AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾಲು ಜಾರಿ ಬಿದ್ದು ಗಾಯಗೊಂಡ ಹಿರಿಯ ನಟಿ ಲೀಲಾವತಿ; 1 ತಿಂಗಳು ವಿಶ್ರಾಂತಿಗೆ ಸೂಚನೆ

ತಕ್ಷಣವೇ ಅವರು ವಿನೋದ್ ರಾಜ್ ಜತೆ ತಮ್ಮ ಕಾರಿನಲ್ಲಿ ಬಂದು ಚಿಕಿತ್ಸೆ ಪಡೆದುಕೊಂಡಿದ್ದಾರೆ. ಮನೆಯಲ್ಲೇ 1 ತಿಂಗಳು ಕಾಲ ವಿಶ್ರಾಂತಿಗೆ ವೈದ್ಯರು ಅವರಿಗೆ ಸೂಚನೆ ನೀಡಿದ್ದಾರೆ.

ಕಾಲು ಜಾರಿ ಬಿದ್ದು ಗಾಯಗೊಂಡ ಹಿರಿಯ ನಟಿ ಲೀಲಾವತಿ; 1 ತಿಂಗಳು ವಿಶ್ರಾಂತಿಗೆ ಸೂಚನೆ
ಲೀಲಾವತಿ ಮತ್ತು ವಿನೋದ್ ರಾಜ್
TV9 Web
| Edited By: |

Updated on:Aug 08, 2021 | 9:30 AM

Share

ನೆಲಮಂಗಲ: ಹಿರಿಯ ಕಲಾವಿದೆ ಲೀಲಾವತಿ ಕಾಲು ಜಾರಿ ಸೊಂಟದ ಮೂಳೆಗೆ ಗಾಯ ಮಾಡಿಕೊಂಡಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಸೋಲದೇವನಹಳ್ಳಿ ತಮ್ಮ ನಿವಾಸದ ತೋಟದ ಮನೆಯಲ್ಲಿ ಈ ಘಟನೆ ನಡೆದಿದೆ. ನೆಲಮಂಗಲ ಟೌನ್ ಖಾಸಗಿ ಆಸ್ಪತ್ರೆಯಲ್ಲಿ ಹಿರಿಯ ಕಲಾವಿದೆ ಲೀಲಾವತಿ ಅವರಿಗೆ ಚಿಕಿತ್ಸೆ ನೀಡಲಾಗಿದೆ. ಸಂಜೆ ಸ್ನಾನಗೃಹದಲ್ಲಿ ಜಾರಿಬಿದ್ದು ಹಿರಿಯ ನಟಿ ಲೀಲಾವತಿ ಗಾಯಗೊಂಡಿದ್ದರು. ತಕ್ಷಣವೇ ಅವರು ವಿನೋದ್ ರಾಜ್ ಜತೆ ತಮ್ಮ ಕಾರಿನಲ್ಲಿ ಬಂದು ಚಿಕಿತ್ಸೆ ಪಡೆದುಕೊಂಡಿದ್ದಾರೆ. ಮನೆಯಲ್ಲೇ 1 ತಿಂಗಳು ಕಾಲ ವಿಶ್ರಾಂತಿಗೆ ವೈದ್ಯರು ಅವರಿಗೆ ಸೂಚನೆ ನೀಡಿದ್ದಾರೆ.

ಹಿರಿಯ ಕಲಾವಿದೆ ಲೀಲಾವತಿ ಮತ್ತು ನಟ ವಿನೋದ್ ರಾಜ್ ವಿರುದ್ಧ ಅವಹೇಳನಕಾರಿ ಪೋಸ್ಟ್; ವ್ಯಕ್ತಿ ಬಂಧನ ಇತ್ತೀಚಿಗಷ್ಟೇ ಹಿರಿಯ ನಟಿ ಲೀಲಾವತಿ ಮತ್ತು ನಟ ವಿನೋದ್ ರಾಜ್ ಸೈಬರ್ ಕ್ರೈಮ್ ದೂರು ದಾಖಲಿಸಿದ್ದರು. ಹಿರಿಯ ಕಲಾವಿದೆ ಲೀಲಾವತಿ ಮತ್ತು ನಟ ವಿನೋದ್ ರಾಜ್ ವಿರುದ್ಧ ಅವಹೇಳನಕಾರಿ ಪೋಸ್ಟ್ ಹಾಕುತ್ತಿದ್ದ ವ್ಯಕ್ತಿಯೋರ್ವನನ್ನು ಬಂಧಿಸಲಾಗಿದೆ. ಸದ್ಯ ಬಂಧಿತ ವ್ಯಕ್ತಿ ಬೆಂಗಳೂರಿನ ಯಶವಂತಪುರ ಠಾಣೆ ಪೊಲೀಸರ ವಶದಲ್ಲಿದ್ದಾನೆ ಎಂದು ತಿಳಿದುಬಂದಿದೆ. ತಮ್ಮ ವಿರುದ್ಧ ಅವಹೇಳನಕಾರಿ ಪೋಸ್ಟ್ಗಳನ್ನು ಹಾಕುತ್ತಿದ್ದ ಕಾರಣ ಹಿರಿಯ ಕಲಾವಿದೆ ಲೀಲಾವತಿ ಮತ್ತು ನಟ ವಿನೋದ್ ರಾಜ್ ಸೈಬರ್ ಕ್ರೈಂ ವಿಭಾಗಕ್ಕೆ ದೂರು ನೀಡಿದ್ದರು ಎನ್ನಲಾಗಿದೆ.

ಈ ಕುರಿತು ಉತ್ತರ ವಿಭಾಗ ಸಿಇಎನ್ ಠಾಣೆಗೆ ನಟ ವಿನೋದ್ ರಾಜ್ ಭೇಟಿ ನೀಡಿದ್ದಾರೆ. ಕಳೆದ ಎಂಟು ತಿಂಗಳ‌ ಹಿಂದೆ ವಿನೋದ್ ರಾಜ್ ಹಾಗು ಲೀಲಾವತಿ ಅವರ ವಿರುದ್ದ ಅವಹೇಳನಕಾರಿ ಪೋಸ್ಟ್ ಹಿನ್ನಲೆ ದೂರು‌ ನೀಡಿದ್ದರು. ಪೊಲೀಸರಿಗೆ ಅಗತ್ಯ ಮಾಹಿತಿ ನೀಡುವ ಸಲುವಾಗಿ ಠಾಣೆಗೆ ಆಗಮಿಸಿ ನಟ ವಿನೋದ್ ರಾಜ್ ಮಾಹಿತಿ ನೀಡಿದರು.

ಇದನ್ನೂ ಓದಿ: 

ಚಿತ್ರರಂಗದ ಜ್ಯೂನಿಯರ್ ಆರ್ಟಿಸ್ಟ್‌ಗಳಿಗೆ ನೆರವಾದ ನಟ ವಿನೋದ್ ರಾಜ್, ಹಿರಿಯ ನಟಿ ಲೀಲಾವತಿ

ಮರಳಿನಲ್ಲಿ ಚಿತ್ರ ಬರೆದು ಕಂಚಿನ ಪದಕ ವಿಜೇತೆ ಪಿವಿ ಸಿಂಧುಗೆ ಶುಭ ಹಾರೈಸಿದ ಕಲಾವಿದ ಸುದರ್ಶನ್ ಪಟ್ನಾಯಕ್

(veteran actress Leelavathi leg injured in Bengaluru)

Published On - 10:15 pm, Fri, 6 August 21