ಸಂಕ್ರಾಂತಿಯ ಎರಡು ಸೂಪರ್ ಹಿಟ್ ಚಿತ್ರಗಳು ಒಟಿಟಿಗೆ

OTT Releases: ಸಂಕ್ರಾಂತಿ ಹಬ್ಬಕ್ಕೆ ತೆರೆಕಂಡ ಚಿರಂಜೀವಿ, ಶರ್ವಾನಂದ್, ನವೀನ್ ಪೊಲಿಶೆಟ್ಟಿ ಸಿನಿಮಾಗಳು ಭರ್ಜರಿ ಯಶಸ್ಸು ಕಂಡಿವೆ. 'ಮನ ಶಂಕರ ವರ ಪ್ರಸಾದ ಗಾರು' ಹಾಗೂ 'ನಾರಿ ನಾರಿ ನಡುಮ ಮುರಾರಿ' ಚಿತ್ರಗಳು ಜೀ ಹಾಗೂ ಅಮೆಜಾನ್ ಪ್ರೈಮ್ ಒಟಿಟಿಯಲ್ಲಿ ಶೀಘ್ರದಲ್ಲೇ ಬಿಡುಗಡೆಯಾಗಲಿವೆ.

ಸಂಕ್ರಾಂತಿಯ ಎರಡು ಸೂಪರ್ ಹಿಟ್ ಚಿತ್ರಗಳು ಒಟಿಟಿಗೆ
ಒಟಿಟಿ ಸಿನಿಮಾ

Updated on: Jan 31, 2026 | 1:16 PM

ಸಂಕ್ರಾಂತಿ ಸಂದರ್ಭದಲ್ಲಿ ತೆಲುಗು ಹಾಗೂ ತಮಿಳಿನಲ್ಲಿ ಸಾಕಷ್ಟು ಸಿನಿಮಾಗಳು ರಿಲೀಸ್ ಆಗುತ್ತವೆ. ಈ ವರ್ಷವೂ ಆ ಸಂಪ್ರದಾಯ ಮುಂದುವರಿದಿದೆ. ಚಿರಂಜೀವಿ (Chiranjeevi) ಅವರ ‘ಮನ ಶಂಕರ ವರ ಪ್ರಸಾದ ಗಾರು’, ಶರವಾನಂದ್ ಅವರ ‘ನಾರಿ ನಾರಿ ನಡುಮ ಮುರಾರಿ’ ಹಾಗೂ ನವೀನ್ ಪೊಲಿಶೆಟ್ಟಿ ಅವರ ‘ಅನಗನಗ ಒಕ ರಾಜು’ ಸಿನಿಮಾಗಳು ರಿಲೀಸ್ ಆದವು. ಎಲ್ಲಾ ಸಿನಿಮಾಗಳೂ ಗೆಲುವು ಕಂಡಿವೆ. ಈ ಪೈಕಿ ಎರಡು ಸಿನಿಮಾಗಳು ಒಟಿಟಿಗೆ ಬರುತ್ತಿವೆ.

ಸಿನಿಮಾ ರಿಲೀಸ್ ಆಗಿ ಹಿಟ್ ಆದರೆ ಒಟಿಟಿಗೆ ಬರಲು ಸಮಯ ತೆಗೆದುಕೊಳ್ಳುತ್ತವೆ. ಆದರೆ, ‘ಮನ ಶಂಕರ ವರ ಪ್ರಸಾದ ಗಾರು’ ಹಾಗೂ ‘ನಾರಿ ನಾರಿ ನಡುಮ ಮುರಾರಿ’ ಸಿನಿಮಾಗಳು ರಿಲೀಸ್ ಆದ ಕೆಲವೇ ವಾರಗಳಲ್ಲಿ ಒಟಿಟಿಯಲ್ಲಿ ಪ್ರಸಾರ ಕಾಣುತ್ತಿವೆ ಎಂದು ವರದಿ ಆಗಿದೆ.

‘ನಾರಿ ನಾರಿ ನಡುಮ ಮುರಾರಿ’ ಸಿನಿಮಾ ಐಎಂಡಿಬಿಯಲ್ಲಿ 8.5 ರೇಟಿಂಗ್ ಪಡೆದುಕೊಂಡಿದೆ. ಇದೊಂದು ಪಕ್ಕಾ ಫ್ಯಾಮಿಲಿ ಎಂಟರ್​ಟೇನರ್ ಸಿನಿಮಾ. ಈ ಚಿತ್ರ ಚಿತ್ರಮಂದಿರದಲ್ಲಿ ಹಾಸ್ಯದ ಹೊಳೆಯನ್ನೇ ಹರಿಸಿದೆ. ಇನ್ನು, ‘ಮನ ಶಂಕರ ವರ ಪ್ರಸಾದ ಗಾರು’ ಸಿನಿಮಾ ಕೂಡ ಫ್ಯಾಮಿಲಿ ಎಂಟರ್​​ಟೇನ್​​ಮೆಂಟ್ ಸಿನಿಮಾ. ಹಲವು ವರ್ಷಗಳ ಬಳಿಕ ಚಿರಂಜೀವಿಗೆ ದೊಡ್ಡ ಯಶಸ್ಸು ತಂದುಕೊಟ್ಟ ಸಿನಿಮಾಗಳಿವು.

‘ನಾರಿ ನಾರಿ ನಡುಮ ಮುರಾರಿ’ ಸಿನಿಮಾ ಫೆಬ್ರವರಿ 4ರಂದು ಒಟಿಟಿಗೆ ಕಾಲಿಡುತ್ತಿದೆ. ಅಮೇಜಾನ್ ಪ್ರೈಮ್ ವಿಡಿಯೋ ಮೂಲಕ ಸಿನಿಮಾ ಪ್ರಸಾರ ಆರಂಭಿಸಲಿದ್ದು, ಈ ಬಗ್ಗೆ ಅಧಿಕೃತ ಘೋಷಣೆ ಆಗಿದೆ.

ಇನ್ನು, ‘ಮನ ಶಂಕರ ವರ ಪ್ರಸಾದ ಗಾರು’ ಸಿನಿಮಾ ಫೆಬ್ರವರಿ 11ರಂದು ಜೀ ಒಟಿಟಿ ಮೂಲಕ ಪ್ರಸಾರ ಕಾಣಲಿದೆಯಂತೆ. ಆ ಬಗ್ಗೆ ಇನ್ನಷ್ಟೇ ಅಧಿಕೃತ ಘೋಷಣೆ ಆಗಬೇಕಿದೆ. ಎರಡೂ ಸಿನಿಮಾಗಳು ಒಟಿಟಿಗೆ ಬರುತ್ತಿವುದಕ್ಕೆ ಅಭಿಮಾನಿಗಳು ಕೂಡ ಖುಷಿಪಟ್ಟಿದ್ದಾರೆ.

ಇದನ್ನೂ ಓದಿ: ಕೊನೆಗೂ ಗೆದ್ದ ಚಿರಂಜೀವಿ: ‘ಶಂಕರ ವರ ಪ್ರಸಾದ್’ ಗಳಿಸಿದ್ದೆಷ್ಟು?

‘ಅನಗನಗ ಒಕ ರಾಜು’ ಸಿನಿಮಾ ಕೂಡ ಯಶಸ್ಸು ಕಂಡಿದೆ. ಈ ಚಿತ್ರದ ಒಟಿಟಿ ರಿಲೀಸ್ ದಿನಾಂಕದ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಈ ಚಿತ್ರದ ಒಟಿಟಿ ರಿಲೀಸ್ ಬಗ್ಗೆಯೂ ಅಭಿಮಾನಿಗಳು ನಿರೀಕ್ಷೆಯಿಂದ ಕಾಯುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.