ಅಕ್ಟೋಬರ್ 19ಕ್ಕೆ ಶಿವರಾಜ್ಕುಮಾರ್ ಅಭಿಮಾನಿಗಳ ಪಾಲಿಗೆ ನಿಜಕ್ಕೂ ಹಬ್ಬ. ಅಂದು ‘ಘೋಸ್ಟ್’ ಸಿನಿಮಾ (Ghost Movie) ಬಿಡುಗಡೆ ಆಗಲಿದೆ. ಈ ಬಹುನಿರೀಕ್ಷಿತ ಚಿತ್ರದ ಮೇಲೆ ಭರ್ಜರಿ ಹೈಪ್ ಸೃಷ್ಟಿ ಆಗಿದೆ. ಅದಕ್ಕೆ ಹಲವಾರು ಕಾರಣಗಳಿವೆ. ನಿರ್ದೇಶಕ ಶ್ರೀನಿ ಅವರು ಶಿವರಾಜ್ಕುಮಾರ್ ಅವರನ್ನು ತುಂಬ ಸ್ಟೈಲಿಶ್ ಆಗಿ ಈ ಚಿತ್ರದಲ್ಲಿ ತೋರಿಸಿದ್ದಾರೆ. ಅದರ ಝಲಕ್ ಈಗಾಗಲೇ ಟ್ರೇಲರ್ನಲ್ಲಿ ಕಾಣಿಸಿದೆ. ಇಡೀ ಟ್ರೇಲರ್ನಲ್ಲಿ ಹೆಚ್ಚು ಗಮನ ಸೆಳೆದಿದ್ದು ಶಿವರಾಜ್ಕುಮಾರ್ (Shivarajkumar) ಅವರ ಯಂಗ್ ಗೆಟಪ್. ಅದರ ಬಗ್ಗೆ ಫ್ಯಾನ್ಸ್ ವಲಯದಲ್ಲಿ ಸಖತ್ ಚರ್ಚೆ ಆಗುತ್ತಿದೆ. ದೊಡ್ಡ ಪರದೆಯಲ್ಲಿ ಆ ಲುಕ್ ನೋಡಬೇಕು ಎಂಬ ಕಾರಣದಿಂದಲೇ ಅನೇಕರು ಕಾದಿದ್ದಾರೆ. ಅದೇ ಗೆಟಪ್ ಬಗ್ಗೆ ಮಾತನಾಡುತ್ತ ಶಿವಣ್ಣ ಕೊಂಚ ಎಮೋಷನಲ್ ಆಗಿದ್ದಾರೆ. ಈ ವೇಳೆ ಅವರು ಪಾರ್ವತಮ್ಮ ರಾಜ್ಕುಮಾರ್ (Parvathamma Rajkumar) ಅವರನ್ನು ನೆನಪಿಸಿಕೊಂಡಿದ್ದಾರೆ.
‘ಘೋಸ್ಟ್’ ಸಿನಿಮಾದ ಸುದ್ದಿಗೋಷ್ಠಿ ಭಾನುವಾರ (ಅ.16) ಸಂಜೆ ಶಿವರಾಜ್ಕುಮಾರ್ ಅವರ ನಿವಾಸದಲ್ಲಿ ನಡೆಯಿತು. ಈ ವೇಳೆ ಅವರು ಅನೇಕ ವಿಚಾರಗಳ ಬಗ್ಗೆ ಮಾತನಾಡಿದರು. ಟ್ರೇಲರ್ನಲ್ಲಿ ತಮ್ಮ ಯಂಗ್ ಗೆಟಪ್ಗೆ ಜನರಿಂದ ಭರ್ಜರಿ ಮೆಚ್ಚುಗೆ ಕೇಳಿಬಂದಿರುವುದರ ಬಗ್ಗೆಯೂ ಅವರು ತಮ್ಮ ಅನಿಸಿಕೆ ಹಂಚಿಕೊಂಡರು. ಈ ರೀತಿ ಕಾಣುವಂತೆ ಪ್ರಯತ್ನಿಸಿದ ನಿರ್ದೇಶಕ ಶ್ರೀನಿ ಮತ್ತು ತಂಡಕ್ಕೆ ಶಿವಣ್ಣ ಪ್ರಶಂಸೆ ವ್ಯಕ್ತಪಡಿಸಿದರು. ಇದನ್ನೆಲ್ಲ ನೋಡಲು ತಾಯಿ ಇರಬೇಕಾಗಿತ್ತು ಎಂದು ಕೂಡ ಅವರು ಹೇಳಿದ್ದಾರೆ.
ನಿಖಿಲ್ ಕುಮಾರ್ ಸಿನಿಮಾದ ಸೆಟ್ಗೆ ಭೇಟಿ ನೀಡಿದ ಶಿವರಾಜ್ಕುಮಾರ್; ಫೋಟೋ ವೈರಲ್
ಶಿವರಾಜ್ಕುಮಾರ್ ಅವರ ವೃತ್ತಿಜೀವನ ತುಂಬ ಚೆನ್ನಾಗಿ ರೂಪುಗೊಳ್ಳುವಲ್ಲಿ ತಾಯಿ ಪಾರ್ವತಮ್ಮ ರಾಜ್ಕುಮಾರ್ ಅವರ ಕೊಡುಗೆ ಸಾಕಷ್ಟು ಇದೆ. ಆರಂಭದ ದಿನಗಳಲ್ಲಿ ‘ಆನಂದ್’, ‘ರಘ ಸಪ್ತಮಿ’, ‘ಸಂಯುಕ್ತ’, ‘ರಣರಂಗ’ ಮುಂತಾದ ಚಿತ್ರಗಳಲ್ಲಿ ಶಿವಣ್ಣ ಹೇಗೆ ಕಾಣುತ್ತಿದ್ದರೋ ಅದೇ ರೀತಿಯ ಗೆಟಪ್ ಈಗ ‘ಘೋಸ್ಟ್’ ಸಿನಿಮಾದಲ್ಲಿ ಕಾಣಿಸಲಿದೆ. ಹಾಗಾಗಿ ಇದನ್ನು ಪಾರ್ವತಮ್ಮ ಅವರು ನೋಡಿದ್ದರೆ ತುಂಬ ಖುಷಿಪಡುತ್ತಿದ್ದರು. ಅವರು ಭೌತಿಕವಾಗಿ ಇಲ್ಲ ಎಂಬುದನ್ನು ನೆನೆದು ಶಿವಣ್ಣ ಕೊಂಚ ಎಮೋಷನಲ್ ಆದರು.
‘ಮೊದಲಿಗೆ ಶ್ರೀನಿ ಅವರು ಸ್ಯಾಂಪಲ್ ಮಾತ್ರ ಕಳಿಸಿದ್ದರು. ನಂತರ ನಾನು ನೋಡಿದ್ದು ಕೂಡ ನಿಮ್ಮ ಜೊತೆ. ಈಗ ನೋಡಿದಾಗ ಚೆನ್ನಾಗಿ ಎನಿಸಿತು, ಅಚ್ಚರಿ ಆಯಿತು. ನಾನೇ 1987ರ ಕಾಲಕ್ಕೆ ತೆರಳಿದಂತೆ ಭಾಸವಾಯ್ತು. ಆದರೆ ಇದನ್ನು ನೋಡೋಕೆ ನಮ್ಮ ತಾಯಿ ಇಲ್ಲ ಅಂತ ದುಃಖ ಆಯಿತು. ಯಾಕೆಂದರೆ ‘ಆನಂದ್’ ಸಿನಿಮಾ ಶುರು ಮಾಡಿದ್ದು ಅವರೇ ತಾನೆ’ ಎಂದು ಶಿವರಾಜ್ಕುಮಾರ್ ಹೇಳಿದ್ದಾರೆ. ವಿದೇಶದಲ್ಲಿ ವಿಶೇಷ ತಂತ್ರಜ್ಞಾನ ಬಳಸಿ ಈ ಲುಕ್ ಮಾಡಲಾಗಿದೆ. ಕಥೆಯಲ್ಲಿ ಈ ಗೆಟಪ್ ಎಷ್ಟು ಮುಖ್ಯವಾಗಲಿದೆ ಎಂಬುದನ್ನು ತಿಳಿಯುವ ಕಾತರ ಹೆಚ್ಚಾಗಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.