ರಾಜ್ಕುಮಾರ್ ನಟಿಸಿದ ಬಹುತೇಕ ಸಿನಿಮಾಗಳು ಯಶಸ್ಸು ಕಂಡಿವೆ. ಅದಕ್ಕೆ ಕಾರಣ ಆಗಿದ್ದು ಅವರು ಆಯ್ಕೆ ಮಾಡುತ್ತಿದ್ದ ಕಥೆಗಳು. ಹಲವು ವರ್ಷಗಳ ಕಾಲ ಚಿತ್ರರಂಗವನ್ನು ಆಳಿದ್ದ ಅವರು ಸಿನಿಮಾ ಆಯ್ಕೆಯಲ್ಲಿ ಎಂದಿಗೂ ಎಡವಿಲ್ಲ. ಚಿತ್ರಗಳಲ್ಲಿ ಅವರು ಅದ್ಭುತವಾಗಿ ನಟಿಸುತ್ತಿದ್ದರು. ರಾಜ್ಕುಮಾರ್ ಅವರು ಆಯ್ಕೆ ಮಾಡಿಕೊಳ್ಳುತ್ತಿದ್ದ ಕಥೆಗಳು ಆ ರೀತಿಯಲ್ಲಿ ಇರುತ್ತಿದ್ದವು. ಇವರ ಸಿನಿಮಾಗೆ ಸಲ್ಮಾನ್ ಖಾನ್ ತಂದೆ ಕೂಡ ಕಥೆ ಬರೆದಿದ್ದರು ಎಂಬ ವಿಚಾರ ಗೊತ್ತೇ?
ಸಲ್ಮಾನ್ ಖಾನ್ ತಂದೆ ಸಲೀಮ್ ಖಾನ್ ಅವರಿಗೆ ಇಂದು (ನವೆಂಬರ್ 24) ಜನ್ಮದಿನ. ತಂದೆ ಜನ್ಮದಿನಕ್ಕೆ ಸಲ್ಲು ವಿಶ್ ಮಾಡಿದ್ದಾರೆ. ಸಲೀಮ್ ಖಾನ್ ಅವರು ಖ್ಯಾತ ಕಥೆಗಾರರು ಹಾಗೂ ಚಿತ್ರಕಥೆ ಬರಹಗಾರರು. ಅವರು ಹಾಗೂ ಜಾವೇದ್ ಅಖ್ತರ್ ಅವರದ್ದು ಹಿಟ್ ಕಾಂಬಿನೇಷನ್. ಇಬ್ಬರೂ ಸೇರಿ ಅನೇಕ ಸೂಪರ್ ಹಿಟ್ ಕಥೆಗಳನ್ನು ನೀಡಿದ್ದರು. ಅದೇ ರೀತಿ ಕನ್ನಡದಲ್ಲೂ ಅವರು ಕಥೆ ಬರೆದಿದ್ದರು. ಅವರು ಕನ್ನಡದಲ್ಲಿ ಕೆಲಸ ಮಾಡಿದ ಎರಡು ಸಿನಿಮಾಗಳು ಇವು.
1975ರಲ್ಲಿ ಅಮಿತಾಭ್ ಬಚ್ಚನ್ ನಟನೆಯ ‘ಶೋಲೆ’ ಸಿನಿಮಾ ರಿಲೀಸ್ ಆಯಿತು. ಈ ಚಿತ್ರಕ್ಕೆ ಸಲೀಮ್ ಹಾಗೂ ಜಾವೇದ್ ಕಥೆ ಬರೆದಿದ್ದರು. ಆ ಬಳಿಕ ಅವರಿಗೆ ಪರಭಾಷೆಗಳಿಂದಲೂ ಬೇಡಿಕೆ ಸೃಷ್ಟಿ ಆಯಿತು. ‘ಶೋಲೆ’ ಯಶಸ್ಸಿನ ಬಳಿಕ ಅವರು ನೇರವಾಗಿ ಕನ್ನಡಕ್ಕೆ ಕಾಲಿಟ್ಟಿದ್ದರು. ಅವರು ಕನ್ನಡದಲ್ಲಿ ಸಿನಿಮಾ ಮಾಡಿದ್ದರು. 1976ರಲ್ಲಿ ‘ಪ್ರೇಮದ ಕಾಣಿಕೆ’ ಸಿನಿಮಾ ರಿಲೀಸ್ ಆಯಿತು. ಇದು ಸೂಪರ್ ಹಿಟ್ ಆಯಿತು. ಈ ಚಿತ್ರವನ್ನು ವಿ. ಸೋಮಶೇಖರ್ ನಿರ್ದೇಶನ ಮಾಡಿದರೆ ರಾಜ್ಕುಮಾರ್ಗ ಆರತಿ ಜೊತೆಯಾಗಿದ್ದರು.
ಇದನ್ನೂ ಓದಿ: ಜೂಹಿ ಮನೆಗೆ ಹೋಗಿ ಹೆಣ್ಣು ಕೇಳಿದ್ದ ಸಲ್ಮಾನ್ ಖಾನ್; ವಿರೋಧಿಸಿದ್ದು ಯಾರು?
ಆ ಬಳಿಕ ‘ರಾಜ ನನ್ನ ರಾಜ’ ಸಿನಿಮಾ ರಿಲೀಸ್ ಆಯಿತು. ಈ ಚಿತ್ರವೂ ಸೂಪರ್ ಹಿಟ್ ಆಯಿತು. ಈ ಚಿತ್ರಕ್ಕೂ ರಾಜ್ಕುಮಾರ್ ಹೀರೋ. ಈ ಸಿನಿಮಾಗೆ ಸಲೀಮ್ ಹಾಗೂ ಜಾವೇದ್ ಕಥೆ ಬರೆದಿದ್ದರು. ಆ ಬಳಿಕ ಜಾವೇದ್ ಹಾಗೂ ಸಲೀಮ್ ಕನ್ನಡದತ್ತ ಮುಖ ಮಾಡಲಿಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.