AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಇದು ಸ್ಪರ್ಧೆ ಅಲ್ಲ, ಸಹಯೋಗ’; ‘ಸಪ್ತಸಾಗರದಾಚೆ ಎಲ್ಲೋ’-‘ಟೋಬಿ’ ಕ್ಲ್ಯಾಶ್ ಬಗ್ಗೆ ಉತ್ತರಿಸಿದ ರಾಜ್​ ಬಿ. ಶೆಟ್ಟಿ

ರಾಜ್ ಬಿ. ಶೆಟ್ಟಿ ಹಾಗೂ ರಕ್ಷಿತ್ ಶೆಟ್ಟಿ ಕರಾವಳಿಯವರು. ಇಬ್ಬರ ನಡುವೆ ಒಳ್ಳೆಯ ಗೆಳೆತನ ಇದೆ. ಹೀಗಿದ್ದರೂ ‘ಟೋಬಿ’ ಹಾಗೂ ‘ಸಪ್ತಸಾಗರದಾಚೆ ಎಲ್ಲೋ’ ಸಿನಿಮಾ ಒಂದು ವಾರದ ಗ್ಯಾಪ್​ನಲ್ಲಿ ರಿಲೀಸ್ ಆಗುತ್ತಿದೆ.

‘ಇದು ಸ್ಪರ್ಧೆ ಅಲ್ಲ, ಸಹಯೋಗ’; ‘ಸಪ್ತಸಾಗರದಾಚೆ ಎಲ್ಲೋ’-‘ಟೋಬಿ’ ಕ್ಲ್ಯಾಶ್ ಬಗ್ಗೆ ಉತ್ತರಿಸಿದ ರಾಜ್​ ಬಿ. ಶೆಟ್ಟಿ
ಟೋಬಿ-ರಕ್ಷಿತ್
ರಾಜೇಶ್ ದುಗ್ಗುಮನೆ
|

Updated on: Jul 03, 2023 | 8:18 AM

Share

‘ಟೋಬಿ’ ಸಿನಿಮಾ (Toby Movie) ಆಗಸ್ಟ್ 25ಕ್ಕೆ ರಿಲೀಸ್ ಆಗುತ್ತಿದೆ. ರಾಜ್​ ಬಿ. ಶೆಟ್ಟಿ ನಟಿಸಿ, ನಿರ್ದೇಶಿಸಿರುವ ಈ ಸಿನಿಮಾದ ಲುಕ್ ಎಲ್ಲರ ಗಮನ ಸೆಳೆದಿದೆ. ಈ ಚಿತ್ರದಲ್ಲಿ ಟಗರು ಕೂಡ ಹೈಲೈಟ್ ಆಗಿದೆ. ಈ ಸಿನಿಮಾ ರಿಲೀಸ್ ಆದ ಒಂದು ವಾರದ ಬಳಿಕ (ಸೆಪ್ಟೆಂಬರ್ 1) ರಕ್ಷಿತ್ ಶೆಟ್ಟಿ (Rakshit Shetty) ನಟನೆಯ ‘ಸಪ್ತಸಾಗರದಾಚೆ ಎಲ್ಲೋ’ ಚಿತ್ರ ತೆರೆಗೆ ಬರುತ್ತಿದೆ. ಬಾಕ್ಸ್ ಆಫೀಸ್​ನಲ್ಲಿ ಈ ಎರಡೂ ಸಿನಿಮಾಗಳು ಕ್ಲ್ಯಾಶ್ ಆಗುತ್ತಿವೆ. ಈ ಬಗ್ಗೆ ರಾಜ್ ಬಿ. ಶೆಟ್ಟಿ ಮಾತನಾಡಿದ್ದಾರೆ. ಇದು ಕ್ಲ್ಯಾಶ್ ಅಲ್ಲ ಎಂದು ಅವರು ಹೇಳಿದ್ದಾರೆ.

ರಾಜ್ ಬಿ. ಶೆಟ್ಟಿ ಹಾಗೂ ರಕ್ಷಿತ್ ಶೆಟ್ಟಿ ಕರಾವಳಿಯವರು. ಇಬ್ಬರ ನಡುವೆ ಒಳ್ಳೆಯ ಗೆಳೆತನ ಇದೆ. ‘777 ಚಾರ್ಲಿ’ ಚಿತ್ರದಲ್ಲಿ ರಕ್ಷಿತ್ ಜೊತೆ ರಾಜ್​ ಬಿ. ಶೆಟ್ಟಿ ನಟಿಸಿದ್ದರು. ಹೀಗಿದ್ದರೂ ‘ಟೋಬಿ’ ಹಾಗೂ ‘ಸಪ್ತಸಾಗರದಾಚೆ ಎಲ್ಲೋ’ ಸಿನಿಮಾ ಒಂದು ವಾರದ ಗ್ಯಾಪ್​ನಲ್ಲಿ ರಿಲೀಸ್ ಆಗುತ್ತಿದೆ. ಈ ವಿಚಾರದ ಕುರಿತು ರಾಜ್​ ಬಿ. ಶೆಟ್ಟಿ ಮಾತನಾಡಿದ್ದಾರೆ.

‘ಒಟ್ಟಿಗೆ ಸಪೋರ್ಟ್​ ಮಾಡೋಣ. ಹೊಡೆದಾಡಿಕೊಂಡು ಯಾಕೆ ಸಿನಿಮಾ ಮಾಡಬೇಕು? ಒಟ್ಟಿಗೆ ಇದ್ದು ಯಾಕೆ ಸಿನಿಮಾ ಮಾಡಬಾರದು? ನಾನು ಸಪ್ತಸಾಗರದಾಚೆ ಎಲ್ಲೋ ಸಿನಿಮಾ ಫ್ಯಾನ್​. ಟೋಬಿ ಹಾಗೂ ಸಪ್ತ ಎರಡೂ ಬೇರೆ ಬೇರೆ ರೀತಿಯ ಸಿನಿಮಾ. ಇದು ಕಾಂಪಿಟೇಷನ್ ಅಲ್ಲ ಸಹಯೋಗ. ಕನ್ನಡ ಸಿನಿಮಾ ನೋಡಲು ಜನರು ಮತ್ತೆ ಥಿಯೇಟರ್​ಗೆ ಬರಬೇಕು ಎನ್ನುವ ಪ್ರಯತ್ನ’ ಎಂಬುದು ರಾಜ್ ಬಿ. ಶೆಟ್ಟಿ ಅಭಿಪ್ರಾಯ.

ಇದನ್ನೂ ಓದಿ: ರಕ್ಷಿತ್-ರಿಷಬ್-ರಾಜ್ ಮೂವರು ಒಂದೇ ಸಿನಿಮಾದಲ್ಲಿ ನಟಿಸುತ್ತಾರಾ? ರಾಜ್ ಬಿ ಶೆಟ್ಟರು ಕೊಟ್ಟರು ಉತ್ತರ

‘ನಾನು ಆಗಸ್ಟ್ 25ಕ್ಕೆ ಬರಬೇಕು ಎಂಬುದನ್ನು ಮೊದಲೇ ನಿರ್ಧರಿಸಿದ್ದೆ. ಅವರ ಲೆಕ್ಕಾಚಾರ ಬೇರೆ ರೀತಿ ಇತ್ತು. ನಾವು ಯಾವಾಗ ಸಿನಿಮಾ ರಿಲೀಸ್ ಮಾಡ್ತೀವಿ ಅನ್ನೋದಕ್ಕೆ ಸಾವಿರಾರು ಕಾರಣ ಇರುತ್ತದೆ. ಎದುರು ಟೀಂನವರು ಅದನ್ನು ಅರ್ಥ ಮಾಡಿಕೊಳ್ಳಲುಸ ಸಾಧ್ಯವೇ ಇಲ್ಲ. ಅವರು ತೆಗೆದುಕೊಂಡ ನಿರ್ಧಾರ ನಮ್ಮ ಘಾಸಿ ಮಾಡಲು ಅಲ್ಲವೇ ಅಲ್ಲ’ ಎಂದಿದ್ದಾರೆ ರಾಜ್ ಬಿ. ಶೆಟ್ಟಿ.

‘ನನ್ನ ಸಿನಿಮಾ ಪೋಸ್ಟರ್​ನ ರಕ್ಷಿತ್ ಶೆಟ್ಟಿ ಶೇರ್ ಮಾಡಿಕೊಳ್ತಾರೆ. ಸಪ್ತಸಾಗರದಾಚೆ ಎಲ್ಲೋ ಚಿತ್ರದ ನಿರ್ದೇಕ ಹೇಮಂತ್ ರಾವ್ ನಮ್ಮನ್ನು ಬೆಂಬಲಿಸುತ್ತಾರೆ. ಹೀಗೇಕೆ? ಇದು ಸಪೋರ್ಟಿಂಗ್ ಸಿಸ್ಟಮ್’ ಎಂದಿದ್ದಾರೆ ರಾಜ್ ಬಿ. ಶೆಟ್ಟಿ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ