‘ಗೋಕರ್ಣ’ ಸಿನಿಮಾದಲ್ಲಿ ಜೂ. ಉಪೇಂದ್ರ ಆಗಿದ್ದ ಸಂಜಯ್ ಈಗ ಹೀರೋ

2003ರಲ್ಲಿ ‘ಗೋಕರ್ಣ’ ಸಿನಿಮಾ ತೆರೆಗೆ ಬಂತು. ಉಪೇಂದ್ರ ಅವರು ಮುಖ್ಯಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಕಥಾನಾಯಕನ ಬಾಲ್ಯದ ಪಾತ್ರದಲ್ಲಿ ಸಂಜಯ್ ನಟಿಸಿದ್ದರು. ಈಗ ಅವರು ಹೀರೋ ಆಗುತ್ತಿದ್ದಾರೆ.

‘ಗೋಕರ್ಣ’ ಸಿನಿಮಾದಲ್ಲಿ ಜೂ. ಉಪೇಂದ್ರ ಆಗಿದ್ದ ಸಂಜಯ್ ಈಗ ಹೀರೋ
ಉಪೇಂದ್ರ-ಸಂಜಯ್
Follow us
ರಾಜೇಶ್ ದುಗ್ಗುಮನೆ
|

Updated on: Jan 27, 2023 | 12:36 PM

ಬಾಲ ಕಲಾವಿದನಾಗಿ ನಟಿಸಿ ನಂತರ ಹೀರೋ ಆಗಿ ಚಿತ್ರರಂಗದಲ್ಲಿ ಗುರುತಿಸಿಕೊಂಡವರ ಸಂಖ್ಯೆ ದೊಡ್ಡದಿದೆ. ಇದು ಚಿತ್ರರಂಗಕ್ಕೆ ಹೊಸದೂ ಅಲ್ಲ. ಪುನೀತ್ ರಾಜ್​ಕುಮಾರ್ (Puneeth Rajkumar) ಅವರು ಕೂಡ ಬಾಲ ಕಲಾವಿದನಾಗಿ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದರು. ‘ಅಪ್ಪು’ ಚಿತ್ರದ ಮೂಲಕ ಹೀರೋ ಆದರು. ಈಗ ಸಂಜಯ್ ಅವರ ಸರದಿ. ಉಪೇಂದ್ರ ನಟನೆಯ ‘ಗೋಕರ್ಣ’ ಸಿನಿಮಾದಲ್ಲಿ (Gokarna Movie) ಬಣ್ಣ ಹಚ್ಚಿದ್ದ ಅವರು ಈಗ ಹೀರೋ ಆಗಿ ಪರಿಚಯಗೊಳ್ಳುತ್ತಿದ್ದಾರೆ.

2003ರಲ್ಲಿ ‘ಗೋಕರ್ಣ’ ಸಿನಿಮಾ ತೆರೆಗೆ ಬಂತು. ಉಪೇಂದ್ರ ಅವರು ಮುಖ್ಯಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಕಥಾನಾಯಕನ ಬಾಲ್ಯದ ಪಾತ್ರದಲ್ಲಿ ಸಂಜಯ್ ನಟಿಸಿದ್ದರು. ಈಗ ಅವರು ಹೀರೋ ಆಗುತ್ತಿದ್ದಾರೆ. ತಬಲಾ ನಾಣಿ ಹಾಗೂ ನೆನಪಿರಲಿ ಪ್ರೇಮ್ ನಟನೆಯ ಹೊಸ ಚಿತ್ರದಲ್ಲಿ ಸಂಜಯ್ ನಟಿಸುತ್ತಿದ್ದಾರೆ. ಸಂಜಯ್​ಗೆ ಹೀರೋ ಆಗಿ ಮೊದಲ ಸಿನಿಮಾ ಆದರೆ, ತಬಲಾ ನಾಣಿಗೆ ನಿರ್ಮಾಪಕನಾಗಿ ಮೊದಲ ಚಿತ್ರ ಅನ್ನೋದು ವಿಶೇಷ. ಅಥರ್ವ ಆರ್ಯ ಈ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ.

ಇನ್ನೂ ಶೀರ್ಷಿಕೆ ಇಡದ ಈ ಚಿತ್ರದಲ್ಲಿ ಸಂಜಯ್ ಅವರು ಸಾಫ್ಟ್​ವೇರ್ ಇಂಜಿನಿಯರ್ ಪಾತ್ರ ಮಾಡುತ್ತಿದ್ದಾರೆ. ತಬಲಾ ನಾಣಿ ಅವರ ಮಗನಾಗಿ ಸಂಜಯ್ ಕಾಣಿಸಿಕೊಳ್ಳಲಿದ್ದಾರೆ. ಇದೊಂದು ಮಧ್ಯಮವರ್ಗ ಕುಟುಂಬದ ಕಥೆ. ಅಪ್ಪ-ಮಗನ ಸಂಬಂಧದ ಕಥೆಯನ್ನು ಸಿನಿಮಾ ಹೇಳಲಿದೆ. ನೆನಪಿರಲಿ ಪ್ರೇಮ್ ಅವರದ್ದು ಚಿತ್ರದಲ್ಲಿ ಉದ್ಯಮಿಯ ಪಾತ್ರ.

ಎಲ್ಲರಿಗೂ ಚಿತ್ರರಂಗಕ್ಕೆ ಕಾಲಿಡುವಾಗ ಒಂದಷ್ಟು ಕನಸುಗಳು ಇರುತ್ತವೆ. ಇಂತಹುದೇ ಪಾತ್ರ ಸಿಕ್ಕರೆ ಮಾತ್ರ ನಟಿಸುತ್ತೇನೆ ಎಂದು ಎಲ್ಲರೂ ಅಂದುಕೊಂಡಿರುತ್ತಾರೆ. ಫ್ಯಾಮಿಲಿ ಡ್ರಾಮಾ ಸಿನಿಮಾದಲ್ಲಿ ಮೊದಲು ನಟಿಸಬೇಕು ಎಂದು ಸಂಜಯ್​​ ಕನಸು ಕಂಡಿದ್ದರು. ಆ ಕನಸು ಈ ಚಿತ್ರದ ಮೂಲಕ ಈಡೇರುತ್ತಿದೆ. ಸಂಜಯ್ ಪಾತ್ರಕ್ಕೆ ಈ ಚಿತ್ರದಲ್ಲಿ ಹೆಚ್ಚು ಸ್ಕೋಪ್ ಇದೆಯಂತೆ.

ಸಂಜಯ್​ಗೆ ಯಾವುದೇ ಸಿನಿಮಾ ಹಿನ್ನಲೆ ಇಲ್ಲ. ಬಾಲ್ಯದಲ್ಲಿ ಜೂನಿಯರ್ ಉಪೇಂದ್ರ ಪಾತ್ರ ಮಾಡಿದ ನಂತರದಲ್ಲಿ ಅವರಿಗೆ ನಟನೆ ಬಗ್ಗೆ ಆಸಕ್ತಿ ಬೆಳೆಯಿತು. ಈ ಚಿತ್ರ 2020ಕ್ಕೂ ಮೊದಲೇ ಸೆಟ್ಟೇರಬೇಕಿತ್ತು. ಆದರೆ, ಕೊವಿಡ್ ಕಾರಣದಿಂದ ಸಿನಿಮಾ ತಡವಾಗಿದೆ.

ಇದನ್ನೂ ಓದಿ: ಪುನೀತ್ ರಾಜ್​ಕುಮಾರ್ ಹುಟ್ಟುಹಬ್ಬದ ದಿನವೇ ಉಪೇಂದ್ರ-ಸುದೀಪ್​ ನಟನೆಯ ‘ಕಬ್ಜ’ ಸಿನಿಮಾ ರಿಲೀಸ್

ತಂಡದವರು ಕಥೆ ಹೇಳಿದಾಗ ಸಂಜಯ್​ಗೆ ಇಷ್ಟವಾಯಿತು. ಅದನ್ನು ತಕ್ಷಣಕ್ಕೆ ಅವರು ಒಪ್ಪಿಕೊಂಡರು. ಇತ್ತೀಚೆಗೆ ಈ ಚಿತ್ರದ ಸುದ್ದಿಗೋಷ್ಠಿ ನಡೆಯಿತು. ಈ ವೇಳೆ ಮಾತನಾಡಿದ್ದ ಸಂಜಯ್ ಅವರು ಪ್ರೇಮ್​ಗೆ ಧನ್ಯವಾದ ತಿಳಿಸಿದ್ದರು. ‘ಈ ಚಿತ್ರದಲ್ಲಿ ನಟಿಸೋಕೆ ಅವಕಾಶ ಸಿಕ್ಕಿರುವುದು ಲವ್ಲಿ ಸ್ಟಾರ್ ಪ್ರೇಮ್ ಅವರಿಂದ. ಅವರಿಗೂ ಹಾಗೂ ತಬಲಾ ನಾಣಿ ಅವರಿಗೆ ಧ್ಯನ್ಯವಾದ. ಒಂದು ಒಳ್ಳೆಯ ಸಿನಿಮಾ. ಚಿತ್ರದಲ್ಲಿ ಅವಕಾಶ ನೀಡಿದ್ದಕ್ಕೆ ಧನ್ಯವಾದ. ಹೊಸಬರಿಗೆ ಸಹಕಾರ ನೀಡಿ ಪ್ರೋತ್ಸಾಹಿಸಿ’ ಎಂದು ಕೋರಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ