AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹನುಮಂತಗೆ ಲಕ್ಷಲಕ್ಷ ಹಣ, ಪುನೀತ್​​ಗೆ ಪ್ರಾಪರ್ಟಿ ನೀಡಿದ್ದ ಉದ್ಯಮಿ ರಾಯ್

ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ ಸಿಜೆ ರಾಯ್ ಆತ್ಮಹತ್ಯೆ ಬೆಂಗಳೂರಿನಲ್ಲಿ ಸಂಚಲನ ಮೂಡಿಸಿದೆ. ಪದೇ ಪದೇ ಐಟಿ ದಾಳಿಗಳು ಸಾವಿಗೆ ಕಾರಣ ಎಂದು ಶಂಕಿಸಲಾಗಿದ್ದು, ಹಲವು ಅನುಮಾನಗಳು ಮೂಡಿವೆ. ಚಿತ್ರರಂಗದೊಂದಿಗೆ ರಾಯ್ ಆಳವಾದ ನಂಟು ಹೊಂದಿದ್ದರು. ಹನುಮಂತ, ಪುನೀತ್ ರಾಜಕುಮಾರ್ ಅವರಂತಹ ಸೆಲೆಬ್ರಿಟಿಗಳೊಂದಿಗೆ ಅವರ ಸಂಬಂಧದ ಬಗ್ಗೆ ಇಲ್ಲಿದೆ ವಿವರ.

ಹನುಮಂತಗೆ ಲಕ್ಷಲಕ್ಷ ಹಣ, ಪುನೀತ್​​ಗೆ ಪ್ರಾಪರ್ಟಿ ನೀಡಿದ್ದ ಉದ್ಯಮಿ ರಾಯ್
ಹನುಮಂತ-ರಾಯ್-ಪುನೀತ್
ರಾಜೇಶ್ ದುಗ್ಗುಮನೆ
|

Updated on: Jan 31, 2026 | 7:34 AM

Share

ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ ಸಿಜೆ ರಾಯ್ (CJ Roy) ಅವರು ಬೆಂಗಳೂರಿನಲ್ಲಿ ಜನವರಿ 30ರಂದು ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರು ಗನ್​​ನ ಎದೆ ಭಾಗಕ್ಕೆ ಇಟ್ಟುಕೊಂಡು ಶೂಟ್ ಮಾಡಿಕೊಂಡಿದ್ದಾರೆ. ಪದೇ ಪದೇ ಐಟಿ ದಾಳಿ ಆಗುತ್ತಿದ್ದರಿಂದ ಅವರು ಬೇಸತ್ತು ಆತ್ಮಹತ್ಯೆ ಮಾಡಿಕೊಂಡರು ಎಂದು ಹೇಳಲಾಗುತ್ತಾ ಇದೆ. ಸದ್ಯ ಅವರ ಸಾವಿನ ಸುತ್ತ ಸಾಕಷ್ಟು ಅನುಮಾನಗಳು ಇವೆ. ಸಿಜೆ ರಾಯ್ ಅವರಿಗೆ ಚಿತ್ರರಂಗ ಹಾಗೂ ಕಿರುತೆರೆ ಜೊತೆ ಒಳ್ಳೆಯ ನಂಟಿತ್ತು. ಈ ಮೊದಲು ಸಿಜೆ ರಾಯ್ ಅವರು ಹನುಮಂತಗೆ ಲಕ್ಷ ಲಕ್ಷ ಹಣ ನೀಡಿದ್ದರು. ಪುನೀತ್ ವ್ಯಕ್ತಿತ್ವವನ್ನು ಬಹುವಾಗಿ ಇಷ್ಟಪಟ್ಟಿದ್ದರು.

ರಾಯ್ ಅವರು ತಮ್ಮ ಕಾನ್ಫಿಡೆಂಟ್ ಗ್ರೂಪ್ ಮೂಲಕ ಕನ್ನಡ ಹಾಗೂ ಮಲಯಾಳಂ ಸಿನಿಮಾ ನಿರ್ಮಾಣ ಮಾಡಿದ್ದರು. ಅವರು ಕಿರುತೆರೆ ಜೊತೆ ಒಳ್ಳೆಯ ಒಡನಾಟ ಹೊಂದಿದ್ದರು. ಅದರಲ್ಲೂ ಹನುಮಂತ ಮೇಲೆ ವಿಶೇಷ ಪ್ರೀತಿ ಇತ್ತು. ‘ಬಿಗ್ ಬಾಸ್ ಕನ್ನಡ’ ವಿನ್ನರ್​​ಗಳಿಗೆ ರಾಯ್ 50 ಲಕ್ಷ​ ಸ್ಪಾನ್ಸರ್ ಮಾಡುತ್ತಿದ್ದರು. ಬಿಗ್ ಬಾಸ್ ಗೆದ್ದ ಹನುಮಂತಗೆ ರಾಯ್ 50 ಲಕ್ಷ ರೂಪಾಯಿ ನೀಡಿದ್ದರು.

ಹನುಮಂತ ಹಾಗೂ ರಾಯ್ ಪರಿಚಯ ಮೊದಲೇ ಇತ್ತು. ಜೀ ಕನ್ನಡದಲ್ಲಿ ಪ್ರಸಾರ ಕಂಡ ‘ಸರಿಗಮಪ’ ಶೋನಲ್ಲಿ ಹನುಮಂತ ರನ್ನರ್ ಅಪ್ ಆದರು. ಈ ವೇಳೆ ಹನುಮಂತ ಅವರನ್ನು ಬಹುವಾಗಿ ಮೆಚ್ಚಿಕೊಂಡಿದ್ದರು ರಾಯ್. ಆಗಲೂ ಅವರು ಹಣದ ಸಹಾಯ ಮಾಡಿದ್ದರು.

ಇದನ್ನೂ ಓದಿ: ಸಿನಿಮಾ, ಟಿವಿ ಕ್ಷೇತ್ರದೊಟ್ಟಿಗೆ ಜೆಸಿ ರಾಯ್​ ಅವರಿಗಿದ್ದ ಬಂಧ ಎಂಥದ್ದು? ಪುನೀತ್ ಅವರ ಭೇಟಿ ಬಗ್ಗೆಯೂ ರಾಯ್ ಮಾತನಾಡಿದ್ದರು. ‘ಕೋರಮಂಗಲದಲ್ಲಿ ನಾನು ಮಗಳಿಗಾಗಿ ಒಂದು ಪ್ರಾಪರ್ಟಿ ಖರೀದಿ ಮಾಡಿದ್ದೆ. ನಾನು ಅದನ್ನು ಮಾರೋಕೆ ರೆಡಿ ಇದೀನಿ ಅಂತ ಬ್ರೋಕರ್ ಪುನೀತ್​ ಬಳಿ ಹೇಳಿದ್ದರು. ಅವರು ನೇರವಾಗಿ ನನ್ನ ಮನೆಗೆ ಬಂದರು. ಅವರ ವಿನಯತೆ ನೋಡಿ ಮಾರಬೇಕು ಎನಿಸಿತು. ನನಗೆ ಅದನ್ನು ಕೊಡಬೇಕು ಎಂದಿರಲಿಲ್ಲ’ ಎಂದು ‘ಆಲ್​​ರೌಂಡರ್ಸ್’ ಯೂಟ್ಯೂಬ್ ಚಾನೆಲ್​​ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದರು. ‘ಕೆಲವರ ವ್ಯಕ್ತಿತ್ವ ನೋಡಿ ತುಂಬಾನೇ ಇಷ್ಟ ಆಗಿ ಬಿಡುತ್ತದೆ’ ಎಂದು ರಾಯ್ ಅವರು ಹೇಳಿದ್ದರು. ಈ ರೀತಿ ಇಷ್ಟ ಪಟ್ಟವರಲ್ಲಿ ಪುನೀತ್ ಕೂಡ ಒಬ್ಬರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ನಾನ್-ವೆಜ್ ತಿಂದಿದ್ದಕ್ಕೆ ಡಾಲಿ ಧನಂಜಯ ಟ್ರೋಲ್: ಮನೆಯವರ ಪ್ರತಿಕ್ರಿಯೆ ಏನು?
ನಾನ್-ವೆಜ್ ತಿಂದಿದ್ದಕ್ಕೆ ಡಾಲಿ ಧನಂಜಯ ಟ್ರೋಲ್: ಮನೆಯವರ ಪ್ರತಿಕ್ರಿಯೆ ಏನು?
ಹಿಪೊಪೊಟಮಸ್​ಗಳಿಂದ ತುಂಬಿದ ಹೊಳೆಯಲ್ಲಿ ಹೆದರದೆ ನಿಂತ ಆನೆ
ಹಿಪೊಪೊಟಮಸ್​ಗಳಿಂದ ತುಂಬಿದ ಹೊಳೆಯಲ್ಲಿ ಹೆದರದೆ ನಿಂತ ಆನೆ
ಕೊಲ್ಕತ್ತಾ ಅಗ್ನಿ ದುರಂತದ ಮೃತರ ಕುಟುಂಬಕ್ಕೆ 2 ಲಕ್ಷ ಪರಿಹಾರ ಘೋಷಿಸಿದ ಮೋದಿ
ಕೊಲ್ಕತ್ತಾ ಅಗ್ನಿ ದುರಂತದ ಮೃತರ ಕುಟುಂಬಕ್ಕೆ 2 ಲಕ್ಷ ಪರಿಹಾರ ಘೋಷಿಸಿದ ಮೋದಿ
ಹರ್‌ಪ್ರೀತ್ ಮ್ಯಾಜಿಕಲ್ ಎಸೆತಕ್ಕೆ ರಾಹುಲ್ ಕ್ಲೀನ್ ಬೌಲ್ಡ್
ಹರ್‌ಪ್ರೀತ್ ಮ್ಯಾಜಿಕಲ್ ಎಸೆತಕ್ಕೆ ರಾಹುಲ್ ಕ್ಲೀನ್ ಬೌಲ್ಡ್
ಜೊಕೊವಿಕ್- ಅಲ್ಕರಾಜ್ ನಡುವೆ ಆಸ್ಟ್ರೇಲಿಯನ್ ಓಪನ್‌ ಫೈನಲ್​
ಜೊಕೊವಿಕ್- ಅಲ್ಕರಾಜ್ ನಡುವೆ ಆಸ್ಟ್ರೇಲಿಯನ್ ಓಪನ್‌ ಫೈನಲ್​
ಉದ್ಯಮ ಸಾಮ್ರಾಜ್ಯ ಕಟ್ಟಿದ್ದ ಸಿಜೆ ರಾಯ್ ಆತ್ಮಹತ್ಯೆ,ಕಮಿಷನರ್ ಹೇಳಿದ್ದಿಷ್ಟು
ಉದ್ಯಮ ಸಾಮ್ರಾಜ್ಯ ಕಟ್ಟಿದ್ದ ಸಿಜೆ ರಾಯ್ ಆತ್ಮಹತ್ಯೆ,ಕಮಿಷನರ್ ಹೇಳಿದ್ದಿಷ್ಟು
ದಾರಿ ಬಿಡಿ, ದಾರಿ ಬಿಡಿ.. ತವರಿನಲ್ಲಿ ಸಂಜು ಸ್ಯಾಮ್ಸನ್ ಕಾಲೆಳೆದ ಸೂರ್ಯ
ದಾರಿ ಬಿಡಿ, ದಾರಿ ಬಿಡಿ.. ತವರಿನಲ್ಲಿ ಸಂಜು ಸ್ಯಾಮ್ಸನ್ ಕಾಲೆಳೆದ ಸೂರ್ಯ
ಲಂಚ ಪಡೆಯುವಾಗ ತಗ್ಲಾಕೊಂಡ ಇನ್ಸ್​​ಪೆಕ್ಟರ್​​​​​​​ ಕೂಗಾಡಿ ರಂಪಾಟ!
ಲಂಚ ಪಡೆಯುವಾಗ ತಗ್ಲಾಕೊಂಡ ಇನ್ಸ್​​ಪೆಕ್ಟರ್​​​​​​​ ಕೂಗಾಡಿ ರಂಪಾಟ!
ವಿರೋಧದ ನಡುವೆ ಮುಸ್ಲಿಂ ಹುಡ್ಗನ ಮದ್ವೆಯಾಗಿ ಬೀದಿಗೆ ಬಿದ್ದ ಯುವತಿ
ವಿರೋಧದ ನಡುವೆ ಮುಸ್ಲಿಂ ಹುಡ್ಗನ ಮದ್ವೆಯಾಗಿ ಬೀದಿಗೆ ಬಿದ್ದ ಯುವತಿ
ಎಲ್ಲೆಂದರಲ್ಲಿ ಕಸ ಬಿಸಾಡಿದ್ರೇ ಇದೇ ಶಾಸ್ತಿ: ಆಗಿದ್ದೇನು? ವಿಡಿಯೋ ನೋಡಿ
ಎಲ್ಲೆಂದರಲ್ಲಿ ಕಸ ಬಿಸಾಡಿದ್ರೇ ಇದೇ ಶಾಸ್ತಿ: ಆಗಿದ್ದೇನು? ವಿಡಿಯೋ ನೋಡಿ