Premam Poojyam: ‘ಪ್ರೇಮಂ ಪೂಜ್ಯಂ’ ಸಿನಿಮಾ ರಿಲೀಸ್​; ಪ್ರೇಮ್​ ಅಭಿನಯ ಕಂಡು ವಿಮರ್ಶೆ ತಿಳಿಸಿದ ಸ್ಯಾಂಡಲ್​ವುಡ್​ ಸೆಲೆಬ್ರಿಟಿಗಳು

TV9 Digital Desk

| Edited By: ಮದನ್​ ಕುಮಾರ್​

Updated on: Nov 12, 2021 | 9:55 AM

Premam Poojyam Review: ‘ಲವ್ಲಿ ಸ್ಟಾರ್​’ ಪ್ರೇಮ್​, ಬೃಂದಾ ಆಚಾರ್ಯ, ಐಂದ್ರಿತಾ ರೇ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿರುವ ‘ಪ್ರೇಮಂ ಪೂಜ್ಯಂ’ ಚಿತ್ರ ಬಿಡುಗಡೆ ಆಗಿದೆ. ಸಿನಿಮಾ ನೋಡಿದ ಬಳಿಕ ಶರಣ್​, ಖುಷಿ ರವಿ, ತರುಣ್​​ ಸುಧೀರ್​ ಮುಂತಾದ ಸೆಲೆಬ್ರಿಟಿಗಳು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

Premam Poojyam: ‘ಪ್ರೇಮಂ ಪೂಜ್ಯಂ’ ಸಿನಿಮಾ ರಿಲೀಸ್​; ಪ್ರೇಮ್​ ಅಭಿನಯ ಕಂಡು ವಿಮರ್ಶೆ ತಿಳಿಸಿದ ಸ್ಯಾಂಡಲ್​ವುಡ್​ ಸೆಲೆಬ್ರಿಟಿಗಳು
‘ಪ್ರೇಮಂ ಪೂಜ್ಯಂ’ ಚಿತ್ರದಲ್ಲಿ ಪ್ರೇಮ್, ಬೃಂದಾ ಆಚಾರ್ಯ
Follow us


ನಟ ‘ನೆನಪಿರಲಿ’ ಪ್ರೇಮ್​ (Nenapirali Prem) ಅಭಿನಯದ ‘ಪ್ರೇಮಂ ಪೂಜ್ಯಂ’ (Premam Poojyam) ಸಿನಿಮಾ ಭಾರಿ ನೀರೀಕ್ಷೆ ಮೂಡಿಸಿತ್ತು. ಇಂದು (ನ.12) ರಾಜ್ಯಾದ್ಯಂತ ಸಿನಿಮಾ ಬಿಡುಗಡೆಯಾಗಿ ಪ್ರದರ್ಶನ ಕಾಣುತ್ತಿದೆ. ಸ್ಯಾಂಡಲ್​ವುಡ್​ನಲ್ಲಿ ಮತ್ತೆ ಹಳೇ ಚಾರ್ಮ್​ ಮರಳುತ್ತಿದೆ. ಎರಡನೇ ಲಾಕ್​ಡೌನ್​ ಬಳಿಕ ಮಂಕಾಗಿದ್ದ ಚಿತ್ರರಂಗ ಈಗ ಚೇತರಿಸಿಕೊಳ್ಳುತ್ತಿದೆ. ಹಲವು​ ಸಿನಿಮಾಗಳು ಬ್ಯಾಕ್​ ಟು ಬ್ಯಾಕ್​ ಬಿಡುಗಡೆ ಆಗುತ್ತಿವೆ. ಆ ಪೈಕಿ ‘ಪ್ರೇಮಂ ಪೂಜ್ಯಂ’ ಚಿತ್ರ ಗಮನ ಸೆಳೆಯುತ್ತಿದೆ. ಬೃಂದಾ ಆಚಾರ್ಯ (Brinda Acharya), ಐಂದ್ರಿತಾ ರೇ (Aindrita Ray), ಸಾಧುಕೋಕಿಲ ಮುಂತಾದವರು ಇದರಲ್ಲಿ ಅಭಿನಯಿಸಿದ್ದಾರೆ. ಗುರುವಾರವೇ (ನ.11) ಕನ್ನಡ ಚಿತ್ರರಂಗದ ಸೆಲೆಬ್ರಿಟಿಗಳಾಗಿ ಈ ಸಿನಿಮಾದ ಪ್ರೀಮಿಯರ್​ ಪ್ರದರ್ಶನ ಏರ್ಪಡಿಸಲಾಗಿತ್ತು. ಚಿತ್ರ ನೋಡಿದ ಬಳಿಕ ಪ್ರೇಮ್​ ಮತ್ತು ತಂಡದ ಪ್ರಯತ್ನಕ್ಕೆ ಎಲ್ಲರೂ ಮೆಚ್ಚುಗೆ ಸೂಚಿಸಿದ್ದಾರೆ. ನಟ ಶರಣ್​, ದಿಯಾ ಖ್ಯಾತಿಯ ಖುಷಿ ರವಿ, ತರುಣ್​ ಸುಧೀರ್​ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಈ ಸಿನಿಮಾ ವೀಕ್ಷಿಸಿದ್ದಾರೆ.

ಶರಣ್​ ಅವರಿಗೆ ಈ ಚಿತ್ರ ಸಖತ್​ ಇಷ್ಟವಾಗಿದೆ. ‘ಪ್ರೇಮಂ ಎಂಬ ಹೆಸರಿನ ರೀತಿಯೇ ಈ ಚಿತ್ರತಂಡಕ್ಕೆ ಸಿನಿಮಾ ಮೇಲೆ ಇರುವ ಪ್ರೇಮವು ಪ್ರತಿ ಫ್ರೇಮ್​ನಲ್ಲಿ ಕಾಣಿಸುತ್ತದೆ. ನಿರ್ದೇಶಕರ ಕನಸು ತುಂಬ ಕಲರ್​ಫುಲ್​ ಆಗಿ ಮೂಡಿಬಂದಿದೆ. ಡಾ. ರಾಘವೇಂದ್ರ ಅವರು ಮೊದಲ ನಿರ್ದೇಶನದ ಪ್ರಯತ್ನದಲ್ಲೇ ಗಮನ ಸೆಳೆದಿದ್ದಾರೆ. ಪ್ರೇಮ್​ ಅವರನ್ನು ಇನ್ನಷ್ಟು ಚೆನ್ನಾಗಿ ತೋರಿಸಲಾಗಿದೆ. ಇಡೀ ತಂಡದವರು ಮನಪೂರ್ವಕವಾಗಿ ಕೆಲಸ ಮಾಡಿದ್ದಾರೆ’ ಎಂದು ಶರಣ್​ ಹೊಗಳಿದ್ದಾರೆ.

ನಟ ಪ್ರೇಮ್​ ಅವರಿಗೆ ವಯಸ್ಸೇ ಆಗುವುದಿಲ್ಲವೇ ಎಂದು ಅಚ್ಚರಿಯ ಪ್ರಶ್ನೆ ಕೇಳಿದ್ದಾರೆ ನಟಿ ಖುಷಿ ರವಿ. ‘ದಿನದಿನಕ್ಕೂ ಪ್ರೇಮ್​ ಅವರು ಯಂಗ್​ ಆಗಿ ಕಾಣಿಸುತ್ತಾರೆ. ಈ ಸಿನಿಮಾ ಒಂದು ದೃಶ್ಯ ವೈಭವದಂತಿದೆ. ನಿಜವಾದ ಪ್ರೀತಿ ಬಗ್ಗೆ ಒಂದೊಳ್ಳೆಯ ಮೆಸೇಜ್​ ಈ ಸಿನಿಮಾದಲ್ಲಿದೆ. ಎಲ್ಲರೂ ಚಿತ್ರಮಂದಿರದಲ್ಲಿ ಈ ಸಿನಿಮಾವನ್ನು ನೋಡಿ. ಓಟಿಟಿಗೋಸ್ಕರ ಕಾಯಬೇಡಿ’ ಎಂದು ಖುಷಿ ರವಿ ಹೇಳಿದ್ದಾರೆ.

ಖ್ಯಾತ ನಿರ್ದೇಶಕ ತರುಣ್​ ಸುಧೀರ್​ ಅವರು ಸಹ ಈ ಸಿನಿಮಾವನ್ನು ಮೆಚ್ಚಿಕೊಂಡಿದ್ದಾರೆ. ‘ಪ್ರೇಮ್​ ಹೀರೋ ಎಂದುಕೊಂಡು ಈ ಸಿನಿಮಾ ನೋಡಲು ಬಂದೆ. ಆದರೆ ಪೂರ್ತಿ ಸಿನಿಮಾ ನೋಡಿದ ಬಳಿಕ ಗೊತ್ತಾಯಿತು ಇದು ಮಲ್ಟಿಸ್ಟಾರರ್​ ಚಿತ್ರ. ನಿರ್ದೇಶಕ ರಾಘವೇಂದ್ರ ಮತ್ತು ಛಾಯಾಗ್ರಾಹಕ ನವೀನ್​ ಅವರನ್ನು ಕೂಡ ಈ ಸಿನಿಮಾದ ಹೀರೋಗಳು ಅಂತ ನಾನು ಹೇಳುತ್ತೇನೆ. ಈ ಮೂವರ ಜುಗಲ್​ಬಂದಿ ಚೆನ್ನಾಗಿ ಮೂಡಿಬಂದಿದೆ. ಒಂದು ಫ್ರೇಮ್​ ಕೂಡ ರಾಜಿ ಆಗಿಲ್ಲ’ ಎಂದು ತರುಣ್​ ಸುಧೀರ್​ ಹಾಡಿ ಹೊಗಳಿದ್ದಾರೆ.

ಇದನ್ನೂ ಓದಿ:

‘ಜಿಮ್​ಗೆ ಹೋಗೋದ್ರಿಂದ ಸಾವು ಸಂಭವಿಸುತ್ತೆ ಅನ್ನೋದು ತಪ್ಪು’: ನಟ ನೆನಪಿರಲಿ ಪ್ರೇಮ್​

‘ನೆನಪಿರಲಿ’ ಪ್ರೇಮ್​ ಮುಂದಿನ ಚಿತ್ರಕ್ಕೆ 400 ಕೋಟಿ ರೂ. ಬಜೆಟ್​; ಹಾಲಿವುಡ್​ ಹಾದಿಯತ್ತ ‘ಲವ್ಲಿ ಸ್ಟಾರ್​’

ತಾಜಾ ಸುದ್ದಿ

Related Stories

Click on your DTH Provider to Add TV9 Kannada