ಕಿಚ್ಚನ ಪಂಚಾಯಿತಿಯಲ್ಲಿ ನಗು-ಅಳು, ಸರಿ-ತಪ್ಪು: ಕೊನೆಗೆ ಶನಿವಾರ  ಸೇಫ್ ಆಗಿದ್ದು ಯಾರು? 

Bigg Boss 10: ಬಿಗ್​ಬಾಸ್ ಕನ್ನಡ ಸೀಸನ್ 10ರ ಮೊದಲ ವಾರಾಂತ್ಯದ ಎಪಿಸೋಡ್​ಗೆ ಆಗಮಿಸಿದ್ದ ಸುದೀಪ್, ಸದಸ್ಯರನ್ನು ನಗಿಸಿ, ಬುದ್ಧಿ ಹೇಳಿ, ತಿದ್ದಿದರು. ಜೊತೆಗೆ ಮೂವರು ನಾಮಿನೇಟೆಡ್ ಸ್ಪರ್ಧಿಗಳನ್ನು ಸೇಫ್​ ಸಹ ಮಾಡಿದರು. ಯಾರು ಆ ಸ್ಪರ್ಧಿಗಳು?

ಕಿಚ್ಚನ ಪಂಚಾಯಿತಿಯಲ್ಲಿ ನಗು-ಅಳು, ಸರಿ-ತಪ್ಪು: ಕೊನೆಗೆ ಶನಿವಾರ  ಸೇಫ್ ಆಗಿದ್ದು ಯಾರು? 
ಕಿಚ್ಚ ಸುದೀಪ್
Follow us
ಮಂಜುನಾಥ ಸಿ.
|

Updated on: Oct 15, 2023 | 8:10 AM

ಬಿಗ್​ಬಾಸ್ ಕನ್ನಡ ಸೀಸನ್ 10ರ ಮೊದಲ ವಾರದ ಪಂಚಾಯಿತಿಗೆ ಸಖತ್ ಸ್ಟೈಲಿಷ್ ಆಗಿ ಬಂದಿದ್ದರು ಕಿಚ್ಚ ಸುದೀಪ್. ಪ್ರತಿ ಬಾರಿಯಂತೆ ಸ್ಪರ್ಧಿಗಳನ್ನು ನಗಿಸುತ್ತಾ, ಕಾಲೆಳೆಯುತ್ತಾ ಪಂಚಾಯಿತಿ ಆರಂಭಿಸಿದ ಸುದೀಪ್, ಬಳಿಕ ಪ್ರತಿಯೊಬ್ಬ ಸ್ಪರ್ಧಿಗಳ ತಪ್ಪುಗಳು, ಅವರ ಬಲ, ಬಲಹೀನತೆ ಇನ್ನಿತರೆ ವಿಷಯಗಳನ್ನು ಮಾತನಾಡಿದರು. ವಾರದಾದ್ಯಂತ ಮನೆಯಲ್ಲಿ ನಡೆದ ತಪ್ಪುಗಳು, ಗಲಾಟೆ, ಗೊಂದಲಗಳ ಬಗ್ಗೆಯೂ ಚರ್ಚಿಸಿದರು. ನಾಮಿನೇಟ್ ಆಗಿರುವ ಸ್ಪರ್ಧಿಗಳಲ್ಲಿ ಮೂವರನ್ನು ಸೇಫ್ ಮಾಡಿ, ಇನ್ನುಳಿದವರ ಭವಿಷ್ಯ ಭಾನುವಾರ ನಿರ್ಧಾರವಾಗುತ್ತದೆ ಎಂದು ಹೊರಟರು.

ಸ್ನೇಹಿತ್​ರ ಕ್ಯಾಪ್ಟೆನ್ಸಿ ಇತರೆ ಸ್ಪರ್ಧಿಗಳಿಗೆ ಹೇಗನ್ನಿಸಿತು. ಸಮರ್ಥರು-ಅಸಮರ್ಥರ ನಡುವಿನ ವ್ಯತ್ಯಾಸ, ಲಾರ್ಡ್ ಪ್ರಥಮ್ ಹೇಗೆ ಇಡೀ ಮನೆಯನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡರು, ಯಾರೂ ಲಾರ್ಡ್ ಪ್ರಥಮ್ ಅವರನ್ನು ಪ್ರಶ್ನೆ ಮಾಡಲಿಲ್ಲವೇಕೆ? ಮೊದಲ ವಾರ ಮನೆಯಲ್ಲಿ ಇದ್ದ ಸದಸ್ಯರು ತಮಗೆ ತಾವು ಎಷ್ಟು ಅಂಕ ಕೊಟ್ಟಿಕೊಳ್ಳುತ್ತಾರೆ ಇನ್ನೂ ಕೆಲವು ಪ್ರಶ್ನೆಗಳನ್ನು ಕೇಳಿದ ಸುದೀಪ್ ಬಳಿಕ ನಾಮಿನೇಷನ್​ ಕಡೆಗೆ ಬಂದರು. ವರ್ತೂರು ಸಂತೋಷ್, ಡ್ರೋಣ್ ಪ್ರತಾಪ್, ಸಂಗೀತಾ ಶೃಂಗೇರಿ, ತನಿಷಾ, ಸ್ನೇಕ್ ಶಾಮ್, ಬುಲೆಟ್ ರಕ್ಷಕ್, ಕಾರ್ತಿಕ್ ಈ ಏಳು ಸ್ಪರ್ಧಿಗಳನ್ನು ಜನರು ಹೋಲ್ಡ್‌ನಲ್ಲಿ ಇಟ್ಟಿದ್ದರು. ಇಂದು ವರ್ತೂರು ಸಂತೋಷ್ ಅತಿಹೆಚ್ಚು ಮತ ಪಡೆದು ಮೊದಲು ಸೇಫ್ ಆದರು. ಆ ನಂತರ ತನಿಷಾ ಸಹ ಸೇಫ್ ಆದರು. ಆ ಬಳಿಕ ಕಾರ್ತಿಕ್ ಅನ್ನೂ ಕಿಚ್ಚ ಸುದೀಪ್ ಸೇಫ್ ಎಂದು ಘೋಷಿಸಿದರು.

ಇದನ್ನೂ ಓದಿ:ಹರಕೆ ಕುರಿಯಂತಾಗಿದ್ದ ಡ್ರೋನ್ ಪ್ರತಾಪ್ ಬೆಂಬಲಕ್ಕೆ ನಿಂತ ಸುದೀಪ್, ಕ್ಷಮೆ ಕೇಳಿದ ಸಂತೋಶ್

ನಂತರ ಮಾತು ಡ್ರೋಣ್ ಪ್ರತಾಪ್ ಅವರೆಡೆ ಹೊರಳಿಸಿದ ಸುದೀಪ್ ವಾರವಿಡೀ ಕೆಲವರಿಂದ ವ್ಯಂಗ್ಯಕ್ಕೆ, ತಮಾಷೆಗೆ, ಟೀಕೆಗೆ ಈಡಾದ ಡ್ರೋನ್ ಪ್ರತಾಪ್ ಪರವಾಗಿ ಬ್ಯಾಟಿಂಗ್ ಮಾಡಿದ ಸುದೀಪ್, ಡ್ರೋನ್ ಅವರನ್ನು ಅವಕಾಶ ಸಿಕ್ಕಾಗೆಲ್ಲ ವ್ಯಂಗ್ಯ ಮಾಡಿದ್ದ ತುಕಾಲಿ ಸಂತೋಶ್ ಅವರಿಗೆ ತುಸು ಖಾರವಾದ ಪ್ರಶ್ನೆಗಳನ್ನು ಕೇಳಿ, ಸ್ವತಃ ತುಕಾಲಿ ಸಂತೋಶ್ ಅವರೇ ಪ್ರತಾಪ್ ಬಳಿ ಕ್ಷಮೆ ಕೇಳುವಂತೆ ಮಾಡಿದರು. ‘ಒಬ್ಬ ವ್ಯಕ್ತಿಯನ್ನು ಆಡಿಕೊಂಡು ಉಳಿದವರನ್ನು ನಗಿಸುವ ವ್ಯಕ್ತಿ, ಒಳ್ಳೆಯ ಜೋಕರ್ ಅಲ್ಲ, ಬದಲಿಗೆ ಬ್ಯಾಟ್‌ಮನ್ ಸರಣಿಯಲ್ಲಿ ಬರುವ ಜೋಕರ್!’ ಎಂದು ಎಚ್ಚರಿಸಿ, ಸಂತೋಶ್ ಕುರಿತು ನೀವು ಬಹಳ ಒಳ್ಳೆಯ ಜೋಕರ್ ಎಂದು ಮಾರ್ಮಿಕವಾಗಿ ಹೇಳಿದರು ಸುದೀಪ್.

“ಮೈಕಲ್, ಸಿರಿ, ನೀತು, ಪ್ರತಾಪ್ ಮತ್ತು ಶ್ಯಾಮ್ ಇವರಲ್ಲಿ ಯಾರೆಲ್ಲ ಸೇಫ್‌? ಯಾರು ಮನೆಯಿಂದ ಹೊರಬೀಳುತ್ತಾರೆ? ಎನ್ನುವುದನ್ನು ನೋಡಲು ನಾಳೆಯ ಸಂಚಿಕೆಯವರೆಗೆ ಕಾಯಿರಿ ಎಂದ ಸುದೀಪ್, ಕುತೂಹಲವನ್ನು ನಾಳೆಗೆ ವರ್ಗಾಯಿಸಿ ಹೊರಟರು. ಬಿಗ್​ಬಾಸ್ ಕನ್ನಡ ಸೀಸನ್ 10 ಕಲರ್ಸ್ ವಾಹಿನಿಯಲ್ಲಿ ಪ್ರತಿದಿನ ರಾತ್ರಿ 9:30ಕ್ಕೆ ಹಾಗೂ ಜಿಯೋ ಸಿನಿಮಾಸ್​ನಲ್ಲಿ ಲೈವ್​ನಲ್ಲಿ ಪ್ರಸಾರವಾಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ