ವಿಶೇಷ ದಿನದಂದು ಬಿಡುಗಡೆ ಆಗಲಿದೆ ‘ಗೌರಿ’ ಸಿನಿಮಾ
ಇಂದ್ರಜಿತ್ ಲಂಕೇಶ್ ನಿರ್ದೇಶಿಸಿ, ಅವರ ಪುತ್ರ ಸಮರ್ಜಿತ್ ಮೊದಲ ಬಾರಿ ನಾಯಕನಾಗಿ ನಟಿಸಿರುವ, ಸಾನ್ಯಾ ಐಯ್ಯರ್ ನಾಯಕಿಯಾಗಿ ನಟಿಸಿರುವ ‘ಗೌರಿ’ ಸಿನಿಮಾದ ಬಿಡುಗಡೆ ದಿನಾಂಕವನ್ನು ಇಂದ್ರಜಿತ್ ಲಂಕೇಶ್ ಘೋಷಣೆ ಮಾಡಿದ್ದಾರೆ.
ಇಂದ್ರಜಿತ್ ಲಂಕೇಶ್ ನಿರ್ದೇಶನ ಮಾಡಿ ಅವರ ಪುತ್ರ ಸಮರ್ಜಿತ್ ಮೊದಲ ಬಾರಿ ನಾಯಕ ನಟನಾಗಿ ನಟಿಸಿರುವ ‘ಗೌರಿ’ ಸಿನಿಮಾ ಪ್ರಾರಂಭವಾದಾಗಿನಿಂದಲೂ ವಿವಿಧ ಕಾರಣಕ್ಕೆ ಗಮನ ಸೆಳೆಯುತ್ತಲೇ ಇದೆ. ಭಿನ್ನವಾಗಿ ನಾಯಕ-ನಾಯಕಿಯ ಫೋಟೊಶೂಟ್ ಮಾಡಿಸಿದ್ದ ನಿರ್ದೇಶಕ ಇಂದ್ರಜಿತ್ ಲಂಕೇಶ್ ತಮ್ಮ ಮಗನನ್ನು ಅದ್ಧೂರಿಯಾಗಿ ಲಾಂಚ್ ಮಾಡುತ್ತಿದ್ದು, ಪ್ರಚಾರವನ್ನೂ ಸಹ ಜೋರಾಗಿಯೇ ಮಾಡುತ್ತಿದ್ದಾರೆ. ಇದೀಗ ಕೊನೆಗೂ ಸಿನಿಮಾದ ಬಿಡುಗಡೆ ದಿನಾಂಕ ಘೋಷಣೆ ಮಾಡಿದ್ದಾರೆ.
ಈಗಾಗಲೇ ಸಾಕಷ್ಟು ಕುತೂಹಲ ಹುಟ್ಟಿಸಿರುವ ಗೌರಿ ಸಿನಿಮಾ ಯಾವಾಗ ಬಿಡುಗಡೆ ಆಗಲಿದೆ ಎಂದು ಪ್ರಚಾರಕ್ಕೆ ಹೋದಾಗಲೆಲ್ಲ ಪ್ರಶ್ನೆ ಎದುರಾಗಿತ್ತು. ಇದೀಗ ಕುತೂಹಲಕ್ಕೆ ತೆರೆ ಎಳೆದಿರುವ ಇಂದ್ರಜಿತ್ ಲಂಕೇಶ್ ಸಿನಿಮಾ ಬಿಡುಗಡೆ ದಿನಾಂಕ ಘೋಷಣೆ ಮಾಡಿದ್ದಾರೆ. ಅದೂ ವಿಶೇಷವಾದ ದಿನದಂದು ಸಿನಿಮಾ ಬಿಡುಗಡೆ ಮಾಡಲು ಇಂದ್ರಜಿತ್ ಮುಂದಾಗಿದ್ದಾರೆ.
ಸಮರ್ಜಿತ್ ಹಾಗೂ ಬಿಗ್ಬಾಸ್ ಚೆಲುವೆ ಸಾನ್ಯಾ ಐಯ್ಯರ್ ಒಟ್ಟಿಗೆ ನಟಿಸಿರುವ ‘ಗೌರಿ’ ಚಿತ್ರ ಆಗಸ್ಟ್ 15 ಅದ್ದೂರಿಯಾಗಿ ಬಿಡುಗಡೆ ಆಗುತ್ತಿದೆ. ಇಂದು ಬೆಂಗಳೂರಿನ ಎಂಇಎಸ್ ಕಾಲೇಜಿನಲ್ಲಿ ಅದ್ಧೂರಿಯಾಗಿ ಕಾರ್ಯಕ್ರಮ ಮಾಡುವ ಮೂಲಕ ಸಿನಿಮಾ ಬಿಡುಗಡೆ ದಿನಾಂಕ ಘೋಷಿಸಿದೆ. ಸ್ವಾತಂತ್ರ್ಯ ದಿನಾಚರಣೆಯ ದಿನ ಸಿನಿಮಾವನ್ನು ಚಿತ್ರಮಂದಿರಕ್ಕೆ ಬಿಡುಗಡೆ ಮಾಡಲಿದೆ ಚಿತ್ರತಂಡ. ಕಾರ್ಯಕ್ರಮದಲ್ಲಿ ಸಿನಿಮಾದ ನಾಯಕ-ನಾಯಕಿ ವಿದ್ಯಾರ್ಥಿಗಳೊಂದಿಗೆ ಕುಣಿದು-ಕುಪ್ಪಳಿಸಿ ಎಂಜಾಯ್ ಮಾಡಿದರು.
ಇದನ್ನೂ ಓದಿ:ಗಮನ ಸೆಳೆಯುತ್ತಿದೆ ‘ಗೌರಿ’ ಸಿನಿಮಾದ ಯುವ ಜೋಡಿ
ಕಾರ್ಯಕ್ರಮದಲ್ಲಿ ಮಾತನಾಡಿದ ನಿರ್ದೇಶಕ ಇಂದ್ರಜಿತ್ ಲಂಕೇಶ್ ‘ಆಗಸ್ಟ್ 15 ರಂದು ಸಿನಿಮಾ ಬಿಡುಗಡೆ ಮಾಡುತ್ತಿದ್ದೇವೆ. ಒಳ್ಳೆಯ ದಿನ ಪ್ರೇಕ್ಷಕರನ್ನು ಮತ್ತೆ ಚಿತ್ರಮಂದಿರಕ್ಕೆ ಕರೆತರುವ ಪ್ರಯತ್ನ ಮಾಡುತ್ತಿದ್ದೇವೆ. ‘ಕನ್ನಡದ ಯುವ ಪ್ರತಿಭೆಗಳನ್ನು ಬೆಳಸಿ. ಎಲ್ಲಾ ಒಳ್ಳೆಯ ಕನ್ನಡ ಸಿನಿಮಾಗಳನ್ನು ಪ್ರೋತ್ಸಾಹಿಸಿ ಎಂದು ಮನವಿ ಮಾಡಿದರು.
ಸಿನಿಮಾದ ನಾಯಕ ಸಮರ್ಜಿತ್ ಮಾತನಾಡಿ, ‘ಕನಸು ನನಸಾದ ಸಮಯ ಇದು. ನನ್ನ ಮೊದಲ ಸಿನಿಮಾವನ್ನು ದಯವಿಟ್ಟು ಎಲ್ಲರೂ ನೋಡಿ ಬೆಂಬಲಿಸಿ’ ಎಂದು ಮನವಿ ಮಾಡಿದರು. ನಾಯಕಿ ಸಾನ್ಯಾ ಐಯ್ಯರ್ ಸಹ ಮಾತನಾಡಿ ಸಿನಿಮಾಕ್ಕೆ ಬೆಂಬಲಿಸಿ ಎಂದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ