ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್ ಅಭಿನಯದ ಬಹು ನಿರೀಕ್ಷಿತ ಚಿತ್ರ ಭಜರಂಗಿ 2 ಚಿತ್ರದ ಮೂರನೇ ಹಾಡನ್ನು ಚಿತ್ರತಂಡ ಬಿಡುಗಡೆಗೊಳಿಸಿದೆ. ಕೆ.ಕಲ್ಯಾಣ್ ಸಾಹಿತ್ಯ ಬರೆದಿರುವ ಕೈಲಾಶ್ ಕೇರ್ ಹಾಡಿರುವ ‘ರೇರೆ ರೇರೆ ಭಜರಂಗಿ’ ಹಾಡನ್ನು ಆನಂದ್ ಆಡಿಯೋ ಚಾನಲ್ ಮುಖಾಂತರ ಬಿಡುಗಡೆ ಮಾಡಲಾಗಿದೆ. ಈ ಮೊದಲು ಬಿಡುಗಡೆಯಾಗಿದ್ದ ‘ಭಜರಂಗಿ’ ಚಿತ್ರದ ‘ರೇರೆ ರೇರೆ ಭಜರಂಗಿ’ ಹಾಡಿನ ಮಾದರಿಯಲ್ಲಿಯೇ ಈ ಹಾಡು ಕೂಡಾ ಇದ್ದು, ಸಾಹಿತ್ಯ ಬದಲಾಗಿದೆ. ಅರ್ಜುನ್ ಜನ್ಯಾ ಈ ಹಾಡಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ.
ಎ.ಹರ್ಷ ಹಾಗೂ ಶಿವರಾಜ್ ಕುಮಾರ್ ಕಾಂಬಿನೇಷನ್ನಲ್ಲಿ ಮೂಡಿಬರುತ್ತಿರುವ ಈ ಚಿತ್ರವನ್ನು ಸೆಪ್ಟೆಂಬರ್ 10ರ ಗಣಪತಿ ಹಬ್ಬದಂದು ಬಿಡುಗಡೆ ಮಾಡಲಾಗುವುದು ಎಂದು ಚಿತ್ರತಂಡ ಈ ಹಿಂದೆಯೇ ಘೋಷಿಸಿದೆ. ಚಿತ್ರದ ಟ್ರೇಲರ್ ವರ್ಷಗಳ ಹಿಂದೆಯೇ ಬಿಡುಗಡೆಯಾಗಿದ್ದು, ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆಕ್ಷನ್- ಫ್ಯಾಂಟಸಿ ಮಾದರಿಯ ಈ ಚಿತ್ರ ಅದ್ದೂರಿ ಬಜೆಟ್ ಹಾಗೂ ಮೇಕಿಂಗ್ನಿಂದ ಗಮನ ಸೆಳೆದಿದೆ.
ಭಜರಂಗಿ 2ನ ‘ರೇರೆ ರೇರೆ ಭಜರಂಗಿ’ ಹಾಡು ಇಲ್ಲಿದೆ:
ಭಜರಂಗಿ 2 ಚಿತ್ರವನ್ನು ಜಯಣ್ಣ ಭೋಗೇಂದ್ರ ನಿರ್ಮಾಣ ಮಾಡುತ್ತಿದ್ದು, ಅರ್ಜುನ್ ಜನ್ಯಾ ಸಂಗೀತ ಸಂಯೋಜನೆ ಮಾಡಿದ್ದಾರೆ. ಸಿದ್ ಶ್ರೀರಾಮ್ ಹಾಡಿರುವ ‘ನೀ ಸಿಗೋವರೆಗೂ’ ಹಾಡನ್ನು ಈಗಾಗಲೇ ಬಿಡುಗಡೆ ಮಾಡಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಹಾಡಿನ ಮೊದಲ ಸಾಲನ್ನೇ ಶಿವರಾಜ್ ಕುಮಾರ್ ನೂತನ ಚಿತ್ರಕ್ಕೆ ಟೈಟಲ್ ಆಗಿ ಇಟ್ಟಿದ್ದನ್ನು ಇಲ್ಲಿ ಸ್ಮರಿಸಬಹುದು. ಹಾಗೆಯೇ ‘ಭಜರೇ ಭಜರೇ ಭಜರಂಗಿ’ ಹಾಡಿಗೂ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ.
ಶಿವರಾಜ್ ಕುಮಾರ್ ಹಾಗೂ ನಿರ್ದೇಶಕ ಎ.ಹರ್ಷ ‘ವೇದ’ ಚಿತ್ರವನ್ನು ಜೊತೆಯಾಗಿ ಮಾಡುವುದಾಗಿ ಈಗಾಗಲೇ ಘೋಷಿಸಿದ್ದಾರೆ. ಚಿತ್ರದ ಫಸ್ಟ್ ಲುಕ್ ಕೂಡಾ ಬಿಡುಗಡೆಯಾಗಿದ್ದು, ಭಜರಂಗಿ ಚಿತ್ರಗಳ ಮಾದರಿಯಂತೆಯೇ ವೇದವೂ ಇರಲಿದೆಯೇ ಎಂಬ ಕುತೂಹಲವನ್ನು ಪೋಸ್ಟರ್ ಹುಟ್ಟುಹಾಕಿದೆ. ಈ ಚಿತ್ರವು ಶಿವರಾಜ್ ಕುಮಾರ್ ಅವರ 125ನೇ ಚಿತ್ರವಾಗಿರಲಿದ್ದಿ, ಚಿತ್ರ ಕುರಿತು ಈಗಾಗಲೇ ನಿರೀಕ್ಷೆಗಳು ಗರಿಗೆದರಿವೆ.
ಇದನ್ನೂ ಓದಿ:
KGF 2 ಚಿತ್ರದ ಸ್ಯಾಟಲೈಟ್ ಹಕ್ಕು ಮಾರಾಟ; ಒಟಿಟಿಯಲ್ಲಿ ಚಿತ್ರ ಬಿಡುಗಡೆಯಾಗಲಿದೆಯಾ ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ
(Shiva Rajkumar starring Bhajarangi 2 new song Rere Rere Bhajarangi is out and it is sung by Kailash Kher)
Published On - 11:38 am, Fri, 20 August 21