ಕೋಟ್ಯಧಿಪತಿಯ 18ಲಕ್ಷ ಸಂಭಾವನೆ ನಮಗೆ ಕೊಟ್ಟಿದ್ರು -ಮೈಸೂರು ಶಕ್ತಿಧಾಮದ ಆಧಾರಸ್ತಂಭವಾಗಿದ್ದ ಪುನೀತ್ ನಿಧನಕ್ಕೆ ಮಕ್ಕಳ ಕಂಬನಿ

ನಟನೆ, ಸಂಗೀತದ ಜೊತೆಗೆ ಸಮಾಜ ಸೇವೆಯಲ್ಲೂ ನಮ್ಮನ್ನು ತೊಡಗಿಸಿಕೊಂಡಿದ್ದ ಪುನೀತ್ ರಾಜ್ಕುಮಾರ್ ಅದೆಷ್ಟೋ ಮಕ್ಕಳಿಗೆ ದಾರಿ ದೀಪವಾಗಿದ್ದಾರೆ. ಅದೆಷ್ಟೋ ಯುವಕರಿಗೆ ರೋಲ್ ಮಾಡಲ್ ಆಗಿದ್ದಾರೆ. ಶಕ್ತಿಧಾಮ ಡಾ. ರಾಜ್ ಕುಟುಂಬದ ಕನಸಾಗಿತ್ತು. ಮೈಸೂರಿನ ಶಕ್ತಿಧಾಮಕ್ಕೆ ಪುನೀತ್ ರಾಜ್ಕುಮಾರ್ ಬೆನ್ನೆಲುಬಾಗಿ ನಿಂತಿದ್ದರು.

ಕೋಟ್ಯಧಿಪತಿಯ 18ಲಕ್ಷ ಸಂಭಾವನೆ ನಮಗೆ ಕೊಟ್ಟಿದ್ರು -ಮೈಸೂರು ಶಕ್ತಿಧಾಮದ ಆಧಾರಸ್ತಂಭವಾಗಿದ್ದ ಪುನೀತ್ ನಿಧನಕ್ಕೆ ಮಕ್ಕಳ ಕಂಬನಿ
ಕೋಟ್ಯಧಿಪತಿ ಷೋದಿಂದ ಬಂದಿದ್ದ 18 ಲಕ್ಷ ಸಂಭಾವನೆ ನಮಗೆ ಕೊಟ್ಟಿದ್ರು -ಮೈಸೂರಿನ ಶಕ್ತಿಧಾಮದ ಆಧಾರಸ್ತಂಭವಾಗಿದ್ದ ಪುನೀತ್ ನಿಧನಕ್ಕೆ ಮಕ್ಕಳ ಕಂಬನಿ
Follow us
TV9 Web
| Updated By: ಆಯೇಷಾ ಬಾನು

Updated on:Oct 30, 2021 | 12:59 PM

ಮೈಸೂರು: ನಟ ಪುನೀತ್ ರಾಜ್ಕುಮಾರ್ ಆಗಸ್ಟ್ 29ರಂದು ತಮ್ಮ ಜೀವನ ಮುಗಿಸಿ ದಿಢೀರನೆ ಹೊರಟು ನಿಂತಿದ್ದಾರೆ. ಎದೆ ನೋವಿನಿಂದ ಆಸ್ಪತ್ರೆ ಸೇರಿದ್ದ ಅಪ್ಪು ಅಗಲಿಕೆಯ ಸುದ್ದಿ ಇಡೀ ಕರುನಾಡಿಗೆ ಹೃದಯಾಘಾತ ತಂದಿದೆ. ಲಕ್ಷಾಂತರ ಅಭಿಮಾನಿಗಳು ಕಣ್ಣೀರ ಸಾಗರದಲ್ಲಿ ಮುಳುಗಿದ್ದಾರೆ. ಗಣ್ಯರು ಅಂತಿಮ ದರ್ಶನ ಪಡೆಯುತ್ತಿದ್ದಾರೆ. ಇದರ ನಡುವೆ ಮೈಸೂರಿನ ಶಕ್ತಿಧಾಮದ ಆಧಾರ ಸ್ತಂಭವಾಗಿದ್ದ ಪುನೀತ್ರನ್ನು ನೆನೆದು ಅಲ್ಲಿನ ಮಕ್ಕಳು ಮೂಕ ರೋಧನೆ ಅನುಭವಿಸುತ್ತಿದ್ದಾರೆ. ಪುನೀತ್ರ ಫೋಟೋಗೆ ಹಾರ ಹಾಕಿ ಶ್ರದ್ಧಾಂಜಲಿ ಅರ್ಪಿಸಿದ್ದಾರೆ.

ನಟನೆ, ಸಂಗೀತದ ಜೊತೆಗೆ ಸಮಾಜ ಸೇವೆಯಲ್ಲೂ ನಮ್ಮನ್ನು ತೊಡಗಿಸಿಕೊಂಡಿದ್ದ ಪುನೀತ್ ರಾಜ್ಕುಮಾರ್ ಅದೆಷ್ಟೋ ಮಕ್ಕಳಿಗೆ ದಾರಿ ದೀಪವಾಗಿದ್ದಾರೆ. ಅದೆಷ್ಟೋ ಯುವಕರಿಗೆ ರೋಲ್ ಮಾಡಲ್ ಆಗಿದ್ದಾರೆ. ಶಕ್ತಿಧಾಮ ಡಾ. ರಾಜ್ ಕುಟುಂಬದ ಕನಸಾಗಿತ್ತು. ಮೈಸೂರಿನ ಶಕ್ತಿಧಾಮಕ್ಕೆ ಪುನೀತ್ ರಾಜ್ಕುಮಾರ್ ಬೆನ್ನೆಲುಬಾಗಿ ನಿಂತಿದ್ದರು. ಸಂಪೂರ್ಣ ಸಹಕಾರ ನೀಡುತ್ತಿದ್ದರು ಎಂದು ಶಕ್ತಿಧಾಮದ ಸಂಚಾಲಕ ಜಿ.ಎಸ್. ಜಯದೇವ್ ಪುನೀತ್ರ ಸೇವಾ ಮನೋಭಾವವನ್ನು ಕೊಂಡಾಡಿದ್ದಾರೆ.

Mys Puneeth Rajkumar shakthi Dhama

ಮೈಸೂರಿನ ಶಕ್ತಿಧಾಮದ ಆಧಾರಸ್ತಂಭವಾಗಿದ್ದ ಪುನೀತ್ ನಿಧನಕ್ಕೆ ಮಕ್ಕಳ ಕಂಬನಿ

ಪುನೀತ್ ಕಳೆದ ವರ್ಷ ಕನ್ನಡದ ಕೋಟ್ಯಧಿಪತಿಯಿಂದ ತಮಗೆ ಬಂದಿದ್ದ 18 ಲಕ್ಷ ರೂ. ಸಂಭಾವನೆಯನ್ನು ಶಕ್ತಿಧಾಮಕ್ಕೆ ನೀಡಿದ್ದರು. ಪ್ರತಿ ವರ್ಷ ಮಕ್ಕಳಿಗೆ ಪುಸ್ತಕ ಹಾಗೂ ಇತರ ಅಗತ್ಯ ವಸ್ತುಗಳನ್ನ ಪೂರೈಸುತ್ತಿದ್ದರು. ಶಕ್ತಿಧಾಮಕ್ಕೆ ಸೇರಿದ ಮೂರು ಎಕರೆ ಪ್ರದೇಶದಲ್ಲಿ ಹೆಣ್ಣು ಮಕ್ಕಳಿಗಾಗಿ ದೊಡ್ಡ ಶಿಕ್ಷಣ ಸಂಸ್ಥೆ ಆರಂಭಿಸಲು ಯೋಚನೆ ಮಾಡಿಕೊಂಡಿದ್ದರು. ಸುಮಾರು 8 ಕೋಟಿ ವೆಚ್ಚದಲ್ಲಿ ಶಾಲೆ ನಿರ್ಮಾಣಕ್ಕೆ ಕನಸು ಕಟ್ಟಿಕೊಂಡಿದ್ರು. ಆದ್ರೆ ಅವರ ಯೋಜನೆ ಈಗ ಕನಸಾಗೆ ಉಳಿಯಿತು.

ಈ ವರ್ಷ ಕೊವಿಡ್ಗೂ ಮುನ್ನ ಶಕ್ತಿಧಾಮಕ್ಕೆ ಬಂದು ಬಹಳ ಹೊತ್ತು ಮಕ್ಕಳೊಂದಿಗೆ ಸಮಯ ಕಳೆದಿದ್ರು. ಇತ್ತೀಚಿನ ದಿನಗಳಲ್ಲಿ ಪುನೀತ್ ಶಿಕ್ಷಣದ ಬಗ್ಗೆ ಹೆಚ್ಚು ಮಾತನಾಡ್ತಿದ್ರು. ಶಕ್ತಿಧಾಮಕ್ಕೆ ಬಂದು ಮಕ್ಕಳ ಜೊತೆ ಊಟ ಮಾಡೋದಂದ್ರೆ ಅವರಿಗೆ ಬಲು ಇಷ್ಟ. ಮಕ್ಕಳಿಗೆ ಒಳ್ಳೆಯ ಕಡೆ ಊಟ ತರಿಸಿ ಅವರೂ ಊಟ ಮಾಡ್ತಿದ್ರು. ಶಿವಣ್ಣ ಅವರೂ ಕೂಡ ಪುನೀತ್ರ ಯೋಜನೆಗಳಿಗೆ ಕೈಜೋಡಿಸಿದ್ರು. ಶಕ್ತಿಧಾಮದ ಸಲುವಾಗಿ ವಿದೇಶಕ್ಕೆ ಹೋಗಿ ಬರಲು ತಯಾರಿ ಮಾಡ್ತಿದ್ರು. ಕನ್ನಡದ ಬೇರೆ ಬೇರೆ ನಟರ ಸಹಕಾರ ಪಡೆದು ಶಕ್ತಿಧಾಮಕ್ಕೆ ನೆರವಾಗಲು ಇನ್ನಿಲ್ಲದ ಪ್ರಯತ್ನ ಮಾಡ್ತಿದ್ರು. ಪುನೀತ್ರ ಅಗಲಿಕೆ ಶಕ್ತಿಧಾಮ‌ ಹಾಗೂ ಇಡೀ ಕನ್ನಡ ನಾಡಿಗೆ ತುಂಬಲಾರದ ನಷ್ಟ ಎಂದು ಶಕ್ತಿಧಾಮದ ಸಂಚಾಲಕ ಜಿ.ಎಸ್. ಜಯದೇವ್ ಕಣ್ಣೀರು ಹಾಕಿದ್ದಾರೆ.

Mys Puneeth Rajkumar shakthi Dhama 1

ಶಕ್ತಿಧಾಮದ ಆಧಾರಸ್ತಂಭವಾಗಿದ್ದ ಪುನೀತ್ ನಿಧನಕ್ಕೆ ಮಕ್ಕಳ ಕಂಬನಿ

ಪುನೀತ್​ ಅಣ್ಣನಿಗಾಗಿ ಹಾಡು ಬರೆದ ವಿದ್ಯಾರ್ಥಿನಿ ಮೈಸೂರಿನ ಶಕ್ತಿಧಾಮದಲ್ಲಿ ವಿದ್ಯಾರ್ಥಿನಿ ಭಾವನಾತ್ಮಕ ಗೀತೆ ಹಾಡಿ ಪುನೀತ್​ರಿಗೆ ಮತ್ತೆ ಹುಟ್ಟಿ ಬರುವಂತೆ ಕೋರಿ ಕೊಂಡಿದ್ದಾಳೆ. ಪುನೀತ್ ರಾಜ್‍ಕುಮಾರ್ ಕುರಿತು ತಾನೇ ಸಾಹಿತ್ಯ ಬರೆದು ಮನಃ ಕಲಕುವ ರೀತಿ ಹಾಡಿದ್ದಾಳೆ. ಕೈಯ್ಯಾ ಮುಗಿವೆ ಜೊತೆಗೆ ಇರಿ. ಬಿಟ್ಟೋಗ್ಬೇಡಿ ಅಣ್ಣ, ಬಿಟ್ಟೋಗ್ಬೇಡಿ ಅಣ್ಣ ಎಂದು ಅಗಲಿದ ಅಣ್ಣನನ್ನು ಬೇಡಿಕೊಂಡಿದ್ದಾಳೆ. ಈ ದೃಶ್ಯ ಕಣ್ಣಲ್ಲಿ ನೀರು ತರಿಸುವಂತಿತ್ತು.

ಇದನ್ನೂ ಓದಿ: ಪುನೀತ್ ರಾಜ್​ಕುಮಾರ್​ಗೆ ಮರಣೋತ್ತರ ಪ್ರಶಸ್ತಿ ಪ್ರದಾನಕ್ಕೆ ತಾಂತ್ರಿಕ ಸಮಸ್ಯೆ! ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಾಹಿತಿ

Published On - 12:28 pm, Sat, 30 October 21