
‘ನಾನು ನಂದಿನಿ’ ಎಂದು ಸಖತ್ ಫೇಮಸ್ ಆದವರು ವಿಕ್ಕಿ ಪೀಡಿಯಾ. ಈ ಹಾಡು ಎಲ್ಲರ ಗಮನ ಸೆಳೆದಿತ್ತು. ಈಗ ಅವರು ಸಂಜಿತ್ ಹೆಗಡೆ (Sanjit Hegde) ಜೊತೆ ಕೊಲ್ಯಾಬರೇಷನ್ ಮಾಡಿಕೊಂಡಿದ್ದಾರೆ. ಈ ಹಾಡು ಸಾಕಷ್ಟು ಗಮನ ಸೆಳೆದಿದೆ. ‘ನೀ ನಂಗೆ ಅಲ್ಲವ..’ ಹಾಡಿಗೆ ಹೊಸ ರೂಪ ಕೊಟ್ಟು ಸಾಂಗ್ನ ರಚಿಸಲಾಗಿದೆ. ಇದು ಅಭಿಮಾನಿಗಳಿಗೆ ಇಷ್ಟ ಆಗಿದೆ. ಈ ವಿಡಿಯೋ ಕೇವಲ 10 ಗಂಟೆಯಲ್ಲಿ ಎರಡೂವರೆ ಲಕ್ಷಕ್ಕೂ ಅಧಿಕ ಲೈಕ್ಸ್ ಪಡೆದುಕೊಂಡಿದೆ.
ಸಂಜಿತ್ ಹೆಗಡೆ ಅವರು ಕನ್ನಡದ ಖ್ಯಾತ ಸಿಂಗರ್. ಅವರ ಧ್ವನಿಯಲ್ಲಿ ಮೂಡಿ ಬಂದ ಅನೇಕ ಹಾಡುಗಳು ಸೂಪರ್ ಹಿಟ್ ಆಗಿವೆ. ಅದರಲ್ಲೂ ‘ನೀ ನಂಗೆ ಅಲ್ಲವ..’ ಹಾಡು ಗಮನ ಸೆಳೆದಿತ್ತು. ಅವರ ಅಭಿಮಾನಿ ಬಳಗ ದೊಡ್ಡದಿದೆ. ಇನ್ನು, ವಿಕ್ಕಿ ಪೀಡಿಯಾ ಕೂಡ ಕಡಿಮೆ ಏನಿಲ್ಲ. ಅವರಿಗೆ ಇನ್ಸ್ಟಾಗ್ರಾಮ್ನಲ್ಲಿ 11 ಲಕ್ಷ ಹಿಂಬಾಲಕರು ಇದ್ದಾರೆ. ಈಗ ಇಬ್ಬರೂ ಸೇರಿರೋದು ವಿಶೇಷ.
‘ನನ್ ಜೊತೆ ಡೇಟ್ಗೆ ಬರ್ತೀಯಾ’ ಎಂದು ಸಂಜಿತ್ ನಂದಿನಿ ಬಳಿ ಕೇಳುತ್ತಾರೆ. ಏಕೆ ಎಂಬ ಪ್ರಶ್ನೆ ಎದುರಿನಿಂದ ಬರುತ್ತದೆ. ‘ನೀ ನಂಗೆ ಅಲ್ಲವಾ..’ ರಾಗದಲ್ಲಿ ನೀ ಸಿಂಗಲ್ ಅಲ್ಲವಾ..’ ಎಂದು ಹಾಡುತ್ತಾರೆ ಸಂಜಿತ್. ಈ ರೀತಿ ಸಾಂಗ್ ಮುಂದುವರಿಯುತ್ತದೆ. ಈ ಹಾಡು ಸಾಕಷ್ಟು ಗಮನ ಸೆಳೆದಿದೆ.
ಈ ಹಾಡು ಮಾಡೋದಕ್ಕೂ ಒಂದು ಕಾರಣ ಇದೆ. ನವೆಂಬರ್ 30ರಂದು ಸಂಜಿತ್ ಹೆಗಡೆ ಕಾನ್ಸರ್ಟ್ ಬೆಂಗಳೂರಿನಲ್ಲಿ ಇದೆ. ಇದರ ಪ್ರಮೋಷನ್ಗೆ ಸಂಜಿತ್ ಅವರು ಈ ರೀತಿ ಮಾಡಿದ್ದಾರೆ. ನಾಗಾವರದ ಮ್ಯಾನ್ಪೋ ಕನ್ವೆನ್ಶನ್ ಸೆಂಟರ್ನಲ್ಲಿ ಈ ಕಾನ್ಸರ್ಟ್ ನಡೆಯಲಿದೆ. ಸಂಜೆ ಆರು ಗಂಟೆಯಿಂದ ಕಾರ್ಯಕ್ರಮ ಆರಂಭ ಆದರೆ, 4 ಗಂಟೆ ಇರಲಿದೆ. 499 ರೂಪಾಯಿಯಿಂದ ಟಿಕೆಟ್ ಆರಂಭವಾಗಿ 5 ಸಾವಿರ ರೂಪಾಯಿವರೆಗೂ ಇದೆ.
ಇದನ್ನೂ ಓದಿ: ಸಂಜಿತ್ ಹೆಗಡೆ-ಸೋನು ನಿಗಮ್ ಸಮ್ಮಿಲನ; ‘ಮಾಯಾವಿ..’ ಹಾಡು ಸಖತ್ ಇಂಪು
ವಿಕ್ಕಿಪೀಡಿಯಾ ಕಂಟೆಂಟ್ಗಳು ಗಮನ ಸೆಳೆಯುವ ರೀತಿಯಲ್ಲಿ ಇರುತ್ತವೆ. ಫನ್ ವಿಡಿಯೋಗಳನ್ನು ಅವರು ಆಗಾಗ ಹಂಚಿಕೊಳ್ಳುತ್ತಾ ಇರುತ್ತಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.