ಐಸಿಯುನಲ್ಲಿ ಹಿರಿಯ ನಟ ಸತ್ಯಜಿತ್​: ಆರೋಗ್ಯ ಸ್ಥಿತಿ ಗಂಭೀರ

| Updated By: ಮದನ್​ ಕುಮಾರ್​

Updated on: Oct 04, 2021 | 12:52 PM

ನಟ ಸತ್ಯಜಿತ್​ ಅವರು ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಗ್ಯಾಂಗ್ರಿನ್​ನಿಂದಾಗಿ ಅವರ ಒಂದು ಕಾಲು ಕತ್ತರಿಸಲಾಗಿತ್ತು. ಈಗ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಐಸಿಯುನಲ್ಲಿ ಹಿರಿಯ ನಟ ಸತ್ಯಜಿತ್​: ಆರೋಗ್ಯ ಸ್ಥಿತಿ ಗಂಭೀರ
ಸತ್ಯಜಿತ್
Follow us on

ಕನ್ನಡ ಚಿತ್ರರಂಗದ ಹಿರಿಯ ನಟ ಸತ್ಯಜಿತ್​ ಅವರ ಆರೋಗ್ಯದಲ್ಲಿ ಏರುಪೇರಾಗಿದೆ. ಅವರನ್ನು ಬೆಂಗಳೂರಿನ ಬೌರಿಂಗ್​ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸದ್ಯ ಸತ್ಯಜಿತ್​ ಪರಿಸ್ಥಿತಿ ಗಂಭೀರವಾಗಿದ್ದು, ತೀವ್ರ ನಿಗಾ ಘಟಕದಲ್ಲಿ (ಐಸಿಯು) ಚಿಕಿತ್ಸೆ ನೀಡಲಾಗುತ್ತಿದೆ. ಹಲವು ದಿನಗಳಿಂದಲೂ ಅವರು ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಗ್ಯಾಂಗ್ರಿನ್​ನಿಂದಾಗಿ ಅವರ ಒಂದು ಕಾಲು ಕತ್ತರಿಸಲಾಗಿತ್ತು. ಈಗ ಸಕ್ಕರೆ ಕಾಯಿಲೆ ಮತ್ತು ಇನ್ನಿತರೆ ವಯೋಸಹಜ ಅನಾರೋಗ್ಯದ ಕಾರಣ ಸತ್ಯಜಿತ್​ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರಿಗೆ 72 ವರ್ಷ ವಯಸ್ಸಾಗಿದೆ.

ಸತ್ಯಜಿತ್​ ಪುತ್ರ ಹೇಳಿರುವ ಪ್ರಕಾರ ಪ್ರಸ್ತುತ ಅವರ ಪರಿಸ್ಥಿತಿ ಗಂಭೀರವಾಗಿದೆ. ದಿನದಿಂದ ದಿನಕ್ಕೆ ಆರೋಗ್ಯ ಹದಗೆಡುತ್ತಲೇ ಇದೆ. ಸೂಕ್ತ ಸಮಯದಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹೇಳಿದ್ದಾರೆ. ಹಲವು ದಿನಗಳಿಂದ ಸತ್ಯಜಿತ್​ಗೆ ಆರೋಗ್ಯ ಕೈಕೊಟ್ಟಿದ್ದರಿಂದ ಅವರಿಗೆ ಆರ್ಥಿಕ ಸಂಕಷ್ಟ ಕೂಡ ಎದುರಾಗಿದೆ.​ ಒಂದು ಕಾಲದಲ್ಲಿ ಅವರು ಬಹು ಬೇಡಿಕೆಯ ಫೋಷಕ ನಟನಾಗಿದ್ದರು. ನೂರಾರು ಸಿನಿಮಾಗಳಲ್ಲಿ ಅವರು ಅಭಿನಯಿಸಿದ್ದಾರೆ.

1986ರಿಂದಲೂ ಸತ್ಯಜಿತ್​ ಅವರು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದರು. ಅಪ್ಪು, ಅರಸು, ಅಭಿ, ಆಪ್ತಮಿತ್ರ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸುವ ಮೂಲಕ ಅವರು ಜನಪ್ರಿಯತೆ ಪಡೆದಿದ್ದಾರೆ. ಹಲವು ಬಗೆಯ ಪಾತ್ರಗಳಿಗೆ ಅವರು ಬಣ್ಣ ಹಚ್ಚಿದ್ದಾರೆ. ಪೋಷಕ ಪಾತ್ರಗಳಲ್ಲಿ ಹೆಚ್ಚಾಗಿ ಗಮನ ಸೆಳೆಯುತ್ತಿದ್ದ ಸತ್ಯಜಿತ್​ ಅವರಿಗೆ ಗ್ಯಾಂಗ್ರಿನ್​ ಕಾಣಿಸಿಕೊಂಡ ಬಳಿಕ ಬೇಡಿಕೆ ಕಡಿಮೆ ಆಯಿತು. 2018ರಲ್ಲಿ ತೆರೆಕಂಡ ಪ್ರಿಯಾಂಕಾ ಉಪೇಂದ್ರ ನಟನೆ ‘ಸೆಕೆಂಡ್​ ಹಾಫ್​’ ಚಿತ್ರದ ಬಳಿಕ ಬೇರೆ ಯಾವುದೇ ಸಿನಿಮಾದಲ್ಲಿ ಸತ್ಯಜಿತ್​ ಕಾಣಿಸಿಕೊಂಡಿಲ್ಲ.

ಹೆಚ್ಚಿನ ಮಾಹಿತಿ ಪಡೆಯಲಾಗುತ್ತಿದೆ. ಅಪ್​ಡೇಟ್​ಗಾಗಿ ಪುಟ ರೀಫ್ರೆಶ್ ಮಾಡಿ…

ಇದನ್ನೂ ಓದಿ:

ಸಾಯಿ ಧರಮ್​ ತೇಜ್​ ಬೈಕ್​ ಅಪಘಾತ: ಅಪಶಕುನ ನುಡಿದ ಹಿರಿಯ ನಟನ ವಿರುದ್ಧ ಭಾರಿ ಆಕ್ರೋಶ

ಕಾಲು ಜಾರಿ ಬಿದ್ದು ಗಾಯಗೊಂಡ ಹಿರಿಯ ನಟಿ ಲೀಲಾವತಿ; 1 ತಿಂಗಳು ವಿಶ್ರಾಂತಿಗೆ ಸೂಚನೆ

Published On - 11:32 am, Mon, 4 October 21