Sign In

By signing in or creating an account, you agree with Associated Broadcasting Company's Terms & Conditions and Privacy Policy.

Ragini Dwivedi: ರಾಗಿಣಿ ದ್ವಿವೇದಿ ನಟನೆಯ ‘ಶೀಲ’ ಚಿತ್ರ ರಿಲೀಸ್​ಗೆ ಸಿದ್ಧ; ಕನ್ನಡ, ಮಲಯಾಳಂನಲ್ಲಿ ಮೂಡಿಬಂದಿದೆ ಸಿನಿಮಾ

Sheela Movie: ‘ಶೀಲ’ ಸಿನಿಮಾದಲ್ಲಿ ಮಹಿಳಾ ಪ್ರಧಾನ ಕಥಾಹಂದರ ಇರಲಿದೆ. ಜುಲೈ ಕೊನೇ ವಾರದಲ್ಲಿ ಈ ಚಿತ್ರವನ್ನು ಬಿಡುಗಡೆ ಮಾಡಲು ತೀರ್ಮಾನಿಸಲಾಗಿದೆ.

Ragini Dwivedi: ರಾಗಿಣಿ ದ್ವಿವೇದಿ ನಟನೆಯ ‘ಶೀಲ’ ಚಿತ್ರ ರಿಲೀಸ್​ಗೆ ಸಿದ್ಧ; ಕನ್ನಡ, ಮಲಯಾಳಂನಲ್ಲಿ ಮೂಡಿಬಂದಿದೆ ಸಿನಿಮಾ
‘ಶೀಲ’ ಸಿನಿಮಾದ ಸುದ್ದಿಗೋಷ್ಠಿ
Follow us
ಮದನ್​ ಕುಮಾರ್​
|

Updated on: Jul 02, 2023 | 4:06 PM

ಸ್ಯಾಂಡಲ್​ವುಡ್​ ಬೆಡಗಿ ರಾಗಿಣಿ ದ್ವಿವೇದಿ (Ragini Dwivedi) ಅವರು ಬೇರೆ ಬೇರೆ ರೀತಿಯ ಸಿನಿಮಾಗಳನ್ನು ಒಪ್ಪಿಕೊಂಡು ನಟಿಸುತ್ತಿದ್ದಾರೆ. ಈವರೆಗೂ ಅನೇಕ ಸಿನಿಮಾಗಳನ್ನು ಮಾಡಿರುವ ಅವರು ಎಲ್ಲ ಬಗೆಯ ಪಾತ್ರಗಳನ್ನು ಮಾಡಿ ಗಮನ ಸೆಳೆದಿದ್ದಾರೆ. ಬರೀ ಗ್ಲಾಮರ್​ ಇರುವಂತಹ ಸಿನಿಮಾಗಳು ಮಾತ್ರವಲ್ಲದೇ ಮಹಿಳಾ ಪ್ರಧಾನ ಕಥಾಹಂದರ ಇರುವ ಚಿತ್ರಗಳನ್ನೂ ರಾಗಿಣಿ ಮಾಡಿದ್ದಾರೆ. ಅವರ ಖಾತೆಗೆ ಈಗ ಇನ್ನೊಂದು ಸಿನಿಮಾ ಸೇರ್ಪಡೆ ಆಗಿದೆ. ಆ ಚಿತ್ರದ ಹೆಸರು ‘ಶೀಲ’. ಈ ಸಿನಿಮಾದಲ್ಲಿ ರಾಗಿಣಿ ಅವರು ಮುಖ್ಯ ಭೂಮಿಕೆ ನಿಭಾಯಿಸಿದ್ದಾರೆ. ಕನ್ನಡ ಮತ್ತು ಮಲಯಾಳಂನಲ್ಲಿ ‘ಶೀಲ’ ಸಿನಿಮಾ (Sheela Movie) ಮೂಡಿಬಂದಿದೆ ಎಂಬುದು ವಿಶೇಷ.

‘ಶೀಲ’ ಸಿನಿಮಾದ ಕೆಲಸಗಳು ಪೂರ್ಣಗೊಂಡಿವೆ. ಆದಷ್ಟು ಬೇಗ ಈ ಸಿನಿಮಾ ಬಿಡುಗಡೆ ಆಗಲಿದೆ. ಜುಲೈ ತಿಂಗಳ ಕೊನೆ ವಾರದಲ್ಲಿ ಸಿನಿಮಾವನ್ನು ತೆರೆ ಕಾಣಿಸಲು ಪ್ಲ್ಯಾನ್​ ಮಾಡಿಕೊಳ್ಳಲಾಗುತ್ತಿದೆ. ಈ ಸಿನಿಮಾ ಏಕಕಾಲದಲ್ಲಿ ಕನ್ನಡ ಹಾಗೂ ಮಲಯಾಳಂನಲ್ಲಿ ನಿರ್ಮಾಣ ಆಗಿದ್ದರೂ ಕೂಡ ಮೊದಲು ಕನ್ನಡದಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ. ಈ ಬಗ್ಗೆ ಮಾಹಿತಿ ಹಂಚಿಕೊಳ್ಳುವ ಸಲುವಾಗಿ ಇತ್ತೀಚೆಗೆ ಸುದ್ದಿಗೋಷ್ಠಿ ನಡೆಸಲಾಯಿತು. ಮೇಕಿಂಗ್ ವಿಡಿಯೋ ಮತ್ತು ಹಾಡನ್ನು ಪ್ರದರ್ಶಿಸುವ ಮೂಲಕ ಸಿನಿಮಾ ಬಗ್ಗೆ ರಾಗಿಣಿ ಮಾಹಿತಿ ನೀಡಿದರು.

ಇದನ್ನೂ ಓದಿ: Ragini Dwivedi: ಹೂವಿನ ಗಿಡಗಳ ಮಧ್ಯ ಕುಳಿತು ಖುಷಿಪಟ್ಟ ರಾಗಿಣಿ ದ್ವಿವೇದಿ; ಫೋಟೋ ವೈರಲ್​

ಮೊದಲೇ ಹೇಳಿದಂತೆ ‘ಶೀಲ’ ಸಿನಿಮಾದಲ್ಲಿ ಮಹಿಳಾ ಪ್ರಧಾನ ಕಥಾಹಂದರ ಇರಲಿದೆ. ಆ ಬಗ್ಗೆ ರಾಗಿಣಿ ದ್ವಿವೇದಿ ಮಾತನಾಡಿದ್ದಾರೆ. ‘ಈಗಿನ ಪರಿಸ್ಥಿತಿಯಲ್ಲಿ ಹೆಣ್ಣುಮಕ್ಕಳು ಪ್ರತಿ ದಿನ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಾರೆ. ಅಂಥ ಸಮಸ್ಯೆಗಳ ಸುತ್ತ ‘ಶೀಲ’ ಸಿನಿಮಾದ ಕಥೆಯನ್ನು ಹೆಣೆಯಲಾಗಿದೆ. ಹೆಣ್ಣೊಬ್ಬಳು ಮನಸ್ಸು ಮಾಡಿದರೆ ತನಗೆ ಎದುರಾಗುವ ಎಲ್ಲ ಸಮಸ್ಯೆಯನ್ನು ಸ್ವತಃ ಹೇಗೆ ಬಗೆಹರಿಸಿಕೊಳ್ಳಬಹುದು‌ ಎಂಬುದನ್ನು ನಾವು ಈ ಸಿನಿಮಾದಲ್ಲಿ ತೋರಿಸಿದ್ದೇವೆ. ಹೆಣ್ಣೆಂದರೆ ಲಕ್ಷ್ಮಿಯ ಸ್ವರೂಪವೂ ಹೌದು. ಅದೇ ರೀತಿ ಕಾಳಿಯ ಸ್ವರೂಪದವಳೂ ಹೌದು’ ಎಂದು ರಾಗಿಣಿ ದ್ವಿವೇದಿ ಹೇಳಿದ್ದಾರೆ.

ಇದನ್ನೂ ಓದಿ:  ‘ಶೀಲ’ ಚಿತ್ರದಲ್ಲಿ ರಾಗಿಣಿ ದ್ವಿವೇದಿ ಲುಕ್​ ಹೇಗಿದೆ ನೋಡಿ..

ಬಾಲು ನಾರಾಯಣನ್ ಆ್ಯಕ್ಷನ್​-ಕಟ್​ ಹೇಳಿರುವ ಈ ಸಿನಿಮಾದಲ್ಲಿ ರಾಗಿಣಿ ದ್ವಿವೇದಿ ಜೊತೆ ಅವಿನಾಶ್, ಚಿತ್ರಾ ಶೆಣೈ, ಶೋಭರಾಜ್, ಶ್ರೀಪತಿ, ರಿಯಾಜ್ ಖಾನ್, ಮಹೇಶ್ ನಾಯರ್, ಆರತಿ ಗೋಪಾಲ್, ಅಬೆ ಡೇವಿಡ್ ಮುಂತಾದವರು ನಟಿಸಿದ್ದಾರೆ. ಮೂಲತಃ ಉದ್ಯಮಿ ಆಗಿರುವ ಡಿ.ಎಂ. ಪಿಳ್ಳೈ ಅವರು ‘ಶೀಲ’ ಸಿನಿಮಾವನ್ನು ನಿರ್ಮಿಸಿದ್ದಾರೆ. ಇದು ಅವರ ಮೊದಲ ನಿರ್ಮಾಣದ ಸಿನಿಮಾ.

ಇದನ್ನೂ ಓದಿ:  Ragini Dwivedi: ನಟಿ ರಾಗಿಣಿ ದ್ವಿವೇದಿಗೆ ಯೋಗ ಬಗ್ಗೆ ಸಖತ್​ ಆಸಕ್ತಿ; ಇಲ್ಲಿದೆ ಮಸ್ತ್​ ಫೋಟೋ ಗ್ಯಾಲರಿ

‘ನಿರ್ದೇಶಕ ಬಾಲು ನಾರಾಯಣನ್ ಅವರು ಉತ್ತಮವಾದ ಕಥೆಯನ್ನು ಆಯ್ಕೆ ಮಾಡಿಕೊಂಡು ಈ ಸಿನಿಮಾ ಮಾಡಿದ್ದಾರೆ. ಕೇರಳ ಮತ್ತು ಬೆಂಗಳೂರಿನಲ್ಲಿ ನಾವು ಚಿತ್ರೀಕರಣ ಮಾಡಿದ್ದೇವೆ. ಮಲಯಾಳಂ ಮತ್ತು ಕನ್ನಡ ಎರಡೂ ಭಾಷೆಗಳಲ್ಲೂ ಶೂಟಿಂಗ್​ ಮಾಡಲಾಗಿದೆ. ಕನ್ನಡದಲ್ಲೇ ಮೊದಲು ಬಿಡುಗಡೆ ಆಗಲಿದೆ’ ಎಂದು ರಾಗಿಣಿ ಅವರು ಮಾಹಿತಿ ಹಂಚಿಕೊಂಡಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಮಾತಿಗೆ ಮಾತು ಬೆಳೆದು ಕಂಡಕ್ಟರ್​-ಪ್ರಯಾಣಿಕರ ನಡುವೆ ಹೊಡೆದಾಟ!
ಮಾತಿಗೆ ಮಾತು ಬೆಳೆದು ಕಂಡಕ್ಟರ್​-ಪ್ರಯಾಣಿಕರ ನಡುವೆ ಹೊಡೆದಾಟ!
ಕುಡಿದ ಯುವಕರಿಂದ ಆಂಧ್ರದ ಮಹಿಳಾ ಪೊಲೀಸ್ ಅಧಿಕಾರಿಯ ಕೂದಲೆಳೆದು ಹಲ್ಲೆ
ಕುಡಿದ ಯುವಕರಿಂದ ಆಂಧ್ರದ ಮಹಿಳಾ ಪೊಲೀಸ್ ಅಧಿಕಾರಿಯ ಕೂದಲೆಳೆದು ಹಲ್ಲೆ
ಕರಾವಳಿ ಜಿಲ್ಲೆಗಳ ಸಮಸ್ಯೆಯನ್ನು ಸದನದ ಗಮನಕ್ಕೆ ತಂದ ಸುನೀಲ ಕುಮಾರ
ಕರಾವಳಿ ಜಿಲ್ಲೆಗಳ ಸಮಸ್ಯೆಯನ್ನು ಸದನದ ಗಮನಕ್ಕೆ ತಂದ ಸುನೀಲ ಕುಮಾರ
ಪಾರ್ಕಿಂಗ್ ವಿಚಾರಕ್ಕೆ ಜಗಳ; ಡಯಾಲಿಸಿಸ್‌ನಲ್ಲಿದ್ದ ವಿಜ್ಞಾನಿ ಸಾವು
ಪಾರ್ಕಿಂಗ್ ವಿಚಾರಕ್ಕೆ ಜಗಳ; ಡಯಾಲಿಸಿಸ್‌ನಲ್ಲಿದ್ದ ವಿಜ್ಞಾನಿ ಸಾವು
ಎಸ್ಸಿಎಸ್ಪಿ-ಟಿಎಸ್ಪಿ ಕಾಯ್ದೆ ಜಾರಿ ಮಾಡಿದ್ದು ಅವರಿಗೆ ಅನೂಕೂಲವಾಗಲು: ಸಚಿವ
ಎಸ್ಸಿಎಸ್ಪಿ-ಟಿಎಸ್ಪಿ ಕಾಯ್ದೆ ಜಾರಿ ಮಾಡಿದ್ದು ಅವರಿಗೆ ಅನೂಕೂಲವಾಗಲು: ಸಚಿವ
ಮಾತು ವಾಪಸ್ ಪಡೆಯುತ್ತೇನೆಂದರೂ ಬಿಡದ ಯತ್ನಾಳ್, ಕೊನೆಗೆ ಕೈಮುಗಿದ ಖಾದರ್​​
ಮಾತು ವಾಪಸ್ ಪಡೆಯುತ್ತೇನೆಂದರೂ ಬಿಡದ ಯತ್ನಾಳ್, ಕೊನೆಗೆ ಕೈಮುಗಿದ ಖಾದರ್​​
ಸಂಘರ್ಷದ ಹಾದಿ ಬೇಡ, ಸಮಾಜಕ್ಕಾಗಿ ಎಲ್ಲರೂ ಒಟ್ಟಾಗಿ ಹೋಗೋಣ: ರೇಣುಕಾಚಾರ್ಯ
ಸಂಘರ್ಷದ ಹಾದಿ ಬೇಡ, ಸಮಾಜಕ್ಕಾಗಿ ಎಲ್ಲರೂ ಒಟ್ಟಾಗಿ ಹೋಗೋಣ: ರೇಣುಕಾಚಾರ್ಯ
ಹೋಳಿ ಬಣ್ಣ ತಾಕದಂತೆ ಜಾಮಾ ಮಸೀದಿ ಮೇಲೆ ಟಾರ್ಪಲ್ ಮುಚ್ಚಿದ ಪೊಲೀಸರು
ಹೋಳಿ ಬಣ್ಣ ತಾಕದಂತೆ ಜಾಮಾ ಮಸೀದಿ ಮೇಲೆ ಟಾರ್ಪಲ್ ಮುಚ್ಚಿದ ಪೊಲೀಸರು
ಅಶ್ವಥ್ ನಾರಾಯಣಗೆ ಹೇಳೋದು ಪೂರ್ತಿ ಕೇಳು ತಮ್ಮಾ ಎಂದ ಸಿದ್ದರಾಮಯ್ಯ
ಅಶ್ವಥ್ ನಾರಾಯಣಗೆ ಹೇಳೋದು ಪೂರ್ತಿ ಕೇಳು ತಮ್ಮಾ ಎಂದ ಸಿದ್ದರಾಮಯ್ಯ
ಲಲಿತ್ ಮಹಲ್​ನಲ್ಲಿ ‘ಡೆವಿಲ್’ ಶೂಟಿಂಗ್, ದರ್ಶನ್ ಭಾಗಿ: ವಿಡಿಯೋ
ಲಲಿತ್ ಮಹಲ್​ನಲ್ಲಿ ‘ಡೆವಿಲ್’ ಶೂಟಿಂಗ್, ದರ್ಶನ್ ಭಾಗಿ: ವಿಡಿಯೋ