ಅಡ್ಡಗೋಡೆ ಮೇಲೆ ದೀಪ ಇಡೋ ಕಾಲ್ದಲ್ಲಿ: ಶಿವಣ್ಣನ ಟ್ವೀಟ್ ಸಖತ್ ವೈರಲ್

|

Updated on: Jun 30, 2024 | 10:06 AM

ಭಾರತ ಕ್ರಿಕೆಟ್ ತಂಡ ಟಿ20 ವಿಶ್ವಕಪ್ ಗೆದ್ದಿದ್ದಕ್ಕೆ ಹಲವಾರು ಸಿನಿಮಾ ಸೆಲೆಬ್ರಿಟಿಗಳು ಟ್ವೀಟ್ ಮಾಡಿ ಸಂಭ್ರಮ ವ್ಯಕ್ತಪಡಿಸಿದ್ದಾರೆ. ಆದರೆ ಶಿವರಾಜ್ ಕುಮಾರ್ ಮಾಡಿರುವ ಟ್ವೀಟ್ ಸಖತ್ ಗಮನ ಸೆಳೆಯುತ್ತಿದೆ. ಅಷ್ಟಕ್ಕೂ ಶಿವಣ್ಣ ಮಾಡಿರುವ ಟ್ವೀಟ್ ನಲ್ಲಿ ಏನಿದೆ?

ಅಡ್ಡಗೋಡೆ ಮೇಲೆ ದೀಪ ಇಡೋ ಕಾಲ್ದಲ್ಲಿ: ಶಿವಣ್ಣನ ಟ್ವೀಟ್ ಸಖತ್ ವೈರಲ್
Follow us on

ನಿನ್ನೆ (ಜೂನ್ 39) ವೆಸ್ಟ್​ ಇಂಡೀಸ್​ನ ಬಾರ್ಬಡೋಸ್​ನಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಪಂದ್ಯವಾಡಿದ ಭಾರತೀಯ ಕ್ರಿಕೆಟ್ ತಂಡ ಭರ್ಜರಿ ಜಯ ಸಾಧಿಸಿದೆ. ಆ ಮೂಲಕ 13 ವರ್ಷಗಳ ಬಳಿಕ ವಿಶ್ವಕಪ್ ಗೆದ್ದಿದೆ. ಮಾತ್ರವಲ್ಲ 17 ವರ್ಷಗಳ ಬಳಿಕ ಟಿ20 ವಿಶ್ವಕಪ್ ಗೆದ್ದಿದೆ. ಭಾರತ ತಂಡದ ಈ ಅಭೂತಪೂರ್ವ ಗೆಲುವಿಗೆ ಭಾರತೀಯರು ಸಂಭ್ರಮಿಸಿದ್ದಾರೆ. ರಾಜಕಾರಣಿಗಳು, ಸಿನಿಮಾ ಸೆಲೆಬ್ರಿಟಿಗಳು ಟ್ವೀಟ್ ಮಾಡುವ ಮೂಲಕ ಖುಷಿ ವ್ಯಕ್ತಪಡಿಸಿದ್ದಾರೆ. ಹಲವರು ಭಾರತ ತಂಡದ ಸಾಧನೆಗೆ ಅಭಿನಂದಿಸಿದ್ದಾರೆ. ಆದರೆ ನಟ ಶಿವರಾಜ್ ಕುಮಾರ್ ಮಾಡಿರುವ ಟ್ವೀಟ್ ಸಖತ್ ಗಮನ ಸೆಳೆಯುತ್ತಿದೆ. ವೈರಲ್ ಆಗುತ್ತಿದೆ.

ಭಾರತ ವಿಶ್ವಕಪ್ ಗೆದ್ದಿರುವ ಖುಷಿಯ ಜೊತೆಗೆ ರಾಹುಲ್ ದ್ರಾವಿಡ್​ ಕೋಚ್ ಆಗಿ ಚಾಂಪಿಯನ್ ಆಗಿರುವ ಖುಷಿಯನ್ನು ಒಟ್ಟಿಗೆ ಹಂಚಿಕೊಂಡಿರುವ ನಟ ಶಿವರಾಜ್ ಕುಮಾರ್, ರಾಹುಲ್ ದ್ರಾವಿಡ್ ವಿಶ್ವಕಪ್ ಕೈಯಲ್ಲಿ ಹಿಡಿದಿರುವ ಚಿತ್ರವನ್ನು ಹಂಚಿಕೊಂಡು, ‘ಅಡ್ಡ ಗೋಡೆ ಮೇಲೆ ದೀಪ ಇಡೋ ಕಾಲದಲ್ಲಿ, ‘ಗೋಡೆ’ ಮೇಲೆ ವರ್ಲ್ಡ್ ಕಪ್ ಇಡೋರ್ ಆಗ್ಬೇಕು’ ಎಂದಿದ್ದಾರೆ. ಆ ಮೂಲಕ ರಾಹುಲ್ ದ್ರಾವಿಡ್​ಗೆ ವಿಶ್ವಕಪ್ ಗೆಲ್ಲಿಸಿಕೊಟ್ಟಿರುವ ಭಾರತ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.

ಕರ್ನಾಟಕದ ಆಟಗಾರ ರಾಹುಲ್ ದ್ರಾವಿಡ್ ಕರ್ನಾಟಕದ ಆಟಗಾರ. ದಶಕಕ್ಕೂ ಹೆಚ್ಚು ಕಾಲ ಕ್ರಿಕೆಟ್ ಆಡಿರುವ ರಾಹುಲ್ ದ್ರಾವಿಡ್ ವಿಶ್ವಕಪ್ ಗೆಲ್ಲಲು ಸಾಧ್ಯವಾಗಿರಲಿಲ್ಲ. ಆದರೆ ಈಗ ಅವರು ಭಾರತ ಕ್ರಿಕೆಟ್ ತಂಡದ ಕೋಚ್ ಸ್ಥಾನದಿಂದ ಕೆಳಗೆ ಇಳಿಯುವ ಹೊತ್ತಿನಲ್ಲಿ ಭಾರತ ತಂಡ ವಿಶ್ವಕಪ್ ಗೆದ್ದಿದೆ. ದ್ರಾವಿಡ್ ಕೈಯಲ್ಲಿ ವಿಶ್ವಕಪ್ ನೋಡಿದ ಕ್ರಿಕೆಟ್ ಪ್ರೇಮಿಗಳು ವಿಶೇಷವಾಗಿ ಕನ್ನಡಿಗರು ಭಾವುಕಗೊಂಡಿದ್ದಾರೆ. ಅಂತೆಯೇ ಶಿವಣ್ಣ ಸಹ ಖುಷಿ ಪಟ್ಟಿದ್ದು, ದ್ರಾವಿಡ್ ಗೆ ವಿಶ್ವಕಪ್ ಗೆದ್ದು ಕೊಟ್ಟಿರುವುದನ್ನು ‘ಗೋಡೆ’ ಮೇಲೆ ವರ್ಲ್​ಕಪ್ ಇಡೋರು ಆಗ್ಬೇಕು ಎಂದು ಮಾರ್ಮಿಕವಾಗಿ ತುಸು ವ್ಯಂಗ್ಯ ಸಹ ಬೆರೆಸಿ ಹೇಳಿದ್ದಾರೆ.

ಇದನ್ನೂ ಓದಿ:ವಿಶ್ವಕಪ್ ಗೆದ್ದ ಭಾರತ, ಸಿನಿ ತಾರೆಯರು ಸಂಭ್ರಮಿಸಿದ್ದು ಹೀಗೆ

ಅಂದಹಾಗೆ ಶಿವರಾಜ್ ಕುಮಾರ್ ಅಪ್ರತಿಮ ಕ್ರಿಕೆಟ್ ಅಭಿಮಾನಿ. ಕ್ರಿಕೆಟ್ ಆಟಗಾರರು ಸಹ. ತಮಿಳುನಾಡಿನ ಚೆನ್ನೈನಲ್ಲಿದ್ದಾಗ ಕ್ರಿಕೆಟ್ ಆಟಗಾರನಾಗಬೇಕೆಂದು ಪ್ರಯತ್ನಿಸಿದ್ದರು ಶಿವಣ್ಣ, ತಮಿಳುನಾಡು ರಣಜಿ ತಂಡಕ್ಕೆ ಸೇರಬೇಕೆಂಬ ಪ್ರಯತ್ನವನ್ನೂ ಸಹ ಮಾಡಿದ್ದರಂತೆ. ಆದರೆ ನಟನೆ ಅವರನ್ನು ಇತ್ತ ಎಳೆದು ತಂದಿತು. ಈಗ ಸಿಸಿಎಲ್ ಇನ್ನಿತರೆ ಸಿನಿಮಾ ಸಂಬಂಧಿ ಕ್ರಿಕೆಟ್ ಟೂರ್ನಿಗಳಲ್ಲಿ ಶಿವಣ್ಣ ಭಾಗವಹಿಸುತ್ತಾರೆ. ಸಹ ನಟರೊಟ್ಟಿಗೆ ಆಟವಾಡಿ ಸಂಭ್ರಮಿಸುತ್ತಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ