ಕಿಚ್ಚ ಸುದೀಪ್ ಹುಟ್ಟುಹಬ್ಬ ಕಾಮನ್ ಡಿಪಿ ಬಿಡುಗಡೆ ಮಾಡಿದ ಶಿವಣ್ಣ

Kichcha Sudeep Birthday: ಕಿಚ್ಚ ಸುದೀಪ್ ಅವರ ಹುಟ್ಟುಹಬ್ಬಕ್ಕೆ ಇನ್ನೊಂದೇ ದಿನ ಬಾಕಿ ಇದೆ. ಸೆಪ್ಟೆಂಬರ್ 02 ರಂದು ಕಿಚ್ಚ ಸುದೀಪ್ ಹುಟ್ಟುಹಬ್ಬ ಆಚರಿಸಿಕೊಳ್ಳಲಿದ್ದಾರೆ. ಸುದೀಪ್ ಅವರ ಹುಟ್ಟುಹಬ್ಬಕ್ಕೆ ಕಾಮನ್ ಡಿಪಿಯನ್ನು ಬಿಡುಗಡೆ ಮಾಡಲಾಗಿದೆ. ಸುದೀಪ್ ಅವರ ಆಪ್ತರೂ, ಸಹೋದರ ಸಮಾನರೂ ಆಗಿರುವ ಶಿವರಾಜ್ ಕುಮಾರ್ ಅವರು ಸುದೀಪ್ ಅವರ ಕಾಮನ್ ಡಿಪಿಯನ್ನು ಬಿಡುಗಡೆ ಮಾಡಿದ್ದಾರೆ.

ಕಿಚ್ಚ ಸುದೀಪ್ ಹುಟ್ಟುಹಬ್ಬ ಕಾಮನ್ ಡಿಪಿ ಬಿಡುಗಡೆ ಮಾಡಿದ ಶಿವಣ್ಣ
Kichcha Sudeep

Updated on: Aug 31, 2025 | 7:31 PM

ಕನ್ನಡ ಚಿತ್ರರಂಗದ ಸ್ಟಾರ್ ನಟ ಮತ್ತು ಪ್ಯಾನ್ ಇಂಡಿಯಾ (Pan India) ಜಮಾನಕ್ಕೆ ಮೊದಲೇ ಪ್ಯಾನ್ ಇಂಡಿಯಾ ಸ್ಟಾರ್ ನಟನಾಗಿ ಹೆಸರು ಮಾಡಿದ್ದ ಕಿಚ್ಚ ಸುದೀಪ್ ಅವರ ಹುಟ್ಟುಹಬ್ಬಕ್ಕೆ ಇನ್ನೊಂದೇ ದಿನ ಬಾಕಿ ಇದೆ. ಸೆಪ್ಟೆಂಬರ್ 02 ರಂದು ಕಿಚ್ಚ ಸುದೀಪ್ ಹುಟ್ಟುಹಬ್ಬ ಆಚರಿಸಿಕೊಳ್ಳಲಿದ್ದಾರೆ. ಕಳೆದ ಹುಟ್ಟುಹಬ್ಬಗಳಿಗಿಂತಲೂ ಈ ವರ್ಷದ ಹುಟ್ಟುಹಬ್ಬ ಸುದೀಪ್ ಪಾಲಿಗೆ ತುಸು ನೋವಿನದ್ದೂ ಸಹ ಆಗಿದೆ. ಅವರ ತಾಯಿ ಇಲ್ಲದ ಮೊದಲ ಹುಟ್ಟುಹಬ್ಬ ಇದು. ನೋವಿನಲ್ಲೂ ಅಭಿಮಾನಿಗಳಿಗಾಗಿ ಸರಳವಾಗಿ ಹುಟ್ಟುಹಬ್ಬ ಆಚರಣೆ ಮಾಡಿಕೊಳ್ಳುತ್ತಿದ್ದಾರೆ ಸುದೀಪ್.

ಸುದೀಪ್ ಅವರ ಹುಟ್ಟುಹಬ್ಬಕ್ಕೆ ಕಾಮನ್ ಡಿಪಿಯನ್ನು ಬಿಡುಗಡೆ ಮಾಡಲಾಗಿದೆ. ಸುದೀಪ್ ಅವರ ಆಪ್ತರೂ, ಸಹೋದರ ಸಮಾನರೂ ಆಗಿರುವ ಶಿವರಾಜ್ ಕುಮಾರ್ ಅವರು ಸುದೀಪ್ ಅವರ ಕಾಮನ್ ಡಿಪಿಯನ್ನು ಬಿಡುಗಡೆ ಮಾಡಿದ್ದಾರೆ. ಶಿವರಾಜ್ ಕುಮಾರ್ ಮಾತ್ರವೇ ಅಲ್ಲದೆ, ಸುದೀಪ್ ಅವರಿಗೆ ಆಪ್ತರಾಗಿರುವ ಡಾಲಿ ಧನಂಜಯ್ ಮತ್ತು ಧ್ರುವ ಸರ್ಜಾ ಅವರುಗಳೂ ಸಹ ಸುದೀಪ್ ಅವರ ಕಾಮನ್ ಡಿಪಿಯನ್ನು ಏಕಕಾಲಕ್ಕೆ ಬಿಡುಗಡೆ ಮಾಡಿದ್ದಾರೆ.

ಸುದೀಪ್ ಅವರು ಸೂಟು, ಬೂಟು ಧರಿಸಿಕೊಂಡು ರಾಜ ಸಿಂಹಾಸನದ ಮೇಲೆ ಕೂತಿರುವ ಚಿತ್ರವನ್ನು ಸಿಡಿಪಿ (ಕಾಮನ್ ಡಿಪಿ) ಒಳಗೊಂಡಿದೆ. ಚಿತ್ರದಲ್ಲಿ ‘ಹ್ಯಾಪಿ ಬರ್ತ್​​ ಡೇ ಕಿಂಗ್ ಕಿಚ್ಚ ಸುದೀಪ’ ಎಂದು ಬರೆಯಲಾಗಿದೆ. ಕುರ್ಚಿಯ ಪಟ್ಟ ಚೆಸ್​​ನ ರಾಜ ಹಾಗೂ ರಾಜನ ಕಿರೀಟವೊಂದನ್ನು ಇಡಲಾಗಿದೆ. ಒಟ್ಟಾರೆಯಾಗಿ ಕಾಮನ್ ಡಿಪಿಯಲ್ಲಿ ಸುದೀಪ್ ಚಕ್ರವರ್ತಿಯಂತೆ ಕಾಣುತ್ತಿದ್ದಾರೆ.

ಇದನ್ನೂ ಓದಿ:ಜಮೀರ್, ಸಿದ್ದರಾಮಯ್ಯ ಬಳಿಕ ಕಿಚ್ಚ ಸುದೀಪ್ ಭರ್ಜರಿ ಎಂಟ್ರಿ: ವಿಡಿಯೋ ನೋಡಿ

ಕಾಮನ್ ಡಿಪಿ ಬಿಡುಗಡೆ ಮಾಡಿದ ಶಿವಣ್ಣ, ‘ಹುಟ್ಟು ಹಬ್ಬದ ಶುಭಾಶಯಗಳು ಕಿಚ್ಚ ಸುದೀಪ್ ಮುಂದಿನ ಎಲ್ಲಾ ಸಿನಿಮಾಗಳಿಗೂ ಶುಭವಾಗಲಿ, ನೂರು ಕಾಲ ಚೆನ್ನಾಗಿರಿ’ ಎಂದಿದ್ದಾರೆ. ನಟ ಡಾಲಿ ಧನಂಜಯ್ ಟ್ವೀಟ್ ಮಾಡಿ ಸರಳವಾಗಿ ಹುಟ್ಟುಹಬ್ಬ ಶುಭಾಶಯ ಕೋರಿದ್ದಾರೆ. ಜೊತೆಗೆ ಸಿಡಿಪಿ ಬಿಡುಗಡೆ ಮಾಡುತ್ತಿರುವುದು ಖುಷಿಯಾಗಿದೆ ಎಂದಿದ್ದಾರೆ. ನಟ ಧ್ರುವ ಸರ್ಜಾ ಅವರು ಅಭಿನಯ ಚಕ್ರವರ್ತಿಯ ಸಿಡಿಪಿ ಬಿಡುಗಡೆ ಮಾಡುತ್ತಿರುವುದು ಬಹಳ ಖುಷಿ ತಂದಿದೆ’ ಎಂದಿದ್ದಾರೆ.

ಸುದೀಪ್ ಅವರು ನಾಳೆ ರಾತ್ರಿಯೇ ಅಭಿಮಾನಿಗಳನ್ನು ನಿವಾಸದ ಬಳಿ ಭೇಟಿ ಮಾಡಲಿದ್ದಾರೆ. ಅವರ ಹುಟ್ಟುಹಬ್ಬಕ್ಕೆ ಅವರ ‘ಬಿಲ್ಲಾ ರಂಗ ಭಾಷಾ’ ಸಿನಿಮಾದ ಅಪ್​​ಡೇಟ್ ಸಿಗುವ ನಿರೀಕ್ಷೆ ಇದೆ. ಅದರ ಜೊತೆಗೆ ಸುದೀಪ್ ಅವರ ಮುಂದಿನ ಕೆಲ ಸಿನಿಮಾಗಳ ಘೋಷಣೆ ಸಹ ಆಗಲಿದೆ ಎನ್ನಲಾಗುತ್ತಿದೆ. ಜೊತೆಗೆ ಬಿಗ್​​ಬಾಸ್ ಕನ್ನಡ 12ರ ಪ್ರೋಮೊ ಸಹ ಬಿಡುಗಡೆ ಆಗವ ಸಾಧ್ಯತೆ ಇದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ