Sanchari Vijay: ಸಂಚಾರಿ ವಿಜಯ್ ಸಮಾಧಿಗೆ ಹಾಲು, ತುಪ್ಪ ಬಿಟ್ಟ ಕುಟುಂಬಸ್ಥರು

| Updated By: ಮದನ್​ ಕುಮಾರ್​

Updated on: Jun 17, 2021 | 5:09 PM

ಸಂಚಾರಿ ವಿಜಯ್​ ಅವರ ಅಂತ್ಯಸಂಸ್ಕಾರ ಮಾಡಿ ಇಂದಿಗೆ (ಜೂ.17) ಮೂರನೇ ದಿನ. ಹೀಗಾಗಿ, ಪಂಚನಹಳ್ಳಿ ಬಳಿಯ ತೋಟದಲ್ಲಿರುವ ಸಮಾಧಿಗೆ ತೆರಳಿದ ವಿಜಯ್ ಸಹೋದರರು, ಕುಟುಂಬಸ್ಥರು, ಸ್ನೇಹಿತ ರಘು ಭಾಗಿಯಾಗಿ ಹಾಲು-ತುಪ್ಪ ಬಿಟ್ಟಿದ್ದಾರೆ.

Sanchari Vijay: ಸಂಚಾರಿ ವಿಜಯ್ ಸಮಾಧಿಗೆ ಹಾಲು, ತುಪ್ಪ ಬಿಟ್ಟ ಕುಟುಂಬಸ್ಥರು
ಸಂಚಾರಿ ವಿಜಯ್ ಸಮಾಧಿಗೆ ಹಾಲು, ತುಪ್ಪ ಬಿಟ್ಟ ಕುಟುಂಬಸ್ಥರು
Follow us on

ಪ್ರತಿಭಾನ್ವಿತ ನಟ ಸಂಚಾರಿ ವಿಜಯ್ ಅವರ ಅಂತ್ಯಸಂಸ್ಕಾರವನ್ನು ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಪಂಚನಹಳ್ಳಿಯಲ್ಲಿ ಜೂನ್​ 15ರಂದು ನೆರವೇರಿಸಲಾಗಿದೆ. ಇಂದಿಗೆ (ಜೂನ್​ 17) ಅವರನ್ನು ಮಣ್ಣು ಮಾಡಿ ಮೂರನೇ ದಿನ. ಹೀಗಾಗಿ, ಸಂಪ್ರದಾಯದಂತೆ ಕುಟುಂಬಸ್ಥರು ಸಂಚಾರಿ ವಿಜಯ್ ಸಮಾಧಿಗೆ ಹಾಲು, ತುಪ್ಪ ಬಿಟ್ಟಿದ್ದಾರೆ.

ಇತ್ತೀಚೆಗೆ ಸಂಚಾರಿ ವಿಜಯ್​ ರಸ್ತೆ ಅಪಘಾತಕ್ಕೆ ಒಳಗಾಗಿದ್ದರು. ನಂತರ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ವೈದ್ಯರ ಸತತ ಪ್ರಯತ್ನಗಳ ನಡುವೆಯೂ ವಿಧಿಯಾಟವೇ ಮೇಲುಗೈ ಸಾಧಿಸಿತು. ಸಂಚಾರಿ ವಿಜಯ್​ ಮೃತಪಟ್ಟ ಬಗ್ಗೆ ಜೂನ್​ 15ರಂದು ವೈದ್ಯರು ಘೋಷಣೆ ಮಾಡಿದರು. ನಂತರ ಅವರ ಕಳೇಬರವನ್ನು ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಪಂಚನಹಳ್ಳಿಗೆ ಕೊಂಡೊಯ್ಯಲಾಯಿತು. ಮೂರು ಸುತ್ತು ಗುಂಡು ಹಾರಿಸಿ ಸಕಲ ಸರ್ಕಾರಿ ಗೌರವಗಳೊಂದಿಗೆ ವೀರಶೈವ ಲಿಂಗಾಯತ ವಿಧಿವಿಧಾನಗಳೊಂದಿಗೆ ಗೆಳೆಯನ ತೋಟದಲ್ಲಿ ವಿಜಯ್​ ಅಂತ್ಯಸಂಸ್ಕಾರ ನೆರವೇರಿತು. ಸಚಿವ ಮಾಧುಸ್ವಾಮಿ, ಮಾಜಿ ಶಾಸಕ ವೈಎಸ್​ವಿ ದತ್ತ ಸರ್ಕಾರದ ಪರವಾಗಿ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಂಡಿದ್ದರು.

ವಿಜಯ್​ ಅಂತ್ಯಸಂಸ್ಕಾರ ಮಾಡಿ ಮೂರು ದಿನ ಕಳೆದಿದೆ. ಹೀಗಾಗಿ, ಪಂಚನಹಳ್ಳಿ ಬಳಿಯ ತೋಟದಲ್ಲಿರುವ ಸಮಾಧಿಗೆ ತೆರಳಿದ ವಿಜಯ್ ಸಹೋದರರು, ಕುಟುಂಬಸ್ಥರು, ಸ್ನೇಹಿತ ರಘು ಭಾಗಿಯಾಗಿ ಹಾಲು-ತುಪ್ಪ ಬಿಟ್ಟಿದ್ದಾರೆ. ಅವರನ್ನು ಕಳೆದುಕೊಂಡ ಇಡೀ ಕುಟುಂಬ ಹಾಗೂ ಊರಿನವರಲ್ಲಿ ದುಃಖ ಮಡುಗಟ್ಟಿದೆ.

1983ರ ಜುಲೈ 18ರಂದು ಚಿಕ್ಕಮಗಳೂರಿನ ಕಡೂರಿನ ಪಂಚನಹಳ್ಳಿಯಲ್ಲಿ ವಿಜಯ್​ ಜನಿಸಿದರು. ವಿಜಯ್​ ಕುಮಾರ್​ ಬಿ. ಎಂಬುದು ಅವರಿಗೆ ಇಟ್ಟ ಹೆಸರು. ಸಣ್ಣ ವಯಸ್ಸಿನಿಂದಲೇ ನಟನೆ ಬಗ್ಗೆ ಆಸಕ್ತಿ ಹೊಂದಿದ್ದ ಅವರು, ರಂಗಭೂಮಿಯಲ್ಲಿ ಪಳಗಿದವರು. ‘ಸಂಚಾರಿ’ ಥಿಯೇಟರ್​ ಗ್ರೂಪ್​ನಿಂದ ಬಂದ ಕಾರಣ ಸ್ಯಾಂಡಲ್​ವುಡ್​ನಲ್ಲಿ ಸಂಚಾರಿ ವಿಜಯ್​ ಎಂದೇ ಅವರು ಖ್ಯಾತಿ ಪಡೆದುಕೊಂಡಿದ್ದರು.

ಇದನ್ನೂ ಓದಿ: ಸಂಚಾರಿ ವಿಜಯ್ ಹೆಸರಿನಲ್ಲಿ ದೇವರು ಮೆಚ್ಚುವ ಕೆಲಸ ಮಾಡಿದ ಬಿಗ್​ ಬಾಸ್​ ಸ್ಪರ್ಧಿ ಚಕ್ರವರ್ತಿ ಚಂದ್ರಚೂಡ್​