AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರೀತಿ ಪ್ರೇಮದ ಹೆಸರಲ್ಲಿ ಮುಸ್ಲಿಂ ಧರ್ಮಕ್ಕೆ ಮತಾಂತರ: ಲವ್ ಜಿಹಾದ್​​ಗೆ ಬಲಿಯಾದ ಹಿಂದೂ ಯುವತಿ ರೀಟಾ

ಪ್ರೀತಿಗೆ ಜಾತಿ, ಧರ್ಮ ಇಲ್ಲ ಅನ್ನೊ ಮಾತಿದೆ. ಹೀಗೆ ಪ್ರೀತಿಸಿದ ಯುವಕನಿಗಾಗಿ ಧರ್ಮ ಬಿಟ್ಟು ಬಂದ ಯುವತಿ ಇಂದು ಎರಡು ಮಕ್ಕಳ ಜೊತೆ ನ್ಯಾಯಕ್ಕಾಗಿ ಅಲೆಯುವಂತಾಗಿದೆ. ಹೌದು..ಪ್ರೀತಿ ಹೆಸರಲ್ಲಿ ಹಿಂದೂ ಯುವತಿಯನ್ನು ಮದುವೆಯಾಗಿದ್ದ ಮುಸ್ಲಿಂ ವ್ಯಕ್ತಿ, ಆಕೆಯನ್ನು ಮತಾಂತರ ಮಾಡಿಕೊಂಡು ಕೈಗೆ ಎರಡು ಮಕ್ಕಳು ಕೊಟ್ಟು ಬೇರೆ ಹಾದಿ ಹಿಡಿದಿದ್ದಾನೆ. ಇದು ರೀಟಾ ಆಗಿದ್ದ ಮಹಿಳೆ ಇಂದು ಸಾದಿಯಾ ತಬುಸಮ್ ಆದ ಸ್ಟೋರಿ ಇಲ್ಲಿದೆ.

ಪ್ರೀತಿ ಪ್ರೇಮದ ಹೆಸರಲ್ಲಿ ಮುಸ್ಲಿಂ ಧರ್ಮಕ್ಕೆ ಮತಾಂತರ: ಲವ್ ಜಿಹಾದ್​​ಗೆ ಬಲಿಯಾದ ಹಿಂದೂ ಯುವತಿ ರೀಟಾ
ಸಾದಿಯಾ ತಬುಸಮ್(ರೀಟಾ)-ಫರ್ವೇಜ್
ಪ್ರಜ್ವಲ್​ ಕುಮಾರ್ ಎನ್​ ವೈ
| Edited By: |

Updated on:Jan 30, 2026 | 11:09 PM

Share

ಬೆಂಗಳೂರು, (ಜನವರಿ 30): ಬೆಂಗಳೂರಿನಲ್ಲೊಂದು ಬಲವಂತದ ಮತಾಂತರ (Forced Religious Conversion) ಆರೋಪ ಕೇಳಿಬಂದಿದೆ. ಮುಸ್ಲಿಂ ಯುವಕನೋರ್ವ ಪ್ರೀತಿ ಹೆಸರಿನಲ್ಲಿ ಹಿಂದೂ (Hindu) ಯುವತಿಯನ್ನು ಮದುವೆಯಾಗಿ ಬಳಿಕ ಕೈಕೊಟ್ಟಿರುವ ಘಟನೆ ನಡೆದಿದೆ. ಹೌದು..ಮುಸ್ಲಿಂ (Muslim) ಯುವಕನೋರ್ವ ಪ್ರೀತಿಯ ಹೆಸರಲ್ಲಿ ಹಿಂದೂ ಯುವತಿಯನ್ನ ನಂಬಿಸಿ ಮದುವೆಯಾಗಿದ್ದ. ಇದೀಗ ಆಕೆಯನ್ನು ಮತಾಂತರ ಮಾಡಿ ಕೈಗೆ ಎರಡು ಮಕ್ಕಳು ಕೊಟ್ಟು ಮತ್ತೊಬ್ಬಳನ್ನು ಮದುವೆಯಾಗಿದ್ದು, ಈ ಬಗ್ಗೆ ಪ್ರಶ್ನೆ ಮಾಡಿದರೆ ತಲಾಕ್ ನೀಡುವುದಾಗಿ ಬೆದರಿಕೆ ಹಾಕಿದ್ದು, ಇದರಿಂದ ಕಂಗಾಲಾದ ಮಹಿಳೆ ಬೆಂಗಳೂರು ಪೊಲೀಸ್ ಕಮಿಷನರ್ ಗೆ ದೂರು ನೀಡಿದ್ದಾಳೆ. ಪ್ರೀತಿಯ ಬಲೆಯಲ್ಲಿ ಬೀಳಿಸಿಕೊಂಡು ಮದ್ವೆಯಾಗಿ ಮತಾಂತರಗೊಂಡ ನಂತರ ಕೈಕೊಟ್ಟಿರುವ ಆರೋಪ ಮಾಡಿದ್ದಾಳೆ.

ಕುಟುಂಬಸ್ಥರ ವಿರೋಧದ ನಡುವೆಯೂ ಪ್ರೀತಿಸಿ ಮದ್ವೆ

ದೇವರ ಜೀವನಹಳ್ಳಿಯ ನಿವಾಸಿ ರೀಟಾ, 2015ರಲ್ಲಿ ಖಾಸಗಿ ಕಾಲೇಜಿನಲ್ಲಿ ಪಿಯುಸಿ ಓದುತ್ತಿದ್ದಾಗ ಅದೇ ಡಿಜೆ ಹಳ್ಳಿಯ ಫರ್ವೇಜ್ ಎಂಬಾತನ ಪರಿಚಯವಾಯಿತು. ಫರ್ವೇಜ್ ರೀಟಾಳನ್ನು ಹಿಂದೆ ಬಿದ್ದು ಪ್ರೀತಿಸುವಂತೆ ಒತ್ತಾಯಿಸಿದ್ದ. ಪ್ರೀತಿಸುವಾಗ, ಫರ್ವೇಜ್ ರೀಟಾಳಿಗೆ ತನ್ನ ಧರ್ಮಕ್ಕೆ ಮತಾಂತರಗೊಳಿಸುವುದಿಲ್ಲ ಎಂದು ಭರವಸೆ ನೀಡಿದ್ದ. ಹೀಗೆ ಇಬ್ಬರೂ ಪರಸ್ಪರ ಪ್ರೀತಿ ಮದುವೆ ಮಾಡಿಕೊಳ್ಳಲು ಮುಂದಾಗಿದ್ದರು. ಆದ್ರೆ, ಆರಂಭದಲ್ಲಿ ಫರ್ವೇಜ್ ಮುಸ್ಲಿಂ ಸಮುದಾಯಕ್ಕೆ ಸೇರಿದವನು ಎಂಬ ಕಾರಣಕ್ಕೆ ರೀಟಾ ಮತ್ತು ಆಕೆಯ ಕುಟುಂಬಸ್ಥರು ಮದುವೆಗೆ ವಿರೋಧ ವ್ಯಕ್ತಪಡಿಸಿದ್ದರು. ಹಿಂದೂ-ಮುಸ್ಲಿಂ ವಿವಾಹಗಳು ಹೆಚ್ಚು ಕಾಲ ಉಳಿಯುವುದಿಲ್ಲ ಎಂಬ ಆತಂಕವನ್ನು ಅವರು ವ್ಯಕ್ತಪಡಿಸಿದ್ದರು. ಆದರೆ, ರೀಟಾ ಹಿಂದೂವಾಗಿಯೇ ಇರಬಹುದೆಂದು ಮತ್ತು ಆಕೆಯ ಧರ್ಮವನ್ನು ಬದಲಾಯಿಸುವುದಿಲ್ಲ ಎಂದು ಫರ್ವೇಜ್ ಕುಟುಂಬಸ್ಥರನ್ನು ಒಪ್ಪಿಸಿದ್ದ. ಅದರಂತೆ, 2019ರ ಡಿಸೆಂಬರ್ 15ರಂದು ರೀಟಾ ಮದುವೆಯಾಗಿದ್ದಳು.

ಇದನ್ನೂ ನೋಡಿ: ಬೇಡ ಅಂದ್ರೂ ಮುಸ್ಲಿಂ ಹುಡುಗನ ಮದ್ವೆಯಾದೆ, ಮಕ್ಕಳಾದ್ಮೇಲೆ ಇನ್ನೊಬ್ಬಳನ್ನ ಕಟ್ಟುಕೊಂಡವ್ನೆ

ಬಲವಂತವಾಗಿ ಮುಸ್ಲಿಂ ಧರ್ಮಕ್ಕೆ ಮತಾಂತರ

ಮದುವೆಯಾದ ನಂತರ ಫರ್ವೇಜ್ ತನ್ನ ಅಸಲಿ ಬಣ್ಣವನ್ನು ಬಯಲು ಮಾಡಿದ್ದಾನೆ. ರೀಟಾಳನ್ನು ಮುಸ್ಲಿಂ ಧರ್ಮಕ್ಕೆ ಮತಾಂತರಗೊಳ್ಳುವಂತೆ ಬಲವಂತಪಡಿಸಿದ್ದು, ಇಲ್ಲದಿದ್ದರೆ ತಲಾಖ್ ನೀಡುವುದಾಗಿ ಬೆದರಿಕೆ ಹಾಕಿದ್ದಾನೆ. ಈ ಬೆದರಿಕೆಗಳಿಗೆ ಮಣಿದ ರೀಟಾ ಬಲವಂತವಾಗಿ ಮುಸ್ಲಿಂ ಧರ್ಮಕ್ಕೆ ಮತಾಂತರವಾಗಿದ್ದಾಳೆ. ಆಕೆಯ ಹೆಸರನ್ನು ಕೂಡ ಸಾದಿಯಾ ತಬಸುಮ್ ಎಂದು ಬದಲಾಯಿಸಿದ್ದಾನೆ. ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಆದರೆ, ರೀಟಾ ಸಾದಿಯಾ ತಬಸುಮ್ ಆಗಿ ಮತಾಂತರಗೊಂಡ ತಕ್ಷಣವೇ ಫರ್ವೇಜ್ ಆಕೆಯನ್ನು ಕೈಬಿಟ್ಟಿದ್ದಾನೆ.

ವಿಚ್ಛೇದನ ನೀಡದೆ ಮತ್ತೊಬ್ಬ ಯುವತಿಯನ್ನು ಮದುವೆಯಾಗಿದ್ದಾನೆ ಎಂದು ಆರೋಪಿಸಿ ಪತಿ ವಿರುದ್ಧ ಡಿಜೆ ಹಳ್ಳಿ ಠಾಣೆಗೆ ದೂರು ನೀಡಿದರೂ, ಆತ ಅದನ್ನು ಕ್ಯಾರೆ ಎಂದಿಲ್ಲ. ಹಾಗಾಗಿ, ನ್ಯಾಯಕ್ಕಾಗಿ ಕಣ್ಣೀರು ಹಾಕುತ್ತಿರುವ ಸಾದಿಯಾ ತಬಸುಮ್, ಡಿಜಿಪಿ ಮತ್ತು ಐಜಿಪಿ ಹಾಗೂ ಬೆಂಗಳೂರು ಪೊಲೀಸ್ ಕಮಿಷನರ್‌ಗೆ ದೂರು ನೀಡಿದ್ದು, ತನಗೆ ನ್ಯಾಯ ಒದಗಿಸುವಂತೆ ಮನವಿ ಮಾಡಿಕೊಂಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:54 pm, Fri, 30 January 26

ಕೊಲ್ಕತ್ತಾ ಅಗ್ನಿ ದುರಂತದ ಮೃತರ ಕುಟುಂಬಕ್ಕೆ 2 ಲಕ್ಷ ಪರಿಹಾರ ಘೋಷಿಸಿದ ಮೋದಿ
ಕೊಲ್ಕತ್ತಾ ಅಗ್ನಿ ದುರಂತದ ಮೃತರ ಕುಟುಂಬಕ್ಕೆ 2 ಲಕ್ಷ ಪರಿಹಾರ ಘೋಷಿಸಿದ ಮೋದಿ
ಹರ್‌ಪ್ರೀತ್ ಮ್ಯಾಜಿಕಲ್ ಎಸೆತಕ್ಕೆ ರಾಹುಲ್ ಕ್ಲೀನ್ ಬೌಲ್ಡ್
ಹರ್‌ಪ್ರೀತ್ ಮ್ಯಾಜಿಕಲ್ ಎಸೆತಕ್ಕೆ ರಾಹುಲ್ ಕ್ಲೀನ್ ಬೌಲ್ಡ್
ಜೊಕೊವಿಕ್- ಅಲ್ಕರಾಜ್ ನಡುವೆ ಆಸ್ಟ್ರೇಲಿಯನ್ ಓಪನ್‌ ಫೈನಲ್​
ಜೊಕೊವಿಕ್- ಅಲ್ಕರಾಜ್ ನಡುವೆ ಆಸ್ಟ್ರೇಲಿಯನ್ ಓಪನ್‌ ಫೈನಲ್​
ನಟಿ, ಮಾಜಿ ರಾಜ್ಯಸಭಾ ಸದಸ್ಯೆ ಬಿ ಜಯಶ್ರೀಯ ಸತಾಯಿಸಿದ ಅಧಿಕಾರಿಗಳು
ನಟಿ, ಮಾಜಿ ರಾಜ್ಯಸಭಾ ಸದಸ್ಯೆ ಬಿ ಜಯಶ್ರೀಯ ಸತಾಯಿಸಿದ ಅಧಿಕಾರಿಗಳು
ದಾರಿ ಬಿಡಿ, ದಾರಿ ಬಿಡಿ.. ತವರಿನಲ್ಲಿ ಸಂಜು ಸ್ಯಾಮ್ಸನ್ ಕಾಲೆಳೆದ ಸೂರ್ಯ
ದಾರಿ ಬಿಡಿ, ದಾರಿ ಬಿಡಿ.. ತವರಿನಲ್ಲಿ ಸಂಜು ಸ್ಯಾಮ್ಸನ್ ಕಾಲೆಳೆದ ಸೂರ್ಯ
ಲಂಚ ಪಡೆಯುವಾಗ ತಗ್ಲಾಕೊಂಡ ಇನ್ಸ್​​ಪೆಕ್ಟರ್​​​​​​​ ಕೂಗಾಡಿ ರಂಪಾಟ!
ಲಂಚ ಪಡೆಯುವಾಗ ತಗ್ಲಾಕೊಂಡ ಇನ್ಸ್​​ಪೆಕ್ಟರ್​​​​​​​ ಕೂಗಾಡಿ ರಂಪಾಟ!
ವಿರೋಧದ ನಡುವೆ ಮುಸ್ಲಿಂ ಹುಡ್ಗನ ಮದ್ವೆಯಾಗಿ ಬೀದಿಗೆ ಬಿದ್ದ ಯುವತಿ
ವಿರೋಧದ ನಡುವೆ ಮುಸ್ಲಿಂ ಹುಡ್ಗನ ಮದ್ವೆಯಾಗಿ ಬೀದಿಗೆ ಬಿದ್ದ ಯುವತಿ
ಎಲ್ಲೆಂದರಲ್ಲಿ ಕಸ ಬಿಸಾಡಿದ್ರೇ ಇದೇ ಶಾಸ್ತಿ: ಆಗಿದ್ದೇನು? ವಿಡಿಯೋ ನೋಡಿ
ಎಲ್ಲೆಂದರಲ್ಲಿ ಕಸ ಬಿಸಾಡಿದ್ರೇ ಇದೇ ಶಾಸ್ತಿ: ಆಗಿದ್ದೇನು? ವಿಡಿಯೋ ನೋಡಿ
ಬ್ಯಾಂಕ್​ನಲ್ಲಿ ನಕಲಿ ಚಿನ್ನ ಅಡವಿಟ್ಟು 56 ಲಕ್ಷ ರೂ. ವಂಚನೆ!
ಬ್ಯಾಂಕ್​ನಲ್ಲಿ ನಕಲಿ ಚಿನ್ನ ಅಡವಿಟ್ಟು 56 ಲಕ್ಷ ರೂ. ವಂಚನೆ!
ಹೇಗಿದೆ ನೋಡಿ ‘ಗಿಚ್ಚಿ ಗಿಲಿಗಿಲಿ’ ಜೂನಿಯರ್ ಟೀಂ
ಹೇಗಿದೆ ನೋಡಿ ‘ಗಿಚ್ಚಿ ಗಿಲಿಗಿಲಿ’ ಜೂನಿಯರ್ ಟೀಂ