AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಜೈಲರ್​’ ಸಿನಿಮಾದ ನರಸಿಂಹ ಪಾತ್ರದ ಮೇಲೆ ಹೊಸ ಸಿನಿಮಾ ಬರುತ್ತಾ? ಇಲ್ಲಿದೆ ಶಿವರಾಜ್​ಕುಮಾರ್​ ಪ್ರತಿಕ್ರಿಯೆ

‘ಜೈಲರ್​’ ಚಿತ್ರದ ಒಂದೆರಡು ಸನ್ನಿವೇಶಗಳಲ್ಲಿ ಶಿವಣ್ಣ ಮಾಡಿರುವ ನರಸಿಂಹ ಎಂಬ ಪಾತ್ರ ಸಖತ್​ ಹೈಲೈಟ್​ ಆಗಿದೆ. ಚಿತ್ರಮಂದಿರದಲ್ಲಿ ಜನರಿಂದ ಸಿಕ್ಕ ಪ್ರತಿಕ್ರಿಯೆ ನೋಡಿ ಸ್ವತಃ ಶಿವರಾಜ್​ಕುಮಾರ್​ ಅವರಿಗೆ ಅಚ್ಚರಿ ಆಗಿದೆ. ಈ ಪಾತ್ರದ ಮೇಲೆ ಹೊಸ ಸಿನಿಮಾ ಮಾಡುವುದಾದರೆ ತಮಗೇನೂ ಅಭ್ಯಂತರ ಇಲ್ಲ ಎಂದು ಅವರು ಹೇಳಿದ್ದಾರೆ.

‘ಜೈಲರ್​’ ಸಿನಿಮಾದ ನರಸಿಂಹ ಪಾತ್ರದ ಮೇಲೆ ಹೊಸ ಸಿನಿಮಾ ಬರುತ್ತಾ? ಇಲ್ಲಿದೆ ಶಿವರಾಜ್​ಕುಮಾರ್​ ಪ್ರತಿಕ್ರಿಯೆ
ಶಿವರಾಜ್​ಕುಮಾರ್​
ಮದನ್​ ಕುಮಾರ್​
|

Updated on: Oct 24, 2023 | 10:56 AM

Share

ನಟ ಶಿವರಾಜ್​ಕುಮಾರ್​ ಅವರು ಈಗ ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಮಿಂಚುತ್ತಿದ್ದಾರೆ. ‘ಜೈಲರ್​’ (Jailer) ಸಿನಿಮಾದಲ್ಲಿ ಅವರು ಮಾಡಿದ ಸಣ್ಣ ಪಾತ್ರಕ್ಕೆ ದೊಡ್ಡ ಮಟ್ಟದ ರೆಸ್ಪಾನ್ಸ್​ ಸಿಕ್ಕಿದೆ. ರಜನಿಕಾಂತ್​ (Rajinikanth) ಅವರ ಸ್ನೇಹಿತನಾಗಿ ಅವರು ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕರ್ನಾಟಕದಲ್ಲಿ ಮಾತ್ರವಲ್ಲದೇ ಹೊರರಾಜ್ಯಗಳ ಪ್ರೇಕ್ಷಕರೂ ಕೂಡ ಈ ಪಾತ್ರವನ್ನು ಮೆಚ್ಚಿಕೊಂಡಿದ್ದಾರೆ. ಈ ಪಾತ್ರದ ಹೆಸರು ನರಸಿಂಹ. ಒಂದು ವೇಳೆ ನರಸಿಂಹನ ಪಾತ್ರವನ್ನೇ ಪ್ರಧಾನವಾಗಿ ಇಟ್ಟುಕೊಂಡು ಹೊಸ ಸಿನಿಮಾ ಮಾಡಿದರೆ ಹೇಗಿರುತ್ತದೆ? ಈ ಬಗ್ಗೆ ಶಿವರಾಜ್​ಕುಮಾರ್​ (Shivarajkumar) ಪ್ರತಿಕ್ರಿಯೆ ನೀಡಿದ್ದಾರೆ. ‘ಇಂಡಿಯಾ ಟುಡೇ’ ನಡೆಸಿದ ಸಂದರ್ಶನದಲ್ಲಿ ಅವರು ಈ ವಿಚಾರದ ಬಗ್ಗೆ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.

ಜೈಲರ್​ ಸಿನಿಮಾದ ಕಥಾನಾಯಕ ಟೈಗರ್​ ಕಷ್ಟದ ಸಂದರ್ಭದಲ್ಲಿ ಇರುತ್ತಾನೆ. ಆಗ ಆತ ತಮಿಳುನಾಡಿನಿಂದ ಕರ್ನಾಟಕದ ಮಂಡ್ಯಕ್ಕೆ ಬಂದು ತನ್ನ ಸ್ನೇಹಿತ ನರಸಿಂಹನ ಬಳಿ ಸಹಾಯ ಕೇಳುತ್ತಾನೆ. ನರಸಿಂಹ ಕಳಿಸುವ ಶಾರ್ಪ್​ ಶೂಟರ್​ಗಳ ಸಹಾಯದಿಂದ ವಿಲನ್​ಗಳನ್ನು ಟೈಗರ್​ ಮಟ್ಟ ಹಾಕುತ್ತಾನೆ. ಈ ಎಲ್ಲ ಸನ್ನಿವೇಶಗಳಲ್ಲಿ ಶಿವಣ್ಣ ಮಾಡಿರುವ ನರಸಿಂಹ ಪಾತ್ರ ಸಖತ್​ ಹೈಲೈಟ್​ ಆಗಿದೆ. ಚಿತ್ರಮಂದಿರದಲ್ಲಿ ಜನರಿಂದ ಸಿಕ್ಕ ಪ್ರತಿಕ್ರಿಯೆ ನೋಡಿ ಸ್ವತಃ ಶಿವರಾಜ್​ಕುಮಾರ್​ ಅವರಿಗೆ ಅಚ್ಚರಿ ಆಗಿದೆ. ಒಂದು ವೇಳೆ ಈ ಪಾತ್ರದ ಮೇಲೆ ಹೊಸ ಸಿನಿಮಾ ಮಾಡುವುದಾದರೆ ತಮಗೇನೂ ಅಭ್ಯಂತರ ಇಲ್ಲ ಎಂದು ಶಿವಣ್ಣ ಹೇಳಿದ್ದಾರೆ.

ಇದನ್ನೂ ಓದಿ: ನಿಖಿಲ್​ ಕುಮಾರ್​ ಸಿನಿಮಾದ ಸೆಟ್​ಗೆ ಭೇಟಿ ನೀಡಿದ ಶಿವರಾಜ್​ಕುಮಾರ್​; ಫೋಟೋ ವೈರಲ್​

‘ಅದು ಹೇಗೆ ಮೂಡಿಬರುತ್ತದೆ ಎಂಬುದು ನನಗೆ ಗೊತ್ತಿಲ್ಲ. ನಿರ್ದೇಶಕ ನೆಲ್ಸನ್​ ದಿಲೀಪ್​ ಕುಮಾರ್​ ಅವರು ಅದನ್ನು ಕ್ರಿಯೇಟ್​ ಮಾಡಬೇಕು. ಜೈಲರ್​ ಸಕ್ಸಸ್​ ನಂತರ ಮುಂದಿನ ಸಿನಿಮಾಗಾಗಿ ಅವರ ಜವಾಬ್ದಾರಿ ಹೆಚ್ಚಾಗಿದೆ. ಜೈಲಿನಲ್ಲಿ ಒಂದು ದೃಶ್ಯದ ಚಿತ್ರೀಕರಣ ಮಾಡಬೇಕಿತ್ತು. ಆದರೆ ನಂತರದಲ್ಲಿ ಅದರ ಅವಶ್ಯಕತೆ ಇಲ್ಲ ಅಂತ ಅವರೇ ಹೇಳಿದರು. ಅದು ಏನಾಗುತ್ತೋ ನನಗೆ ತಿಳಿದಿಲ್ಲ. ಇದೇ ರೀತಿ ಮೂಡಿಬರುವುದಾದರೆ ನನಗೆ ಏನೂ ಅಭ್ಯಂತರ ಇಲ್ಲ. ಗ್ರೇ ಪಾತ್ರಗಳನ್ನು ಕಟ್ಟಿಕೊಡುವಲ್ಲಿ ನೆಲ್ಸನ್​ ಫೇಮಸ್​’ ಎಂದು ಶಿವರಾಜ್​ಕುಮಾರ್​ ಹೇಳಿದ್ದಾರೆ.

ಇದನ್ನೂ ಓದಿ: ‘ಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಚಿಂತನೆಯನ್ನು ಮಕ್ಕಳು ಅಳವಡಿಸಿಕೊಳ್ಳಲಿ’: ಶಿವರಾಜ್​ಕುಮಾರ್​

ಆಗಸ್ಟ್​ 10ರಂದು ‘ಜೈಲರ್​​’ ಸಿನಿಮಾ ಬಿಡುಗಡೆ ಆಗಿತ್ತು. ವಿಶ್ವಾದ್ಯಂತ ಈ ಸಿನಿಮಾ ಅಂದಾಜು 600 ಕೋಟಿ ರೂಪಾಯಿ ಗಳಿಸಿದೆ. ಈ ಚಿತ್ರದ ಸಕ್ಸಸ್​ ಬಳಿಕ ಶಿವರಾಜ್​ಕುಮಾರ್​ ಅವರಿಗೆ ಪರಭಾಷೆಯಿಂದ ಬರುವ ಆಫರ್​ಗಳು ಹೆಚ್ಚಾಗಿದೆ. ಈಗಾಗಲೇ ಅವರು ಧನುಶ್​ ಅಭಿನಯದ ‘ಕ್ಯಾಪ್ಟನ್​ ಮಿಲ್ಲರ್​’ ಚಿತ್ರದಲ್ಲಿ ಒಂದು ಪ್ರಮುಖ ಪಾತ್ರ ಮಾಡಿದ್ದು, ಆ ಸಿನಿಮಾದ ಬಿಡುಗಡೆಗಾಗಿ ಫ್ಯಾನ್ಸ್​ ಕಾದಿದ್ದಾರೆ. ಇನ್ನೂ ಅನೇಕ ನಿರ್ದೇಶಕರು ಶಿವರಾಜ್​ಕುಮಾರ್​ ಅವರಿಗೆ ಕಥೆ ಹೇಳಲು ಕಾದಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಕೃಷ್ಣರಾಜ ಒಡೆಯರ್-ಸಿದ್ದರಾಮಯ್ಯ ಇಬ್ಬರೂ ಸಾಮಾಜಿಕ ಹರಿಕಾರರು: ಸಚಿವ
ಕೃಷ್ಣರಾಜ ಒಡೆಯರ್-ಸಿದ್ದರಾಮಯ್ಯ ಇಬ್ಬರೂ ಸಾಮಾಜಿಕ ಹರಿಕಾರರು: ಸಚಿವ
ಕರ್ನಾಟಕವೇ ದೇಶದಲ್ಲಿ ಪ್ರಥಮ ಬಾರಿಗೆ ಜಾತಿಗಣತಿ ಮಾಡಿಸಿದ್ದು: ಸಿದ್ದರಾಮಯ್ಯ
ಕರ್ನಾಟಕವೇ ದೇಶದಲ್ಲಿ ಪ್ರಥಮ ಬಾರಿಗೆ ಜಾತಿಗಣತಿ ಮಾಡಿಸಿದ್ದು: ಸಿದ್ದರಾಮಯ್ಯ
ಜಪಾನಿಗೆ ಬನ್ನೇರುಘಟ್ಟ ಸಾಕಾನೆಗಳ ಏರ್​ ಲಿಫ್ಟ್​ ಯಶಸ್ವಿ
ಜಪಾನಿಗೆ ಬನ್ನೇರುಘಟ್ಟ ಸಾಕಾನೆಗಳ ಏರ್​ ಲಿಫ್ಟ್​ ಯಶಸ್ವಿ
ಸುರ್ಜೇವಾಲಾ ಮಾಡಿದ್ದು ಸರಿಯಲ್ಲ ಅಂತ ರಾಜಣ್ಣನೇ ಹೇಳಿದ್ದಾರೆ: ರವಿಕುಮಾರ್
ಸುರ್ಜೇವಾಲಾ ಮಾಡಿದ್ದು ಸರಿಯಲ್ಲ ಅಂತ ರಾಜಣ್ಣನೇ ಹೇಳಿದ್ದಾರೆ: ರವಿಕುಮಾರ್
ಮಾಲ್ಡೀವ್ಸ್‌ನಲ್ಲಿ ಪ್ರಧಾನಿ ಮೋದಿಗೆ ಗೌರವದ ಸ್ವಾಗತ, ಭಾರತೀಯರಿಂದ ನೃತ್ಯ
ಮಾಲ್ಡೀವ್ಸ್‌ನಲ್ಲಿ ಪ್ರಧಾನಿ ಮೋದಿಗೆ ಗೌರವದ ಸ್ವಾಗತ, ಭಾರತೀಯರಿಂದ ನೃತ್ಯ
ಮಂತ್ರಿ ಮತ್ತು ಶಾಸಕರ ಜೊತೆ ಮಾತ್ರ ಸುರ್ಜೇವಾಲಾ ಮಾತುಕತೆ ನಡೆಸಿದರು: ಸಚಿವ
ಮಂತ್ರಿ ಮತ್ತು ಶಾಸಕರ ಜೊತೆ ಮಾತ್ರ ಸುರ್ಜೇವಾಲಾ ಮಾತುಕತೆ ನಡೆಸಿದರು: ಸಚಿವ
2023ರ ಕರ್ನಾಟಕ ಚುನಾವಣೆಯಲ್ಲಿ ಎಲ್ಲ ಸರಿಯಾಗಿತ್ತಾ? ಪ್ರಲ್ಹಾದ್ ಜೋಶಿ ಲೇವಡಿ
2023ರ ಕರ್ನಾಟಕ ಚುನಾವಣೆಯಲ್ಲಿ ಎಲ್ಲ ಸರಿಯಾಗಿತ್ತಾ? ಪ್ರಲ್ಹಾದ್ ಜೋಶಿ ಲೇವಡಿ
ಮಲ್ಲೇಶ್ವರಂ 11ನೇ ಮುಖ್ಯರಸ್ತೆಗೆ ಸರೋಜಾ ದೇವಿ ಹೆಸರು: ಶಾಸಕ ಅಶ್ವತ್ಥನಾರಾಯಣ
ಮಲ್ಲೇಶ್ವರಂ 11ನೇ ಮುಖ್ಯರಸ್ತೆಗೆ ಸರೋಜಾ ದೇವಿ ಹೆಸರು: ಶಾಸಕ ಅಶ್ವತ್ಥನಾರಾಯಣ
ನಮ್ಮ ನಿರ್ಮಾಣದ ಎರಡು ಸಿನಿಮಾಗಳ ಶೂಟಿಂಗ್ ನಡೆಯುತ್ತಿದೆ: ಹೆಬ್ಬಾಳ್ಕರ್
ನಮ್ಮ ನಿರ್ಮಾಣದ ಎರಡು ಸಿನಿಮಾಗಳ ಶೂಟಿಂಗ್ ನಡೆಯುತ್ತಿದೆ: ಹೆಬ್ಬಾಳ್ಕರ್
ಮೈಸೂರು ಮಹಾರಾಜರಿಗಿಂತಲೂ ಸಿದ್ದರಾಮಯ್ಯ ಹೆಚ್ಚು:ತಂದೆಗೆ ಮಗ ಬಹುಪರಾಕ್
ಮೈಸೂರು ಮಹಾರಾಜರಿಗಿಂತಲೂ ಸಿದ್ದರಾಮಯ್ಯ ಹೆಚ್ಚು:ತಂದೆಗೆ ಮಗ ಬಹುಪರಾಕ್