ಭಾರತ-ಪಾಕಿಸ್ತಾನ ಕ್ರಿಕೆಟ್ ಪಂದ್ಯಕ್ಕೆ ‘ಘೋಸ್ಟ್’ ಕಮೆಂಟ್ರಿ: ಶಿವಣ್ಣನ ಊಹೆ ನಿಜವಾಯ್ತಾ?

Shiva Rajkumar: ಇಂದು (ಅಕ್ಟೋಬರ್ 14) ನಡೆಯುತ್ತಿರುವ ಭಾರತ-ಪಾಕಿಸ್ತಾನ ಪಂದ್ಯಕ್ಕೆ ಶಿವರಾಜ್ ಕುಮಾರ್ ವೀಕ್ಷಕ ವಿವರಣೆ ಮಾಡಿದರು. ಪಾಕಿಸ್ತಾನ ಎಷ್ಟು ಸ್ಕೋರ್ ಹೊಡೆಯಬಹುದು ಎಂಬ ಊಹೆಯನ್ನು ಶಿವಣ್ಣ ಮಾಡಿದ್ದು, ಶಿವಣ್ಣನ ಊಹೆ ನಿಜವಾಗುತ್ತಾ?

ಭಾರತ-ಪಾಕಿಸ್ತಾನ ಕ್ರಿಕೆಟ್ ಪಂದ್ಯಕ್ಕೆ 'ಘೋಸ್ಟ್' ಕಮೆಂಟ್ರಿ: ಶಿವಣ್ಣನ ಊಹೆ ನಿಜವಾಯ್ತಾ?
ಶಿವಣ್ಣ
Follow us
ಮಂಜುನಾಥ ಸಿ.
|

Updated on:Oct 14, 2023 | 5:23 PM

ಶಿವರಾಜ್ ಕುಮಾರ್ (Shiva Rajkumar) ಅವರಿಗೆ ಕಿರುತೆರೆ ಹೊಸದೇನೂ ಅಲ್ಲ. ಕೆಲವು ರಿಯಾಲಿಟಿ ಶೋಗಳಲ್ಲಿ ಅತಿಥಿಯಾಗಿ, ಜಡ್ಜ್​ ಆಗಿ, ನಿರೂಪಕನಾಗಿ ಶಿವರಾಜ್ ಕುಮಾರ್ ಪಾಲ್ಗೊಂಡಿದ್ದಾರೆ. ಇದೇ ಮೊದಲ ಬಾರಿಗೆ ಕ್ರಿಕೆಟ್ ಕಮೆಂಟೇಟರ್ ಆಗಿ ಕಾಣಿಸಿಕೊಂಡರು ಶಿವಣ್ಣ. ಇಂದು (ಅಕ್ಟೋಬರ್ 14) ಅಹಮದಾಬಾದ್​ನಲ್ಲ ನಡೆಯುತ್ತಿರುವ ಭಾರತ-ಪಾಕಿಸ್ತಾನ ಪಂದ್ಯಕ್ಕೆ ಶಿವಣ್ಣ ವೀಕ್ಷಕ ವಿವರಣೆ ನೀಡಿದರು. ಅದೂ ಕನ್ನಡದಲ್ಲಿ.

ಸ್ಟಾರ್ ಸ್ಪೋರ್ಟ್ಸ್ ಕನ್ನಡದಲ್ಲಿ ಕನ್ನಡ ಕಮೆಂಟ್ರಿಯೊಂದಿಗೆ ಭಾರತ-ಪಾಕಿಸ್ತಾನ ಮ್ಯಾಚ್ ನೇರ ಪ್ರಸಾರ ನಡೆಯುತ್ತಿದ್ದು, ವೃತ್ತಿಪರ ಕಾಮೆಂಟೇಟರ್​ಗಳ ಜೊತೆಗೆ ಕಮೆಂಟರಿಗೆ ಕೂತ ಶಿವರಾಜ್ ಕುಮಾರ್, ತಮ್ಮದೇ ರೀತಿಯಲ್ಲಿ ಪಂದ್ಯದ ವೀಕ್ಷಕ ವಿವರಣೆ ನೀಡಿದರು. ಜಾನಿ ಹಾಗೂ ವಿಜಯ್ ಭಾರಧ್ವಜ್ ಜೊತೆಗೆ ವೀಕ್ಷಕ ವಿವರಣೆಗೆ ಕೂತಿದ್ದ ಶಿವರಾಜ್ ಕುಮಾರ್, ಪಂದ್ಯದ ವಿಶ್ಲೇಷಣೆ ನೀಡಿದರು.

ಶಿವರಾಜ್ ಕುಮಾರ್ ಅವರು ವೀಕ್ಷಕ ವಿವರಣೆ ನೀಡುವ ವೇಳೆಗೆ ಪಾಕಿಸ್ತಾನದ ಬಾಬರ್ ಅಜಾಮ್ ಹಾಗೂ ರಿಜ್ವಾನ್ ಬಹಳ ಚೆನ್ನಾಗಿ ಬ್ಯಾಟಿಂಗ್ ಆಡುತ್ತಿದ್ದರು. ಇಬ್ಬರ ಆಟವನ್ನು ಗಮನಿಸಿದ ಶಿವಣ್ಣ, ಪಂದ್ಯದಲ್ಲಿ 225ಕ್ಕೂ ಹೆಚ್ಚು ರನ್​ಗಳನ್ನು ಪಾಕಿಸ್ತಾನ ಹೊಡೆಯುವುದಿಲ್ಲ ಅನಿಸುತ್ತದೆ. ಈಗ ಇವರಿಬ್ಬರೂ ಆಡುತ್ತಿರುವುದು ನೋಡಿದರೆ 250-270 ಆಗಬಹುದು ಅನಿಸುತ್ತದೆ, ಆದರೆ ನನ್ನ ಅನಿಸಿಕೆ ಎಂದರೆ 225 ದಾಟಬಾರದು ಪಾಕಿಸ್ತಾನ ಅಂದರು. ಅವರು ಊಹೆ ಮಾಡಿದಂತೆಯೇ 191 ರನ್​ಗೆ ಪಾಕಿಸ್ತಾನ ಆಲ್ ಔಟ್ ಆಗಿದೆ.

ಇದನ್ನೂ ಓದಿ: ಅವರು ಹಾಗೆ ಮಾಡಬಾರದಿತ್ತು ಕಬ್ಜ ಸಿನಿಮಾ ಬಗ್ಗೆ ಶಿವರಾಜ್ ಕುಮಾರ್ ಅಸಮಾಧಾನ

ಕಮೆಂಟರಿ ಸಮಯದಲ್ಲಿ ಈ ಹಿಂದಿನ ಭಾರತ-ಪಾಕಿಸ್ತಾನ ನಡುವಿನ ಕ್ರಿಕೆಟ್ ಪಂದ್ಯಗಳನ್ನು ನೆನಪು ಮಾಡಿಕೊಂಡ ಶಿವಣ್ಣ, ಚೇತನ್ ಶರ್ಮಾಗೆ ಮಿಯಾಂದಾದ್ ಹೊಡೆದಿದ್ದ ಸಿಕ್ಸ್ ಸೇರಿದಂತೆ ಹಲವು ವಿಷಯಗಳನ್ನು ಮಾತನಾಡಿದರು. ತಾವು ಕ್ರಿಕೆಟ್ ನೋಡಲು ಆಗಿನ ಮದ್ರಾಸಿನಿಂದ ಬೆಂಗಳೂರಿಗೆ ಬರುತ್ತಿದ್ದಿದ್ದು, ದೆಹಲಿಗೆ ಹೋಗುತ್ತಿದ್ದ ಘಟನೆಗಳನ್ನು ಸಹ ನೆನಪು ಮಾಡಿಕೊಂಡರು.

ಜೊತೆಗೆ ತಂದೆ ಡಾ ರಾಜ್​ಕುಮಾರ್ ಅವರು ಹೇಗೆ ಉತ್ಸಾಹಭರಿತವಾಗಿ ಕ್ರಿಕೆಟ್ ಅನ್ನು ವೀಕ್ಷಿಸುತ್ತಿದ್ದರು ಎಂಬುದನ್ನು ಸಹ ಶಿವಣ್ಣ ನೆನಪು ಮಾಡಿಕೊಂಡರು. ತಮ್ಮ ಮನೆಯಲ್ಲಿ ಎಲ್ಲರೂ ಕ್ರಿಕೆಟ್ ಪ್ರಿಯರು ಎಂಬುದನ್ನು ಸಹ ಶಿವರಾಜ್ ಕುಮಾರ್ ಹೇಳಿಕೊಂಡರು. ಪುನೀತ್ ರಾಜ್​ಕುಮಾರ್ ಅವರಿಗೆ ಇದ್ದ ಕ್ರಿಕೆಟ್ ಪ್ರೇಮದ ಬಗ್ಗೆಯೂ ಶಿವಣ್ಣ ಮಾತನಾಡಿದರು. ಗುಂಡಪ್ಪ ವಿಶ್ವನಾಥ್ ಅವರ ಜೊತೆಗೂ ಕಮೆಂಟರಿ ಮಾಡಿದ ಶಿವಣ್ಣ, ಜಿವಿ ಅವರನ್ನು ಕ್ರಿಕೆಟ್ ಚಕ್ರವರ್ತಿ ಎಂದು ಕರೆದರು. ಇವರ ಆಟ ನೋಡಲು ಕಾತರರಾಗಿದ್ದೆವು ಎಂಬುದನ್ನು ನೆನಪು ಮಾಡಿಕೊಂಡರು.

ಶಿವರಾಜ್ ಕುಮಾರ್ ಬಹಳ ಒಳ್ಳೆಯ ಕ್ರಿಕೆಟರ್ ಆಗಿದ್ದರು. ಚೆನ್ನೈನಲ್ಲಿ ಕ್ರಿಕೆಟ್ ತರಬೇತಿಯನ್ನೂ ಪಡೆದಿದ್ದ ಶಿವಣ್ಣ, ತಮಿಳುನಾಡಿನ ರಣಜಿ ತಂಡಕ್ಕೆ ಆಡುವ ಆಸೆ ಹೊಂದಿದ್ದರು. ಆದರೆ ಸಿನಿಮಾ ರಂಗದ ಕಡೆಗೆ ಬಂದ ಶಿವಣ್ಣ ಕ್ರಿಕೆಟ್​ಗೆ ಪೂರ್ಣ ವಿರಾಮವಿತ್ತರು. ಆಗೊಮ್ಮೆ ಈಗೊಮ್ಮೆ ಚಿತ್ರರಂಗದವರು ಆಯೋಜಿಸುವ ಕ್ರಿಕೆಟ್ ಪಂದ್ಯಾವಳಿಗಳಲ್ಲಿ ಆಟ ಆಡುತ್ತಿರುತ್ತಾರೆ. ಅಂದಹಾಗೆ ಶಿವರಾಜ್ ಕುಮಾರ್ ನಟನೆಯ ‘ಘೋಸ್ಟ್’ ಸಿನಿಮಾ ಅಕ್ಟೋಬರ್ 19ಕ್ಕೆ ತೆರೆಗೆ ಬರಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:19 pm, Sat, 14 October 23

ಕಾಡುಹಂದಿಗಳ ಕಾಟದಿಂದ ಪಾರಾಗಲು ಬೀಸಿದ್ದ ಬಲೆಗೆ ಸಿಕ್ಕಿಬಿದ್ದ ಹೆಬ್ಬಾವು
ಕಾಡುಹಂದಿಗಳ ಕಾಟದಿಂದ ಪಾರಾಗಲು ಬೀಸಿದ್ದ ಬಲೆಗೆ ಸಿಕ್ಕಿಬಿದ್ದ ಹೆಬ್ಬಾವು
ಕುರುಬ ಸಮುದಾಯ ಪ್ರಾಬಲ್ಯದ ಕ್ಷೇತ್ರಗಳಲ್ಲಿ ಸಿದ್ದರಾಮಯ್ಯ ಮತಯಾಚನೆ
ಕುರುಬ ಸಮುದಾಯ ಪ್ರಾಬಲ್ಯದ ಕ್ಷೇತ್ರಗಳಲ್ಲಿ ಸಿದ್ದರಾಮಯ್ಯ ಮತಯಾಚನೆ
ಬ್ರ್ಯಾಂಡ್ ಬೆಂಗಳೂರು ಅಂದರೇನು ಅಂತ ಜನಕ್ಕೆ ಈಗ ಅರ್ಥವಾಗುತ್ತಿದೆ!
ಬ್ರ್ಯಾಂಡ್ ಬೆಂಗಳೂರು ಅಂದರೇನು ಅಂತ ಜನಕ್ಕೆ ಈಗ ಅರ್ಥವಾಗುತ್ತಿದೆ!
ಇಂದಿನಿಂದ ಶಬರಿಮಲೆ ಮಂಡಲಪೂಜೆ ಪ್ರಾರಂಭ; ದರ್ಶನಕ್ಕೆ ಜನಸಾಗರ
ಇಂದಿನಿಂದ ಶಬರಿಮಲೆ ಮಂಡಲಪೂಜೆ ಪ್ರಾರಂಭ; ದರ್ಶನಕ್ಕೆ ಜನಸಾಗರ
ಮಾಜಿ ಪ್ರಧಾನಿ ಒಬ್ಬ ಡಿಸಿಎಂ ಬಗ್ಗೆ ರೌಡಿ ಅಂತೆಲ್ಲ ಮಾತಾಡೋದು ಸರಿಯಲ್ಲ:ಶಾಸಕ
ಮಾಜಿ ಪ್ರಧಾನಿ ಒಬ್ಬ ಡಿಸಿಎಂ ಬಗ್ಗೆ ರೌಡಿ ಅಂತೆಲ್ಲ ಮಾತಾಡೋದು ಸರಿಯಲ್ಲ:ಶಾಸಕ
ದೇವರ ವಿಗ್ರಹ ವಿರೂಪಗೊಳಿಸಿ ವಿಕೃತಿ: ದೃಶ್ಯ ಸಿಸಿಟಿವಿಯಲ್ಲಿ ಸೆರೆ
ದೇವರ ವಿಗ್ರಹ ವಿರೂಪಗೊಳಿಸಿ ವಿಕೃತಿ: ದೃಶ್ಯ ಸಿಸಿಟಿವಿಯಲ್ಲಿ ಸೆರೆ
ಒಬ್ಬ ಬೌಲರ್ ಮುಂದೆ ಶರಣಾದ ಇಡೀ ಕೇರಳ ತಂಡ
ಒಬ್ಬ ಬೌಲರ್ ಮುಂದೆ ಶರಣಾದ ಇಡೀ ಕೇರಳ ತಂಡ
ಆಯತಪ್ಪಿ ರೈಲಿಗೆ ಬೀಳ್ತಿದ್ದ ಪ್ರಯಾಣಿಕನ ಪಾಲಿಗೆ ದೇವರಾಗಿ ಬಂದ ಹೋಮ್​'ಗಾರ್ಡ
ಆಯತಪ್ಪಿ ರೈಲಿಗೆ ಬೀಳ್ತಿದ್ದ ಪ್ರಯಾಣಿಕನ ಪಾಲಿಗೆ ದೇವರಾಗಿ ಬಂದ ಹೋಮ್​'ಗಾರ್ಡ
ಕೇಂದ್ರದ ವಿಶೇಷ ವಿಮಾನ ಚೀನಾ ಕಳಿಸಿ ಪಿಪಿಈ ಕಿಟ್ ತರಿಸಲಾಗಿತ್ತು: ಸುಧಾಕರ್
ಕೇಂದ್ರದ ವಿಶೇಷ ವಿಮಾನ ಚೀನಾ ಕಳಿಸಿ ಪಿಪಿಈ ಕಿಟ್ ತರಿಸಲಾಗಿತ್ತು: ಸುಧಾಕರ್
ಮುಸ್ಲಿಮರ ಕೊಲ್ಲುವಂತಹ ದಿನ ಬರುತ್ತದೆ ಎಂದ ಈಶ್ವರಪ್ಪ ವಿರುದ್ಧ ಕೇಸ್ ಬುಕ್​!
ಮುಸ್ಲಿಮರ ಕೊಲ್ಲುವಂತಹ ದಿನ ಬರುತ್ತದೆ ಎಂದ ಈಶ್ವರಪ್ಪ ವಿರುದ್ಧ ಕೇಸ್ ಬುಕ್​!