ಕುಡಿದ ನಶೆಯಲ್ಲಿ ಗಿಲ್ಲಿ ಬಿಗ್ ಬಾಸ್ ಗೆಲ್ಲಲ್ಲ ಎಂದಿದ್ದೆ ಅಷ್ಟೇ; ಸ್ಪಷ್ಟನೆ ಕೊಟ್ಟ ಸತೀಶ್

ಡಾಗ್ ಬ್ರೀಡರ್ ಸತೀಶ್ ಕ್ಯಾಡಾಬಾಮ್, ಗಿಲ್ಲಿ ಬಗ್ಗೆ ತಾನು ನೀಡಿದ್ದ ಹೇಳಿಕೆಗೆ ಸ್ಪಷ್ಟನೆ ನೀಡಿದ್ದಾರೆ. 'ಗಿಲ್ಲಿ ಗೆಲ್ಲಲ್ಲ' ಎಂದು ಕುಡಿದ ನಶೆಯಲ್ಲಿ ಹೇಳಿದ್ದೇ ಹೊರತು, ಅದು ಭವಿಷ್ಯವಲ್ಲ ಎಂದಿದ್ದಾರೆ. ಬಿಗ್ ಬಾಸ್‌ನಲ್ಲಿ ಗಿಲ್ಲಿಯಿಂದ ತನಗೆ ಹಿಂಸೆಯಾಗಿತ್ತು ಎಂದು ಆರೋಪಿಸಿದ್ದ ಸತೀಶ್, ಈಗ ಅಭಿಮಾನಿಗಳ ಬೆದರಿಕೆಗಳನ್ನು ಎದುರಿಸುತ್ತಿದ್ದಾರೆ.

ಕುಡಿದ ನಶೆಯಲ್ಲಿ ಗಿಲ್ಲಿ ಬಿಗ್ ಬಾಸ್ ಗೆಲ್ಲಲ್ಲ ಎಂದಿದ್ದೆ ಅಷ್ಟೇ; ಸ್ಪಷ್ಟನೆ ಕೊಟ್ಟ ಸತೀಶ್
ಸತೀಶ್-ಗಿಲ್ಲಿ

Updated on: Jan 28, 2026 | 7:36 AM

ಡಾಗ್ ಬ್ರೀಡರ್ ಸತೀಶ್ (Satish) ಕ್ಯಾಡಬಾಮ್ ಅವರು ಹೋದಲ್ಲಿ ಬಂದಲ್ಲಿ ಮಾಧ್ಯಮಗಳ ಎದುರು ಮಾತನಾಡುತ್ತಿದ್ದಾರೆ. ಯೂಟ್ಯೂಬ್ ಚಾನೆಲ್ ಇರಲಿ, ಟಿವಿ ಮಾಧ್ಯಮ ಇರಲಿ ಅವರು ಸಂದರ್ಶನ ನೀಡುತ್ತಿದ್ದಾರೆ. ಈಗ ಅವರು ಒಂದು ವಿಷಯಕ್ಕೆ ಸ್ಪಷ್ಟನೆ ಕೊಟ್ಟಿದ್ದಾರೆ. ‘ಗಿಲ್ಲಿ ಗೆಲ್ಲಲ್ಲ ಎಂದು ಕುಡಿದ ನಶೆಯಲ್ಲಿ ಹೇಳಿದ್ದು ಅಷ್ಟೇ’ ಎಂದು ಸತೀಶ್ ಅವರು ಹೇಳಿಕೆ ನೀಡಿದ್ದಾರೆ.

ಗಿಲ್ಲಿ ಗೆಲ್ಲಲ್ಲ ಎಂದು ಸತೀಶ್ ಅವರು ಮೊದಲಿನಿಂದಲೂ ಹೇಳುತ್ತಾ ಬರುತ್ತಿದ್ದರು. ‘ಗಿಲ್ಲಿ ಕೊಳಕ, ಬಿಗ್ ಬಾಸ್ ಮನೆಯಲ್ಲಿ ನನಗೆ ತುಂಬಾನೇ ಚಿತ್ರ ಹಿಂಸೆ ಕೊಟ್ಟಿದ್ದ’ ಎಂದೆಲ್ಲ ಸತೀಶ್ ಹೇಳಿಕೊಂಡಿದ್ದರು. ಪಾರ್ಟಿ ಒಂದರಲ್ಲಿ ಮಾತನಾಡಿದ್ದ ಸತೀಶ್, ‘ಗಿಲ್ಲಿ ಹೊರಗೆ ಬಂದಾಯ್ತು. ನಾನೇ ಹೊರಕ್ಕೆ ತಂದಿದ್ದು’ ಎಂದೆಲ್ಲ ಏನೇನೋ ಹೇಳಿಕೆ ಕೊಟ್ಟಿದ್ದರು. ಈಗ ಹೋದಲ್ಲಿ ಬಂದಲ್ಲಿ ಇದೇ ಪ್ರಶ್ನೆ ಎದುರಾಗುತ್ತಿದೆ. ಇದಕ್ಕೆ ಅವರು ಸ್ಪಷ್ಟನೆ ಕೊಟ್ಟಿದ್ದಾರೆ.

‘ಗಿಲ್ಲಿ ಗೆಲ್ಲಲ್ಲ ಎಂದು ನಾನು ಹೇಳಿದ್ದೆ ನಿಜ. ಆದರೆ, ಅದು ಸತ್ಯವಾಗಿಲ್ಲ. ನಾನೇನು ಭವಿಷ್ಯ ಹೇಳುವ ಜ್ಯೋತಿಷಿನಾ? ನಾನು ಸಾಮಾನ್ಯ ಮನುಷ್ಯ. ಜ್ಯೋತಿಷಿಗಳು ಹೇಳಿದ ಮಾತೇ ಸುಳ್ಳಾಗಿದೆ. ಹೀಗಿರುವಾಗ ನನ್ನದು ಯಾವ ಲೆಕ್ಕ? ನಾನು ಕುಡಿದ ನಶೆಯಲ್ಲಿ ಹಾಗೆ ಹೇಳಿದ್ದೇನೆ ಅಷ್ಟೇ’ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ: ‘ನೀವು ದರ್ಶನ್ ಸಿನಿಮಾದಲ್ಲಿ ಕಪ್ಪೇ ಇದ್ರಲ್ಲ ಸರ್’; ಸತೀಶ್ ಶಾಕ್

ಸತೀಶ್​​ಗೆ ಹೋದಲ್ಲಿ ಬಂದಲ್ಲಿ ಇದೇ ವಿಷಯ ಕೇಳುತ್ತಿರುವುದಕ್ಕೆ ಅವರಿಗೆ ಇರಿಟೇಷನ್ ಆಗುತ್ತಿದೆ. ಅವರು ಈ ವಿಷಯದಲ್ಲಿ ಸ್ಪಷ್ಟನೆ ಕೊಡುವ ಕೆಲಸ ಮಾಡುತ್ತಿದ್ದಾರೆ. ಇನ್ನು, ಗಿಲ್ಲಿ ಅಭಿಮಾನಿಗಳು ಅವರಿಗೆ ಹಾಗೂ ಅವರ ತಾಯಿ ಮೊಬೈಲ್​​ಗೆ ಕರೆ ಮಾಡಿ ಬೆದರಿಕೆ ಹಾಕುತ್ತಿದ್ದಾರಂತೆ. ಈ ಪ್ರಕರಣದಲ್ಲಿ ಕೇಸ್ ಮಾಡಿ ಕೆಲವರನ್ನು ಅರೆಸ್ಟ್ ಮಾಡಿಸಿರೋದಾಗಿ ಸತೀಶ್ ಹೇಳಿಕೊಂಡಿದ್ದಾರೆ. ಸತೀಶ್ ಅವರು ಹೇಳುವ ಬಹುತೇಕ ವಿಷಯಗಳು ಸುಳ್ಳು ಎಂದೇ ಎಲ್ಲರಿಗೂ ಅನಿಸುತ್ತಿದೆ. ಅವರ ಹೇಳಿಕೆಗಳು ಸಾಕಷ್ಟು ಟ್ರೋಲ್ ಆಗುತ್ತವೆ. ಅವರು ನಿಜ ಹೇಳಿದರೂ ಯಾರೂ ನಂಬೋದಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.