Shankar Nag Birthday: ನಮ್ಮ ಮೆಟ್ರೋ ಶಂಕರ್​ ನಾಗ್​ ಮೆಟ್ರೋ ಆಗಲಿ; ಕೇಳಿಬಂತು ಹೊಸ ಕೂಗು

| Updated By: ರಾಜೇಶ್ ದುಗ್ಗುಮನೆ

Updated on: Nov 09, 2021 | 10:29 AM

ಶಂಕರ್​ ನಾಗ್​ಗೆ ಅಪಾರ ಅಭಿಮಾನಿಗಳಿದ್ದಾರೆ. ಅವರನ್ನು ಕಳೆದುಕೊಂಡು ಹಲವು ವರ್ಷಗಳು ಕಳೆದಿದ್ದರೂ, ಇಂದಿಗೂ ಅವರು ಮಾಡಿದ ಕೆಲಸವನ್ನು ಜನರು ಸ್ಮರಿಸುತ್ತಿದ್ದಾರೆ. ಈಗ ಮೆಟ್ರೋಗೆ ಅವರ ಹೆಸರು ಇಡಿ ಎನ್ನುವ ಕೂಗು ಜೋರಾಗಿದೆ.

Shankar Nag Birthday: ನಮ್ಮ ಮೆಟ್ರೋ ಶಂಕರ್​ ನಾಗ್​ ಮೆಟ್ರೋ ಆಗಲಿ; ಕೇಳಿಬಂತು ಹೊಸ ಕೂಗು
ಶಂಕರ್​ ನಾಗ್​
Follow us on

ಶಂಕರ್​ ನಾಗ್ ಅವರು ಕನ್ನಡ ನಾಡು ಕಂಡ ಶ್ರೇಷ್ಠ ನಟ, ನಿರ್ಮಾಪಕ ಹಾಗೂ ನಿರ್ದೇಶಕ. 36ನೇ ವಯಸ್ಸಿಗೆ ನಿಧನ ಹೊಂದಿದ ಶಂಕ್ರಣ್ಣ ಸಣ್ಣ ವಯಸ್ಸಿನಲ್ಲೇ ಸಾಕಷ್ಟು ಸಿನಿಮಾಗಳನ್ನು ನೀಡಿದ ಖ್ಯಾತಿ ಪಡೆದುಕೊಂಡರು. ಅವರು ಬದುಕಿದ್ದರೆ ಇಂದು (ನವೆಂಬರ್ 9​)  67ನೇ ಜನ್ಮದಿನ ಆಚರಿಸಿಕೊಳ್ಳುತ್ತಿದ್ದರು. ಆಗಿನ ಕಾಲದಲ್ಲೇ ಸಾಕಷ್ಟು ಪ್ರಯೋಗಾತ್ಮಕ ಸಿನಿಮಾಗಳನ್ನು ನೀಡಿದ ಖ್ಯಾತಿ ಶಂಕರ್​ ನಾಗ್​ಗೆ ಸಲ್ಲುತ್ತದೆ. ಅವರ ನಿರ್ದೇಶನದ ಸಿನಿಮಾಗಳು ದೊಡ್ಡ ಮಟ್ಟದಲ್ಲಿ ಹಿಟ್​ ಆಗಿದ್ದವು. ಬೆಂಗಳೂರಿನಲ್ಲಿ ಮೆಟ್ರೋ ಸಂಚಾರ ಆರಂಭವಾಗಿ ಹಲವು ವರ್ಷ ಕಳೆದಿದೆ. ಇದರಿಂದ ಒಂದು ಕಡೆಯಿಂದ ಮತ್ತೊಂದು ಕಡೆಗೆ ಬೇಗ ತಲುಪಬಹುದು. ಟ್ರಾಫಿಕ್​ ಕಿರಿಕಿರಿ ಇಲ್ಲ. ಬೆಂಗಳೂರಿಗೆ ಮೆಟ್ರೋ ಬರಬೇಕು ಎಂದು ಶಂಕರ್​ ನಾಗ್​ ಆಗಲೇ ಕನಸು ಕಂಡಿದ್ದರು. ಸ್ವಂತ ಖರ್ಚಿನಲ್ಲಿ ವಿದೇಶಕ್ಕೆ ತೆರಳಿ ಈ ಬಗ್ಗೆ ತಿಳಿದುಕೊಂಡು ಬಂದಿದ್ದರು ಅವರು. ಈಗ ನಮ್ಮ ಮೆಟ್ರೋ ಬದಲು, ಶಂಕರ್​ ನಾಗ್​ ಮೆಟ್ರೋ ಎಂದಾಗಲಿ ಎನ್ನುವ ಆಗ್ರಹ ಕೇಳಿ ಬಂದಿದೆ.

ಶಂಕರ್​ ನಾಗ್​ಗೆ ಅಪಾರ ಅಭಿಮಾನಿಗಳಿದ್ದಾರೆ. ಅವರನ್ನು ಕಳೆದುಕೊಂಡು ಹಲವು ವರ್ಷಗಳು ಕಳೆದಿದ್ದರೂ, ಇಂದಿಗೂ ಅವರು ಮಾಡಿದ ಕೆಲಸವನ್ನು ಜನರು ಸ್ಮರಿಸುತ್ತಿದ್ದಾರೆ. ಈಗ ಮೆಟ್ರೋಗೆ ಅವರ ಹೆಸರು ಇಡಿ ಎನ್ನುವ ಕೂಗು ಜೋರಾಗಿದೆ. ನಮ್ಮ ಮೆಟ್ರೋ ಹೆಸರನ್ನು ಬದಲಿಸಲು ಸಾಧ್ಯವಾಗದಿದ್ದರೆ ಒಂದು ನಿಲ್ದಾಣಕ್ಕೆ ಶಂಕರ್​ ನಾಗ್​ ಅವರ ಹೆಸರನ್ನು ಇಡಿ ಎಂದು ಕೋರಲಾಗಿದೆ.

‘ನಮ್ಮ ಶಂಕರ್​ನಾಗ್​ ಸ್ವಂತ ಖರ್ಚಿನಲ್ಲಿ ಮೆಟ್ರೋ ಬಗ್ಗೆ ತಿಳಿದು ಬೆಂಗಳೂರಲ್ಲಿ ಕಾರ್ಯರೂಪಕ್ಕೆ ತರಲು ಪಟ್ಟ ಪ್ರಯತ್ನ ಎಲ್ಲರಿಗೂ ತಿಳಿದಿದೆ. ಮಾನ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಶಂಕರ್​ ನಾಗ್​ ಕೊಡುಗೆಗಾಗಿ ನಮ್ಮ ಮೆಟ್ರೋ  ಹೆಸರನ್ನು ಶಂಕರನಾಗ್ ಮೆಟ್ರೋ ಎಂದು ಮಾಡಲಿ ಎಂಬುದೇ ನಮ್ಮೆಲ್ಲರ ಆಶಯ. ಕೊನೆಯಪಕ್ಷ ಒಂದು ನಿಲ್ದಾಣಕ್ಕಾದರೂ ಅವರ ಹೆಸರಿಡಿ. ಆ ಮಹಾತ್ಮರ ಹೆಸರು ಅಮರವಾಗಲಿ’ ಎಂದು ಶಂಕರ್​ ನಾಗ್​ ಫ್ಯಾನ್​ ಕ್ಲಬ್​ನವರು ಟ್ವೀಟ್​ ಮಾಡಿದ್ದಾರೆ. ‘ಹೌದು ಇದು ಆಗಬೇಕು ನಮ್ಮ ಮೆಟ್ರೋ ಕನಸುಗಾರ ನಮ್ಮ ಶಂಕ್ರಣ್ಣ’ ಎಂದು ಕೆಲವರು ಇದನ್ನು ಬೆಂಬಲಿಸಿದ್ದಾರೆ.

ಇದನ್ನೂ ಓದಿ: Happy Birthday Shankar Nag: ಇಂದು ಶಂಕರ್ ನಾಗ್ ಜನ್ಮದಿನ; ಕನ್ನಡಿಗರ ಕಣ್ಮಣಿ ನೆನೆದ ಸೆಲೆಬ್ರಿಟಿಗಳು

 

Published On - 9:28 am, Tue, 9 November 21