AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಕಲಾಸಿಪಾಳ್ಯ’ ಸಿನಿಮಾಕ್ಕೆ ದರ್ಶನ್ ಪಡೆದ ಸಂಭಾವನೆ ಎಷ್ಟು? ‘ಡೆವಿಲ್’ ಸಿನಿಮಾಕ್ಕೆ ಎಷ್ಟು?

ನಟ ದರ್ಶನ್ ಅವರನ್ನು ಆರಂಭದಿಂದ ಹತ್ತಿರದಿಂದ ನೋಡಿರುವ ನಟ ಸರಿಗಮ ವಿಜಿ ಅವರು ದರ್ಶನ್ ಬೆಳೆದು ಬಂದ ರೀತಿ ಬಗ್ಗೆ ಮಾತನಾಡಿದ್ದಾರೆ. ದರ್ಶನ್ ಸಂಭಾವನೆಯಲ್ಲಿ ಏರಿಕೆಯಾದ ರೀತಿ ಬಗ್ಗೆಯೂ ಮಾತನಾಡಿದ್ದಾರೆ.

‘ಕಲಾಸಿಪಾಳ್ಯ’ ಸಿನಿಮಾಕ್ಕೆ ದರ್ಶನ್ ಪಡೆದ ಸಂಭಾವನೆ ಎಷ್ಟು? ‘ಡೆವಿಲ್’ ಸಿನಿಮಾಕ್ಕೆ ಎಷ್ಟು?
ಮಂಜುನಾಥ ಸಿ.
|

Updated on: Jul 03, 2024 | 6:48 PM

Share

ದರ್ಶನ್ ಕೊಲೆ ಆರೋಪಿಯಾಗಿ ಜೈಲು ಸೇರಿದ್ದಾರೆ. ಇನ್ನೂ ಕೆಲ ತಿಂಗಳು ಅವರಿಗೆ ಜಾಮೀನು ದೊರಕುವುದು ಅನುಮಾನ ಎನ್ನಲಾಗುತ್ತಿದೆ. ದರ್ಶನ್ ಮೇಲೆ ಹಲವು ರೀತಿಯ ಆರೋಪಗಳು ಕೇಳಿ ಬರುತ್ತಿವೆ. ದರ್ಶನ್ ಮುಂಗೋಪಿ, ಹೇಳಿದವರ ಮಾತು ಕೇಳುವ ಸ್ವಂತ ಬುದ್ಧಿ ಇಲ್ಲದ ವ್ಯಕ್ತಿ ಎಂದೆಲ್ಲ ಕೆಲವರು ಟೀಕಿಸಿದ್ದಾರೆ. ಆದರೆ ಟೀಕಿಸುವವರೂ ಸಹ ದರ್ಶನ್​ ಶ್ರಮಪಟ್ಟು ಮೇಲೆ ಬಂದ ವ್ಯಕ್ತಿ ಎಂದು ಉಲ್ಲೇಖಿಸುವುದನ್ನು ಮರೆಯುವುದಿಲ್ಲ. ಕಷ್ಟಗಳನ್ನು ಮೆಟ್ಟಿ, ಯಶಸ್ಸಿನ ಒಂದೊಂದೇ ಮೆಟ್ಟಿಲು ಹತ್ತಿ ಸ್ಟಾರ್ ಆದವರು ದರ್ಶನ್. ಅಂದಹಾಗೆ ದರ್ಶನ್ ಮೊದಲ ಸಿನಿಮಾ ‘ಮೆಜೆಸ್ಟಿಕ್’ಗೆ ಸಂಭಾವನೆಯನ್ನೇ ಪಡೆದಿರಲಿಲ್ಲ ಅಥವಾ ನೀಡಿರಲಿಲ್ಲ. ಆದರೆ ಹಲವು ವರ್ಷಗಳ ಬಳಿಕವೂ ಅವರ ಸಂಭಾವನೆ ದೊಡ್ಡ ಮಟ್ಟದಲ್ಲಿ ಏರಿಕೆ ಆಗಿರಲಿಲ್ಲ.

ದರ್ಶನ್ ಅನ್ನು ಬಹು ಹತ್ತಿರದಿಂದ ಬಹಳ ವರ್ಷಗಳಿಂದ ನೋಡಿಕೊಂಡು ಬಂದಿರುವ, ಕೆಲ ಸಿನಿಮಾಗಳಲ್ಲಿ ಅವರೊಟ್ಟಿಗೆ ನಟಿಸಿರುವ ಸರಿಗಮ ವಿಜಿ ಟಿವಿ9 ಜೊತೆಗೆ ಮಾತನಾಡಿದ್ದು, ದರ್ಶನ್ ಬೆಳೆದು ಬಂದ ರೀತಿಯನ್ನು ಸ್ಮರಿಸಿದ್ದಾರೆ. ‘ಕಲಾಸಿಪಾಳ್ಯ’ ಸಿನಿಮಾಕ್ಕೆ ದರ್ಶನ್ ಪಡೆದಿದ್ದು ಕೇವಲ ಹನ್ನೆರಡು ಲಕ್ಷ ರೂಪಾಯಿ ಸಂಭಾವನೆ ಪಡೆದುಕೊಂಡಿದ್ದರು. ಅದಾಗಲೆ ಹಿಟ್ ನಟ ಆಗಿದ್ದರೂ ಸಹ ದೊಡ್ಡ ಸಂಭಾವನೆಯನ್ನು ಅವರು ಪಡೆದುಕೊಂಡಿರಲಿಲ್ಲ ಎಂದು ಸರಿಗಮ ವಿಜಿ ನೆನಪು ಮಾಡಿಕೊಂಡಿದ್ದಾರೆ.

ಇದನ್ನೂ ಓದಿ:ದರ್ಶನ್ ಹೊರಗೆ ಬಂದ ಮೇಲೆ ಅವರೊಟ್ಟಿಗೆ ಸಿನಿಮಾ ಮಾಡುವೆ: ಕೆ ಮಂಜು

ಅದಾದ ಬಳಿಕ ‘ಅಯ್ಯ’ ಸಿನಿಮಾಕ್ಕೆ ಹದಿನೆಂಟು ಲಕ್ಷ ರೂಪಾಯಿ ಸಂಭಾವನೆ ಪಡೆದುಕೊಂಡರು ಅಷ್ಟೆ. ಆದರೆ ಬರ ಬರುತ್ತಾ ಅವರು ಸಂಭಾವನೆ ಏರಿಸಿಕೊಂಡು ಬಂದರು. ಈಗ 22 ಕೋಟಿ ಸಂಭಾವನೆ ಪಡೆಯುತ್ತಾರಂತೆ. ದರ್ಶನ್ ಐದು ಕೋಟಿ ಸಂಭಾವನೆ ಪಡೆದಾಗಲೇ ನಮಗೆಲ್ಲ ಆಶ್ಚರ್ಯಾಗಿತ್ತು. ಏನಪ್ಪ ಇದು ಇಷ್ಟೋಂದು ಸಂಭಾವನೆ ಎಂದು. ಕನ್ನಡ ಚಿತ್ರರಂಗದಲ್ಲಿ 22 ಕೋಟಿ ಸಂಭಾವನೆ ಪಡೆವ ನಟ ಯಾರೂ ಇಲ್ಲ’ ಎಂದು ಸರಿಗಮ ವಿಜಿ ನೆನಪು ಮಾಡಿಕೊಂಡಿದ್ದಾರೆ.

‘ದರ್ಶನ್ ಹೊರಗೆ ಬಂದ ಮೇಲೆ ಅವರನ್ನು ಭೇಟಿ ಮಾಡುತ್ತೇವೆ. ನಾವೆಲ್ಲರೂ ಸೇರಿ ಅವರನ್ನು ಭೇಟಿ ಮಾಡುತ್ತೇವೆ. ಈಗಾಗಲೇ ದರ್ಶನ್​ಗೆ ಜೈಲಿನಲ್ಲಿ ಪಶ್ಚಾತ್ತಾಪವಾಗುತ್ತಿರುತ್ತದೆ. ದರ್ಶನ್​ಗೂ ತಪ್ಪು ಮನದಟ್ಟು ಆಗಿರುತ್ತದೆ. ಮುಂದೆ ದರ್ಶನ್​ಗೆ ಒಳಿತಾಗಲಿದೆ ಎಂಬ ನಂಬಿಕೆ ನಮಗಿದೆ. ಆ ರೇಣುಕಾ ಸ್ವಾಮಿಯ ಹೆಂಡತಿ, ಮಗುವಿಗೂ ಒಳ್ಳೆಯದಾಗಲಿ. ದರ್ಶನ್ ಅಭಿಮಾನಿಗಳಿಗೆ ಹೇಳುವುದೇನೆಂದರೆ ದರ್ಶನ್​ಗೆ ಒಳ್ಳೆಯದಾಗಲಿ ಎಂದು ಪೂಜೆ ಮಾಡಲಿ. ಅದರ ಬದಲಿಗೆ ಅರಚಾಡುವುದು, ಕಿರುಚಾಡುವುದು ಬೇಡ’ ಎಂದಿದ್ದಾರೆ ಸರಿಗಮ ವಿಜಿ ಹೇಳಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ