ಪ್ರಜ್ವಲ್ ದೇವರಾಜ್‌ಗೆ ಆ್ಯಕ್ಷನ್-ಕಟ್ ಹೇಳಲಿರುವ ‘ಅಂಬಿ ನಿಂಗ್ ವಯಸ್ಸಾಯ್ತೋ’ ನಿರ್ದೇಶಕ ಗುರುದತ್ ಗಾಣಿಗ
ಈವರೆಗೂ ಪ್ರಜ್ವಲ್ ದೇವರಾಜ್ ಅವರು ಹಲವು ಬಗೆಯ ಸಿನಿಮಾಗಳನ್ನು ಮಾಡಿದ್ದಾರೆ. ಈಗ ಗುರುದತ್ ಗಾಣಿಗ ನಿರ್ದೇಶನ ಮಾಡಿರುವ ಈ ಚಿತ್ರವು ಪ್ರಜ್ವಲ್ ಅವರ ವೃತ್ತಿ ಜೀವನದಲ್ಲೇ ಡಿಫರೆಂಟ್ ಆದಂತಹ ಸಿನಿಮಾ ಆಗಲಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಈತನಕ ಕಾಣಿಸಿಕೊಳ್ಳದೇ ಇರುವಂತಹ ಪಾತ್ರಕ್ಕೆ ಪ್ರಜ್ವಲ್ ಬಣ್ಣ ಹಚ್ಚಲಿದ್ದಾರೆ.
‘ಡೈನಾಮಿಕ್ ಪ್ರಿನ್ಸ್’ ಪ್ರಜ್ವಲ್ ದೇವರಾಜ್ (Prajwal Devaraj) ಅಭಿನಯದ ಹೊಸ ಚಿತ್ರದ ಪೋಸ್ಟರ್ ನವರಾತ್ರಿಯ ಮೊದಲ ದಿನ ಅನಾವರಣ ಆಗಿದೆ. ಈ ಸಿನಿಮಾದ ಬಗ್ಗೆ ಹೈಪ್ ಕ್ರಿಯೇಟ್ ಆಗಲು ಅನೇಕ ಕಾರಣಗಳಿವೆ. ಇದು ಪ್ರಜ್ವಲ್ ದೇವರಾಜ್ ಅಭಿನಯಿಸುತ್ತಿರುವ 40ನೇ ಚಿತ್ರ ಎಂಬುದು ವಿಶೇಷ. ಸದ್ಯಕ್ಕಂತೂ ಪ್ರಜ್ವಲ್ ಅವರು ಸಖತ್ ಬ್ಯುಸಿ ಆಗಿದ್ದಾರೆ. ಅವರ ಕೈಯಲ್ಲೀಗ ಲೋಹಿತ್ ನಿರ್ದೇಶನದ ‘ಮಾಫಿಯಾ’ ಸೇರಿದಂತೆ ಇನ್ನೂ ಶೀರ್ಷಿಕೆ ಅಂತಿಮವಾಗದ ಎರಡು ಸಿನಿಮಾಗಳು (Prajwal Devaraj Movies) ಇವೆ. ಅದರ ನಡುವೆಯೇ 40ನೇ ಚಿತ್ರದ ಬಗ್ಗೆ ಮಾಹಿತಿ ಹೊರಬಿದ್ದಿದೆ. ಆಕರ್ಷಕವಾದ ಪೋಸ್ಟರ್ ರಿಲೀಸ್ ಮಾಡುವ ಮೂಲಕ ಸಿನಿಮಾ ಅನೌನ್ಸ್ ಮಾಡಲಾಗಿದೆ. ಈ ಚಿತ್ರಕ್ಕೆ ಇನ್ನೂ ಟೈಟಲ್ ಫಿಕ್ಸ್ ಆಗಿಲ್ಲ. ಗುರುದತ್ ಗಾಣಿಗ (Gurudatha Ganiga) ಅವರು ಈ ಸಿನಿಮಾಗೆ ನಿರ್ದೇಶನ ಮಾಡಲಿದ್ದಾರೆ.
ಈವರೆಗೂ ಪ್ರಜ್ವಲ್ ದೇವರಾಜ್ ಅವರು ಹಲವು ಬಗೆಯ ಸಿನಿಮಾಗಳನ್ನು ಮಾಡಿದ್ದಾರೆ. ಈಗ ಗುರುದತ್ ಗಾಣಿಗ ನಿರ್ದೇಶನ ಮಾಡಿರುವ ಈ ಚಿತ್ರವು ಪ್ರಜ್ವಲ್ ಅವರ ವೃತ್ತಿ ಜೀವನದಲ್ಲೇ ಡಿಫರೆಂಟ್ ಆದಂತಹ ಸಿನಿಮಾ ಆಗಲಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಈತನಕ ಕಾಣಿಸಿಕೊಳ್ಳದೇ ಇರುವಂತಹ ಪಾತ್ರಕ್ಕೆ ಪ್ರಜ್ವಲ್ ಬಣ್ಣ ಹಚ್ಚಲಿದ್ದಾರೆ. ಈ ಹಿಂದೆ ‘ಅಂಬಿ ನಿಂಗ್ ವಯಸ್ಸಾಯ್ತೋ’ ಸಿನಿಮಾಗೆ ನಿರ್ದೇಶನ ಮಾಡಿದ್ದ ಗುರುದತ್ ಗಾಣಿಗ ಅವರು ಈಗ ಪ್ರಜ್ವಲ್ ದೇವರಾಜ್ ನಟನೆಯ 40ನೇ ಚಿತ್ರಕ್ಕೆ ಆಕ್ಷನ್-ಕಟ್ ಹೇಳಲಿದ್ದಾರೆ.
View this post on Instagram
ಗುರುದತ್ ಗಾಣಿಗ ಅವರು ನಿರ್ದೇಶನದ 2ನೇ ಚಿತ್ರ ಇದು. ಬಹುತಾರಾಗಣವಿದ್ದ ‘ಅಂಬಿ ನಿಂಗ್ ವಯಸ್ಸಾಯ್ತೋ’ ಸಿನಿಮಾ 2018ರಲ್ಲೇ ರಿಲೀಸ್ ಆಗಿತ್ತು. ಆ ಚಿತ್ರಕ್ಕೆ ಜನಮೆಚ್ಚುಗೆ ಸಿಕ್ಕರೂ ಕೂಡ ತಕ್ಷಣದಲ್ಲಿ ಗುರುದತ್ ಅವರು ಯಾವುದೇ ಸಿನಿಮಾವನ್ನು ಕೈಗೆತ್ತಿಕೊಂಡಿರಲಿಲ್ಲ. ಚೊಚ್ಚಲ ಚಿತ್ರದಲ್ಲೇ ಸುಹಾಸಿನಿ, ಅಂಬರೀಷ್, ಕಿಚ್ಚ ಸುದೀಪ್ ಅವರಂತಹ ಸ್ಟಾರ್ ಕಲಾವಿದರಿಗೆ ನಿರ್ದೇಶನ ಮಾಡಿದ್ದ ಗುರು ಅವರು ಒಂದು ಗ್ಯಾಪ್ನ ಬಳಿಕ ಮತ್ತೆ ಡೈರೆಕ್ಟರ್ ಕ್ಯಾಪ್ ಧರಿಸಿದ್ದಾರೆ.
ಇದನ್ನೂ ಓದಿ: Prajwal Devaraj: ಹೇಗಿತ್ತು ನೋಡಿ ಪ್ರಜ್ವಲ್ ದೇವರಾಜ್ ಬರ್ತ್ಡೇ ಸಂಭ್ರಮ
ಕುತೂಹಲ ಮೂಡಿಸಿದ ಪೋಸ್ಟರ್:
ಈ ಚಿತ್ರದ ಪೋಸ್ಟರ್ ನೋಡಿದಾಗ ಇದು ಕಂಬಳ ಕುರಿತಾದ ಸಿನಿಮಾ ಎಂಬುದು ತಿಳಿಯುತ್ತದೆ. ಕರಾವಳಿ ಭಾಗದ ಕಹಾನಿಯನ್ನು ಈ ಸಿನಿಮಾ ತೆರೆದಿಡಲಿದೆ. ಈ ಚಿತ್ರವನ್ನು ‘ವಿಕೆ ಫಿಲ್ಮ್ಸ್’ ಮತ್ತು ‘ಗುರುದತ ಗಾಣಿಗ ಫಿಲ್ಮ್ಸ್’ ಸಂಸ್ಥೆಗಳ ಮೂಲಕ ನಿರ್ಮಾಣ ಮಾಡಲಾಗುತ್ತಿದೆ. ಗುರುದತ್ ಅವರು ಡೈರೆಕ್ಷನ್ ಜೊತೆ ಪ್ರೊಡಕ್ಷನ್ ಜವಾಬ್ದಾರಿಯನ್ನೂ ಹೊತ್ತಿದ್ದಾರೆ. ಸಚಿನ್ ಬಸ್ರೂರು ಅವರ ಸಂಗೀತ ನಿರ್ದೇಶನ, ಅಭಿಮನ್ಯು ಸದಾನಂದ್ ಅವರ ಛಾಯಾಗ್ರಹಣದಲ್ಲಿ ಈ ಸಿನಿಮಾ ಮೂಡಿಬರಲಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.