Shiva Rajkumar: ‘ಭಜರಂಗಿ 2’ ಚಿತ್ರದಲ್ಲಿ ಸರ್ಪ್ರೈಸ್ ನೀಡುವ ಪಾತ್ರ ಪರಿಚಯಿಸಿದ ಚಿತ್ರತಂಡ; ಯಾವ ಪಾತ್ರ? ಇಲ್ಲಿದೆ ಮಾಹಿತಿ

Bhajarangi 2: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ‘ಭಜರಂಗಿ 2’ ಚಿತ್ರ ಅಕ್ಟೋಬರ್ 29ರಂದು ತೆರೆಗೆ ಬರಲಿದೆ. ಅಭಿಮಾನಿಗಳು ಅದರ ಸಂತಸದಲ್ಲಿರುವಾಗಲೇ ಚಿತ್ರತಂಡ ಅಚ್ಚರಿಯ ಮಾಹಿತಿಯೊಂದನ್ನು ನೀಡಿದೆ.

Shiva Rajkumar: ‘ಭಜರಂಗಿ 2’ ಚಿತ್ರದಲ್ಲಿ ಸರ್ಪ್ರೈಸ್ ನೀಡುವ ಪಾತ್ರ ಪರಿಚಯಿಸಿದ ಚಿತ್ರತಂಡ; ಯಾವ ಪಾತ್ರ? ಇಲ್ಲಿದೆ ಮಾಹಿತಿ
‘ಭಜರಂಗಿ 2’ ಚಿತ್ರದ ಒಂದು ಪೋಸ್ಟರ್
Edited By:

Updated on: Sep 30, 2021 | 6:42 PM

ಸ್ಯಾಂಡಲ್​ವುಡ್​ನಲ್ಲಿ ಅಕ್ಟೋಬರ್​ ತಿಂಗಳಿನಲ್ಲಿ ಸ್ಟಾರ್ ನಟರ ಹಲವು ಚಿತ್ರಗಳು ಬಿಡುಗಡೆಯಾಗಲಿವೆ. ಈಗಾಗಲೇ ಚಿತ್ರತಂಡಗಳು ಭರ್ಜರಿ ಪ್ರಚಾರವನ್ನೂ ಆರಂಭಿಸಿವೆ. ಅಕ್ಟೋಬರ್ 14ರಂದು ಕಿಚ್ಚ ಸುದೀಪ್ ಅಭಿನಯದ ‘ಕೋಟಿಗೊಬ್ಬ 3’ ಹಾಗೂ ದುನಿಯಾ ವಿಜಯ್ ಅಭಿನಯದ ‘ಸಲಗ’ ಚಿತ್ರಗಳು ಬಿಡುಗಡೆಯಾಗಲಿವೆ. ಅಕ್ಟೋಬರ್ 29ರಂದು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಬಹುನಿರೀಕ್ಷಿತ ‘ಭಜರಂಗಿ 2’ ಬಿಡುಗಡೆಯಾಗಲಿದೆ. ಇತ್ತೀಚೆಗಷ್ಟೇ ನಟಿ ಶೃತಿ ಅವರ ಪಾತ್ರದ ಪರಿಚಯವನ್ನು ಚಿತ್ರತಂಡ ಮಾಡಿತ್ತು. ಇದೀಗ ಚಂದನವನದ ಪ್ರತಿಭಾವಂತ ನಟ ಲೋಕಿ ಅವರ ಪಾತ್ರದ ಪರಿಚಯವನ್ನು ಚಿತ್ರತಂಡ ಮಾಡಿದ್ದು, ಅಭಿಮಾನಿಗಳು ಫಿದಾ ಆಗಿದ್ದಾರೆ.

ಈಗಾಗಲೇ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಅದರಲ್ಲಿ ಲೋಕಿ ಅವರು ಹೊಸ ಗೆಟಪ್​ನಲ್ಲಿ ಕಾಣಿಸಿಕೊಂಡಿದ್ದನ್ನು ಅಭಿಮಾನಿಗಳು ಗುರುತಿಸಿದ್ದರು. ಆದರೆ ಪಾತ್ರದ ಹೆಸರು ಸೇರಿದಂತೆ ಇತರ ಅಂಶ ರಿವೀಲ್ ಆಗಿರಲಿಲ್ಲ. ಇದೀಗ ಚಿತ್ರತಂಡ ಅಧಿಕೃತವಾಗಿ ಲೋಕಿ ಅವರ ಪಾತ್ರದ ಪರಿಚಯವನ್ನು ಮಾಡಿದ್ದು, ಅಚ್ಚರಿಯ ಮಾಹಿತಿಯನ್ನು ನೀಡಿದೆ. ಚಿತ್ರದಲ್ಲಿ ಸೌರವ್ ಲೋಕೇಶ್ ಅವರದ್ದು ಭಿನ್ನ ಮಾದರಿಯ ಪಾತ್ರವಾಗಿದ್ದು, ಚಿತ್ರತಂಡ ದೊಡ್ಡತೆರೆಯ ಮೇಲೆ ಈ ಪಾತ್ರ ನೀಡುವ ಸರ್ಪ್ರೈಸ್​ ಅನ್ನು ಕಣ್ತುಂಬಿಕೊಳ್ಳಿ ಎಂದು ಬರೆದಿದೆ. ಇದರಿಂದಾಗಿ ಲೋಕಿ ಅವರ ಪಾತ್ರ ಹಾಗೂ ಚಿತ್ರದ ಕುರಿತಂತೆ ನಿರೀಕ್ಷೆಗಳು ಗರಿಗೆದರಿವೆ.

ಜಯಣ್ಣ ಫಿಲ್ಮ್ಸ್ ಹಂಚಿಕೊಂಡ ಟ್ವೀಟ್ ಇಲ್ಲಿದೆ:

ಚಿತ್ರದ ಟೀಸರ್ ಇಲ್ಲಿದೆ:

ಭಜರಂಗಿ 2 ಚಿತ್ರದಲ್ಲಿ ಶಿವರಾಜ್ ಕುಮಾರ್​ಗೆ ಜೋಡಿಯಾಗಿ ಭಾವನಾ ಮೆನನ್ ನಟಿಸಿದ್ದಾರೆ. ಇದರೊಂದಿಗೆ ಚಿತ್ರದ ತಾರಾ ಬಳಗ ದೊಡ್ಡದಿದೆ. ಅರ್ಜುನ್ ಜನ್ಯಾ ಸಂಗೀತ ಸಂಯೋಜಿಸಿದ್ದು, ಎ.ಹರ್ಷಾ ನಿರ್ದೇಶಿಸಿದ್ದಾರೆ. ಜಯಣ್ಣ ಕಂಬೈನ್ಸ್​ ಬ್ಯಾನರ್​ನಲ್ಲಿ ‘ಭಜರಂಗಿ 2’ ನಿರ್ಮಾಣ ಆಗಿದೆ. ಅ.1ರಿಂದ ಚಿತ್ರಮಂದಿರಗಳಲ್ಲಿ ಹೌಸ್​ಫುಲ್​ ಪ್ರದರ್ಶನಕ್ಕೆ ಸರ್ಕಾರ ಅನುಮತಿ ನೀಡಿದೆ. ಈ ಹಿನ್ನೆಲೆಯಲ್ಲಿ ಬಹುನಿರೀಕ್ಷಿತ ಸ್ಟಾರ್​ ಸಿನಿಮಾಗಳೆಲ್ಲ ಸಾಲು ಸಾಲಾಗಿ ಬಿಡುಗಡೆ ಆಗಲಿವೆ.

ಇದನ್ನೂ ಓದಿ:

Bhajarangi 2: ರಿಲೀಸ್​ ದಿನಾಂಕ​ ಘೋಷಣೆ ಮಾಡಿ ಟ್ವಿಟರ್​ನಲ್ಲಿ ಟ್ರೆಂಡ್​ ಆದ ‘ಭಜರಂಗಿ 2’; ಇದು ಶಿವಣ್ಣನ ಹವಾ

ವಿವಾಹಿತ ಕಿರುತೆರೆ ನಟಿಗೆ ‘ಆರ್​​ ಯು ಎ ವರ್ಜಿನ್?’ ಎಂದು ಕೇಳಿದ ಫ್ಯಾನ್​; ಎಲ್ಲರ ಎದುರು ಮಾನ ಕಳೆದ ಹೀರೋಯಿನ್

ಬಿಗ್ ಬಾಸ್ 15ರಲ್ಲಿ ಭಾಗವಹಿಸಲು ರಿಯಾಗೆ ವಾರಕ್ಕೆ ₹ 35 ಲಕ್ಷದ ಬಂಪರ್ ಆಫರ್; ಆದರೆ ಅದರತ್ತ ತಿರುಗಿಯೂ ನೋಡದ ನಟಿ