೊಬ್ಬರು ಅವರ ಹೆಸರಿನಲ್ಲಿ ಜನರಿಗೆ ಕರೆ ಮಾಡಿ ಮೋಸ ಮಾಡುತ್ತಿದ್ದು, ರುಕ್ಮಿಣಿ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ. ಆ ನಂಬರ್ ತನಗೆ ಸೇರಿದ್ದಲ್ಲ, ಯಾವುದೇ ಕರೆ ಅಥವಾ ಮೆಸೇಜ್‌ಗಳಿಗೆ ಸ್ಪಂದಿಸಬೇಡಿ, ಆನ್‌ಲೈನ್‌ನಲ್ಲಿ ಜಾಗರೂಕರಾಗಿರಿ ಎಂದು ಅವರು ಮನವಿ ಮಾಡಿದ್ದಾರೆ.

ರುಕ್ಮಿಣಿ ವಸಂತ್​ ಹೆಸರಲ್ಲಿ ಮೋಸ; ಎಚ್ಚರಿಸಿದ ‘ಕಾಂತಾರ’ದ ಕನಕವತಿ
ರುಕ್ಮಿಣಿ

Updated on: Nov 08, 2025 | 10:11 AM

ಸೆಲೆಬ್ರಿಟಿಗಳ ಹೆಸರಲ್ಲಿ ಸಾಕಷ್ಟು ವಂಚನೆ ನಡೆಯುತ್ತಿದೆ. ಈಗ ರುಕ್ಮಿಣಿ ವಸಂತ್​ಗೂ ಇದೇ ತೊಂದರೆ ಎದುರಾಗಿದೆ. ‘ಕಾಂತಾರ: ಚಾಪ್ಟರ್ 1’ ಸಿನಿಮಾದಲ್ಲಿ (Kantara: Chapter 1) ಕನಕವತಿ ಹೆಸರಿನ ಪಾತ್ರ ಮಾಡಿ ರುಕ್ಮಿಣಿ ವಸಂತ್ ಗಮನ ಸೆಳೆದರು. ಅವರಿಗೆ ಈಗ ಕಳ್ಳರ ಕಾಟ ಶುರುವಾಗಿದೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಅವರು ಪೋಸ್ಟ್ ಮಾಡಿ ಮಾಹಿತಿ ನೀಡಿದ್ದಾರೆ. ತಮ್ಮ ಹೆಸರಲ್ಲಿ ಯಾರು ಮೋಸ ಮಾಡುತ್ತಿದ್ದಾರೆ ಎಂಬುದರ ಬಗ್ಗೆ ಅವರು ಮಾಹಿತಿ ನೀಡಿದ್ದಾರೆ.

9445893273 ಸಂಖ್ಯೆಯ ನಂಬರ್ ಇಂದ ವ್ಯಕ್ತಿಯೋರ್ವ ವಿವಿಧ ಜನರಿಗೆ ಕರೆ ಮಾಡುತ್ತಿದ್ದಾನೆ. ಕರೆ ಮಾಡಿ ಮೋಸ ಮಾಡುತ್ತಿರುವುದು ಅವರ ಗಮನಕ್ಕೆ ಬಂದಿದೆ. ಹೀಗಾಗಿ, ಎಚ್ಚರಿಕೆ ನೀಡಿದ್ದಾರೆ. ‘ಈ ಮೊಬೈಲ್ ಸಂಖ್ಯೆ ನನಗೆ ಸೇರಿದ್ದಲ್ಲ. ಇದರಿಂದ ಬರುವ ಯಾವುದೇ ಮೆಸೇಜ್ ಅಥವಾ ಕರೆ ಬಂದರೆ ಅದು ಫೇಕ್. ಅದು ನಾನಲ್ಲ ಎಂದು ಸ್ಪಷ್ಟಪಡಿಸುತ್ತೇನೆ. ದಯವಿಟ್ಟು ಅಂತಹ ಸಂದೇಶಗಳಿಗೆ ಪ್ರತಿಕ್ರಿಯಿಸಬೇಡಿ ಅಥವಾ ಅವರೊಂದಿಗೆ ತೊಡಗಿಸಿಕೊಳ್ಳಬೇಡಿ’ ಎಂದು ರುಕ್ಮಿಣಿ ವಸಂತ್ ಬರೆದುಕೊಂಡಿದ್ದಾರೆ.


‘ಈ ರೀತಿ ಮೋಸ ಮಾಡುವುದು ಸೈಬರ್ ಅಪರಾಧದ ವ್ಯಾಪ್ತಿಗೆ ಬರುತ್ತದೆ. ವಂಚನೆ ಮತ್ತು ದಾರಿತಪ್ಪಿಸುವ ಚಟುವಟಿಕೆಗಳಲ್ಲಿ ಭಾಗಿಯಾಗಿರುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ. ಈ ಬಗ್ಗೆ ಏನಾದರೂ ಸ್ಪಷ್ಟನೆ ಬೇಕಿದ್ದರೆ ನನ್ನ ಅಥವಾ ನನ್ನ ತಂಡವನ್ನು ಸಂಪರ್ಕಿಸಿ. ನಿಮ್ಮ ತಿಳುವಳಿಕೆ ಮತ್ತು ಸಹಕಾರಕ್ಕಾಗಿ ಎಲ್ಲರಿಗೂ ಧನ್ಯವಾದಗಳು. ಆನ್‌ಲೈನ್‌ನಲ್ಲಿ ಜಾಗರೂಕರಾಗಿರಿ ಮತ್ತು ಸುರಕ್ಷಿತವಾಗಿರಿ’ ಎಂದು ರುಕ್ಮಿಣಿ ವಸಂತ್ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ರುಕ್ಮಿಣಿ ವಸಂತ್​​ಗೆ ಖುಲಾಯಿಸಿತು ಅದೃಷ್ಟ, ಲೆಜೆಂಡರಿ ನಿರ್ದೇಶಕನ ಸಿನಿಮಾನಲ್ಲಿ ಅವಕಾಶ

ಸೆಲೆಬ್ರಿಟಿಗಳ ಹೆಸರಲ್ಲಿ ಅನೇಕ ವಂಚನೆಗಳು ನಡೆಯುತ್ತಿರುವುದು ಬೆಳಕಿಗೆ ಬರುತ್ತಿದೆ. ಫೇಕ್ ಸೋಶಿಯಲ್ ಮೀಡಿಯಾ ಖಾತೆಗಳನ್ನು ಸೃಷ್ಟಿಸಿ ಮೋಸ ಮಾಡಲಾಗುತ್ತಿದೆ. ಇದು ಗಮನಕ್ಕೆ ಬಂದ ತಕ್ಷಣ ಸೋಶಿಯಲ್ ಮೀಡಿಯಾ ಮೂಲಕ ಮಾಹಿತಿ ನೀಡಿ ಎಚ್ಚರಿಕೆ ನೀಡುವ ಕೆಲಸ ಮಾಡಲಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 10:10 am, Sat, 8 November 25