Bhajarangi 2: ಅಭಿಮಾನಿಗಳೊಂದಿಗೆ ಭಜರಂಗಿ 2 ಚಿತ್ರ ವೀಕ್ಷಿಸಲಿರುವ ಶಿವಣ್ಣ; ಯಾವಾಗ ಮತ್ತು ಎಲ್ಲಿ? ಇಲ್ಲಿದೆ ಮಾಹಿತಿ

Shiva Rajkumar: ನಟ ಶಿವರಾಜ್ ಕುಮಾರ್ ಇದೇ ಭಾನುವಾರ (ನವೆಂಬರ್ 14)ರಂದು ಚಿತ್ರಮಂದಿರಕ್ಕೆ ತೆರಳಿ ಅಭಿಮಾನಿಗಳೊಂದಿಗೆ ಚಿತ್ರ ವೀಕ್ಷಿಸಲಿದ್ದಾರೆ.

Bhajarangi 2: ಅಭಿಮಾನಿಗಳೊಂದಿಗೆ ಭಜರಂಗಿ 2 ಚಿತ್ರ ವೀಕ್ಷಿಸಲಿರುವ ಶಿವಣ್ಣ; ಯಾವಾಗ ಮತ್ತು ಎಲ್ಲಿ? ಇಲ್ಲಿದೆ ಮಾಹಿತಿ
‘ಭಜರಂಗಿ 2’ ಚಿತ್ರದಲ್ಲಿ ಶಿವರಾಜ್ ಕುಮಾರ್
Edited By:

Updated on: Nov 12, 2021 | 12:22 PM

ಸ್ಯಾಂಡಲ್​ವುಡ್​ನಲ್ಲಿ ಕೊರೊನಾ ಎರಡನೇ ಅಲೆಯ ನಂತರ ‘ಕೋಟಿಗೊಬ್ಬ 3’, ‘ಸಲಗ’, ‘ಭಜರಂಗಿ 2’ ಚಿತ್ರಗಳು ಬಿಡುಗಡೆಯಾಗಿ ಚಿತ್ರರಂಗಕ್ಕೆ ಚೇತರಿಕೆ ನೀಡಿದ್ದವು. ಇವುಗಳಲ್ಲಿ ‘ಭಜರಂಗಿ 2’ ಚಿತ್ರಕ್ಕೆ ಒಳ್ಳೆಯ ಪ್ರತಿಕ್ರಿಯೆ ಲಭಿಸುವ ಹಂತದಲ್ಲಿರುವಾಗಲೇ, ಪುನೀತ್ ರಾಜ್​ಕುಮಾರ್ ನಿಧನದ ಸುದ್ದಿ ಬರಸಿಡಿಲಿನಂತೆ ಬಡಿಯಿತು. ಅಲ್ಲಿಂದ ಚಿತ್ರರಂಗದ ಚಟುವಟಿಕೆಗಳು ಸಂಪೂರ್ಣವಾಗಿ ಕಳೆಗುಂದಿದ್ದವು. ಇದೀಗ ಮತ್ತೆ ಚಿತ್ರರಂಗ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದು, ಇಂದು ಹೊಸ ಚಿತ್ರಗಳೂ ಬಿಡುಗಡೆಯಾಗಿವೆ. ಈ ಮಧ್ಯೆ ‘ಭಜರಂಗಿ 2’ ಚಿತ್ರತಂಡದಿಂದ ಹೊಸ ಅಪ್ಡೇಟ್ ಬಂದಿದ್ದು, ಅಭಿಮಾನಿಗಳ ಮೊಗದಲ್ಲಿ ಸಂತಸ ಮೂಡಿಸಿದೆ. ‘ಭಜರಂಗಿ 2’ ಚಿತ್ರವನ್ನು ನಿರ್ಮಾಣ ಮಾಡಿರುವ ಜಯಣ್ಣ ಫಿಲ್ಮ್ಸ್ ಟ್ವಿಟರ್​ನಲ್ಲಿ ಹೊಸ ಮಾಹಿತಿ ಹಂಚಿಕೊಂಡಿದ್ದು, ಇದೇ ಭಾನುವಾರ (ನವೆಂಬರ್ 14) ಶಿವರಾಜ್​ಕುಮಾರ್ ಅಭಿಮಾನಿಗಳೊಂದಿಗೆ ಚಿತ್ರಮಂದಿರದಲ್ಲಿ ಸಿನಿಮಾ ವೀಕ್ಷಿಸಲಿದ್ದಾರೆ. ಇದು ಶಿವಣ್ಣನ ಅಭಿಮಾನಿಗಳಿಗೆ ಖುಷಿ ನೀಡಿದೆ.

ಜಯಣ್ಣ ಫಿಲ್ಮ್ಸ್ ಈ ಕುರಿತು ಟ್ವೀಟ್ ಮಾಡಿ, ‘ಅಭಿಮಾನಿಗಳಿಗೆ ಭಜರಂಗಿಯ ಕೊಡುಗೆ. ಶಿವರಾಜ್ ಕುಮಾರ್ ಈ ಭಾನುವಾರದಂದು (ನವೆಂಬರ್ 14) ಗಾಂಧಿನಗರದ ಅನುಪಮಾ ಚಿತ್ರಮಂದಿರದಲ್ಲಿ ಅಭಿಮಾನಿಗಳೊಂದಿಗೆ ಚಿತ್ರ ವೀಕ್ಷಿಸಲಿದ್ದಾರೆ’ ಎಂದು ತಿಳಿಸಿದೆ. ಈ ಮೂಲಕ ಚಿತ್ರತಂಡ ಅಭಿಮಾನಿಗಳಿಗೆ ಸಂತಸದ ಸುದ್ದಿ ನೀಡಿದೆ.

ಈ ಕುರಿತು ಚಿತ್ರತಂಡ ಹಂಚಿಕೊಂಡ ಮಾಹಿತಿ ಇಲ್ಲಿದೆ:

ಇತ್ತೀಚೆಗೆ ಟಿವಿ9ನೊಂದಿಗೆ ಮಾತನಾಡಿದ್ದ ಶಿವರಾಜ್ ಕುಮಾರ್, ಭಜರಂಗಿ 2 ಚಿತ್ರದ ಪ್ರದರ್ಶನದ ಬಗ್ಗೆ ಮಾತನಾಡಿದ್ದರು. ‘‘ಈ ನೋವಿನಲ್ಲೂ ಅಭಿಮಾನಿಗಳು ಭಜರಂಗಿ 2 ನೋಡುತ್ತಿದ್ದಾರೆ. ನಮ್ಮ ಕಷ್ಟದಲ್ಲಿ ಅಭಿಮಾನಿಗಳು ಜೊತೆಯಾಗಿದ್ದಾರೆ. ಈ ಕಷ್ಟದ ಸಮಯದಲ್ಲೂ ಚಿತ್ರ ನೋಡಿ ನಮ್ಮ ಜೊತೆ ಅಭಿಮಾನಿಗಳು ನಿಂತಿದ್ದಾರೆ. ಪ್ರೇಕ್ಷಕರು ನಮಗೆ ನೀಡಿರುವ ಈ ಬೆಂಬಲಕ್ಕೆ ತುಂಬು ಹೃದಯದ ಧನ್ಯವಾದ ಸಲ್ಲಿಸುತ್ತೇನೆ’’ ಎಂದು ಶಿವರಾಜ್ ಕುಮಾರ್ ನುಡಿದಿದ್ದರು.

ಭಜರಂಗಿ 2 ಚಿತ್ರದಲ್ಲಿ ಭಾವನಾ ಮೆನನ್, ಶ್ರುತಿ, ಭಜರಂಗಿ ಲೋಕಿ, ಶಿವರಾಜ್​ ಕೆ.ಆರ್​. ಪೇಟೆ, ಚೆಲುವ ರಾಜು ಮೊದಲಾದವರು ನಟಿಸಿದ್ದು, ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಎ.ಹರ್ಷ ಹಾಗೂ ಶಿವರಾಜ್ ಕುಮಾರ್ ಕಾಂಬಿನೇಷನ್​ನಲ್ಲಿ ಮೂಡಿಬಂದಿರುವ ಮೂರನೇ ಚಿತ್ರ ಇದಾಗಿದೆ.

ಇದನ್ನೂ ಓದಿ:

Bhajarangi 2 Movie Review: ಫ್ಯಾಂಟಸಿ ಲೋಕದ ‘ಭಜರಂಗಿ 2’ ಕಥೆಯಲ್ಲಿ ಶಿವಣ್ಣನ ಎನರ್ಜಿಯೇ ಹೈಲೈಟ್

Premam Poojyam: ‘ಪ್ರೇಮಂ ಪೂಜ್ಯಂ’ ಸಿನಿಮಾ ರಿಲೀಸ್​; ಪ್ರೇಮ್​ ಅಭಿನಯ ಕಂಡು ವಿಮರ್ಶೆ ತಿಳಿಸಿದ ಸ್ಯಾಂಡಲ್​ವುಡ್​ ಸೆಲೆಬ್ರಿಟಿಗಳು

Published On - 12:20 pm, Fri, 12 November 21