ರಾಯ್ ನಿಧನಕ್ಕೆ ಸಿಂಗರ್ ಹನುಮಂತ ಸಂತಾಪ: ಕುರಿಗಾಯಿಗೆ ಈ ಕೋಟ್ಯಾಧಿಪತಿ ಹೇಗೆ ಪರಿಚಯ?
ಭಾರತದ ಪ್ರಮುಖ ಉದ್ಯಮಿಗಳಲ್ಲಿ ಒಬ್ಬರಾಗಿರುವ ಕಾನ್ಫಿಡೆಂಟ್ ಗ್ರೂಪ್ ಚೇರ್ಮನ್ ಸಿ.ಜೆ. ರಾಯ್ ಅವರು ಪಿಸ್ತೂಲ್ನಿಂದ ಗನ್‌ನಿಂದ ಶೂಟ್ ಮಾಡಿಕೊಂಡು ಸಾವಿಗೆ ಶರಣಾಗಿದ್ದಾರೆ. ಐಟಿ ದಾಳಿಗೆ ಬೇಸತ್ತು ಬೆಂಗಳೂರಿನ ರಿಚ್ಮಂಡ್ ಸರ್ಕಲ್ ಬಳಿ ಲ್ಯಾಂಡ್ ಫರ್ಡ್ ರಸ್ತೆಯಲ್ಲಿರುವ ತಮ್ಮ ಕಚೇರಿಯಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇನ್ನು ದಿಗ್ಗಜ ಉದ್ಯಮಿ ನಿಧನಕ್ಕೆ ಸಿಂಗರ್ ಹನುಮಂತ ಸಂತಾಪ ಸೂಚಿಸಿದ್ದಾರೆ. ಅರೇ ಇದೇನಿದು ಕೋಟ್ಯಾಧೀಪತಿ ಸಿಜೆ ರಾಯ್ ಹಾಗೂ ಹನುಮಂತನಿಗಿರುವ ನಂಟು ಏನು ಅಂತೀರಾ? ಇಲ್ಲಿದೆ ನೋಡಿ

ಸಾವಿಗೆ ಶರಣಾಗಿರುವ ಉದ್ಯಮಿ ಸಿಜೆ ರಾಯ್ (CJ Roy) ಅವರು ಮನರಂಜನಾ ಕ್ಷೇತ್ರಕ್ಕೂ ಸಹ ತಮ್ಮದೆಯಾದ ಕೊಡುಗೆ ನೀಡಿದ್ದಾರೆ. ಮಲಯಾಳಂ ಸಿನಿಮಾಗಳನ್ನು ನಿರ್ಮಿಸಿದ್ದರು. ಕನ್ನಡ ಬಿಗ್ ಬಾಸ್ ಸೀಸನ್ 11ಕ್ಕೆ 50 ಲಕ್ಷ ರೂಪಾಯಿ ಹಣ ಕೊಟ್ಟಿದ್ದರು, ಸ್ಟಾರ್ ಸುವರ್ಣದ ‘ಸ್ಟಾರ್ ಸಿಂಗರ್’ ರಿಯಾಲಿಟಿ ಶೋದ ಪ್ರಾಯೋಜಕರಲ್ಲಿ ಕೂಡ ಒಬ್ಬರಾಗಿದ್ದರು. ಹೀಗೆ ಮನರಂಜನಾ ಕ್ಷೇತ್ರಕ್ಕೆ ರಾಯ್ ಅವರ ಕೊಡುಗೆ ಇದೆ.ಇನ್ನು ಇವರ ನಿಧನಕ್ಕೆ ಕನ್ನಡ ಬಿಗ್ಬಾಸ್ ಸೀಸನ್ 11ರ ವಿನ್ನರ್ ಹಾಗೂ ಸರಿಗಮಪ ಸೀಸನ್ 15ರ ರನ್ನರ್ ಅಪ್ ಆಗಿರುವ ಕುರಿಗಾಯಿ ಹನುಮಂತ ಸಂತಾಪ ಸೂಚಿಸಿದ್ದಾರೆ.
ಹನುಮಂತು ಸಂತಾಪದ ಪೋಸ್ಟ್
ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿಕೊಂಡಿರುವ ಹನುಮಂತ, ತುಂಬಾ ದುಃಖ್ಖಕರ ಸಂಗತಿ. ಸರಿಗಮಪ ಸೀಸನ್ 15ರಲ್ಲಿ ರನ್ನರ್ ಅಪ್ ಅದ ನನಗೆ ಹಣ ನೀಡಿ ನನ್ನ ಬದುಕಿಗೆ ದಾರಿ ದೀಪಾವಗಿದ್ದರೂ. ಬಿಗ್ ಬಾಸ್ ಸೀಸನ್ 11 ಗೆದ್ದಾಗಲೂ ಸಂಭ್ರಮಿಸಿ ಹಣ ನೀಡಿದ್ದರು . ನೀವು ಮತ್ತು ನಿಮ್ಮ ಋಣ ವನ್ನ ಯಾವತ್ತು ಮರಿಯೋಕೆ ಸಾಧ್ಯವಿಲ್ಲ. ನಿಮ್ಮ ಅಗಲಿಕೆ ಸುದ್ದಿ ಕೇಳಿ ಮನಸ್ಸು ಭಾರವಾಗಿದೆ ಎಂದು ಭಾವುಕವಾಗಿ ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಸಿನಿಮಾ, ಟಿವಿ ಕ್ಷೇತ್ರದೊಟ್ಟಿಗೆ ಜೆಸಿ ರಾಯ್ ಅವರಿಗಿದ್ದ ಬಂಧ ಎಂಥದ್ದು?
ಹನುಮಂತುಗೆ ಹಣ ಸಹಾಯ ಮಾಡಿದ್ದ ರಾಯ್
ಬಿಗ್ ಬಾಸ್ ಕನ್ನಡ 11ನೇ ಆವೃತ್ತಿಯಲ್ಲಿ ಕನ್ನಡಿಗರ ಹೃದಯ ಗೆದ್ದು ಬಿಗ್ ಬಾಸ್ ಚಾಂಪಿಯನ್ ಪಟ್ಟ ಅಲಂಕರಿಸಿದ ಗಾಯಕ ಹನುಮಂತ ಲಮಾಣಿಗೆ ಇದೇ ಕಾನ್ಫಿಡೆಂಟ್ ಗ್ರೂಪ್ ಚೇರ್ಮೆನ್ ಸಿಜೆ ರಾಯ್ 50 ಲಕ್ಷ ರೂಪಾಯಿ ಬಹುಮಾನ ನೀಡಿದ್ದರು. ಬಿಗ್ ಬಾಸ್ ಫಿನಾಲೆ ವೇದಿಕೆಯಲ್ಲಿ ಸಿಜೆ ರಾಯ್ 50 ಲಕ್ಷ ರೂಪಾಯಿ ಬಹುಮಾನದ ಚೆಕ್ ವಿತರಿಸಿದ್ದರು. ಅಲ್ಲದೇ ಸರಿಗಮಪ ಸೀಸನ್ 15ರಲ್ಲಿ ರನರ್ ಅಪ್ ಆಗಿದ್ದಾಗಲೂ ಸಹ ಸಿಜೆ ರಾಯ್ ಅವರು ಹನುಮಂತನಿಗೆ ಹಣದ ಸಹಾಯ ಮಾಡಿದ್ದರು. ಇಷ್ಟೆಲ್ಲಾ ಮಾಡಿದ ಸಿಜೆ ರಾಯ್ ಅವರನ್ನು ಈ ಸಂದರ್ಭದಲ್ಲಿ ಹನುಮಂತ ನೆನಪಿಸಿಕೊಂಡಿದ್ದಾರೆ.
ಜೀ ಕನ್ನಡ ವಾಹಿನಿಯ ‘ಸರಿಗಮಪ’ ಸೀಸನ್ 15ರಲ್ಲಿ ಗಾಯಕನಾಗಿ ಎಂಟ್ರಿ ಕೊಟ್ಟಿದ್ದ ಹನುಮಂತ, ತನ್ನ ಗಾಯನ ಮತ್ತು ಮುಗ್ಧತೆಯಿಂದಲೇ ಫೇಮಸ್ ಆಗಿದ್ದಾರೆ. ಗ್ರಾಮೀಣ ಪ್ರದೇಶ ಜನಪದ ಹಾಡುಗಳನ್ನು ಹಾಡುತ್ತ ಎಲ್ಲರ ಪ್ರೀತಿಯನ್ನು ಗಳಿಸಿ ಜನಮಣ್ಣೆ ಗಳಿಸಿದ್ದಾರೆ. ಹೀಗೆ ಹನುಮಂತಗೆ ಸಾಕಷ್ಟು ಜನಪ್ರಿಯತೆ ಸಿಕ್ಕ ಹಿನ್ನೆಲೆಯಲ್ಲಿ ನಂತರ ಜೀ ಕನ್ನಡದ ಹಲವು ಶೋಗಳಲ್ಲಿ ಅವರು ಕಾಣಿಸಿಕೊಂಡರು. ‘ಡಾನ್ಸ್ ಕರ್ನಾಟಕ ಡಾನ್ಸ್’ ರಿಯಾಲಿಟಿ ಶೋನಲ್ಲಿ ಭಾಗವಹಿಸಿ, ಅಲ್ಲಿಯೂ ಹನುಮಂತ ಉತ್ತಮವಾಗಿ ನೃತ್ಯ ಮಾಡಿ ಗಮನಸೆಳೆದಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
