‘ನೀ ನಂಗೆ ಅಲ್ಲವ’ ಹಾಡನ್ನು ಸಂಜಿತ್ ಹಾಡಿದ್ದು ಯಾರಿಗಾಗಿ? ಉತ್ತರಿಸಿದ ಗಾಯಕ

ಸಂಜಿತ್ ಹೆಗಡೆ ಅವರ 'ನಂಗೆ ಅಲ್ಲವ' ಹಾಡು 14 ಮಿಲಿಯನ್ ವೀಕ್ಷಣೆಗಳೊಂದಿಗೆ ಭಾರಿ ಯಶಸ್ಸು ಕಂಡಿದೆ. ಈ ಜನಪ್ರಿಯ ಹಾಡಿನ ಹಿಂದಿನ ರೋಚಕ ಕಥೆಯನ್ನು ಸಂಜಿತ್ ಅವರೇ ಬಹಿರಂಗಪಡಿಸಿದ್ದಾರೆ. ಈ ಹಾಡನ್ನು ಅವರು ಹಿಂದೆ ಪ್ರೀತಿಸುತ್ತಿದ್ದ ಯುವತಿಗಾಗಿ ರಚಿಸಿದ್ದು, ಈಗ ಆಕೆ ಅವರ ಜೊತೆಗಿಲ್ಲ. ಸಂಜಿತ್ ಹೆಗಡೆ ಅವರ ಈ ಭಾವನಾತ್ಮಕ ಹಾಡು ಜನಮನ ಗೆದ್ದಿದೆ.

‘ನೀ ನಂಗೆ ಅಲ್ಲವ’ ಹಾಡನ್ನು ಸಂಜಿತ್ ಹಾಡಿದ್ದು ಯಾರಿಗಾಗಿ? ಉತ್ತರಿಸಿದ ಗಾಯಕ
ಸಂಜಿತ್
Edited By:

Updated on: Dec 24, 2025 | 7:51 AM

 ಸಂಜಿತ್ ಹೆಗಡೆ ಅವರು ಗಾಯನದ ಮೂಲಕ ಸಾಕಷ್ಟು ಜನಪ್ರಿಯತೆ ಗಳಿಸಿದ್ದಾರೆ. ಅವರು ಹೊಸ ಹೊಸ ಹಾಡುಗಳ ಮೂಲಕ ಗಮನ ಸೆಳೆಯುತ್ತಾರೆ. ಇತ್ತೀಚೆಗೆ ಬೆಂಗಳೂರಲ್ಲಿ ನಡೆದ ಅವರ ಕಾನ್ಸರ್ಟ್ಗೆ ಸಾಕಷ್ಟು ಜನರು ಸೇರಿದ್ದರು. ಇದು ಯಶಸ್ಸು ಕಂಡಿತ್ತು. ಇದರ ಕ್ಲಿಪ್​ಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು. ಇದರಲ್ಲಿ ಗಮನ ಸೆಳೆದಿದ್ದು ‘ನಂಗೆ ಅಲ್ಲವ’ ಹಾಡು.

ಸಂಜಿತ್ ಹೆಗಡೆ ಈಗಾಗಲೇ ಸಾಕಷ್ಟು ಹಾಡುಗಳನ್ನು ಹೇಳಿದ್ದಾರೆ. ಆ ಪೈಕಿ ಸಾಕಷ್ಟು ಗಮನ ಸೆಳೆದಿದ್ದು, ‘ನಂಗೆ ಅಲ್ಲವ’ ಹಾಡು. ಅವರು ಯಾವುದೇ ವೇದಿಕೆ ಏರಿದರೂ ಈ ಹಾಡನ್ನು ಹಾಡುವಂತೆ ಕೇಳುತ್ತಾರೆ. ಈ ಹಾಡನ್ನು ಅವರು ಹುಡಗಿ ಒಬ್ಬರಿಗಾಗಿ ಕಂಪೋಸ್ ಮಾಡಿದ್ದರಂತೆ. ಅವರು ಈಗ ಅವರ ಜೊತೆ ಇಲ್ಲ.

ಈ ಹಾಡನ್ನು ಕಂಪೋಸ್ ಮಾಡಿದ್ದು ಸಂಜಿತ್ ಹೆಗಡೆ. ನಾಗಾರ್ಜುನ ಶರ್ಮ ಅವರು ಈ ಹಾಡನ್ನು ಬರೆದಿದ್ದಾರೆ. ಈ ಹಾಡನ್ನು ಯಾರಿಗಾಗಿ ಹೇಳಿದ್ದು ಎಂದು ಸಂಜಿತ್ ಹೆಗಡೆ ಅವರಿಗೆ ಕೇಳಲಾಯಿತು. ಈ ವೇಳೆ ಅವರು ಯಾವುದೇ ಮುಚ್ಚುಮರೆ ಇಲ್ಲದೆ ಉತ್ತರ ನೀಡಿದ್ದರು.

ನಂಗೆ ಅಲ್ಲವಾ ಸಂಜಿತ್ ಯಾರಿಗೆ ಹೇಳುತ್ತಾರೆ’ ಎಂದು ಸಂಜಿತ್​ ಅವರಿಗೆ ಕೇಳಲಾಯಿತು. ‘ನಾನು ಮಾಡುವಾಗ ಒಂದು ಹುಡುಗಿ ಇದ್ದರು. ಈಗ ಅವಳು ನನ್ನಿಂದ ದೂರಾಗಿದ್ದಾಳೆ. ಆ ಟೈಮ್ ಅಲ್ಲಿ ಅವಳಿಗೆ ಹೇಳಿದ್ದು. ಈವಾಗ ಇನ್ನೊಬ್ಬರಿಗೆ ಹೇಳ್ತೀನಿ. ನೀವು ಇನ್ಯಾರಿಗೋ ಹೇಳ್ತೀರಾ’ ಎಂದು ಸಂಜಿತ್ ಹೇಳಿದ್ದಾರೆ.

ಆ ಹುಡುಗಿಯ ಹೆಸರು ಹೇಳೋದು ಬೇಡ. ನಾನು ಆ ವಿಷಯದಲ್ಲಿ ಖಾಸಗಿ ವ್ಯಕ್ತಿ. ಈಗ ಬೇರೆ ಯಾರೋ ಇದಾರೆ’ ಎಂದು ಒಪ್ಪಿಕೊಂಡರು ಸಂಜಿತ್ ಹೆಗಡೆ. ‘ನಂಗೆ ಅಲ್ಲವ’ ಹಾಡು 2024ರ ಜೂನ್​ ಅಲ್ಲಿ ರಿಲೀಸ್ ಆಯಿತು. ಈ ಹಾಡು ಬರೋಬ್ಬರಿ 14 ಮಿಲಿಯನ್ ವೀಕ್ಷಣೆ ಕಂಡಿದೆ. ಜನರು ಸಂಜಿತ್ ಹೆಗಡೆ ಧ್ವನಿಯಲ್ಲಿ ಈ ಹಾಡನ್ನು ಕೇಳಲು ಬಯಸುತ್ತಾರೆ. ಇದು ಆಲ್ಬಂ ಸಾಂಗ್ ಎಂಬುದು ವಿಶೇಷ.

ಇದನ್ನೂ ಓದಿ: ನಂದಿನಿ-ಸಂಜಿತ್ ಹೆಗಡೆ ಕೊಲ್ಯಾಬರೇಷನ್; ಸಖತ್ ಫನ್ ಆಗಿದೆ ಸಾಂಗ್

ಸಂಜಿತ್ ಅವರು ಕನ್ನಡದವರಿಗೆ ಮಾತ್ರವಲ್ಲ, ಪರಭಾಷೆ ಅವರಿಗೂ ಪರಿಚಯ ಇದ್ದಾರೆ. ಅವರು ಪರಭಾಷೆಯಲ್ಲಿ ಹಾಡಿದ ಹಾಡೂ ಕೂಡ ಗಮನ ಸೆಳೆದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.