Puneeth Rajkumar Death: ರಾಘವೇಂದ್ರ ರಾಜ್​ಕುಮಾರ್ ಪುತ್ರ ವಿನಯ್​ರಿಂದ ಪುನೀತ್​ ಅಂತಿಮ ವಿಧಿವಿಧಾನ

| Updated By: preethi shettigar

Updated on: Oct 30, 2021 | 12:19 PM

ರಾಜ್ ಕುಮಾರ್ ಕುಟುಂಬ ಸದಸ್ಯರು ಈ ಬಗ್ಗೆ ತೀರ್ಮಾನ ತೆಗೆದುಕೊಂಡಿದ್ದು, ಸಕಲ ಸಿದ್ಧತೆ ನಡೆಸುತ್ತಿದ್ದಾರೆ. ಪುನೀತ್‌ ರಾಜ್ ಕುಮಾರ್‌ ಅವರಿಗೆ ಇಬ್ಬರೂ ಹೆಣ್ಣು ಮಕ್ಕಳಿರುವುದರಿಂದ ಪುನೀತ್‌ ಅಣ್ಣ ರಾಘವೇಂದ್ರ ಅವರ ಪುತ್ರನಿಂದ ಕಾರ್ಯ ನೆರವೇರಿಸಲು ನಿರ್ಧರಿಸಲಾಗಿದೆ.

Puneeth Rajkumar Death: ರಾಘವೇಂದ್ರ ರಾಜ್​ಕುಮಾರ್ ಪುತ್ರ ವಿನಯ್​ರಿಂದ ಪುನೀತ್​ ಅಂತಿಮ ವಿಧಿವಿಧಾನ
ವಿನಯ್​ ರಾಜ್​ ಕುಮಾರ್​ ಮತ್ತು ಪುನೀತ್​ ರಾಜ್​ ಕುಮಾರ್​
Follow us on

ಬೆಂಗಳೂರು: ನಟ ಪುನೀತ್ ರಾಜ್ ಕುಮಾರ್ ಅಂತಿಮ ವಿಧಿವಿಧಾನ ಕಾರ್ಯವನ್ನು ವಿನಯ್ ರಾಜ್ ಕುಮಾರ್ ನೆರವೇರಿಸಲಿದ್ದಾರೆ. ಪುನೀತ್‌ ಅಣ್ಣ ರಾಘವೇಂದ್ರ ರಾಜ್ ಕುಮಾರ್‌ ಪುತ್ರ ವಿನಯ್ ರಾಜ್ ಕುಮಾರ್ ಅಂತಿಮ ಕಾರ್ಯ ಮಾಡಲಿದ್ದಾರೆ. ರಾಜ್ ಕುಮಾರ್ ಕುಟುಂಬ ಸದಸ್ಯರು ಈ ಬಗ್ಗೆ ತೀರ್ಮಾನ ತೆಗೆದುಕೊಂಡಿದ್ದು, ಸಕಲ ಸಿದ್ಧತೆ ನಡೆಸುತ್ತಿದ್ದಾರೆ. ಪುನೀತ್‌ ರಾಜ್ ಕುಮಾರ್‌ ಅವರಿಗೆ ಇಬ್ಬರೂ ಹೆಣ್ಣು ಮಕ್ಕಳಿರುವುದರಿಂದ ಪುನೀತ್‌ ಅಣ್ಣ ರಾಘವೇಂದ್ರ ಅವರ ಪುತ್ರನಿಂದ ಕಾರ್ಯ ನೆರವೇರಿಸಲು ನಿರ್ಧರಿಸಲಾಗಿದೆ.

ಕಂಠೀರವ ಸ್ಟೂಡಿಯೋದಲ್ಲಿ ನಡೆಯಲಿರುವ ಅಪ್ಪು ಅಂತ್ಯಸಂಸ್ಕಾರಕ್ಕೆ ಸಕಲ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಡಾ. ರಾಜ್ ಕುಮಾರ್​ ಸಮಾಧಿಯಿಂದ 125 ಅಡಿ ಹಾಗೂ ಪಾರ್ವತಮ್ಮ ಸಮಾಧಿಯಿಂದ 45 ಅಡಿ ದೂರದಲ್ಲಿ ಅಪ್ಪು ಅಂತ್ಯಸಂಸ್ಕಾರಕ್ಕೆ ವ್ಯವಸ್ಥೆ ಮಾಡಲಾಗುದೆ.

ಅಭಿಮಾನಿಗಳು ಸಂಯಮದಿಂದ ವರ್ತಿಸಬೇಕು: ಸಿಎಂ ಬೊಮ್ಮಾಯಿ
ಪುನೀತ್ ಅಂತ್ಯಕ್ರಿಯೆಗೆ ಎಲ್ಲಾ ವ್ಯವಸ್ಥೆ ಮಾಡಲಾಗಿದೆ. ಅಂತ್ಯಕ್ರಿಯೆ ವೇಳೆ ಕುಟುಂಬಸ್ಥರು, ಗಣ್ಯರಿಗೆ ಅವಕಾಶ ನೀಡಲಾಗುವುದು. ಸಾರ್ವಜನಿಕರಿಗೆ ಅವಕಾಶ ಇಲ್ಲ. ಹೀಗಾಗಿ ಅಭಿಮಾನಿಗಳು ಸಂಯಮದಿಂದ ವರ್ತಿಸಬೇಕು. ಪುನೀತ್ ಪುತ್ರಿ ದೆಹಲಿ ತಲುಪಿದ ಬಳಿಕ ಉಳಿದ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ಮೆರವಣಿಗೆಯ ಬಗ್ಗೆ ಸಮಯ ನಿಗದಿಯಿಂದ ಹಿಡಿದು ಅಂತ್ಯಕ್ರಿಯೆಗೆ ಎಲ್ಲ ವ್ಯವಸ್ಥೆ ಮಾಡಿದ್ದೇವೆ ಎಂದು ಬೆಂಗಳೂರಿನಲ್ಲಿ ಸಿಎಂ ಬೊಮ್ಮಾಯಿ ತಿಳಿಸಿದ್ದಾರೆ.

ನಿನ್ನೆ ಪುನೀತ್ ರಾಜಕುಮಾರ್ ಅವರು ನಮ್ಮನ್ನು ಬಿಟ್ಟು ಅಗಲಿದರು. ಜನಸಾಗರವೇ ಹರಿದು ಬರುತ್ತಿದೆ. ಮುಂದಿನ ಕಾರ್ಯವೂ ಕೂಡಾ ಸುಗಮವಾಗಿ ಆಗಬೇಕು. ಪೊಲೀಸ್ ಇಲಾಖೆ, ಬಿಬಿಎಂಪಿ ಕಾರ್ಯಾಚರಣೆಯಲ್ಲಿ ಇದ್ದಾರೆ. ಮಧ್ಯಾಹ್ನ 1:30 ಕ್ಕೆ ಮತ್ತೆ ಇಲ್ಲಿಗೆ ಬರುತ್ತೇನೆ. ಅಪ್ಪು ಬಹಳ ಜನಪ್ರಿಯ ನಾಯಕ. ನಟ ಪುನೀತ್ ಅಗಲಿಕೆ ನಮಗೆ ತುಂಬಾ ದುಃಖವಾಗಿದೆ ಗೌರವ, ಶಾಂತಿಯಿಂದ ಅವರನ್ನು ಕಳಿಸಿಕೊಡಬೇಕು ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ

ಕಂಠೀರವ ಸ್ಟುಡಿಯೋದಲ್ಲಿ ಪುನೀತ್ ಅಂತ್ಯಕ್ರಿಯೆಗೆ ಸಿದ್ಧತೆ: ಕಮಲ್‌ ಪಂತ್‌
ಕಂಠೀರವ ಸ್ಟುಡಿಯೋಗೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್‌ ಪಂತ್‌ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಬಳಿಕ ಮಾತನಾಡಿದ ಅವರು, ಕಂಠೀರವ ಸ್ಟುಡಿಯೋದಲ್ಲಿ ಪುನೀತ್ ಅಂತ್ಯಕ್ರಿಯೆಗೆ ಸಿದ್ಧತೆ ಮಾಡಲಾಗಿದೆ ಎಂದು ಹೇಳಿದ್ದಾರೆ.

1,500 ಪೊಲೀಸರನ್ನು ವಿವಿಧ ಜಿಲ್ಲೆಗಳಿಂದ ಕರೆಸಲಾಗಿದೆ: ಆರಗ ಜ್ಞಾನೇಂದ್ರ
ಇಲಾಖೆಯಿಂದ ಎಲ್ಲಾ ರೀತಿಯ ಬಂದೋಬಸ್ತ್ ಮಾಡಿಕೊಳ್ಳಲಾಗಿದೆ. ಬೆಂಗಳೂರಿಲ್ಲಿರುವ 20 ಸಾವಿರ ಪೊಲೀಸರನ್ನು ಬಳಕೆ ಮಾಡಿಕೊಳ್ಳುತ್ತಿದ್ದೇವೆ. 1,500 ಪೊಲೀಸರನ್ನು ವಿವಿಧ ಜಿಲ್ಲೆಗಳಿಂದ ಕರೆಸಲಾಗಿದೆ. ಗೌರವಯುತವಾಗಿ ಪುನೀತ್​ರನ್ನು ಕಳುಹಿಸಿ ಕೊಡೋಣ. ಯಾವುದೇ ಅಹಿತಕರ ಘಟನೆ ನಡೆಸದಂತೆ ಎಲ್ಲರೂ ಸಹಕರಿಸಬೇಕಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.

ಗುಣಿ ತೋಡುವ ಕೆಲಸ ಆರಂಭ
ಆರು ಮಂದಿಯಿಂದ ಗುಣಿ ತೋಡುವ ಕೆಲಸ ಆರಂಭವಾಗಿದೆ. ಈಗಾಗಲೇ ಕಂಠೀರವ ಸ್ಟೂಡಿಯೋದಲ್ಲಿ ತಯಾರಿ ನಡೆಯುತ್ತಿದೆ. ಆಸನಗಳ ವ್ಯವಸ್ಥೆ ಸೇರಿದಂತೆ ಬ್ಯಾರಿಕೇಡ್ ನಿರ್ಮಾಣ‌ ಮಾಡಲಾಗಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಐನೂರಕ್ಕೂ ಅಧಿಕ ಪೊಲೀಸರ ನಿಯೋಜನೆ ಮಾಡಲಾಗಿದೆ.

 ಇದನ್ನೂ ಓದಿ:

ಅಪ್ಪು ಯುವ ಜನತೆ ಹೃದಯದಲ್ಲಿ ಉಳಿದಿದ್ದಾರೆ; ಪುನೀತ್ ರಾಜ್ ಕುಮಾರ್ ಅಂತಿಮ ದರ್ಶನ ಪಡೆದ ರಾಜ್ಯಪಾಲ ಟಿಸಿ ಗೆಹ್ಲೋಟ್

Puneeth Rajkumar Death: ಅಪ್ಪು ಅಂತಿಮ ದರ್ಶನದಲ್ಲಿ ಬಿಕ್ಕಿ ಬಿಕ್ಕಿ ಅತ್ತ ಸೆಲೆಬ್ರಿಟಿಗಳು; ಫ್ಯಾನ್ಸ್​ ಕಣ್ಣೀರು ತಡೆಯಲು ಸಾಧ್ಯವಿಲ್ಲ​

Published On - 11:42 am, Sat, 30 October 21