AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಪ್ಪು ಯುವ ಜನತೆ ಹೃದಯದಲ್ಲಿ ಉಳಿದಿದ್ದಾರೆ; ಪುನೀತ್ ರಾಜ್ ಕುಮಾರ್ ಅಂತಿಮ ದರ್ಶನ ಪಡೆದ ರಾಜ್ಯಪಾಲ ಟಿಸಿ ಗೆಹ್ಲೋಟ್

ರಾಜ್ಯಪಾಲ ಟಿ.ಸಿ.ಗೆಹ್ಲೋಟ್, ಸಿಎಂ ಬೊಮ್ಮಾಯಿ, ಸಚಿವ ಆರಗ ಜ್ಞಾನೇಂದ್ರ ಅಂತಿಮ ನಮನ ಸಲ್ಲಿಸಿದ್ದು ನಟ ಪುನೀತ್ ಕುಟುಂಬಸ್ಥರಿಗೆ ರಾಜ್ಯಪಾಲರ ಸಾಂತ್ವನ ಹೇಳಿದ್ರು. ಅಲ್ಲದೆ ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಶ್ರೀಗಳು ಕೂಡ ಅಂತಿಮ ದರ್ಶನ ಪಡೆದಿದ್ದಾರೆ.

ಅಪ್ಪು ಯುವ ಜನತೆ ಹೃದಯದಲ್ಲಿ ಉಳಿದಿದ್ದಾರೆ; ಪುನೀತ್ ರಾಜ್ ಕುಮಾರ್ ಅಂತಿಮ ದರ್ಶನ ಪಡೆದ ರಾಜ್ಯಪಾಲ ಟಿಸಿ  ಗೆಹ್ಲೋಟ್
ಅಪ್ಪು ಯುವ ಜನತೆ ಹೃದಯದಲ್ಲಿ ಉಳಿದಿದ್ದಾರೆ; ಪುನೀತ್ ರಾಜ್ ಕುಮಾರ್ ಅಂತಿಮ ದರ್ಶನ ಪಡೆದ ರಾಜ್ಯಪಾಲ ಟಿಸಿ ಗೆಹ್ಲೋಟ್
TV9 Web
| Edited By: |

Updated on:Oct 30, 2021 | 11:48 AM

Share

ಬೆಂಗಳೂರು: ನಟಸಾರ್ವಭೌಮ, ದೊಡ್ಮನೆ ಹುಡುಗ ನಟ ಪುನೀತ್ ರಾಜ್​ಕುಮಾರ್ ಈಗ ಕೇವಲ ನೆನೆಪು ಮಾತ್ರ. ಹೃದಯಾಘಾತದಿಂದ ನಿಧನರಾದ ನಟ ಪುನೀತ್ ಅಂತಿಮ ದರ್ಶನಕ್ಕೆ ಜನ ಸಾಗರವೇ ಹರಿದು ಬರುತ್ತಿದೆ. ಇದರ ನಡುವೆ ಇಂದು ರಾಜ್ಯಪಾಲ ಟಿ.ಸಿ.ಗೆಹ್ಲೋಟ್, ಸಿಎಂ ಬೊಮ್ಮಾಯಿ, ಸಚಿವ ಆರಗ ಜ್ಞಾನೇಂದ್ರ ಅಂತಿಮ ನಮನ ಸಲ್ಲಿಸಿದ್ದು ನಟ ಪುನೀತ್ ಕುಟುಂಬಸ್ಥರಿಗೆ ರಾಜ್ಯಪಾಲರ ಸಾಂತ್ವನ ಹೇಳಿದ್ರು. ಅಲ್ಲದೆ ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಶ್ರೀಗಳು ಕೂಡ ಅಂತಿಮ ದರ್ಶನ ಪಡೆದಿದ್ದಾರೆ.

ಈ ವೇಳೆ ಮಾತನಾಡಿದ ರಾಜ್ಯಪಾಲ ಟಿ.ಸಿ.ಗೆಹ್ಲೋಟ್, ಹಿಂದೂಸ್ತಾನ ಹಾಗೂ ಫಿಲ್ಮ್ ಜಗತ್ತಿನಲ್ಲಿ ವಿಶೇಷವಾದ ಪ್ರಸಿದ್ಧಿಯಾದ ಪುನೀತ್ ರಾಜ್ಕುಮಾರ್ ನಮ್ಮ ನಡುವೆ ಇಲ್ಲ. ಈ ಅಪೂರ್ಣತೆಯನ್ನು ಕಾಡುತ್ತಿದೆ. ಪುನೀತ್ ಬಾಲ್ಯದಿಂದಲೇ ಪ್ರತಿಭೆ ಪ್ರದರ್ಶನ ನೀಡಿದ್ದರು. ಚಿಕ್ಕ ವಯಸ್ಸಲ್ಲೇ ಪ್ರಶಸ್ತಿ ಪುರಸ್ಕಾರ ಸಿಕ್ಕಿತ್ತು. ಫಿಲ್ಮ್ ಜಗತ್ತಲ್ಲಿ ಅಷ್ಟೇ ಅಲ್ಲ ಸಾಮಾಜಿಕ ಸೇವೆಯೂ ಮಾಡಿದರು. ಯುವ ಜನತೆಯ ಹೃದಯದಲ್ಲಿ ಉಳಿದಿದ್ದಾರೆ. ಈ ಅಕಾಲಿಕ ನಿಧನ ನಮಗೆ, ದೇಶಕ್ಕೆ, ಸಿನಿಮಾ ಸಮಾಜಕ್ಕೆ ಇದು ನಷ್ಟ. ಅವರಿಗೆ ಶ್ರದ್ಧಾಂಜಲಿ ಕೋರುತ್ತೇನೆ. ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ಸಿಗಲಿ ಎಂದರು.

puneeth rajkumar death

ಪುನೀತ್ ರಾಜ್ ಕುಮಾರ್ ಅಂತಿಮ ದರ್ಶನ ಪಡೆದ ಸಿಎಂ ಬಸವರಾಜ ಬೊಮ್ಮಾಯಿ

ಪುನೀತ್‌ರನ್ನು ಕಳೆದುಕೊಂಡು ನಾಡು ದುಃಖತಪ್ತವಾಗಿದೆ ಎಂದು ಪುನೀತ್ರ ಅಂತಿಮ ದರ್ಶನ ಬಳಿಕ ಸಚಿವ ಆರಗ ಜ್ಞಾನೇಂದ್ರ ತಮ್ಮ ದುಃಖವನ್ನು ಹೊರ ಹಾಕುದ್ರು. ಅಭಿಮಾನಿಗಳು ತಾಳ್ಮೆ ಕಳೆದುಕೊಳ್ಳಬಾರದು. ಅಶಾಂತಿ ನಿರ್ಮಿಸುವ ಕೆಲಸ ಯಾರೂ ಮಾಡುವುದು ಬೇಡ. ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ಎಲ್ಲ ರೀತಿಯ ಭದ್ರತಾ ವ್ಯವಸ್ಥೆಯನ್ನು ಕೈಗೊಳ್ಳಲಾಗಿದೆ. ಕೇಂದ್ರೀಯ ಪಡೆಗಳನ್ನು ಕರೆಸಿಕೊಳ್ಳಲಾಗಿದೆ.ಈಗಾಗಲೇ 6 ಲಕ್ಷ ಜನರು ಅಂತಿಮ ದರ್ಶನ ಪಡೆದಿದ್ದಾರೆ. ಅಂತ್ಯಕ್ರಿಯೆ ಬಗ್ಗೆ ಕುಟುಂಬಸ್ಥರ ಜತೆ ಚರ್ಚಿಸಿ ತೀರ್ಮಾನ ಮಾಡಲಾಗುತ್ತೆ. ಕಂಠೀರವ ಸ್ಟುಡಿಯೋದಲ್ಲೂ ಪರಿಶೀಲನೆ ಮಾಡಲಾಗುತ್ತಿದೆ ಎಂದರು.

ಕೆಐಎಬಿಗೆ ಆಗಮಿಸಿದ ತೆಲುಗು ನಟ ನಂದಮೂರಿ ಬಾಲಕೃಷ್ಣ ಪುನೀತ್ ಅಂತಿಮ ದರ್ಶನ ಪಡೆಯಲು ಕೆಐಎಬಿಯಿಂದ ಬೆಂಗಳೂರಿನತ್ತ ನಟ ಬಾಲಕೃಷ್ಣ ಪ್ರಯಾಣ ಬೆಳೆಸಿದ್ದಾರೆ. ಕೆಲವೆ ನಿಮಿಷಗಳಲ್ಲಿ ಏರ್ಪೋಟ್ ನಿಂದ ಕಂಠೀರವ ಕ್ರೀಡಾಂಗಣಕ್ಕೆ ಬಂದು ಅಂತಿಮ ದರ್ಶನ ಪಡೆಯಲಿದ್ದಾರೆ.

puneeth rajkumar death 1

ಕೆಐಎಬಿಗೆ ಆಗಮಿಸಿದ ತೆಲುಗು ನಟ ನಂದಮೂರಿ ಬಾಲಕೃಷ್ಣ

ಇದನ್ನೂ ಓದಿ: ದಾವಣಗೆರೆ ಪುಷ್ಕರಣಿಗೆ ಭೇಟಿ ನೀಡಿದ್ದ ಪವರ್ ಸ್ಟಾರ್ ಪುನೀತ್; ಫೋಟೋಗಳು ಇಲ್ಲಿವೆ

Published On - 11:06 am, Sat, 30 October 21

ಗೃಹಲಕ್ಷ್ಮೀಯರಿಗೆ ಗುಡ್​ನ್ಯೂಸ್: ಸದ್ಯದಲ್ಲೇ ನಿಮ್ ಅಕೌಂಟ್​​ ಲಕ್ಷ್ಮೀ!
ಗೃಹಲಕ್ಷ್ಮೀಯರಿಗೆ ಗುಡ್​ನ್ಯೂಸ್: ಸದ್ಯದಲ್ಲೇ ನಿಮ್ ಅಕೌಂಟ್​​ ಲಕ್ಷ್ಮೀ!
ಪಿಚ್ ಮಧ್ಯದಲ್ಲೇ ಪಾಕ್ ವೇಗಿಗೆ ವಾರ್ನಿಂಗ್ ಕೊಟ್ಟ ವೈಭವ್; ವಿಡಿಯೋ
ಪಿಚ್ ಮಧ್ಯದಲ್ಲೇ ಪಾಕ್ ವೇಗಿಗೆ ವಾರ್ನಿಂಗ್ ಕೊಟ್ಟ ವೈಭವ್; ವಿಡಿಯೋ
ಪುರಾತನ ಕಲ್ಯಾಣಿ ಸ್ವಚ್ಚತೆ ವೇಳೆ ಶಿವಲಿಂಗ ಪತ್ತೆ
ಪುರಾತನ ಕಲ್ಯಾಣಿ ಸ್ವಚ್ಚತೆ ವೇಳೆ ಶಿವಲಿಂಗ ಪತ್ತೆ
ರಜತ್-ಗಿಲ್ಲಿ ಕಣ್ಣಿಗೆ ಬಟ್ಟೆ: ನಕ್ಕು ಸುಸ್ತಾದ ಸುದೀಪ್
ರಜತ್-ಗಿಲ್ಲಿ ಕಣ್ಣಿಗೆ ಬಟ್ಟೆ: ನಕ್ಕು ಸುಸ್ತಾದ ಸುದೀಪ್
ಸೈರನ್ ಮೊಳಗುತ್ತಿದ್ದಂತೆಯೇ ಈ ಗ್ರಾಮದ ಎಲ್ಲರ ಮನೆಯ ಟಿವಿ, ಫೋನ್ ಆಫ್
ಸೈರನ್ ಮೊಳಗುತ್ತಿದ್ದಂತೆಯೇ ಈ ಗ್ರಾಮದ ಎಲ್ಲರ ಮನೆಯ ಟಿವಿ, ಫೋನ್ ಆಫ್
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ