AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಮಲ್ ಹಾಸನ್ ಅವರನ್ನು ಭೇಟಿ ಆಗಿದ್ದೇಕೆ ಶಿವಣ್ಣ, ಒಟ್ಟಿಗೆ ಸಿನಿಮಾ ಮಾಡ್ತಿದ್ದಾರಾ? ಕೊಟ್ರಾ ಉತ್ತರ

Shiva Rajkumar: ಕಮಲ್ ಹಾಗೂ ಶಿವಣ್ಣ ಒಟ್ಟಿಗೆ ನಟಿಸುತ್ತಿದ್ದಾರಾ? ಕಮಲ್ ಹಾಸನ್ ಅವರನ್ನು ಭೇಟಿ ಆಗಿದ್ದೇಕೆ? ಉತ್ತರ ಕೊಟ್ಟರು ಶಿವರಾಜ್ ಕುಮಾರ್.

ಕಮಲ್ ಹಾಸನ್ ಅವರನ್ನು ಭೇಟಿ ಆಗಿದ್ದೇಕೆ ಶಿವಣ್ಣ, ಒಟ್ಟಿಗೆ ಸಿನಿಮಾ ಮಾಡ್ತಿದ್ದಾರಾ? ಕೊಟ್ರಾ ಉತ್ತರ
ಶಿವಣ್ಣ-ಕಮಲ್ ಹಾಸನ್
ಮಂಜುನಾಥ ಸಿ.
|

Updated on: Oct 15, 2023 | 10:21 PM

Share

ಶಿವರಾಜ್ ಕುಮಾರ್ (Shiva Rajkumar) ನಟನೆಯ ‘ಘೋಸ್ಟ್‘ (Ghost) ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಸಿನಿಮಾದ ಪ್ರಚಾರ ಕಾರ್ಯದಲ್ಲಿ ಶಿವಣ್ಣ ತೊಡಗಿಕೊಂಡಿದ್ದಾರೆ. ಸಿನಿಮಾವು ಹಲವು ಭಾಷೆಗಳಲ್ಲಿ ಬಿಡುಗಡೆ ಆಗುತ್ತಿದೆ. ಇದೇ ಕಾರಣಕ್ಕೆ ವಿವಿಧ ನಗರಗಳಿಗೆ ಹೋಗಿ ಸಿನಿಮಾವನ್ನು ಶಿವಣ್ಣ ಪ್ರಮೋಟ್ ಮಾಡುತ್ತಿದ್ದಾರೆ. ಸಿನಿಮಾದ ಪ್ರಚಾರಕ್ಕಾಗಿ ಇತ್ತೀಚೆಗಷ್ಟೆ ಮುಂಬೈಗೆ ಶಿವಣ್ಣ ತೆರಳಿದ್ದರು ಅಲ್ಲಿ ನಟ ಕಮಲ್ ಹಾಸನ್ ಅವರನ್ನು ಭೇಟಿ ಮಾಡಿದ್ದರು. ಆ ಭೇಟಿಯ ಕಾರಣ ಏನೆಂಬುದನ್ನು ಶಿವಣ್ಣ ತಿಳಿಸಿದ್ದಾರೆ.

‘ಘೋಸ್ಟ್’ ಸಿನಿಮಾದ ಸುದ್ದಿಗೋಷ್ಠಿ ಇಂದು (ಅಕ್ಟೋಬರ್ 15) ರಂದು ಬೆಂಗಳೂರಿನಲ್ಲಿ ನಡೆಯಿತು. ಸಿನಿಮಾದ ಬಗ್ಗೆ ಮಾತನಾಡಿದ ಬಳಿಕ ಪತ್ರಕರ್ತರು ಕೇಳಿದ ಪ್ರಶ್ನೆಗಳಿಗೆ ಶಿವಣ್ಣ ಉತ್ತರಿಸಿದರು. ಕಮಲ್ ಹಾಸನ್ ಅವರನ್ನು ಭೇಟಿ ಆಗಲು ಕಾರಣವೇನು? ಒಟ್ಟಿಗೆ ಸಿನಿಮಾ ಮಾಡುತ್ತಿದ್ದೀರಾ? ಎಂಬ ಪ್ರಶ್ನೆ ಪತ್ರಕರ್ತರಿಂದ ಶಿವಣ್ಣನಿಗೆ ಎದುರಾಯ್ತು.

ಪ್ರಶ್ನೆಗೆ ಉತ್ತರಿಸಿದ ಶಿವಣ್ಣ, ”ನಾವು ಮುಂಬೈನಲ್ಲಿ ತಂಗಿದ್ದ ಹೋಟೆಲ್​ನಲ್ಲಿಯೇ ಕಮಲ್ ಹಾಸನ್ ಅವರು ಇದ್ದರು. ಅವರು ಊಟ ಮಾಡಲು ಬಂದರು ಆಗ ಹೋಗಿ ಅವರನ್ನು ಭೇಟಿ ಮಾಡಿದೆ. ನನ್ನನ್ನು ಭೇಟಿ ಮಾಡಲು ಹೇಗೆ ಕೆಲವರು ಬರುತ್ತಾರೆಯೋ ಫ್ಯಾನ್ ಬಾಯ್ ರೀತಿ, ಅದೇ ರೀತಿ ನಾನು ಫ್ಯಾನ್ ಬಾಯ್ ಆಗಿ ಅವರನ್ನು ಭೇಟಿ ಮಾಡಲು ಹೋದೆ” ಎಂದಿದ್ದಾರೆ.

ಇದನ್ನೂ ಓದಿ: ‘ಅವರು ಹಾಗೆ ಮಾಡಬಾರದಿತ್ತು’: ‘ಕಬ್ಜ’ ಸಿನಿಮಾ ಬಗ್ಗೆ ಶಿವರಾಜ್ ಕುಮಾರ್ ಅಸಮಾಧಾನ

ಇಬ್ಬರೂ ಒಟ್ಟಿಗೆ ಸಿನಿಮಾ ಮಾಡುತ್ತೀರ? ಎಂಬ ಪ್ರಶ್ನೆಗೆ, ಅದನ್ನೆಲ್ಲ ನಾವು ಮಾತನಾಡಿಲ್ಲ. ನನಗೆ ಕಮಲ್ ಹಾಸನ್ ಎಂದರೆ ಇಷ್ಟ. ಅವರು ಬಹಳ ಒಳ್ಳೆಯ ವ್ಯಕ್ತಿ, ಸಿನಿಮಾ ಮಾಡಿ ಎಂದು ನಾನು ಕೇಳಿ ಅವರನ್ನು ಇಕ್ಕಟ್ಟಿಗೆ ಸಿಲುಕಿಸಲು ನನಗೆ ಇಷ್ಟವಿಲ್ಲ. ಅವರು ಒಳ್ಳೆಯವರು, ನನಗೆ ಪರಿಚಯ ಎಂದ ಮಾತ್ರಕ್ಕೆ ನನ್ನ ಅನುಕೂಲಕ್ಕೆ ಅವರನ್ನು ಬಳಸಿಕೊಳ್ಳಬಾರದು. ಅದು ಸರಿಯಲ್ಲ. ಅವರು ಅದ್ಭುತ ನಟ, ಅವರೊಟ್ಟಿಗೆ ನಟಿಸಲು ನನಗೆ ಬಹಳ ಇಷ್ಟವಿದೆ. ಹಾಗೆಂದು ಅವರನ್ನು ಕೇಳಿ ಇಕ್ಕಟ್ಟಿಗೆ ತಳ್ಳಬಾರದು. ಸಿನಿಮಾ ಮಾಡುವ ಯಾರೋ ಒಬ್ಬರು ಹೇಳಿದ್ದಾರೆ ಮುಂದೆ ಯಾವಾಗಲಾದರೂ ನೋಡೋಣ” ಎಂದರು ಶಿವಣ್ಣ.

ಶಿವರಾಜ್ ಕುಮಾರ್ ನಟಿಸಿರುವ ‘ಘೋಸ್ಟ್’ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಸಿನಿಮಾದಲ್ಲಿ ಹಲವು ಷೇಡ್​ಗಳಲ್ಲಿ ಶಿವಣ್ಣ ಕಾಣಿಸಿಕೊಂಡಿದ್ದಾರೆ. ಸಿನಿಮಾದಲ್ಲಿ ಬಾಲಿವುಡ್ ಹಿರಿಯ ನಟ ಅನುಪಮ್ ಖೇರ್ ಸಹ ಇದ್ದಾರೆ. ಸಿನಿಮಾವನ್ನು ಶ್ರೀನಿ ನಿರ್ದೇಶನ ಮಾಡಿದ್ದು, ಸಿನಿಮಾವು ಅಕ್ಟೋಬರ್ 19ರಂದು ಪ್ಯಾನ್ ಇಂಡಿಯಾ ಲೆವೆಲ್​ನಲ್ಲಿ ತೆರೆಗೆ ಬರುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪಿಕ್​ಅಪ್ ವ್ಯಾನ್ ಮೇಲೆ ಬಿದ್ದ ನಿರ್ಮಾಣ ಹಂತದ ಮೇಲ್ಸೇತುವೆಯ ಗ್ರಿಡರ್
ಪಿಕ್​ಅಪ್ ವ್ಯಾನ್ ಮೇಲೆ ಬಿದ್ದ ನಿರ್ಮಾಣ ಹಂತದ ಮೇಲ್ಸೇತುವೆಯ ಗ್ರಿಡರ್
ದಾರಿಯಲ್ಲಿ ಸಿಕ್ಕ ಹಣ ರೈತನಿಗೆ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಪೊಲೀಸ್
ದಾರಿಯಲ್ಲಿ ಸಿಕ್ಕ ಹಣ ರೈತನಿಗೆ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಪೊಲೀಸ್
ಜಾಲಹಳ್ಳಿಯಲ್ಲಿ ಫ್ಲೈಓವರ್ ಪಿಲ್ಲರ್ ಎಡೆಯಲ್ಲಿ ಆರಾಮವಾಗಿ ಮಲಗಿದ ವ್ಯಕ್ತಿ!
ಜಾಲಹಳ್ಳಿಯಲ್ಲಿ ಫ್ಲೈಓವರ್ ಪಿಲ್ಲರ್ ಎಡೆಯಲ್ಲಿ ಆರಾಮವಾಗಿ ಮಲಗಿದ ವ್ಯಕ್ತಿ!
ಬೆತ್ ಮೂನಿಯ ಭರ್ಜರಿ ಸೆಂಚುರಿಯೊಂದಿಗೆ ಗೆದ್ದು ಬೀಗಿದ ಸ್ಕಾಚರ್ಸ್
ಬೆತ್ ಮೂನಿಯ ಭರ್ಜರಿ ಸೆಂಚುರಿಯೊಂದಿಗೆ ಗೆದ್ದು ಬೀಗಿದ ಸ್ಕಾಚರ್ಸ್
ಗಿಲ್ಲಿ-ಕಾವ್ಯಾ ನಡುವೆ ಇನ್ನೂ ಮುಗಿದಿಲ್ಲ ಹುಸಿಮುನಿಸು
ಗಿಲ್ಲಿ-ಕಾವ್ಯಾ ನಡುವೆ ಇನ್ನೂ ಮುಗಿದಿಲ್ಲ ಹುಸಿಮುನಿಸು
ದಾಂಪತ್ಯದಲ್ಲಿ ಈ ಐದು ವಿಷಯಗಳನ್ನು ಗಂಡನಿಗೆ ಹೆಂಡತಿ ಹೇಳಲೇಬಾರದು!
ದಾಂಪತ್ಯದಲ್ಲಿ ಈ ಐದು ವಿಷಯಗಳನ್ನು ಗಂಡನಿಗೆ ಹೆಂಡತಿ ಹೇಳಲೇಬಾರದು!
ಗುರುಗಳ ಲಹರಿ ಇರುವ ಈ ದಿನ ಹೇಗಿರಲಿದೆ ನಿಮ್ಮ ಭವಿಷ್ಯ? ಇಲ್ಲಿದೆ ವಿವರಣೆ
ಗುರುಗಳ ಲಹರಿ ಇರುವ ಈ ದಿನ ಹೇಗಿರಲಿದೆ ನಿಮ್ಮ ಭವಿಷ್ಯ? ಇಲ್ಲಿದೆ ವಿವರಣೆ
ದೇವಸ್ಥಾನದೊಳಗೆ ದೇವರೆದುರು ಕುಳಿತಿದ್ದಾಗಲೇ ಪ್ರಾಣ ಬಿಟ್ಟ ಭಕ್ತ!
ದೇವಸ್ಥಾನದೊಳಗೆ ದೇವರೆದುರು ಕುಳಿತಿದ್ದಾಗಲೇ ಪ್ರಾಣ ಬಿಟ್ಟ ಭಕ್ತ!
ದೆಹಲಿ ಸ್ಫೋಟದ ಶೀಘ್ರ ತನಿಖೆಗೆ ನಿರ್ಧಾರ; ಸಚಿವ ಅಶ್ವಿನಿ ವೈಷ್ಣವ್
ದೆಹಲಿ ಸ್ಫೋಟದ ಶೀಘ್ರ ತನಿಖೆಗೆ ನಿರ್ಧಾರ; ಸಚಿವ ಅಶ್ವಿನಿ ವೈಷ್ಣವ್
ಕಾರು ಡಿಕ್ಕಿ ಹೊಡೆದ ರಭಸಕ್ಕೆ ಗಿರಕಿ ಹೊಡೆದ ಆಟೋ: ಎದೆ ಝಲ್​ ಎನ್ನುವ ದೃಶ್ಯ
ಕಾರು ಡಿಕ್ಕಿ ಹೊಡೆದ ರಭಸಕ್ಕೆ ಗಿರಕಿ ಹೊಡೆದ ಆಟೋ: ಎದೆ ಝಲ್​ ಎನ್ನುವ ದೃಶ್ಯ