‘ನಾನು ಮತ್ತು ಗುಂಡ 2’ ಮೈಸೂರಿನ ಸುತ್ತ ಭರದಿಂದ ಚಿತ್ರೀಕರಣ: ಈ ಬಾರಿಯ ಕತೆಯೇನು?

Nanu Mathu Gunda: 777 ಚಾರ್ಲಿ ಸಿನಿಮಾಕ್ಕೂ ಮುನ್ನ ಶ್ವಾನಪ್ರೇಮದ ಕತೆಯ ಮೂಲಕ ಪ್ರೇಕ್ಷಕರ ಮನಗೆದ್ದಿದ್ದ ನಾನು ಮತ್ತು ಗುಂಡ ಸಿನಿಮಾದ ಎರಡನೇ ಭಾಗದ ಚಿತ್ರೀಕರಣ ಚಾಲ್ತಿಯಲ್ಲಿದೆ.

'ನಾನು ಮತ್ತು ಗುಂಡ 2' ಮೈಸೂರಿನ ಸುತ್ತ ಭರದಿಂದ ಚಿತ್ರೀಕರಣ: ಈ ಬಾರಿಯ ಕತೆಯೇನು?
ನಾನು ಮತ್ತು ಗುಂಡ
Follow us
ಮಂಜುನಾಥ ಸಿ.
|

Updated on: Jul 02, 2023 | 8:20 PM

ಶ್ವಾನಪ್ರೇಮದ ಕುರಿತಾದ ಕತೆಯುಳ್ಳ ‘777 ಚಾರ್ಲಿ‘ (777 Charlie) ಸಿನಿಮಾ ಭಾರಿ ದೊಡ್ಡ ಹಿಟ್ ಆಗಿತ್ತು. ಪ್ಯಾನ್ ಇಂಡಿಯಾ (Pan India) ಸಿನಿಮಾ ಆಗಿ ಬಿಡುಗಡೆ ಆಗಿ ಸೂಪರ್ ಡೂಪರ್ ಹಿಟ್ ಆಗಿತ್ತು. ಶ್ವಾನಪ್ರೇಮದ ಆ ಸಿನಿಮಾ ಶ್ವಾನ ಪ್ರೇಮಿಗಳ ಮನಸ್ಸು ಗೆದ್ದಿತ್ತು. ಆದರೆ ಅದಕ್ಕೂ ಎರಡು ವರ್ಷಗಳ ಮುನ್ನ ಕನ್ನಡದಲ್ಲಿ ಅದೇ ಮಾದರಿಯ ಕತೆಯನ್ನು ಸಿನಿಮಾ ಒಂದು ಬಿಡುಗಡೆ ಆಗಿ ಗಮನ ಸೆಳೆಯಲು ಯಶಸ್ವಿಯಾಗಿತ್ತು ಅದುವೇ ‘ನಾನು ಮತ್ತು ಗುಂಡ‘ (Naau Mathu Gunda). ಆದರೆ ‘777 ಚಾರ್ಲಿ’ ಸಿನಿಮಾದ ಮಾದರಿಯಲ್ಲಿ ದೊಡ್ಡ ಬಜೆಟ್ ಹಾಗೂ ರಕ್ಷಿತ್ ಶೆಟ್ಟಿ ಅಂಥಹಾ ಸ್ಟಾರ್ ಇಲ್ಲದ ಕಾರಣ 777 ಚಾರ್ಲಿಗೆ ಸಿಕ್ಕ ಗೆಲುವು ಆ ಸಿನಿಮಾಕ್ಕೆ ಸಿಕ್ಕಿರಲಿಲ್ಲ. ಆದರೆ ಇದೀಗ ಅದೇ ಸಿನಿಮಾದ ಎರಡನೇ ಭಾಗ ತೆರೆಗೆ ಬರಲು ಸಜ್ಜಾಗಿದೆ. ಈ ಬಾರಿ ಪ್ಯಾನ್ ಇಂಡಿಯಾ ಲೆವೆಲ್​ನಲ್ಲಿ ಸಿನಿಮಾ ಮಾಡಲು ನಿರ್ದೇಶಕರು ಮುಂದಾಗಿದ್ದಾರೆ.

ಪೊಯೆಮ್ ಪಿಕ್ಚರ್ಸ್ ಲಾಂಛನದಲ್ಲಿ ಎರಡು ವರ್ಷಗಳ ಹಿಂದೆ ತೆರೆಕಂಡಿದ್ದ ನಾನು ಮತ್ತು ಗುಂಡ ಚಲನಚಿತ್ರವು ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ನಾಯಕ‌ ಹಾಗೂ ನಾಯಿಯೊಂದರ ನಡುವಿನ ಅವಿನಾಭಾವ ಸಂಬಂಧದ ಕಥೆಯನ್ನು ಹೇಳುವ ಆ ಚಿತ್ರದಲ್ಲಿ ನಟ ಶಿವರಾಜ್ ಕೆ.ಆರ್. ಪೇಟೆ ಮತ್ತು ನಾಯಿಯ ಅದ್ಭುತ ಅಭಿನಯವಿತ್ತು ಜೊತೆಗೆ ಮನಕರಗಿಸುವ ಕತೆ ಇತ್ತು. ಆ ಚಿತ್ರದ ಯಶಸ್ಸಿನ ನಂತರ ನಿರ್ದೇಶಕ ರಘು ಹಾಸನ್ ಈಗ ಅದರ ಮುಂದುವರೆದ ಭಾಗವಾಗಿ “ನಾನು ಮತ್ತು ಗುಂಡ -2” ಎಂಬ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ.

ಕಳೆದ ಬಾರಿ ಕನ್ನಡ ಭಾಷೆ ಮಾತ್ರದಲ್ಲಿಯೇ ‘ನಾನು ಮತ್ತು ಗುಂಡ’ ಸಿನಿಮಾ ಬಿಡುಗಡೆ ಆಗಿತ್ತು. ಆದರೆ ಈ ಬಾರಿ ಕನ್ನಡ, ತೆಲುಗು, ಹಿಂದಿ ಸೇರಿ ಐದು ಭಾಷೆಗಳಲ್ಲಿ ತೆರೆಗೆ ಬರುತ್ತಿರುವ ಈ ಚಿತ್ರದ ಮೊದಲ ಪೋಸ್ಟರ್ ಇದೀಗ ಬಿಡುಗಡೆಯಾಗಿದೆ. ಮೊದಲ ಭಾಗದಲ್ಲಿ ನಾಯಕ ಶಿವರಾಜ್ ಕೆ.ಆರ್.ಪೇಟೆ ಅವರ ಪಾತ್ರ ಮರಣ ಹೊಂದುತ್ತದೆ. ಎರಡನೇ ಭಾಗದಲ್ಲಿ ತನ್ನ ಮಾಲೀಕನನ್ನು ಕಳೆದುಕೊಂಡ ನಾಯಿ ಸಮಾಜದಲ್ಲಿ ಹೇಗೆ ಜೀವನ ನಡೆಸುತ್ತದೆ ಎಂಬುದನ್ನು ಭಾವನಾತ್ಮಕ ಕಥೆಯೊಂದಿಗೆ ಮನರಂಜನಾತ್ಮಕವಾಗಿ ಹೇಳಲಾಗುತ್ತಿದೆ. ಈಗಾಗಲೇ ಮೈಸೂರು ನಗರದ ಸುತ್ತಮುತ್ತ ಚಿತ್ರದ ಚಿತ್ರೀಕರಣ ಭರದಿಂದ ನಡೆಯುತ್ತಿದ್ದು, ಶೇ.50 ರಷ್ಟು ಶೂಟಿಂಗ್ ಮುಕ್ತಾಯಗೊಂಡಿದೆ.

ಇದನ್ನೂ ಓದಿ:‘777 ಚಾರ್ಲಿ’ ಗೆದ್ದ ಖುಷಿಯಲ್ಲಿ ರಕ್ಷಿತ್; ಥೈಲ್ಯಾಂಡ್​​ನಲ್ಲಿ ಟೀಂ ಜೊತೆ ಪಾರ್ಟಿ

ಈ ಮುಂಚೆ ಬಿಡುಗಡೆ ಆಗಿದ್ದ ನಾನು ಮತ್ತು ಗುಂಡ ಸಿನಿಮಾದಲ್ಲಿ ನಟಿಸಿದ್ದ ನಾಯಿ 2022 ರಲ್ಲಿ ನಿಧನ ಹೊಂದಿತ್ತು. ಹಾಗಾಗಿ ನಾನು ಮತ್ತು ಗುಂಡ 2 ಸಿನಿಮಾದಲ್ಲಿ ಅದನ್ನೇ ಹೋಲುವ ಬೇರೆ ನಾಯಿಯನ್ನು ಬಳಸಲಾಗುತ್ತಿದೆ. ಇನ್ನು ಈ ಸಿನಿಮಾದಲ್ಲಿಯೂ ಶಿವರಾಜ್ ಕೆ.ಆರ್. ಪೇಟೆ ಇರಲಿದ್ದಾರೆಯೇ ಎಂಬುದನ್ನು ಕಾದು ನೋಡಬೇಕಿದೆ. ಈ ಚಿತ್ರಕ್ಕೆ ಆರ್.ಪಿ.ಪಟ್ನಾಯಕ್ ಅವರ ಸಂಗೀತ ಸಂಯೋಜನೆ, ರುತ್ವಿಕ್ ಮುರಳೀಧರ್ ಅವರ ಹಿನ್ನೆಲೆ ಸಂಗೀತ, ಕೆ.ಎಂ. ಪ್ರಕಾಶ್ ಅವರ ಸಂಕಲನ, ತನ್ವಿಕ್ ಜಿ. ಅವರ ಛಾಯಾಗ್ರಹಣ, ರೋಹಿತ್ ರಾಮನ್ ಅವರ ಸಂಭಾಷಣೆ, ವಿ.ನಾಗೇಂದ್ರ ಪ್ರಸಾದ್ ಅವರ ಸಾಹಿತ್ಯವಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ