AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಟ ದರ್ಶನ್ 2ನೇ ಬಾರಿ ಜೈಲು ಸೇರಿ ಪರಪ್ಪನ ಅಗ್ರಹಾರದಲ್ಲಿ ಕಳೆಯಿತು 100 ದಿನ

ಕೊಲೆ ಆರೋಪಿಯಾಗಿ ದರ್ಶನ್ ಅವರು ಪರಪ್ಪನ ಅಗ್ರಹಾರ ಜೈಲು‌ ಸೇರಿ ಇಂದಿಗೆ (ನ.26) 105 ದಿನವಾಗಿದೆ. ಈ ಹಿಂದೆ ಅರೆಸ್ಟ್ ಆಗಿದ್ದ ವೇಳೆ ಪರಪ್ಪನ ಅಗ್ರಹಾರ ಮತ್ತು ಬಳ್ಳಾರಿ ಜೈಲು ಒಟ್ಟು ಸೇರಿ 131 ದಿನ ಕಳೆದಿದ್ದರು. ದರ್ಶನ್ ಅವರ ಅನುಪಸ್ಥಿತಿಯಲ್ಲೇ ‘ದಿ ಡೆವಿಲ್’ ಚಿತ್ರತಂಡದವರು ಸಿನಿಮಾದ ಪ್ರಚಾರ ಮಾಡುತ್ತಿದ್ದಾರೆ.

ನಟ ದರ್ಶನ್ 2ನೇ ಬಾರಿ ಜೈಲು ಸೇರಿ ಪರಪ್ಪನ ಅಗ್ರಹಾರದಲ್ಲಿ ಕಳೆಯಿತು 100 ದಿನ
Darshan Thoogudeepa
ರಾಚಪ್ಪಾಜಿ ನಾಯ್ಕ್
| Updated By: ಮದನ್​ ಕುಮಾರ್​|

Updated on: Nov 26, 2025 | 8:40 PM

Share

ಕೊಲೆ ಕೇಸ್​​ನಲ್ಲಿ ಎರಡನೇ ಬಾರಿ ಜೈಲು ಸೇರಿದ ನಟ ದರ್ಶನ್ (Darshan) ಹಲವು ಏಳು ಬೀಳುಗಳ ನಡುವೆ ನೂರು ದಿನ ಜೈಲುವಾಸ ಅನುಭವಿಸಿದ್ದಾರೆ. ಜೈಲು ಸೇರಿದ ಬಳಿಕ ಕನಿಷ್ಠ ಸೌಲಭ್ಯಕ್ಕಾಗಿ ಕಾನೂನು ಹೋರಾಟ ನಡೆಸಿದ್ದ ದರ್ಶನ್, ಬಳಿಕ ನಿಯಾಮಾನುಸಾರ ಸವಲತ್ತು ಪಡೆಯುವಲ್ಲಿ ಸಕ್ಸಸ್ ಕೂಡ ಆಗಿದ್ದರು. ಹಾಗಿದರೆ ದರ್ಶನ್ ಅವರ ನೂರು ದಿನದ ಜೈಲುವಾಸ ಹೇಗಿತ್ತು? ಇಲ್ಲಿದೆ ಮಾಹಿತಿ. ಕೊಲೆ ಕೇಸ್​​ನಲ್ಲಿ ಈ ಮೊದಲು ದರ್ಶನ್ ಪಡೆದಿದ್ದ ಜಾಮೀನು ರದ್ದಾದ ಬಳಿ ಅವರನ್ನು ಪರಪ್ಪನ ಅಗ್ರಹಾರ (Parappana Agrahara) ಜೈಲಿಗೆ ಕಳಿಸಲಾಯಿತು. ಅಲ್ಲಿ ಅವರು ನೂರು ದಿನ ಸೆರೆವಾಸ‌ ಅನುಭವಿಸಿದ್ದಾರೆ.

ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ಆರೋಪಿಯಾಗಿರುವ ನಟ ದರ್ಶನ್ ಎರಡನೇ ಬಾರಿ ಜೈಲು ಬರೋಬ್ಬರಿ 105 ದಿನ ಕಳೆದು ಹೋಗಿದೆ. ಎರಡನೇ ಬಾರಿ ಜೈಲು ಸೇರಿದ ನಂತರ ನಟ ದರ್ಶನ್ ಜೈಲಿನಲ್ಲಿ ಹಲವು ಏಳು ಬೀಳುಗಳನ್ನ ಎದುರಿಸಿದ್ದರು. ಜೊತೆಗೆ ಜೈಲಿನಲ್ಲಿ ಕನಿಷ್ಟ ಸವಲತ್ತುಗಳು ಕೂಡ ಸಿಗ್ತಾ ಇಲ್ಲ ಅಂತಾ ಕಾನೂನು ಹೋರಾಟ ಕೂಡ ನಡೆಸಿದ್ದರು. ಇಷ್ಟೆಲ್ಲ ಸಂಕಷ್ಟಗಳ‌ ನಡುವೆ ದರ್ಶನ್ 105 ದಿನಗಳನ್ನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಕಳೆದಿದ್ದಾರೆ.

ಇದೇ ವರ್ಷದ ಆಗಸ್ಟ್ 14ರಂದು ಸುಪ್ರೀಂಕೋರ್ಟ್ ನಟ ದರ್ಶನ್, ಪವಿತ್ರಾ ಗೌಡ, ಲಕ್ಷ್ಮಣ್, ಪ್ರದೂಷ್, ನಾಗರಾಜ್ ಸೇರಿದಂತೆ ಏಳು ಮಂದಿ ಆರೋಪಿಗಳ ಜಾಮೀನನ್ನ ರದ್ದುಗೊಳಿಸಿತ್ತು. ಬಳಿಕ ಕಾಮಾಕ್ಷಿಪಾಳ್ಯ ಪೊಲೀಸರು ಅದೇ ದಿನ ದರ್ಶನ್ ಸೇರಿ ಏಳು ಮಂದಿಯನ್ನ ಅರೆಸ್ಟ್ ಮಾಡಿ ಕೋರ್ಟ್​ಗೆ ಹಾಜರು ಪಡಿಸಿದ್ದರು. ನ್ಯಾಯಾಲಯ ಎಲ್ಲ ಏಳು ಆರೋಪಿಗಳನ್ನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು.

ಆಗಸ್ಟ್ 14ರಂದು ಎರಡನೇ ಬಾರಿ ಜೈಲು ಸೇರಿದ್ದ ನಟ ದರ್ಶನ್ ಮತ್ತು ಅವರ ಗ್ಯಾಂಗ್ ಸಾಕಷ್ಟು ಏಳು ಬೀಳುಗಳನ್ನ‌ ಅನುಭವಿಸಿದ್ದರು. ಎರಡನೇ ಬಾರಿ ಜೈಲು ಸೇರಿದ ಬಳಿಕ‌ ದರ್ಶನ್ ಅಬರಿಗೆ ಸೂಕ್ತ ವ್ಯವಸ್ಥೆ ನೀಡಲಾಗುತ್ತಿಲ್ಲ ಎಂಬ ಆರೋಪಗಳು ಕೂಡ ಕೇಳಿ ಬಂದಿತ್ತು. ಇದೇ ವಿಚಾರವಾಗಿ ದರ್ಶನ್ ಕೋರ್ಟ್ ಮೊರೆ ಹೋಗಿದ್ದು, ಜೈಲಿನಲ್ಲಿ ಸೂಕ್ತ ಹಾಸಿಗೆ, ಬೆಡ್ ಶೀಟ್, ದಿಂಬು ಕೊಡ್ತಿಲ್ಲ ಅಂತಾ ಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ಜೊತೆಗೆ ವಾಕ್ ಮಾಡಲು ಜಾಗ ಕೊಡ್ತಿಲ್ಲ. ಸೂರ್ಯನ ಬೆಳಕು ಕೂಡ ಬೀಳುತ್ತಿಲ್ಲ. ತಣ್ಣನೆ ವಾತಾವರಣದಿಂದ ಫಂಗಸ್ ಆಗಿದೆ ಅಂತ ಅಳಲು ತೋಡಿಕೊಂಡಿದ್ದರು.

ಇದನ್ನೂ ಓದಿ: ‘ದಿ ಡೆವಿಲ್’ ಗೆಲ್ಲಬೇಕು: ದರ್ಶನ್ ಸಿನಿಮಾಗೆ ಶುಭ ಹಾರೈಸಿದ ಸುಮಲತಾ ಅಂಬರೀಷ್

ಬಳಿಕ ಕೋರ್ಟ್ ವಿಚಾರಣೆ ವೇಳೆ, ‘ಇಲ್ಲಿ ಇರಲು ಆಗುತ್ತಿಲ್ಲ. ವಿಷ ಕೊಟ್ಟು ಬಿಡಿ ಸ್ವಾಮಿ’ ಅಂತ ಕೋರ್ಟ್​ನಲ್ಲಿ ಮನವಿ ಮಾಡಿದ್ದರು. ಬಳಿಕ ಹಾಸಿಗೆ, ಬೆಡ್ ಶೀಟ್ ಸಲುವಾಗಿ ಅರ್ಜಿ ಹಾಕಿ ಕಾನೂನು ಹೋರಾಟ ಕೂಡ ನಡೆಸಲಾಗಿತ್ತು. ಸುಮಾರು ಎರಡು ತಿಂಗಳ ಕಾಲ ಕೋರ್ಟ್ ವಿಚಾರಣೆ‌ ನಡೆಸಿ ಜೈಲಿನ ಮ್ಯಾನ್ಯುಯಲ್ ಪ್ರಕಾರ ಸೂಕ್ತ ಸವಲತ್ತುಗಳನ್ನ ಒದಗಿಸಲು ಆದೇಶಿಸಿತ್ತು. ಅದರೆ ಪುನಃ ಕೋರ್ಟ್ ವಿಚಾರಣೆ ವೇಳೆ ದರ್ಶನ್ ಚಳಿ‌ ಹೆಚ್ಚಾಗಿದೆ ಅಂತಾ ಅಳಲು ವ್ಯಕ್ತಪಡಿಸಿದ್ದಾರೆ. ಚಳಿಗಾಲ ಶುರುವಾಗಿದ್ದು, ಜೈಲಿನಲ್ಲಿ ಚಳಿ ಹೆಚ್ಚಾಗಿದೆ, ಬೆಡ್ ಶೀಟ್ ಕೊಡ್ತಿಲ್ಲ, ನಿದ್ದೆ ಇಲ್ಲದೇ ಕೂರುವಂತಾಗಿದೆ ಅಂತ ದರ್ಶನ್ ದೂರಿದ್ದರು. ಈ ಬಗ್ಗೆ ಗಮನವಹಿಸಿದ ಕೋರ್ಟ್ ಕೂಡಲೇ ಬೆಡ್ ಶೀಟ್ ಕೊಡಲು ಸೂಚಿಸಿತ್ತು. ಇಷ್ಟೆಲ್ಲ ರಾದ್ದಾಂತಗಳ ನಡುವೆ ದರ್ಶನ್ ಜೈಲು ಸೇರಿ ನೂರು ದಿನ ಕಂಪ್ಲೀಟ್ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
ವಿಮಾನ ನಿಲ್ದಾಣದಲ್ಲಿ ಶಾಸ್ತ್ರೀಯ ನೃತ್ಯಕ್ಕೆ ಮನಸೋತ ರಷ್ಯಾ ಅಧ್ಯಕ್ಷ ಪುಟಿನ್
ವಿಮಾನ ನಿಲ್ದಾಣದಲ್ಲಿ ಶಾಸ್ತ್ರೀಯ ನೃತ್ಯಕ್ಕೆ ಮನಸೋತ ರಷ್ಯಾ ಅಧ್ಯಕ್ಷ ಪುಟಿನ್
ಭಾರತಕ್ಕೆ ಬಂದ ಗೆಳೆಯ ಪುಟಿನ್​ಗೆ ಪ್ರಧಾನಿ ಮೋದಿಯ ಅಪ್ಪುಗೆಯ ಸ್ವಾಗತ
ಭಾರತಕ್ಕೆ ಬಂದ ಗೆಳೆಯ ಪುಟಿನ್​ಗೆ ಪ್ರಧಾನಿ ಮೋದಿಯ ಅಪ್ಪುಗೆಯ ಸ್ವಾಗತ
ಧ್ರುವಂತ್ ಮೇಲೆ ಬುಕ್ ಬರೆಯುತ್ತಾರಂತೆ ಗಿಲ್ಲಿ: ಸೀರಿಯಸ್ ಪ್ರಶ್ನೆಗೆ ಕಾಮಿಡಿ
ಧ್ರುವಂತ್ ಮೇಲೆ ಬುಕ್ ಬರೆಯುತ್ತಾರಂತೆ ಗಿಲ್ಲಿ: ಸೀರಿಯಸ್ ಪ್ರಶ್ನೆಗೆ ಕಾಮಿಡಿ