ಟ್ರೋಲ್ ಮಾಡೋರು ನನ್ನನ್ನ ಫಾಲೋ ಮಾಡಬೇಡಿ.. -ಇನ್​ಸ್ಟಾಗ್ರಾಂ ಲೈವ್​ನಲ್ಲಿ ಸಂಜನಾ ವಾರ್ನಿಂಗ್​

|

Updated on: Jan 24, 2021 | 6:55 PM

ಸ್ಯಾಂಡಲ್​ವುಡ್​ಗೆ ಡ್ರಗ್ಸ್​ ಜಾಲದ ನಂಟು ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ಯ ಜಾಮೀನು ಪಡೆದು ಜೈಲಿನಿಂದ ಹೊರಬಂದಿರುವ ನಟಿ ಸಂಜನಾ ಗಲ್ರಾನಿ ಇಂದು ಮೊದಲನೇ ಬಾರಿ ಸೋಷಿಯಲ್ ಮೀಡಿಯಾದಲ್ಲಿ ಮನಬಿಚ್ಚಿ ಮಾತ್ನಾಡಿದ್ದಾರೆ. ಸುಮಾರು 1 ತಿಂಗಳ ಬಳಿಕ ನಟಿ ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಲೈವ್​ ಆಗಿ ಮಾತ್ನಾಡಿದ್ದಾರೆ.

ಟ್ರೋಲ್ ಮಾಡೋರು ನನ್ನನ್ನ ಫಾಲೋ ಮಾಡಬೇಡಿ.. -ಇನ್​ಸ್ಟಾಗ್ರಾಂ ಲೈವ್​ನಲ್ಲಿ ಸಂಜನಾ ವಾರ್ನಿಂಗ್​
Follow us on

ಬೆಂಗಳೂರು: ಸ್ಯಾಂಡಲ್​ವುಡ್​ಗೆ ಡ್ರಗ್ಸ್​ ಜಾಲದ ನಂಟು ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ಯ ಜಾಮೀನು ಪಡೆದು ಜೈಲಿನಿಂದ ಹೊರಬಂದಿರುವ ನಟಿ ಸಂಜನಾ ಗಲ್ರಾನಿ ಇಂದು ಮೊದಲನೇ ಬಾರಿ ಸೋಷಿಯಲ್ ಮೀಡಿಯಾದಲ್ಲಿ ಮನಬಿಚ್ಚಿ ಮಾತ್ನಾಡಿದ್ದಾರೆ. ಸುಮಾರು 1 ತಿಂಗಳ ಬಳಿಕ ನಟಿ ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಲೈವ್​ ಆಗಿ ಮಾತ್ನಾಡಿದ್ದಾರೆ.

ತುಂಬಾ ಹುಷಾರಿಲ್ಲದ ಕಾರಣ ಈಗ ರೆಸ್ಟ್ ಮಾಡ್ತಿದ್ದೇನೆ. ಒಂದು ತಿಂಗಳ ಬಳಿಕ ಖಂಡಿತ ಎಲ್ಲರ ಮುಂದೆ ಬರ್ತೀನಿ ಎಂದು ಸಂಜನಾ ಲೈವ್​ನಲ್ಲಿ ಹೇಳಿದರು.

ಸದ್ಯ ಚಿತ್ರಕಲೆ ಕಲಿಕೆಯಲ್ಲಿ ಮುಳುಗಿರುವ ನಟಿ ತಾವು ಪೇಂಟಿಂಗ್ ಮಾಡೋದನ್ನ ಲೈವ್ ಮಾಡುತ್ತಾ ಮಾತನಾಡಿದರು. ಜೊತೆಗೆ, ಈಗ ಬೆಂಗಳೂರಿನಲ್ಲೇ ಇರೋದಾಗಿ ಹೇಳಿದ ಸಂಜನಾ ಈ ವೇಳೆ ಟ್ರೋಲ್​ಗಳಿಗೆ ಎಚ್ಚರಿಕೆ ಸಹ ನೀಡಿದರು.

ಟ್ರೋಲ್ ಮಾಡೋರು ನನ್ನನ್ನ ಫಾಲೋ ಮಾಡಬೇಡಿ. ನಾನು ಅನುಭವಿಸಿದ ಸಂಕಟ ನಿಮಗೇನು ಗೊತ್ತು. ಯಾರು ಏನು ಕ್ರೈಂ ಮಾಡಿದ್ದಾರೆ ಅನ್ನೋದಾದ್ರೂ ನಿಮಗೆ ಗೊತ್ತಾ ? ಎಂದು ಪ್ರಶ್ನಿಸುವ ಮೂಲಕ ಟ್ರೋಲ್​ಗಳ ವಿರುದ್ಧ ನಟಿ ಗುಡುಗಿದರು.

ಯಾವುದೇ ಸಂಭಾವನೆ ಪಡೆಯದೆ ಕೃಷಿ ಇಲಾಖೆ ರಾಯಭಾರಿಯಾದ ಚಾಲೆಂಜಿಂಗ್ ಸ್ಟಾರ್ ದರ್ಶನ್

Published On - 6:52 pm, Sun, 24 January 21