AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಿಲ್ಲಿ ಮೊದಲ ಬಾರಿ ವೇದಿಕೆ ಏರಿದಾಗ ಏನಾಗಿತ್ತು? ನಂತರ ಗಿಲ್ಲಿ ಮಾಡಿದ್ದೇನು?

Gilli Nata: ಬಿಗ್​​ಬಾಸ್ ಕನ್ನಡ 12 ಗೆದ್ದ ಬಳಿಕ ಗಿಲ್ಲಿ ಸೆಲೆಬ್ರಿಟಿ ಆಗಿದ್ದಾರೆ. ಗಿಲ್ಲಿ ವೇದಿಕೆ ಏರಿದರೆ ಜನ ಚಪ್ಪಾಳೆ, ಶಿಳ್ಳೆ ಹೊಡೆಯುತ್ತಿದ್ದಾರೆ. ಆದರೆ ಗಿಲ್ಲಿ ಮೊದಲ ಬಾರಿಗೆ ವೇದಿಕೆ ಏರಿದಾಗ ಏನಾಗಿತ್ತು ಗೊತ್ತೆ? ಗಿಲ್ಲಿಯ ಗೆಳೆಯರು, ಗಿಲ್ಲಿಗೆ ಆರಂಭದಲ್ಲಿ ಅವಕಾಶಗಳನ್ನು ನೀಡಿದ ಗುರು ಅವರು ಈ ಬಗ್ಗೆ ಟಿವಿ9 ಜೊತೆಗೆ ಮಾತನಾಡಿದ್ದಾರೆ.

ಗಿಲ್ಲಿ ಮೊದಲ ಬಾರಿ ವೇದಿಕೆ ಏರಿದಾಗ ಏನಾಗಿತ್ತು? ನಂತರ ಗಿಲ್ಲಿ ಮಾಡಿದ್ದೇನು?
Gilli Nata
ಮಂಜುನಾಥ ಸಿ.
|

Updated on:Jan 27, 2026 | 5:17 PM

Share

ಗಿಲ್ಲಿ ನಟ (Gilli Nata), ಪ್ರಸ್ತುತ ರಾಜ್ಯದಾದ್ಯಂತ ಹೆಚ್ಚು ಪ್ರಚಲಿತದಲ್ಲಿರುವ ಹೆಸರು. ಬಿಗ್​​ಬಾಸ್ ವಿನ್ನರ್ ಆಗಿರುವ ಗಿಲ್ಲಿಗೆ ರಾಜ್ಯದ ಜನ ಭರಪೂರ ಪ್ರೀತಿ ಕೊಡುತ್ತಿದ್ದಾರೆ. ಗಿಲ್ಲಿ ಹೋದಲ್ಲೆಲ್ಲ ಜನ ಸಾಗರವೇ ಸೇರುತ್ತಿದೆ. ಬಿಗ್​​ಬಾಸ್ ಮನೆಯಲ್ಲಿದ್ದಾಗ ಗಿಲ್ಲಿ ತಮ್ಮ ಹಾಸ್ಯ, ತಮ್ಮ ಮ್ಯಾನರಿಸಂ ಇನ್ನಿತರೆಗಳಿಂದ ಗಮನ ಸೆಳೆದಿದ್ದಾರೆ. ಈಗ ಗಿಲ್ಲಿ ಸೆಲೆಬ್ರಿಟಿ. ಗಿಲ್ಲಿ ವೇದಿಕೆ ಏರಿದರೆ ಜನ ಚಪ್ಪಾಳೆ, ಶಿಳ್ಳೆ ಹೊಡೆಯುತ್ತಿದ್ದಾರೆ. ಆದರೆ ಗಿಲ್ಲಿ ಮೊದಲ ಬಾರಿಗೆ ವೇದಿಕೆ ಏರಿದಾಗ ಏನಾಗಿತ್ತು ಗೊತ್ತೆ? ಗಿಲ್ಲಿಯ ಗೆಳೆಯರು, ಗಿಲ್ಲಿಗೆ ಆರಂಭದಲ್ಲಿ ಅವಕಾಶಗಳನ್ನು ನೀಡಿದ ಗುರು ಅವರು ಈ ಬಗ್ಗೆ ಟಿವಿ9 ಜೊತೆಗೆ ಮಾತನಾಡಿದ್ದಾರೆ.

ಗುರು ಅವರು ಬೇರೆ ಬೇರೆ ಜಿಲ್ಲೆಗಳಲ್ಲಿ ವೇದಿಕೆ ಕಾರ್ಯಕ್ರಮಗಳನ್ನು ನಡೆಸುತ್ತಾರೆ. ಗಿಲ್ಲಿಯ ಯೂಟ್ಯೂಬ್ ವಿಡಿಯೋಗಳನ್ನು ನೋಡಿ ಗುರು ಅವರು ಗಿಲ್ಲಿಗೆ ಕರೆ ಮಾಡಿ ವೇದಿಕೆ ಕಾರ್ಯಕ್ರಮ ನೀಡಲು ಕರೆದರಂತೆ. ಈ ಬಗ್ಗೆ ಸ್ವತಃ ಗಿಲ್ಲಿ ಸಹ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಆದರೆ ಗಿಲ್ಲಿ ಮೊದಲ ಬಾರಿಗೆ ವೇದಿಕೆ ಏರಿದಾಗ ಬಹಳ ಭಯಗೊಂಡಿದ್ದರಂತೆ. ಬಹಳ ನರ್ವಸ್ ಆಗಿದ್ದರಂತೆ. ಗಿಲ್ಲಿಗೆ ಕೇವಲ ಐದು ನಿಮಿಷ ಸಹ ವೇದಿಕೆ ಮೇಲೆ ನಿಲ್ಲಲು ಆಗಿರಲಿಲ್ಲವಂತೆ.

ಗಿಲ್ಲಿ ಮೊದಲ ಬಾರಿಗೆ ತನ್ನ ಯೂಟ್ಯೂಬ್ ವಿಡಿಯೋದ ವೇಷದಲ್ಲಿಯೇ ವೇದಿಕೆ ಏರಿದ್ದರಂತೆ. ಭಯದಲ್ಲಿಯೇ ಮೊದಲ ಐದು ನಿಮಿಷ ಅದೂ ಇದೂ ತಮಾಷೆ ಡೈಲಾಗ್​​ಗಳನ್ನು ಹೇಳಿದ ಗಿಲ್ಲಿ, ನವರ್ಸ್​​ ಆಗಿ ವೇದಿಕೆ ಇಳಿದು ಬಿಟ್ಟರಂತೆ. ಆಗ ಗುರು ಅವರು ನೀವು ಕನಿಷ್ಟ 30 ನಿಮಿಷವಾದರೂ ಜನರನ್ನು ಎಂಗೇಜಿಂಗ್ ಆಗಿ ಇಡಬೇಕು, ಜನರನ್ನು ನಗಿಸಬೇಕು ಎಂದರಂತೆ. ಆ ಬಳಿಕ ಗಿಲ್ಲಿ, ಅದಕ್ಕಾಗಿ ತಯಾರಿ ಮಾಡಲು ಆರಂಭಿಸಿದರಂತೆ.

ಇದನ್ನೂ ಓದಿ:ಗಿಲ್ಲಿ ನಟನಿಗೆ ಬಿಗ್ ಬಾಸ್​ನಿಂದ ಕಾರು ಸಿಗೋದು ಯಾವಾಗ? ಕೊನೆಗೂ ಸಿಕ್ತು ಉತ್ತರ

ಗುರು ಹೇಳುವಂತೆ, ಗಿಲ್ಲಿಗೆ ಯಾರಾದರೂ ಒಬ್ಬರು ಎದುರಿಗೆ ಇರಬೇಕು, ಇನ್ನೊಬ್ಬರು ಮಾತನಾಡಿಸುತ್ತಿದ್ದರೆ ಗಿಲ್ಲಿ ಬೇಕಾದರೆ ಮೂರು ನಾಲ್ಕು ಗಂಟೆ ಮಾತನಾಡುತ್ತಾರೆ, ನಗಿಸುತ್ತಾರೆ ಆದರೆ ಒಬ್ಬರಿಗೇ ಮಾಡುವುದು ಅವರಿಗೆ ಕಷ್ಟ. ನಮ್ಮೊಂದಿಗೆ ಹಲವು ಜಿಲ್ಲೆಗಳಲ್ಲಿ ಶೋಗಳನ್ನು ಮಾಡಿದ್ದಾರೆ. ನಮ್ಮೊಟ್ಟಿಗೆ ಇದ್ದಾಗಲೂ ಸಹ ಬೇರೆ ಭಾಷೆಗಳ ಕಾಮಿಡಿ ವಿಡಿಯೋಗಳನ್ನು ನೋಡುವುದು ಅವುಗಳಿಂದ ಕಲಿಯುವುದು ಮಾಡುತ್ತಲೇ ಇರುತ್ತಿದ್ದರು. ಮೊಬೈಲ್​​ನಲ್ಲಿ ಸದಾ ಕಾಮಿಡಿ ವಿಡಿಯೋಗಳನ್ನು ನೋಡುತ್ತಾ ಪಂಚ್, ಡೈಲಾಗ್ ಡೆಲಿವರಿಗಳನ್ನು ಕಲಿಯುತ್ತಿದ್ದರು ಎಂದು ನೆನಪಿಸಿಕೊಂಡಿದ್ದಾರೆ ಗುರು.

ನಮ್ಮೊಟ್ಟಿಗೆ ಹಲವು ಜಿಲ್ಲೆಗಳಲ್ಲಿ ಗಿಲ್ಲಿ ಸುತ್ತಿದ್ದಾರೆ. ನಮಗಾಗಿ ಹಲವು ಶೋಗಳನ್ನು ಮಾಡಿದ್ದಾರೆ. ಬಹಳ ಒಳ್ಳೆಯ ವ್ಯಕ್ತಿ, ಸಂಭಾವಿತ. ‘ಭರ್ಜರಿ ಬ್ಯಾಚುಲರ್’ ಬಳಿಕ ಗಿಲ್ಲಿ ಮತ್ತು ಗಗನಾ ಅವರನ್ನು ಹಲವಾರು ಶೋಗಳಿಗೆ ನಾವು ಕರೆದುಕೊಂಡು ಹೋಗಿದ್ದೇವೆ. ಅವರಿಬ್ಬರ ಕೆಮಿಸ್ಟ್ರಿ ಚೆನ್ನಾಗಿತ್ತು. ಆದರೆ ಹೋದಲ್ಲೆಲ್ಲ ಇವರನ್ನು ಜೋಡಿಗಳಂತೆ ಬಿಂಬಿಸಲು ಪ್ರಾರಂಭಿಸಿದರು. ಅದು ಗಗನಾ ಅವರ ಮನೆಯವರಿಗೆ ಹಿಡಿಸಲಿಲ್ಲ. ಮಾತ್ರವಲ್ಲದೆ ಇದೇ ವಿಷಯಕ್ಕೆ ಇಬ್ಬರಿಗೂ ಸಣ್ಣ ಈಗೋ ಕ್ಲ್ಯಾಷ್ ಸಹ ಆಯ್ತು ಅನಿಸುತ್ತದೆ’ ಎಂದಿದ್ದಾರೆ ಗುರು.

ಗುರು ಅವರು ಗಿಲ್ಲಿ ಮತ್ತು ಗಗನಾ ಅವರನ್ನು ಹಾಕಿಕೊಂಡು ಸಿನಿಮಾ ಮಾಡುವ ಆಲೋಚನೆಯನ್ನೂ ಹೊಂದಿದ್ದರಂತೆ. ಆದರೆ ಆಗ ಆಗಿರಲಿಲ್ಲವಂತೆ. ಈಗ ಕಾವ್ಯಾ ಮತ್ತು ಗಿಲ್ಲಿಯನ್ನು ಹಾಕಿಕೊಂಡು ಸಿನಿಮಾ ಮಾಡುವ ಯೋಜನೆ ಮಾಡುತ್ತಿದ್ದೇವೆ ಎಂದು ಸಹ ಹೇಳಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:54 pm, Tue, 27 January 26

ಅರೆಸ್ಟ್​ ಆದ್ರೂ ಖುಷಿ ಖುಷಿಯಲ್ಲಿರುವ ರಾಜೀವ್ ಗೌಡ ಹೇಳಿದ್ದೇನು?
ಅರೆಸ್ಟ್​ ಆದ್ರೂ ಖುಷಿ ಖುಷಿಯಲ್ಲಿರುವ ರಾಜೀವ್ ಗೌಡ ಹೇಳಿದ್ದೇನು?
ಏಮ್ಸ್ ಆಸ್ಪತ್ರೆ ಲಿಫ್ಟ್‌ನಲ್ಲಿ ಸರಗಳ್ಳತನ
ಏಮ್ಸ್ ಆಸ್ಪತ್ರೆ ಲಿಫ್ಟ್‌ನಲ್ಲಿ ಸರಗಳ್ಳತನ
ರಾಜೀವ್​ ಗೌಡನಿಗೆ ಆಶ್ರಯ ನೀಡಿದ್ದ ಉದ್ಯಮಿ ಯಾರು? ಸಿಕ್ಕಿಬಿದ್ದಿದ್ದು ಹೇಗೆ?
ರಾಜೀವ್​ ಗೌಡನಿಗೆ ಆಶ್ರಯ ನೀಡಿದ್ದ ಉದ್ಯಮಿ ಯಾರು? ಸಿಕ್ಕಿಬಿದ್ದಿದ್ದು ಹೇಗೆ?
ಕತ್ತರಿಸಿದ ನಂತರವೂ ಸಾಯದೆ ಚಡಪಡಿಸುತ್ತಿರುವ ಮೀನು! ವಿಡಿಯೋ ನೋಡಿ
ಕತ್ತರಿಸಿದ ನಂತರವೂ ಸಾಯದೆ ಚಡಪಡಿಸುತ್ತಿರುವ ಮೀನು! ವಿಡಿಯೋ ನೋಡಿ
ರಾಜೀವ್ ಗೌಡನಿಗೆ ಆಶ್ರಯ ನೀಡಿದ್ದ ಬಹುಕೋಟಿ ಒಡೆಯ ಸಹ ಅರೆಸ್ಟ್
ರಾಜೀವ್ ಗೌಡನಿಗೆ ಆಶ್ರಯ ನೀಡಿದ್ದ ಬಹುಕೋಟಿ ಒಡೆಯ ಸಹ ಅರೆಸ್ಟ್
ಸಂಚಾರ ನಿಯಮ ಉಲ್ಲಂಘಿಸುವವರಿಗೆ ಬಿಗ್​​ ಶಾಕ್​​: ಜಾರಿಗೆ ಬಂದಿದೆ ಹೊಸ ನಿಯಮ
ಸಂಚಾರ ನಿಯಮ ಉಲ್ಲಂಘಿಸುವವರಿಗೆ ಬಿಗ್​​ ಶಾಕ್​​: ಜಾರಿಗೆ ಬಂದಿದೆ ಹೊಸ ನಿಯಮ
ಬೆಟಗೇರಿಯ ನಿಗೂಢ ಗವಿಯಲ್ಲೂ ಇದ್ಯಂತೆ ನಿಧಿ! ಸಂಪತ್ತಿಗಿದ್ಯಾ ಸರ್ಪಗಾವಲು?
ಬೆಟಗೇರಿಯ ನಿಗೂಢ ಗವಿಯಲ್ಲೂ ಇದ್ಯಂತೆ ನಿಧಿ! ಸಂಪತ್ತಿಗಿದ್ಯಾ ಸರ್ಪಗಾವಲು?
ಪತ್ನಿ ಎಲ್ಲಿದ್ದರೂ ಪತಿಗೆ ಗೊತ್ತಾಗ್ತಿತ್ತು ಲೊಕೇಷನ್!
ಪತ್ನಿ ಎಲ್ಲಿದ್ದರೂ ಪತಿಗೆ ಗೊತ್ತಾಗ್ತಿತ್ತು ಲೊಕೇಷನ್!
ಬಿಗ್ ಬಾಸ್​ನಿಂದ ಹೊರಬಂದ ಬಳಿಕ ಧ್ರುವಂತ್ ಸಂಪರ್ಕಿಸಿಯೇ ಇಲ್ಲ; ಮಲ್ಲಮ್ಮ
ಬಿಗ್ ಬಾಸ್​ನಿಂದ ಹೊರಬಂದ ಬಳಿಕ ಧ್ರುವಂತ್ ಸಂಪರ್ಕಿಸಿಯೇ ಇಲ್ಲ; ಮಲ್ಲಮ್ಮ
ಸ್ವಂತ ದುಡಿಮೆಯಲ್ಲಿ ಕಾರು ಖರೀದಿಸಿದ ಮಂಗಳೂರಿನ ವಿಶೇಷ ಚೇತನ ಯುವಕ!
ಸ್ವಂತ ದುಡಿಮೆಯಲ್ಲಿ ಕಾರು ಖರೀದಿಸಿದ ಮಂಗಳೂರಿನ ವಿಶೇಷ ಚೇತನ ಯುವಕ!