
ಯಶ್ (Yash) ನಟಿಸಿ ಸಹ ನಿರ್ಮಾಣ ಮಾಡುತ್ತಿರುವ ‘ಟಾಕ್ಸಿಕ್’ ಪ್ರಸ್ತುತ ಭಾರತ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ಒಂದೆನಿಸಿಕೊಂಡಿದೆ. ‘ಟಾಕ್ಸಿಕ್’ ಸಿನಿಮಾ ಕೇವಲ ಪ್ಯಾನ್ ಇಂಡಿಯಾ ಸಿನಿಮಾ ಅಲ್ಲ ಬದಲಿಗೆ ಪ್ಯಾನ್ ವರ್ಲ್ಡ್ ಸಿನಿಮಾ ಆಗಿದೆ. ಭಾರಿ ದೊಡ್ಡ ಮಟ್ಟದಲ್ಲಿ ಸಿನಿಮಾ ನಿರ್ಮಾಣವಾಗುತ್ತಿದೆ. ಭಾರತದ ಕೆಲ ಸ್ಟಾರ್ ನಟ-ನಟಿಯರ ಜೊತೆಗೆ ಹಾಲಿವುಡ್ನ ಕೆಲವು ನುರಿತ ತಂತ್ರಜ್ಞರು ಸಹ ಸಿನಿಮಾಕ್ಕೆ ಕೆಲಸ ಮಾಡುತ್ತಿದ್ದಾರೆ. ಸಿನಿಮಾದಲ್ಲಿ ಯಶ್ ಹೊರತುಪಡಿಸಿ ಕನ್ನಡ ಪ್ರಮುಖ ನಟ-ನಟಿಯರು ಯಾರೂ ಇಲ್ಲ ಎನ್ನಲಾಗುತ್ತಿತ್ತು, ಆದರೆ ಇದೀಗ ಕನ್ನಡದ ನಾಯಕಿಯೊಬ್ಬರು ‘ಟಾಕ್ಸಿಕ್’ ತಂಡ ಸೇರಿಕೊಂಡಿದ್ದಾರೆ.
‘ಟಾಕ್ಸಿಕ್’ ಸಿನಿಮಾನಲ್ಲಿ ಬಾಲಿವುಡ್ ಸ್ಟಾರ್ ನಟಿ ಕಿಯಾರಾ ಅಡ್ವಾಣಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಅವರ ಜೊತೆಗೆ ನಯನತಾರಾ ಸಹ ಪ್ರಮುಖವಾದ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದೀಗ ಸಿನಿಮಾಕ್ಕೆ ಮತ್ತೊಬ್ಬ ನಾಯಕಿಯ ಎಂಟ್ರಿ ಆಗಿದೆ. ಅದುವೇ ರುಕ್ಮಿಣಿ ವಸಂತ್. ‘ಸಪ್ತ ಸಾಗರದಾಚೆ ಎಲ್ಲೋ’ ಮೂಲಕ ತಮ್ಮ ಪ್ರತಿಭೆ ಸಾಬೀತುಪಡಿಸಿರುವ ರುಕ್ಮಿಣಿ ವಸಂತ್ ಅವರು ಇದೀಗ ‘ಟಾಕ್ಸಿಕ್’ ತಂಡ ಸೇರಿಕೊಂಡಿದ್ದಾರೆ.
ಅಸಲಿಗೆ ರುಕ್ಮಿಣಿ ವಸಂತ್ ‘ಟಾಕ್ಸಿಕ್’ ಸಿನಿಮಾಕ್ಕಾಗಿ ಕೆಲ ದಿನಗಳ ಚಿತ್ರೀಕರಣವನ್ನೂ ಮುಗಿಸಿದ್ದಾರೆ ಎನ್ನಲಾಗುತ್ತಿದೆ. ‘ಟಾಕ್ಸಿಕ್’ ಸಿನಿಮಾದ ಒಂದು ಪ್ರಮುಖ ಪಾತ್ರಕ್ಕಾಗಿ ರುಕ್ಮಿಣಿ ವಸಂತ್ ಅವರನ್ನು ಕಾಸ್ಟ್ ಮಾಡಲಾಗಿದೆ. ರುಕ್ಮಿಣಿ ಅವರಿಗೆ ಹೆಚ್ಚು ಸ್ಕ್ರೀನ್ ಟೈಮ್ ಇರದೇ ಇದ್ದರು ಅವರ ಪಾತ್ರ ಕತೆಗೆ ಬಹಳ ಮಹತ್ವದ್ದಾಗಿರಲಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ರುಕ್ಮಿಣಿ ವಸಂತ್ ಅವರ ಪಾತ್ರದ ಬಗ್ಗೆ ‘ಟಾಕ್ಸಿಕ್’ ಚಿತ್ರತಂಡ ಇನ್ನಷ್ಟೆ ಅಧಿಕೃತ ಹೇಳಿಕೆ ನೀಡಬೇಕಿದೆ.
ಇದನ್ನೂ ಓದಿ:ಯಶ್ ಬಗ್ಗೆ ಬಾಲಿವುಡ್ ನಿರ್ಮಾಪಕ ಹೇಳಿದ್ದೇನು: ಕೆ ಮಂಜು ಹೇಳಿದ್ದಾರೆ ನೋಡಿ
‘ಟಾಕ್ಸಿಕ್’ ಸಿನಿಮಾ ಅನ್ನು ಮಲಯಾಳಂ ನಟಿ, ನಿರ್ದೇಶಕ ಗೀತು ಮೋಹನ್ದಾಸ್ ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾನಲ್ಲಿ ನಯನತಾರಾ, ಕಿಯಾರಾ ಅಡ್ವಾಣಿ ನಟಿಸುತ್ತಿದ್ದಾರೆ. ಸಿನಿಮಾನಲ್ಲಿ ಹಾಲಿವುಡ್ ನಟರಾದ ಕಿಲಿ ಪೌಲ್, ಡಾರೆಲ್ ಡಿಸಿಲ್ವಾ, ಭಾರತದ ನಟರುಗಳಾದ ತಾರಾ ಸತಾರಿಯಾ, ಹುಮಾ ಖುರೇಷಿ, ಅಮಿತ್ ತಿವಾರಿ ಇನ್ನೂ ಕೆಲವರು ನಟಿಸುತ್ತಿದ್ದಾರೆ. ಸಿನಿಮಾನಲ್ಲಿ ಹಾಲಿವುಡ್ ಸ್ಟಂಟ್ ಮ್ಯಾನ್ ಜೆಜೆ ಪೆರ್ರಿ ಕೆಲಸ ಮಾಡುತ್ತಿದ್ದಾರೆ. ಸಂಗೀತ ನೀಡುತ್ತಿರುವುದು ಜೆರ್ಮಿ ಸ್ಟ್ಯಾಕ್ ಹಾಗೂ ಅನಿರುದ್ಧ್ ರವಿಚಂದ್ರನ್.
ಸಿನಿಮಾದ ಚಿತ್ರೀಕರಣ ಬೆಂಗಳೂರು, ಮುಂಬೈಗಳಲ್ಲಿ ಸಿನಿಮಾದ ಚಿತ್ರೀಕರಣ ನಡೆದಿದೆ. ಅದಾದ ಬಳಿಕ ತೂತುಕುಡಿ, ರಾಜಸ್ಥಾನದ ಜೈಪುರಗಳಲ್ಲಿಯೂ ಸಿನಿಮಾದ ಚಿತ್ರೀಕರಣ ನಡೆದಿದೆ. ಸಿನಿಮಾ 2026, ಮಾರ್ಚ್ ತಿಂಗಳಲ್ಲಿ ಬಿಡುಗಡೆ ಆಗಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:37 am, Tue, 19 August 25