ಹೇಮಂತ್ ರಾವ್ ದೀರ್ಘ ಹಾಗೂ ಅಚ್ಚ ಕನ್ನಡದಲ್ಲೇ ಟೈಟಲ್ ನೀಡೋದೇಕೆ? ನಿರ್ದೇಶಕ ಕೊಟ್ಟರು ಉತ್ತರ

|

Updated on: Jul 11, 2024 | 12:52 PM

ಡಿಫರೆಂಟ್​ ಟೈಟಲ್​ಗಳ ಮೂಲಕ ನಿರ್ದೇಶಕ ಹೇಮಂತ್ ಎಂ. ರಾವ್ ಅವರು ಯಾವಾಗಲೂ ಅಚ್ಚರಿ ಮೂಡಿಸುತ್ತಾರೆ. ಹೀಗೇಕೆ ಎನ್ನುವ ಪ್ರಶ್ನೆ ಅನೇಕರಲ್ಲಿ ಇದೆ. ‘ಆಡುಭಾಷೆಗೆ ಹತ್ತಿರವಾದ ಟೈಟಲ್​ಗಳು ನನಗೆ ಇಷ್ಟ’ ಎಂದು ಹೇಮಂತ್ ರಾವ್ ಅವರು ಹೇಳಿದ್ದಾರೆ.

ಹೇಮಂತ್ ರಾವ್ ದೀರ್ಘ ಹಾಗೂ ಅಚ್ಚ ಕನ್ನಡದಲ್ಲೇ ಟೈಟಲ್ ನೀಡೋದೇಕೆ? ನಿರ್ದೇಶಕ ಕೊಟ್ಟರು ಉತ್ತರ
ಹೇಮಂತ್ ರಾವ್ ದೀರ್ಘ ಹಾಗೂ ಅಚ್ಚ ಕನ್ನಡದಲ್ಲೇ ಟೈಟಲ್ ನೀಡೋದೇಕೆ? ನಿರ್ದೇಶಕ ಕೊಟ್ಟರು ಉತ್ತರ
Follow us on

ಹೇಮಂತ್ ರಾವ್ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಭಿನ್ನವಾಗಿ ಗುರುತಿಸಿಕೊಂಡಿದ್ದಾರೆ. ಅವರ ನಿರ್ದೇಶನದ ‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’, ‘ಕವಲುದಾರಿ’, ‘ಸಪ್ತ ಸಾಗರದಾಚೆ ಎಲ್ಲೋ ಸೈಡ್ ಎ ಹಾಗೂ ಬಿ’ ಚಿತ್ರಗಳು ಗಮನ ಸೆಳೆದವು. ಈಗ ಅವರು ‘ಭೈರವನ ಕೊನೆ ಪಾಠ’ ಚಿತ್ರ ಘೋಷಣೆ ಮಾಡಿದ್ದಾರೆ. ಈ ಸಿನಿಮಾದಲ್ಲಿ ಶಿವರಾಜ್​ಕುಮಾರ್ ನಟಿಸುತ್ತಿದ್ದಾರೆ. ಹೇಮಂತ್ ಅವರ ಸಿನಿಮಾಗಳ ಟೈಟಲ್ ಏಕೆ ದೀರ್ಘವಾಗಿರುತ್ತದೆ ಮತ್ತ ಅಚ್ಚ ಕನ್ನಡದಲ್ಲಿ ಇರುತ್ತದೆ ಎನ್ನುವ ಪ್ರಶ್ನೆ ಅನೇಕರದ್ದು. ಇದಕ್ಕೆ ಸ್ವತಃ ಅವರೇ ಉತ್ತರ ನೀಡಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ಸಿನಿಮಾಗೆ ಒಂದು ಶಬ್ದ ಅಥವಾ ಎರಡು ಶಬ್ದಗಳಲ್ಲಿ ಟೈಟಲ್ ನೀಡಲಾಗುತ್ತಿದೆ. ಪ್ಯಾನ್ ಇಂಡಿಯಾ ಸಿನಿಮಾ ಆದರೆ ಆ ಚಿತ್ರಗಳಿಗೆ ಇಂಗ್ಲಿಷ್​ನಲ್ಲಿ ಟೈಟಲ್ ನೀಡಲಾಗುತ್ತದೆ. ಆದರೆ, ಹೇಮಂತ್ ರಾವ್ ಅವರು ಭಿನ್ನ. ಅಚ್ಚ ಕನ್ನಡದಲ್ಲಿ ಅವರು ಟೈಟಲ್ ನೀಡುತ್ತಾರೆ. ಅಲ್ಲದೆ ಈ ಶೀರ್ಷಿಕೆಗಳು ದೀರ್ಘವಾಗಿಯೂ ಇರುತ್ತವೆ. ಈ ಬಗ್ಗೆ ಅವರು ಮಾತನಾಡಿದ್ದಾರೆ.

ಹೇಮಂತ್ ರಾವ್ ನಿರ್ದೇಶನದ ಸಿನಿಮಾಗಳಿಗೆ ಉದ್ದುದ್ದ ಟೈಟಲ್ ಇರುತ್ತದೆ. ಹೀಗೇಕೆ ಎನ್ನುವ ಪ್ರಶ್ನೆ ಅನೇಕರಲ್ಲಿ ಇದೆ. ಇದಕ್ಕೆ ಅವರು ಉತ್ತರ ನೀಡಿದ್ದಾರೆ. ‘ಕನ್ನಡ ಸಿನಿಮಾ ಇತಿಹಾಸ ತೆಗೆದುಕೊಂಡಾಗ ಅಣ್ಣಾವ್ರಾಗಲಿ, ಅಂಬರೀಷ್ ಅವರಾಗಲಿ ಅವರ ಸಿನಿಮಾಗಳಿಗೆ ಒಳ್ಳೆಯ ಟೈಟಲ್​ಗಳನ್ನು ಇಡುತ್ತಿದ್ದರು. ನಮ್ಮ ತನವನ್ನು ಯಾಕೆ ಬಿಟ್ಟುಕೊಡಬೇಕು? ಕಥೆ ಒಳಗಿನ ಅಂಶವನ್ನು ಪ್ರತಿನಿಧಿಸುವ ರೀತಿಯಲ್ಲಿ ಟೈಟಲ್ ಇಡುತ್ತೇನೆ ಅಷ್ಟೆ. ಸಿನಿಮಾದಲ್ಲಿ ಏನಿದು ಎಂಬುದನ್ನು ಟೈಟಲ್ ಅಲ್ಲಿ ಹೇಳುತ್ತೇನೆ’ ಎಂದಿದ್ದಾರೆ ಅವರು.

‘ಹೋಟೆಲ್ ಹೊರ ಭಾಗದಲ್ಲಿ ಬಿಸಿ ಊಟ ಸಿಗುತ್ತದೆ ಎನ್ನುವ ಬೋರ್ಡ್ ಇರುತ್ತದೆ. ಅದೇ ನಿರೀಕ್ಷೆಯಲ್ಲಿ ಜನರು ಹೋಟೆಲ್​ಗೆ ಹೋಗುತ್ತಾರೆ. ಸಿನಿಮಾದ ಟೈಟಲ್ ಕೂಡ ಹೋಟೆಲ್ ಬೋರ್ಡ್ ಇದ್ದ ರೀತಿಯೇ. ಆ ಯೋಚನೆಯಲ್ಲಿ ಟೈಟಲ್ ಆಯ್ಕೆ ಮಾಡುತ್ತೇನೆ’ ಎಂದಿದ್ದಾರೆ ಹೇಮಂತ್ ರಾವ್.

ಇದನ್ನೂ ಓದಿ: ಶಿವಣ್ಣ-ಹೇಮಂತ್​ ರಾವ್ ಕಾಂಬಿನೇಷನ್​ನ ಹೊಸ ಸಿನಿಮಾಗೆ ‘ಭೈರವನ ಕೊನೆ ಪಾಠ’ ಶೀರ್ಷಿಕೆ

‘ಭೈರವನ ಕೊನೆ ಪಾಠ’ ಚಿತ್ರದ ಕಥೆ 12-13ನೇ ಶತಮಾನದಲ್ಲಿ ನಡೆಯಲಿದೆ. ರಾಜನಾಗಿ ಶಿವಣ್ಣ ಕಾಣಿಸಿಕೊಳ್ಳುತ್ತಾರಾ ಎನ್ನುವ ಪ್ರಶ್ನೆ ಮೂಡಿದೆ. ಈ ಸಿನಿಮಾದಲ್ಲಿ ಪರಭಾಷೆಯ ಹೀರೋಗಳು ಕೂಡ ನಟಿಸುತ್ತಿದ್ದಾರೆ. ಈ ಸಿನಿಮಾ ವರ್ಷಾಂತ್ಯಕ್ಕೆ ಸೆಟ್ಟೇರಲಿದೆ. ಶಿವರಾಜ್​ಕುಮಾರ್ ಜನ್ಮದಿನ ಸಮೀಪಿಸುತ್ತಿರುವಾಗ ‘ಭೈರವನ ಕೊನೆ ಪಾಠ’ ಚಿತ್ರದ ಪೋಸ್ಟರ್ ರಿಲೀಸ್ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.